ನಾವು ಈ ನೋಟುಗಳ ಮೇಲೆ ಅನೇಕ ರೀತಿಯ ಹೆಸರುಗಳನ್ನು ಮತ್ತು ಪಠ್ಯ ಸಂದೇಶಗಳನ್ನು ಬರೆದಿರುವುದನ್ನು ಆಗಾಗ ನೋಡುತ್ತೇವೆ. ಹಿಂಗೆಲ್ಲಾ ಏನೇನೋ ಬರೆದರೆ, ಆ ನೋಟುಗಳನ್ನು ಜನರು ತಗೋತಾರಾ ಅನ್ನೋ ಒಂದು ಯೋಚನೆ ಎಲ್ಲರ ತಲೆಯಲ್ಲೂ ಒಮ್ಮೆಯಾದರೂ ಬಂದಿರುತ್ತದೆ ಅಂತ ಹೇಳಬಹುದು. ನೋಟಿನ ಮೇಲೆ ಏನನ್ನಾದರೂ ಬರೆಯುವುದರಿಂದ ಅದು ಅಸಿಂಧುವಾಗುವುದಿಲ್ಲ ಎಂದು ಕೆಲವು ಜನರು ಅಂದುಕೊಂಡರೆ, ಇನ್ನೂ ಕೆಲವರು ಹಾಗೆ ಬರೆಯುವುದರಿಂದ ಅದು ಅಸಿಂಧುವಾಗುತ್ತದೆ ಅಂತ ತಿಳಿದುಕೊಂಡಿರುತ್ತಾರೆ. ಆದರೆ ಇವೆರಡರಲ್ಲಿ ಯಾವುದು ಸರಿ ಅನ್ನೋ ಗೊಂದಲ ಬಹುತೇಕರಲ್ಲಿ ಇದ್ದೇ ಇರುತ್ತದೆ.
ನೋಟಿನ ಮೇಲೆ ಬರೆಯುವುದು ಆ ನೋಟನ್ನು ಅಮಾನ್ಯಗೊಳಿಸುತ್ತದೆಯೇ?
ಆದರೆ ಸತ್ಯ ಏನೆಂದರೆ 2000, 500, 200, 100, 50 ಅಥವಾ 20 ರೂಪಾಯಿಗಳ ನೋಟುಗಳ ಮೇಲೆ ಏನಾದರೂ ಗೀಚಿದರೆ, ಬರೆದರೆ ಅವುಗಳನ್ನು ಯಾವುದೇ ಭಯವಿಲ್ಲದೆ ಮಾನ್ಯವೆಂದು ಪರಿಗಣಿಸಬಹುದು.
ಸರ್ಕಾರದ ಅಧಿಕೃತ ಫ್ಯಾಕ್ಟ್-ಚೆಕರ್, ಪಿಐಬಿ ಫ್ಯಾಕ್ಟ್ ಚೆಕ್, ಸಾಮಾಜಿಕ ಮಾಧ್ಯಮದಲ್ಲಿ ಹರಿದಾಡುತ್ತಿರುವ ನಕಲಿ ಹೇಳಿಕೆಗೆ ಪ್ರತಿಕ್ರಿಯೆಯಾಗಿ ಮೇಲಿನ ವಿಷಯವನ್ನು ಪರಿಶೀಲಿಸಿ ನೋಡಿದೆ. ಹೊಸ ಆರ್ಬಿಐ ಮಾರ್ಗಸೂಚಿಗಳ ಪ್ರಕಾರ, ಹೊಸ ನೋಟುಗಳ ಮೇಲೆ ಏನನ್ನಾದರೂ ಬರೆಯುವುದು ಅವುಗಳನ್ನು ಅಮಾನ್ಯಗೊಳಿಸುತ್ತದೆ ಎಂದು ನಕಲಿ ಸಂದೇಶದಲ್ಲಿ ಹೇಳಲಾಗಿದೆ.
ನಕಲಿ ಸಂದೇಶನದಲ್ಲಿ ಏನು ತೋರಿಸಲಾಗಿದೆ?
"ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾದ ಹೊಸ ಮಾರ್ಗಸೂಚಿಗಳ ಪ್ರಕಾರ, ಹೊಸ ನೋಟುಗಳ ಮೇಲೆ ಏನನ್ನಾದರೂ ಬರೆಯುವುದರಿಂದ ನೋಟು ಅಮಾನ್ಯವಾಗುತ್ತದೆ ಮತ್ತು ಇದು ಇನ್ನು ಮುಂದೆ ಕಾನೂನುಬದ್ಧ ಟೆಂಡರ್ ಆಗುವುದಿಲ್ಲ" ಎಂದು ಸಾಮಾಜಿಕ ಮಾಧ್ಯಮದಲ್ಲಿ ಪ್ರಸಾರವಾದ ಸಂದೇಶದಲ್ಲಿ ತಿಳಿಸಲಾಗಿದೆ.
ಮೇಲಿನ ಕ್ಲೈಮ್ ಅನ್ನು ನಕಲಿ ಎಂದು ವರ್ಗೀಕರಿಸಿದ ಪಿಐಬಿ ಫ್ಯಾಕ್ಟ್ ಚೆಕ್ "ಇಲ್ಲ, ಸ್ಕ್ರಿಬ್ಲಿಂಗ್ ಹೊಂದಿರುವ ಬ್ಯಾಂಕ್ ನೋಟುಗಳು ಅಮಾನ್ಯವಲ್ಲ ಮತ್ತು ಕಾನೂನುಬದ್ಧ ಟೆಂಡರ್ ಆಗಿ ಮುಂದುವರಿಯುತ್ತವೆ" ಎಂದು ಟ್ವೀಟ್ ಮಾಡಿದೆ.
ಇದರ ಬಗ್ಗೆ ಆರ್ಬಿಐ ಏನು ಹೇಳುತ್ತದೆ?
"ಕ್ಲೀನ್ ನೋಟ್ ನೀತಿಯ ಅಡಿಯಲ್ಲಿ, ಕರೆನ್ಸಿ ನೋಟುಗಳ ಮೇಲೆ ಬರೆಯದಂತೆ ಜನರನ್ನು ವಿನಂತಿಸಲಾಗಿದೆ. ಏಕೆಂದರೆ ಅದು ನೋಟುಗಳನ್ನು ವಿರೂಪಗೊಳಿಸುತ್ತದೆ. ಅದರ ಜೀವಿತಾವಧಿಯನ್ನು ಕಡಿಮೆ ಮಾಡುತ್ತದೆ" ಎಂದು ಪಿಐಬಿ ಹೇಳಿದೆ.
ಆರ್ಬಿಐ ನ ಕ್ಲೀನ್ ನೋಟ್ ನೀತಿಯ ಪ್ರಕಾರ, ಈ ಕೆಳಗಿನವುಗಳನ್ನು ಮಾಡದಂತೆ ಜನರಲ್ಲಿ ವಿನಂತಿಸಲಾಗಿದೆ:
ಕೊಳೆಯಾದ ನೋಟುಗಳ ಉಚಿತ ವಿನಿಮಯ
2020 ರ ಜುಲೈ 1 ರಂದು ಆರ್ಬಿಐ ನ "ಮಾಸ್ಟರ್ ಸುತ್ತೋಲೆ - ನೋಟುಗಳು ಮತ್ತು ನಾಣ್ಯಗಳ ವಿನಿಮಯದ ಸೌಲಭ್ಯ" ಪ್ರಕಾರ, ದೇಶದ ಎಲ್ಲಾ ಭಾಗಗಳಲ್ಲಿನ ಬ್ಯಾಂಕುಗಳ ಎಲ್ಲಾ ಶಾಖೆಗಳು ಸಾರ್ವಜನಿಕರ ಸದಸ್ಯರಿಗೆ ಈ ಕೆಳಗಿನ ಗ್ರಾಹಕ ಸೇವೆಗಳನ್ನು ಒದಗಿಸಬೇಕು.
ಇದನ್ನೂ ಓದಿ: Hydroponics: ಮಣ್ಣಿಲ್ಲದೇ ಬರೀ ನೀರಿಂದಲೇ ಕೃಷಿ ಮಾಡಬಹುದಂತೆ! ಹೈಡ್ರೋಪೋನಿಕ್ಸ್ ಆಗ್ರಿಕಲ್ಚರ್ನಿಂದ ಕೋಟಿ ಆದಾಯ ಫಿಕ್ಸ್!
ಇದನ್ನೂ ಓದಿ: Zomato, Blinkit ವೈರಲ್ ಜಾಹೀರಾತನ್ನು ನಕಲು ಮಾಡಿದ ಹೋಂಡಾ ಕಂಪನಿ!
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ