• ಹೋಂ
  • »
  • ನ್ಯೂಸ್
  • »
  • ಬ್ಯುಸಿನೆಸ್
  • »
  • RBI Withdraws 2000 Rs Notes: 2 ಸಾವಿರ ರೂಪಾಯಿ ನೋಟುಗಳನ್ನು ಹಿಂಪಡೆದ ಆರ್​ಬಿಐ! ಪಿಂಕ್ ಕರೆನ್ಸಿ ಬದಲಿಸಿಕೊಳ್ಳಲು ಸೆಪ್ಟೆಂಬರ್​ 30 ಲಾಸ್ಟ್​ಡೇಟ್​

RBI Withdraws 2000 Rs Notes: 2 ಸಾವಿರ ರೂಪಾಯಿ ನೋಟುಗಳನ್ನು ಹಿಂಪಡೆದ ಆರ್​ಬಿಐ! ಪಿಂಕ್ ಕರೆನ್ಸಿ ಬದಲಿಸಿಕೊಳ್ಳಲು ಸೆಪ್ಟೆಂಬರ್​ 30 ಲಾಸ್ಟ್​ಡೇಟ್​

2000 ನೋಟು ಬ್ಯಾನ್?

2000 ನೋಟು ಬ್ಯಾನ್?

RBI Withdraws 2000 Rs Notes: ರಿಸರ್ವ್​ ಬ್ಯಾಂಕ್ ಆಫ್​ ಇಂಡಿಯಾ 2000 ರೂಪಾಯಿ ಮುಖಬೆಲೆಯ ನೋಟುಗಳನ್ನು ಇನ್ಮುಂದೆ ಮುದ್ರಿಸುವುದಿಲ್ಲ ಎಂದು ಘೋಷಿಸಿದೆ. ಚಲಾವಣೆಯಲ್ಲಿರುವ ನೋಟುಗಳನ್ನು ಹಿಂಪಡೆದುಕೊಳ್ಳಲು ಬ್ಯಾಂಕುಗಳಿಗೆ ಸೂಚನೆ ಹೊರಡಿಸಿದೆ.

  • News18 Kannada
  • 3-MIN READ
  • Last Updated :
  • New Delhi, India
  • Share this:

ನವದೆಹಲಿ: ರಿಸರ್ವ್​ ಬ್ಯಾಂಕ್ ಆಫ್​ ಇಂಡಿಯಾ (Reserve Bank Of India) 2000 ರೂಪಾಯಿ ಮುಖಬೆಲೆಯ ನೋಟುಗಳನ್ನು (2000 Currency Notes) ಇನ್ಮುಂದೆ ಮುದ್ರಿಸುವುದಿಲ್ಲ ಎಂದು ಘೋಷಿಸಿದೆ. ಅಲ್ಲದೆ ಚಲಾವಣೆಯಲ್ಲಿರುವ ನೋಟುಗಳನ್ನು ಹಿಂತೆಗೆದುಕೊಳ್ಳುವುದಾಗಿ ( 2000 Notes Withdraw) ತಿಳಿಸಿದೆ. ಜನರ ಬಳಿ ಇರುವ 2000 ನೋಟುಗಳನ್ನು ಬ್ಯಾಂಕ್​ಗಳಿಗೆ (Bank) ಹೋಗಿ ವಿನಿಮಯ ಮಾಡಿಕೊಳ್ಳುವಂತೆ ಸೂಚನೆ ನೀಡಿದೆ. ಸೆಪ್ಟೆಂಬರ್​ 30ರ ತನಕ ನೋಟುಗಳ ವಿನಿಮಯ ಮಾಡಿಕೊಳ್ಳಲು ಆರ್​ಬಿಐ ತಿಳಿಸಿದೆ.


2000 ರೂಪಾಯಿ ನೋಟನ್ನು ಚಲಾವಣೆಯಿಂದ ಹಿಂಪಡೆಯಲಾಗಿದೆ ಎಂದು ಆರ್‌ಬಿಐ ಶುಕ್ರವಾರ ಪ್ರಕಟಣೆಯಲ್ಲಿ ತಿಳಿಸಿದೆ. ಆದರೆ ಆದರೆ ಇದು ಕಾನೂನುಬದ್ಧವಾಗಿ ಮುಂದುವರಿಯುತ್ತದೆ. 2000 ಮುಖಬೆಲೆಯ ನೋಟುಗಳನ್ನು 2018-19 ಪ್ರಿಂಟ್​ ಮಾಡುವುದನ್ನ ಆರ್​ಬಿಐ ನಿಲ್ಲಿಸಿತ್ತು. 2,000 ರೂಪಾಯಿಯ ಈ ನೋಟನ್ನು ನವೆಂಬರ್ 2016 ರಲ್ಲಿ ಪರಿಚಯಿಸಲಾಗಿತ್ತು


ಸೆಪ್ಟೆಂಬರ್ 30ರೊಳಗೆ ಬದಲಿಸಕೊಳ್ಳಲು ಸೂಚನೆ


ಆರ್​ಬಿಐ ಈ ಬಗ್ಗೆ ಹೇಳಿಕೆ ಬಿಡುಗಡೆ ಮಾಡಿದ್ದು, ಸಾರ್ವಜನಿಕರು ತಮ್ಮ ಬಳಿ ಇರುವ 2,000 ರೂಪಾಯಿ ನೋಟುಗಳನ್ನು ತಮ್ಮ ಬ್ಯಾಂಕ್ ಖಾತೆಯಲ್ಲಿ ಜಮಾ ಮಾಡಬಹುದು. ಇನ್ನು 2,000 ರೂಪಾಯಿ ನೋಟು ವಿನಿಮಯ ಮಾಡಿಕೊಳ್ಳಲು ಅವಕಾಶ ನೀಡಿದೆ. ಯಾವುದೇ ಬ್ಯಾಂಕ್​ಗಳಲ್ಲಾದರೂ ಜಮಾವಣೆ ಮಾಡಬಹುದು.


ಮೇ 23ರ ನಂತರ ವಿನಿಮಯಕ್ಕೆ ಅವಕಾಶ


ಗ್ರಾಮಕರಿಗೆ ತಮ್ಮ ಬಳಿ ಇರುವ 2000 ಮುಖ ಬೆಲೆಯ ನೋಟುಗಳನ್ನು ವಿನಿಮಯ ಮಾಡಿಕೊಳ್ಳುವುದಕ್ಕೆ ಕೆಲವು ನಿರ್ಬಂಧ ವಿಧಿಸಲಾಗಿದೆ. ಬ್ಯಾಂಕ್ ಕಾರ್ಯ ಚಟುವಟಿಕೆಗೆ ಯಾವುದೇ ರೀತಿಯ ಸಮಸ್ಯೆಯಾಗದಂತೆ ನೋಡಿಕೊಳ್ಳಲು ಪ್ರತಿದಿನ ಒಬ್ಬ ಗ್ರಾಹಕರಿಗೆ ಗರಿಷ್ಛ 20,000 ರೂಪಾಯಿಗಳನ್ನು ಮಾತ್ರ ವಿನಿಮಯ ಮಾಡಿಕೊಳ್ಳಲು ಅವಕಾಶ ನೀಡಲಾಗಿದೆ. ಇದೇ ತಿಂಗಳ 23 ರಿಂದ ಬ್ಯಾಂಕ್‌ಗಳಲ್ಲಿ 2,000 ರೂಪಾಯಿ ನೋಟು ವಿನಿಮಯ ಮಾಡಿಕೊಳ್ಳಲು ಅವಕಾಶ ನೀಡಲಾಗಿದೆ.


ಬ್ಯಾಂಕ್​ಗಳಿಗೂ 2000 ಮುಖಬೆಲೆ ನೋಟುಗಳನ್ನು ನೀಡದಂತೆ ಸೂಚನೆ


ಸಾರ್ವಜನಿಕರು ಮಾತ್ರವಲ್ಲ ಬ್ಯಾಂಕ್ ಕೂಡ ಸೆಪ್ಟೆಂಬರ್ 30ರೊಳಗೆ 2,000 ರೂಪಾಯಿ ನೋಟಿನ ಎಲ್ಲಾ ವಿನಿಮಯ, ಜಮಾವಣೆ ಮುಗಿಸಬೇಕು ಎಂದು ಆರ್‌ಬಿಐ ಹೇಳಿದೆ. ಅಲ್ಲದೆ ಬ್ಯಾಂಕ್​ಗೆ ಬರುವ ಗ್ರಾಹಕರಿಗೆ 2000 ನೋಟುಗಳನ್ನು ನೀಡುವುದನ್ನು ನಿಲ್ಲಿಸಬೇಕೆಂದು ಸೂಚನೆ ನೀಡಿದೆ.


ಕರೆನ್ಸಿ ಅಗತ್ಯತೆಗಾಗಿ ಪರಿಚಯ

top videos


    ಎರಡು ಸಾವಿರ ರೂಪಾಯಿಗಳ ನೋಟನ್ನು RBI ಕಾಯಿದೆ 1934 ರ ಸೆಕ್ಷನ್ 24 (1) ಅಡಿಯಲ್ಲಿ ಪರಿಚಯಿಸಲಾಗಿತ್ತು. 2016ರಲ್ಲಿ ಹಳೆಯ 500 ಮತ್ತು 1000 ರೂಪಾಯಿ ನೋಟುಗಳನ್ನು ನಿಷೇಧಗೊಳಿಸಿದ ನಂತರ ಕರೆನ್ಸಿ ಅಗತ್ಯತೆ ಉಂಟಾಗಬಹುದು ಎಂದು ಈ- ಮುಖಬೆಲೆಯ ನೋಟುಗಳನ್ನು ಪರಿಚಯಿಸಲಾಗಿತ್ತು. ಹೀಗಾಗಿ 2018-19ರಲ್ಲಿ 2000 ರೂಪಾಯಿ ನೋಟುಗಳ ಮುದ್ರಣವನ್ನು ನಿಲ್ಲಿಸಲಾಗಿತ್ತು.

    First published: