Repo Rate Effect: ರೆಪೊ ದರ ಪರಿಷ್ಕರಣೆ ಎಫೆಕ್ಟ್; ಪ್ರಮುಖ ಬ್ಯಾಂಕ್​ಗಳಲ್ಲಿ ಸಾಲ ಪಡೆದಿದ್ದರೆ ಇಲ್ಲಿ ಗಮನಿಸಿ

ಐಸಿಐಸಿಐ ಬ್ಯಾಂಕ್ ಆಫ್ ಬರೋಡಾ ಮತ್ತು ಆರ್‌ಬಿಎಲ್ ಬ್ಯಾಂಕ್ ಸೇರಿದಂತೆ ಹಲವಾರು ಬ್ಯಾಂಕ್‌ಗಳು ತಮ್ಮ ರೆಪೊ ಲಿಂಕ್ಡ್ ಲೆಂಡಿಂಗ್ ದರವನ್ನು ಪರಿಷ್ಕರಿಸಿವೆ. ಗ್ರಾಹಕರ ಮೇಲೆ ಇದರ ಪರಿಣಾಮವೇನು? ಇಲ್ಲಿದೆ ಓದಿ.

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

  • Share this:
    ಜೂನ್ 8 ರಂದು ಭಾರತೀಯ ರಿಸರ್ವ್ ಬ್ಯಾಂಕ್ (RBI) ರೆಪೊ ದರವನ್ನು 50 ಬಿಪಿಎಸ್‌ನಿಂದ ಶೇಕಡಾ 4.9 ಕ್ಕೆ ಹೆಚ್ಚಿಸಿದೆ. ಈನಂತರ ಐಸಿಐಸಿಐ ಬ್ಯಾಂಕ್ (ICICI Bank) ಬ್ಯಾಂಕ್ ಆಫ್ ಬರೋಡಾ (Bank Of Baroda) ಮತ್ತು ಆರ್‌ಬಿಎಲ್ ಬ್ಯಾಂಕ್ (RBL Bank) ಸೇರಿದಂತೆ ಹಲವಾರು ಬ್ಯಾಂಕ್‌ಗಳು ತಮ್ಮ ರೆಪೊ ಲಿಂಕ್ಡ್ ಲೆಂಡಿಂಗ್ ದರವನ್ನು (RRLR) ಪರಿಷ್ಕರಿಸಿವೆ. ರೆಪೋ ದರವು ಬ್ಯಾಂಕ್‌ಗಳು ಆರ್‌ಬಿಐನಿಂದ ಸಾಲ ಪಡೆಯುವ ದರವಾಗಿದೆ. ರೆಪೊ ದರ ಏರಿಕೆಯಾದಾಗ, ಬ್ಯಾಂಕ್‌ಗಳ ರೆಪೊ ದರ ಲಿಂಕ್ಡ್ ಲೆಂಡಿಂಗ್ ರೇಟ್ (RRLR) ಸಹ ಏಕರೂಪವಾಗಿ ಏರುತ್ತದೆ. ಇದರರ್ಥ ಸಾಲಗಾರರು ಗೃಹ ಸಾಲದ ಬಡ್ಡಿ ದರವನ್ನು ಇನ್ನಷ್ಟು ಹೆಚ್ಚು ಪಾವತಿ ಮಾಡಬೇಕಾಗುತ್ತದೆ.

    ICICI ಬ್ಯಾಂಕ್ ತನ್ನ ಬಾಹ್ಯ ಮಾನದಂಡದ ಸಾಲದ ದರವನ್ನು (EBLR) 50 ಬೇಸಿಸ್ ಪಾಯಿಂಟ್‌ಗಳಿಂದ 8.60 ಪರ್ಸೆಂಟ್‌ಗೆ ಜೂನ್ 8, 2022 ರಿಂದ ಜಾರಿಗೆ ತಂದಿದೆ. ICICI ಬ್ಯಾಂಕ್ ಬಾಹ್ಯ ಬೆಂಚ್‌ಮಾರ್ಕ್ ಲೆಂಡಿಂಗ್ ದರವನ್ನು (I-EBLR) ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ ಪಾಲಿಸಿ ರೆಪೋ ದರವನ್ನು ರೆಪೋ ಮಾರ್ಕ್-ಅಪ್‌ ಜೊತೆ ಹೋಲಿಸಿದೆ. ಶೇಕಡಾ 8.60 ರಷ್ಟಿರುವ ಈದರ ಜೂನ್ 8, 2022 ರಿಂದ ಜಾರಿಗೆ ಬಂದಿದೆ ಎಂದು ಬ್ಯಾಂಕ್ ಜೂನ್ 7 ರಂದು ಹೇಳಿಕೆಯಲ್ಲಿ ತಿಳಿಸಿದೆ.

    ಕೋಟಕ್ ಮಹೀಂದ್ರಾ ಬ್ಯಾಂಕ್ ಲಿಮಿಟೆಡ್ ಬಡ್ಡಿದರ ಹೆಚ್ಚಳ
    ಕೋಟಕ್ ಮಹೀಂದ್ರಾ ಬ್ಯಾಂಕ್ ಲಿಮಿಟೆಡ್ (KMBL) ಜೂನ್ 9 ರಂದು ಉಳಿತಾಯ ಖಾತೆಯ ಬಡ್ಡಿದರ ಮತ್ತು ವಿವಿಧ ಅವಧಿಗಳಲ್ಲಿ ಸ್ಥಿರ ಠೇವಣಿ ಬಡ್ಡಿದರಗಳಲ್ಲಿ ಹೆಚ್ಚಳವನ್ನು ಘೋಷಿಸಿದೆ. ಉಳಿತಾಯ ಖಾತೆಯ ಬಡ್ಡಿದರದಲ್ಲಿನ ಹೆಚ್ಚಳವು ಜೂನ್ 13, 2022 ರಿಂದ ಜಾರಿಗೆ ಬರಲಿದೆ.

    ಈಗ 50 ಲಕ್ಷಕ್ಕಿಂತ ಹೆಚ್ಚಿನ ಮೊತ್ತಕ್ಕೆ 50 ಬೇಸಿಸ್ ಪಾಯಿಂಟ್‌ಗಳ ಮೇಲಿನ ಹೆಚ್ಚಿನ ಬಡ್ಡಿ ದರ ಶೇಕಡಾ 4ರಷ್ಟು ಆಗಿರಲಿದೆ. ಹಿಂದಿನ ದರ 3.5 ಶೇಕಡಾದಿಂದ ಸ್ಥಿರ ಠೇವಣಿಗಳ ಮೇಲಿನ ಬಡ್ಡಿದರವನ್ನು 10 ರಿಂದ 25 ಮೂಲ ಅಂಕಗಳವರೆಗೆ ಹೆಚ್ಚಿಸಲಾಗಿದೆ.

    RBL ಬ್ಯಾಂಕ್  ರೆಪೊ ಲಿಂಕ್ಡ್ ಲೆಂಡಿಂಗ್ ದರ ಎಷ್ಟಿದೆ?
    ಇದರ ಮಧ್ಯೆ RBL ಬ್ಯಾಂಕ್ ತನ್ನ ರೆಪೊ ಲಿಂಕ್ಡ್ ಲೆಂಡಿಂಗ್ ದರವು 10 ಪ್ರತಿಶತದಷ್ಟಿದೆ ಎಂದು ಹೇಳಿದೆ. ಬುಧವಾರ ಆರ್‌ಬಿಐ ಗವರ್ನರ್ ಶಕ್ತಿಕಾಂತ ದಾಸ್ ಅವರು ರೆಪೊ ದರವನ್ನು 50 ಬೇಸಿಸ್ ಪಾಯಿಂಟ್‌ಗಳಿಂದ ಶೇಕಡಾ 4.9 ಕ್ಕೆ ಹೆಚ್ಚಿಸುವ ಹಣಕಾಸಿಕ ನೀತಿ ಸಮಿತಿಯ (MPC) ಸರ್ವಾನುಮತದ ನಿರ್ಧಾರವನ್ನು ಪ್ರಕಟಿಸಿದ್ದಾರೆ. ರೆಪೋ ದರವು ಕೇಂದ್ರ ಬ್ಯಾಂಕ್ ಬ್ಯಾಂಕ್‌ಗಳಿಗೆ ಹಣವನ್ನು ನೀಡುವ ಪ್ರಮುಖ ಬಡ್ಡಿ ದರವಾಗಿದೆ.

    ಇದನ್ನೂ ಓದಿ: Rent Agreement: ಬಾಡಿಗೆ ಒಪ್ಪಂದಕ್ಕೆ ಸಹಿ ಹಾಕುವ ಮೊದಲು ಈ ಅಂಶಗಳನ್ನು ಗಮನಿಸಿ , ಇಲ್ಲಾವಾದ್ರೆ ನಷ್ಟ ಆಗುತ್ತೆ

    ರೆಪೋ ದರವು ಇನ್ನೂ ಕೊವಿಡ್​ ಸಾಂಕ್ರಾಮಿಕ ಹರಡುವ ಮುನ್ನ ಎಷ್ಟಿತ್ತೋ ಅದಕ್ಕಿಂತ ಕೆಳಗಿದೆ. ಇಂತಹ ಸವಾಲಿನ ಜಾಗತಿಕ ಪರಿಸರದಲ್ಲಿ ದೇಶೀಯ ಆರ್ಥಿಕ ಚಟುವಟಿಕೆಯು ನಿಧಾನವಾಗುತ್ತಿದೆ ಎಂದು ಮಾನಿಟರಿ ಪಾಲಿಸಿ ಕಮಿಟಿ (MPC) ಗಮನಿಸಿದೆ. ನಾವು ಹಣದುಬ್ಬರವನ್ನು ಗುರಿಯನ್ನು ಸಾಧಿಸುವ ಕುರಿತು ಮತ್ತು ಸ್ಥೂಲ ಆರ್ಥಿಕ ಸ್ಥಿರತೆಯ ಮೇಲೆ ಕೇಂದ್ರೀಕರಿಸುತ್ತೇವೆ ಎಂದು ಶಕ್ತಿಕಾಂತ ದಾಸ್ ತಮ್ಮ ಭಾಷಣದಲ್ಲಿ ಹೇಳಿದ್ದು ಎಂಬುದನ್ನು ಇಲ್ಲಿ ಸ್ಮರಿಸಬಹುದು.

    ಇದನ್ನೂ ಓದಿ:EMI: ಸರಿಯಾದ ಟೈಮ್​ಗೆ ಇಎಂಐ ಕಟ್ಟೋಕೆ ಆಗ್ತಿಲ್ವಾ? ಹುಷಾರ್​​ ರೀ, ಆಮೇಲೆ ಹಿಂಗೆಲ್ಲಾ ಆಗ್ಬಿಡುತ್ತೆ!

    ಈ ಹಿಂದೆ MPC ಮೇ 2 ಮತ್ತು 4, 2022 ರ ನಡುವೆ ಪಾಲಿಸಿ ರೆಪೊ ದರವನ್ನು 40 ಬೇಸಿಸ್ ಪಾಯಿಂಟ್‌ಗಳಿಂದ 4.40 ಪ್ರತಿಶತಕ್ಕೆ ಹೆಚ್ಚಿಸಲಾಗಿತ್ತು.
    Published by:guruganesh bhat
    First published: