RBI Repo Rate Hike: ಸಾಲಗಾರರಿಗೆ ಮತ್ತೆ ಶಾಕ್ ನೀಡಿದ ಆರ್​​ಬಿಐ, 6ನೇ ಬಾರಿ ರೆಪೋ ದರ ಹೆಚ್ಚಳ!

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

ಭಾರತೀಯ ರಿಸರ್ವ್ ಬ್ಯಾಂಕ್ ಗವರ್ನರ್ ಶಕ್ತಿಕಾಂತ ದಾಸ್ ಪ್ರಕಾರ ಆರ್‌ಬಿಐ ರೆಪೊ ದರವನ್ನು 0.25 ಬೇಸಿಸ್ ಪಾಯಿಂಟ್‌ಗಳಷ್ಟು ಹೆಚ್ಚಿಸಿದೆ. ಕಾರುಸಾಲ ಮತ್ತು ವೈಯಕ್ತಿಕ ಸಾಲಗಳು ದುಬಾರಿಯಾಗಲಿವೆ.

  • Share this:

ಆರ್‌ಬಿಐ (RBI) ಸಾಲಗಾರರಿಗೆ ಬಿಗ್​ ಶಾಕ್​ (Big Shock) ಕೊಟ್ಟಿದೆ. ಮತ್ತೊಮ್ಮೆ ಬಡ್ಡಿದರಗಳನ್ನು (Interest Rate) ಹೆಚ್ಚಿಸಲು ನಿರ್ಧರಿಸಿದೆ. ಯುಎಸ್ ಫೆಡ್ನಿಂದ ಬಜೆಟ್ ಮತ್ತು ಬಡ್ಡಿದರ ಹೆಚ್ಚಳದ ನಂತರ RBI ಈ ನಿರ್ಧಾರವನ್ನು ತೆಗೆದುಕೊಂಡಿದೆ. ಪ್ರಸ್ತುತ ಭಾರತದ ಆರ್ಥಿಕತೆ ಉತ್ತಮ ಸ್ಥಿತಿಯಲ್ಲಿದೆ ಎಂದು ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಹೇಳಿದ್ದಾರೆ. ಜಾಗತಿಕ ಮಾರುಕಟ್ಟೆಯು ಹಿಂಜರಿತದಲ್ಲಿರುವಾಗ ಭಾರತದ ಸ್ಥಾನವು ತುಲನಾತ್ಮಕವಾಗಿ ಉತ್ತಮವಾಗಿದೆ. ಹಣದುಬ್ಬರವನ್ನು ಭಾಗಶಃ ನಿಯಂತ್ರಿಸಲಾಗಿದೆ. ಆದರೆ ಇಂತಹ ಪರಿಸ್ಥಿತಿಯಲ್ಲೂ ಆರ್ ಬಿಐ ಮತ್ತೊಮ್ಮೆ ರೆಪೊ ದರವನ್ನು (Repo Rate Hike) ಹೆಚ್ಚಿಸಿದೆ.


6ನೇ ಬಾರಿ ರೆಪೊ ದರ ಹೆಚ್ಚಿಸಿದ ಆರ್​​ಬಿಐ


ಭಾರತೀಯ ರಿಸರ್ವ್ ಬ್ಯಾಂಕ್ ಗವರ್ನರ್ ಶಕ್ತಿಕಾಂತ ದಾಸ್ ಪ್ರಕಾರ ಆರ್‌ಬಿಐ ರೆಪೊ ದರವನ್ನು 0.25 ಬೇಸಿಸ್ ಪಾಯಿಂಟ್‌ಗಳಷ್ಟು ಹೆಚ್ಚಿಸಿದೆ. ಕಾರುಸಾಲ ಮತ್ತು ವೈಯಕ್ತಿಕ ಸಾಲಗಳು ದುಬಾರಿಯಾಗಲಿವೆ. ಕಳೆದ ಮೇ ತಿಂಗಳಿನಿಂದ ರೆಪೊ ದರವನ್ನು ಆರನೇ ಬಾರಿಗೆ ಹೆಚ್ಚಿಸಲಾಗಿದೆ ಎಂದು ಹೇಳಲಾಗುತ್ತಿದೆ.


ಆರ್​ಬಿಐ ಸಭೆಯಲ್ಲಿ ಆರರಲ್ಲಿ ನಾಲ್ವರು ರೆಪೋ ದರ ಏರಿಕೆಯ ಪರವಾಗಿ ಮತ ಹಾಕಿದ್ದಾರೆ. ಹಾಗಾಗಿ ಈ ಸಭೆಯಲ್ಲಿ ರೆಪೋ ದರ ಹೆಚ್ಚಿಸುವ ನಿರ್ಧಾರ ಕೈಗೊಳ್ಳಲಾಗಿದೆ ಎಂದು ಶಕ್ತಿಕಾಂತ ದಾಸ್ ಮಾಹಿತಿ ನೀಡಿದರು.


0.25 ಬೇಸಿಸ್ ಪಾಯಿಂಟ್​ ಹೆಚ್ಚಳ!ಆರ್‌ಬಿಐ ರೆಪೊ ದರವನ್ನು 0.25 ಬೇಸಿಸ್ ಪಾಯಿಂಟ್‌ಗಳಿಂದ 6.50 ಕ್ಕೆ ಹೆಚ್ಚಿಸಿದೆ. MSF ದರವು 6.5 ರಿಂದ 6.75 ಕ್ಕೆ ಹೆಚ್ಚಾಗಿದೆ. ಎಸ್ ಡಿಎಫ್ ದರ ಶೇ.6ರಿಂದ ಶೇ.6.25ಕ್ಕೆ ಏರಿಕೆಯಾಗಿದೆ.


ಇದನ್ನೂ ಓದಿ: ಈ ಬ್ಯಾಂಕ್‌ಗಳಲ್ಲಿ ಖಾತೆ ಹೊಂದಿರುವವರಿಗೆ ಸಂತಸದ ಸುದ್ದಿ


ದೇಶದ ಆರ್ಥಿಕ ಪರಿಸ್ಥಿತಿ ಮೇಲೆ ಸೂಕ್ಷ್ಮವಾಗಿ ನಿಗಾ ಇರಿಸುವುದನ್ನು ಆರ್​ಬಿಐ ಮುಂದುವರಿಸಿದೆ. ನಾಲ್ಕನೇ ತ್ರೈಮಾಸಿಕದಲ್ಲಿ ಒಟ್ಟಾರೆ ಚಿಲ್ಲರೆ ಹಣದುಬ್ಬರ ಶೇ 5.6ರಷ್ಟು ಇರುವ ನಿರೀಕ್ಷೆ ಇದೆ ಎಂದು ಶಕ್ತಿಕಾಂತ ದಾಸ್ ತಿಳಿಸಿದರು. ಕಳೆದ ಮೂರು ವರ್ಷಗಳಲ್ಲಿ ಹಿಂದೆಂದೂ ನಡೆಯದಂಥ ಘಟನಾವಳಿಗಳು ವಿಶ್ವದಾದ್ಯಂತ ಕೇಂದ್ರೀಯ ಬ್ಯಾಂಕ್​​ಗಳ ಹಣಕಾಸು ನೀತಿಗಳನ್ನು ಪರೀಕ್ಷೆಗೆ ಒಳಪಡಿಸಿವೆ. ಬೆಳವಣಿಗೆ ಹೊಂದುತ್ತಿರುವ ಆರ್ಥಿಕತೆಗಳು ಕಠಿಣ ಸವಾಲುಗಳನ್ನು ಎದುರಿಸುತ್ತಿವೆ.


ಸಾಲಗಾರರಿಗೆ ಮತ್ತಷ್ಟು ಹೊರೆ!


ಮೇ ತಿಂಗಳಿನಲ್ಲಿ ಆರ್‌ಬಿಐ ರೆಪೋ ದರವನ್ನು 40 ಮೂಲಾಂಕ ಕೂಡಲೇ ಜಾರಿಗೆ ಬರುವಂತೆ ಏರಿಕೆ ಮಾಡಿತ್ತು. ಆ ಬಳಿಕ ಆರ್‌ಬಿಐ ಜೂನ್‌ ತಿಂಗಳಿನಲ್ಲಿ ಮತ್ತೆ ರೆಪೋ ದರ ಹೆಚ್ಚಳ ಮಾಡಿತ್ತು. ಜೂನ್‌ನಲ್ಲಿ ಆರ್‌ಬಿಐ 50 ಮೂಲಾಂಕ ಏರಿಕೆ ಮಾಡಿದ್ದು, ಶೇಕಡ 4.90ಕ್ಕೆ ತಲುಪಿತ್ತು. ಆಗಸ್ಟ್‌ನಲ್ಲಿ ಮತ್ತೆ 50 ಮೂಲಾಂಕ ಏರಿಕೆ ಮಾಡಲಾಗಿತ್ತು. ಬಳಿಕ ಸೆಪ್ಟೆಂಬರ್‌ನಲ್ಲಿ ರೆಪೋ ದರವನ್ನು 50 ಮೂಲಾಂಕ ಹೆಚ್ಚಳ ಮಾಡಲಾಗಿದೆ. ಅದಾದ ಬಳಿಕ ಡಿಸೆಂಬರ್‌ನಲ್ಲಿ 35 ಮೂಲಾಂಕ ಹೆಚ್ಚಿಸಲಾಗಿದೆ. ಈಗ 25 ಮೂಲಾಂಕ ಏರಿಸಲಾಗಿದೆ.


ರೆಪೋ ದರ ಎಂದರೇನು?


ರೆಪೋ ದರ ಎಂದರೆ ಭಾರತೀಯ ರಿಸರ್ವ್ ಬ್ಯಾಂಕ್ (ಆರ್‌ಬಿಐ) ದೇಶದ ವಾಣಿಜ್ಯ ಬ್ಯಾಂಕುಗಳಿಗೆ ಕೊಡುವ ಸಾಲದ ಮೇಲಿನ ಬಡ್ಡಿ ದರವೇ ರೆಪೋ ರೇಟ್. ವಾಣಿಜ್ಯ ಬ್ಯಾಂಕುಗಳು ತಮ್ಮಲ್ಲಿ ಹಣದ ಕೊರತೆಯಾದಾಗ ಆರ್‌ಬಿಐನಿಂದ ಹಣ ಪಡೆಯುತ್ತವೆ.


ಈ ಹಣಕ್ಕೆ ಬಡ್ಡಿ ನೀಡುವ ದರ ಇದಾಗಿದೆ. ಫೆಬ್ರವರಿ 6ರಿಂದ 8ರವರೆಗೆ ಮಾನೆಟರಿ ಪಾಲಿಸಿ ಕಮೀಟಿ (ಎಂಪಿಸಿ) ಸಭೆ ನಡೆದಿದ್ದು ಈ ಸಭೆಯ ಅಂತ್ಯದಲ್ಲಿ ಅಂದರೆ ಫೆಬ್ರವರಿ 8ರಂದು ಆರ್‌ಬಿಐ ರೆಪೋ ದರ ಪರಿಷ್ಕರಣೆ ಮಾಡಿದೆ.


Published by:ವಾಸುದೇವ್ ಎಂ
First published:

ಸುದ್ದಿ 18ಕನ್ನಡ ಟ್ರೆಂಡಿಂಗ್

ಮತ್ತಷ್ಟು ಓದು