Currency Notes: ಇನ್ಮುಂದೆ ನೋಟಿನ ಮೇಲೆ ಗಾಂಧಿ ಚಿತ್ರ ಇರಲ್ವಂತೆ! ಇನ್ಯಾರ್​ ಫೋಟೋ ಇರಬಹುದು? ಗೆಸ್​​​​ ಮಾಡಿ

2 ಸಾವಿರ ರೂಪಾಯಿಯ ನೋಟು

2 ಸಾವಿರ ರೂಪಾಯಿಯ ನೋಟು

500 ರೂಪಾಯಿ 1000 ರೂಪಾಯಿ ನೋಟುಗಳನ್ನು ಬ್ಯಾನ್​ ಮಾಡಲಾ ಯಿತು. ಇದಾಗಿ 7 ವರ್ಷಗಳೇ ಕಳೆದಿವೆ.  ಈಗ ಮತ್ತೊಮ್ಮೆ ನೋಟು(Currency) ಗಳು ಸಖತ್​ ಸುದ್ದಿಯಲ್ಲಿವೆ.  ಈ ವಿಚಾರ ತಿಳಿದ ಜನರು ಇದೆನಪ್ಪಾ ಮತ್ತೆ ಎಲ್ಲಾ ಹೊಸದಿಂದ ಶುರು ಮಾಡಬೇಕಾ ಎಂದು ಟೆನ್ಶನ್​ (Tension) ಆಗಿದ್ದಾರೆ.

  • Share this:

ನವೆಂಬರ್​ (November) 8 2016.. ಈ ದಿನವನ್ನು ಯಾವೊಬ್ಬ ಭಾರತೀಯನು ಮರೆಯಲು ಸಾಧ್ಯವಿಲ್ಲ. ಆ ದಿನ ಪ್ರಧಾನ ಮಂತ್ರಿ ಮೋದಿ (Prime Minister Modi) ಮಾಡಿದ ಆ ಒಂದು ಘೋಷಣೆ ಇಡೀ ಭಾರತವನ್ನೇ ನಡುಗಿಸಿಬಿಟ್ಟಿತ್ತು. ಬ್ಲ್ಯಾಕ್ ಮನಿ (Black money) ಕಳ್ಳರಿಗಂತೂ ಬರ ಸಿಡಿಲೆ ಬಡಿದಿತ್ತು. ಯಾಕೆಂದರೆ  ಅಂದು ಪ್ರಧಾನ ಮಂತ್ರಿ ಚಾಲ್ತಿಯಲ್ಲಿದ್ದ ನೋಟುಗಳನ್ನು ಬ್ಯಾನ್ (Note Ban)​ ಮಾಡಿ ಆದೇಶ ಹೊರಡಸಿದ್ದರು. 500 ರೂಪಾಯಿ 1000 ರೂಪಾಯಿ ನೋಟುಗಳನ್ನು ಬ್ಯಾನ್​ ಮಾಡಲಾ ಯಿತು. ಇದಾಗಿ 7 ವರ್ಷಗಳೇ ಕಳೆದಿವೆ.  ಈಗ ಮತ್ತೊಮ್ಮೆ ನೋಟು(Currency) ಗಳು ಸಖತ್​ ಸುದ್ದಿಯಲ್ಲಿವೆ.  ಈ ವಿಚಾರ ತಿಳಿದ ಜನರು ಇದೆನಪ್ಪಾ ಮತ್ತೆ ಎಲ್ಲಾ ಹೊಸದಿಂದ ಶುರು ಮಾಡಬೇಕಾ ಎಂದು ಟೆನ್ಶನ್​ (Tension) ಆಗಿದ್ದಾರೆ. ನೀವೂ ಕೂಡ ಈ ವಿಚಾರ ತಿಳಿದರೆ ತಲೆ ಬಿಸಿ ಮಾಡಿಕೊಳ್ಳುತ್ತೀರಾ. ಯಾಕೆಂದರೆ ಇದು ದುಡ್ಡಿನ ವಿಷಯ ರೀ..!


ನೋಟಿನಲ್ಲಿ ಇನ್ಮುಂದೆ ಗಾಂಧಿ ಚಿತ್ರ ಇರಲ್ವಂತೆ!


ಶಾಕ್​ ಆಯ್ತಾ? ಆಗಲಿ ಅಂತ  ತಾನೇ ಈ ವಿಷಯವನ್ನು ನಾವು ಹೇಳುತ್ತಿರುವುದು. ಹಾಗಂತ ನಾವು ಸುಮ್ನೆ ಸುಮ್ನೆ ಈ ಸುದ್ದಿಯನ್ನು ತಂದಿಲ್ಲ, ಇದು ನಿಜ. ಇನ್ಮುಂದೆ ಝಣ ಝಣ ಕಾಂಚಣದಲ್ಲಿ ಗಾಂಧೀಜಿ ಅವರ ಫೋಟೋ ಇರಲ್ವಂತೆ. ಮತ್ತೆ ಇನ್ಯಾರ್​ ಫೋಟೋ ಇರುತ್ತೆ ಅಂತ ಯೋಚಿಸುತ್ತಿದ್ದೀರಾ? ಇಲ್ಲಿದೆ ನೋಡಿ. ನೋಟುಗಳು ಶೀಘ್ರದಲ್ಲೇ ರವೀಂದ್ರನಾಥ ಟ್ಯಾಗೋರ್ ಮತ್ತು ಎಪಿಜೆ ಅಬ್ದುಲ್ ಕಲಾಂ ಅವರ ವಾಟರ್‌ಮಾರ್ಕ್‌ಗಳನ್ನು ಹೊಂದಬಹುದು ಎಂದು ವರದಿಯಾಗಿದೆ.


ನೋಟುಗಳ ಮೇಲೆ ಅಬ್ದುಲ್​ ಕಲಾಮ್​ ವಾಟರ್​ಮಾರ್ಕ್!


ಕೇಂದ್ರ ಹಣಕಾಸು ಸಚಿವಾಲಯ ಮತ್ತು ಭಾರತೀಯ ರಿಸರ್ವ್ ಬ್ಯಾಂಕ್ (ಆರ್‌ಬಿಐ) ಕೆಲವು ಮುಖಬೆಲೆಯ ನೋಟುಗಳಲ್ಲಿ  ಮಿಸೈಲ್ ಮ್ಯಾನ್‌ನ ವಾಟರ್‌ಮಾರ್ಕ್‌ಗಳನ್ನು ಬಳಸಲು ಪರಿಗಣಿಸುತ್ತಿದೆ. ದಿ ನ್ಯೂ ಇಂಡಿಯನ್ ಎಕ್ಸ್‌ಪ್ರೆಸ್ ಪ್ರಕಾರ, ಸೆಕ್ಯುರಿಟಿ ಪ್ರಿಂಟಿಂಗ್ ಮತ್ತು ಮಿಂಟಿಂಗ್ ಕಾರ್ಪೊರೇಷನ್ ಆಫ್ ಇಂಡಿಯಾ (SPMCIL) ಮತ್ತು RBI ಟ್ಯಾಗೋರ್, ಗಾಂಧಿ ಮತ್ತು ಕಲಾಂ ಅವರೊಂದಿಗೆ ಎರಡು ಸೆಟ್ ಮಾದರಿಗಳ ವಾಟರ್‌ಮಾರ್ಕ್‌ಗಳನ್ನು ಹೊಂದಬಹುದು ಎಂದು ಹೇಳಲಾಗುತ್ತಿದೆ. ಅಂತಿಮ ನಿರ್ಧಾರವನ್ನು ಸರ್ಕಾರವು ಉನ್ನತ ಮಟ್ಟದಲ್ಲಿ ತೆಗೆದುಕೊಳ್ಳುತ್ತದೆ.


ಇದನ್ನೂ ಓದಿ: 2022 ರ ಅರ್ಧ ವರ್ಷಕ್ಕೇ ಇಷ್ಟೊಂದು ನಕಲಿ ನೋಟುಗಳಾ? RBI ಕೊಟ್ಟ ಮಾಹಿತಿ ನೋಡಿದ್ರೆ ಬೆಚ್ಚಿ ಬೀಳ್ತೀರಾ


ಆಘಾತಕಾರಿ ಮಾಹಿತಿ ಕೊಟ್ಟ ಆರ್​​ಬಿಐ!


ಭಾರತೀಯ ರಿಸರ್ವ್ ಬ್ಯಾಂಕ್ ನೀಡಿರುವ ಮಾಹಿತಿಯಿಂದ ಇದೀಗ ಹಲವಾರು ರೀತಿಯ ಪ್ರಶ್ನೆಗಳು ಉದ್ಭವಿಸಿದೆ.  2016ರಲ್ಲಿ ಚಾಲ್ತಿಯಲ್ಲಿದ್ದ ರೂ.500 ಮತ್ತು ರೂ.1,000 ನೋಟುಗಳ ಅಮಾನ್ಯೀಕರಣದ ಪ್ರಮುಖ ಉದ್ದೇಶವೆಂದರೆ ನಕಲಿ ಕರೆನ್ಸಿ ನೋಟುಗಳ ಚಲಾವಣೆ ತಡೆಯುವುದಾಗಿತ್ತು. ಇದಾದ ಬಳಿಕ ನಕಲಿ ನೋಟುಗಳ ತಯಾರಿಕೆಗೆ ಬ್ರೇಕ್​ ಬಿದ್ದಿದೆ ಎಂದು ಎಲ್ಲರೂ ಭಾವಿಸಿದ್ದರು. ಆದರೆ, ಇದೀಗ ಆರ್​​ಬಿಐ ಆಘಾತಕಾರಿ ಮಾಹಿತಿ ನೀಡಿದೆ.  2022 ವಿತ್ತೀಯ ವರ್ಷದಲ್ಲಿ 500 ರೂ ಮುಖ ಬೆಲೆಯ 79,669 ನಕಲಿ ನೋಟುಗಳು ಪತ್ತೆಯಾಗಿದೆ ಎಂದು ಭಾರತೀಯ ರಿಸರ್ವ್ ಬ್ಯಾಂಕ್ ಹೇಳಿದೆ.


ಇದನ್ನೂ ಓದಿ: ಇಎಂಐ ಕಟ್ಟೋಕಾಗದೇ ಟೆನ್ಶನ್​ ಹೆಚ್ಚಾಗಿದ್ಯಾ? ಹೀಗ್​ ಮಾಡಿ ಸಲಿಸಾಗಿ ಸಾಲ ತೀರಿಸಿಕೊಳ್ಳಿ


79, 669 ನಕಲಿ ನೋಟುಗಳು ಪತ್ತೆ!


2022 ವಿತ್ತೀಯ ವರ್ಷದಲ್ಲಿ 500 ರೂ ಮುಖ ಬೆಲೆಯ 79,669 ನಕಲಿ ನೋಟುಗಳ ಪತ್ತೆಯಾಗಿದ್ದು, ಹಿಂದಿನ ಹಣಕಾಸು ವರ್ಷದಲ್ಲಿ (2020–21) ಒಟ್ಟು 2.08 ಲಕ್ಷ ನಕಲಿ ನೋಟುಗಳು ಪತ್ತೆಯಾಗಿದ್ದವು. ಅದರಂತೆ ಮಾರ್ಚ್‌ 31ಕ್ಕೆ ಕೊನೆಗೊಂಡ ಹಣಕಾಸು ವರ್ಷದಲ್ಲಿ ದೇಶದಲ್ಲಿ ಒಟ್ಟು 2.30 ಲಕ್ಷ ನಕಲಿ ನೋಟುಗಳು ಪತ್ತೆಯಾಗಿವೆ. ಈ ವರ್ಷ ಇನ್ನೂ ಮುಗಿದಿಲ್ಲ. ಆಗಲೇ ಇಷ್ಟೊಂದು 500 ರೂಪಾಯಿಯ ನಕಲಿ ನೋಟುಗಳು  ಪತ್ತೆಯಾಗಿರೋದು ಆತಂಕ ಮೂಡಿಸಿರುವುದಂತೂ ನಿಜ.

top videos
    First published: