• Home
  • »
  • News
  • »
  • business
  • »
  • RBI Rules: ಫೆಬ್ರವರಿಯಲ್ಲಿ ಹೊಸ ರೂಲ್ಸ್ ತರುತ್ತಾ ಆರ್‌ಬಿಐ? ಈ ಬಗ್ಗೆ ಆರ್ಥಿಕ ತಜ್ಞರು ಹೇಳುವುದೇನು?

RBI Rules: ಫೆಬ್ರವರಿಯಲ್ಲಿ ಹೊಸ ರೂಲ್ಸ್ ತರುತ್ತಾ ಆರ್‌ಬಿಐ? ಈ ಬಗ್ಗೆ ಆರ್ಥಿಕ ತಜ್ಞರು ಹೇಳುವುದೇನು?

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

ICRA ಮುಖ್ಯ ಅರ್ಥಶಾಸ್ತ್ರಜ್ಞೆ ಅದಿತಿ ನಾಯರ್ ಕೂಡ ಇದೇ ಅಭಿಪ್ರಾಯವನ್ನು ತಿಳಿಸಿದ್ದು, ಫೆಬ್ರವರಿ ತಿಂಗಳಿನಲ್ಲಿ ದರ ನಿಗದಿಪಡಿಸುವ ಪ್ರಕ್ರಿಯೆಯು ವಿರಾಮಗೊಳ್ಳಬಹುದು ಎಂಬುದಾಗಿ ನಿರೀಕ್ಷಿಸಲಾಗಿದೆ ಎಂದು ತಿಳಿಸಿದ್ದಾರೆ.

  • Trending Desk
  • 5-MIN READ
  • Last Updated :
  • Share this:

ವೈಯಕ್ತಿಕ ಸಾಲ (Personal Loan) , ವಾಹನ ಸಾಲ (Vehicles Loan) , ಶೈಕ್ಷಣಿಕ ಸಾಲ (Education Loan) , ವ್ಯಾಪಾರ ಸಾಲಗಳು (Business Loan) , ಕ್ರೆಡಿಟ್ ಕಾರ್ಡ್‌ಗಳು (Credit Card) ಮೊದಲಾದ ಸಾಲಗಳ ಮೇಲೆ ಪರಿಣಾಮ ಬೀರುವ ದರ ಹೆಚ್ಚಳ ಪ್ರಕ್ರಿಯೆಯನ್ನು ಮುಂದಿನ ಹಣಕಾಸು ನೀತಿಗೂ ಮುನ್ನವೇ ಫೆಬ್ರವರಿಯಲ್ಲಿ ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ (RBI) ವಿರಾಮಗೊಳಿಸಬಹುದು ಎಂಬುದಾಗಿ ತಿಳಿದು ಬಂದಿದೆ. ರಿಟೇಲ್ ಹಣದುಬ್ಬರವು ಸತತವಾಗಿ ಎರಡನೇ ತಿಂಗಳಿನಲ್ಲಿಯೂ 6% ಕ್ಕಿಂತ ಕಡಿಮೆಯಾಗಿರುವುದರಿಂದ ಈ ಕ್ರಮ ಕೈಗೊಳ್ಳಲಾಗಿದೆ ಎಂಬುದು ವರದಿಯಾಗಿದೆ.


ಚಿಲ್ಲರೆ ಬೆಲೆಯ ಮೇಲ್ವಿಚಾರಣೆ


ಆರ್ಥಿಕತೆಯಲ್ಲಿ ಬೆಲೆ ಸ್ಥಿರತೆಯನ್ನು ಕಾಯ್ದುಕೊಳ್ಳುವ ಅಂಶದಲ್ಲಿ ಸೆಂಟ್ರಲ್ ಬ್ಯಾಂಕ್ ರಿಟೇಲ್ ಹಣದುಬ್ಬರದ ಅಂಕಿ ಅಂಶವನ್ನು ಸೂಕ್ಚ್ಮವಾಗಿ ಗಮನಿಸುತ್ತದೆ. ಒಂದು ನಿರ್ದಿಷ್ಟ ವಸ್ತುವಿಗೆ ಒಂದು ನಿರ್ದಿಷ್ಟ ಮಟ್ಟದಲ್ಲಿ ಚಿಲ್ಲರೆ ಬೆಲೆಗಳನ್ನು ಮೇಲ್ವಿಚಾರಣೆ ಮಾಡುತ್ತದೆ.


ಹಣದುಬ್ಬರ ಆರ್‌ಬಿಐ ಅಂದಾಜಿಗಿಂತ ಕಡಿಮೆ ಇದೆ


ಅಕ್ಟೋಬರ್-ಡಿಸೆಂಬರ್ ಅವಧಿಯಲ್ಲಿ ಭಾರತದ ಹಣದುಬ್ಬರವು ಆರ್‌ಬಿಐನ ಅಂದಾಜಿಗಿಂತ ಕಡಿಮೆಯಿರುವುದರಿಂದ, ಕೇಂದ್ರ ಬ್ಯಾಂಕ್ ತನ್ನ ಕಾರ್ಯತಂತ್ರವನ್ನು ಮರು ಮೌಲ್ಯಮಾಪನ ಮಾಡಬಹುದು ಎಂದು ಡಿಎಸ್‌ಪಿ ಮ್ಯೂಚುಯಲ್ ಫಂಡ್‌ನ ಉತ್ಪನ್ನ ವ್ಯವಸ್ಥಾಪಕ ಮತ್ತು ಅರ್ಥಶಾಸ್ತ್ರಜ್ಞ ಅಂಕಿತಾ ಪಾಠಕ್ ತಿಳಿಸಿದ್ದಾರೆ.


ದರ ನಿಗದಿಪಡಿಸುವ ಪ್ರಕ್ರಿಯೆ ವಿರಾಮ


ICRA ಮುಖ್ಯ ಅರ್ಥಶಾಸ್ತ್ರಜ್ಞೆ ಅದಿತಿ ನಾಯರ್ ಕೂಡ ಇದೇ ಅಭಿಪ್ರಾಯವನ್ನು ತಿಳಿಸಿದ್ದು, ಫೆಬ್ರವರಿ ತಿಂಗಳಿನಲ್ಲಿ ದರ ನಿಗದಿಪಡಿಸುವ ಪ್ರಕ್ರಿಯೆಯು ವಿರಾಮಗೊಳ್ಳಬಹುದು ಎಂಬುದಾಗಿ ನಿರೀಕ್ಷಿಸಲಾಗಿದೆ ಎಂದು ತಿಳಿಸಿದ್ದಾರೆ.


ಆರ್ಥಿಕ ವರ್ಷ 2023 ರಲ್ಲಿ ರಲ್ಲಿನ ಸರಾಸರಿ CPI (ಗ್ರಾಹಕ ಬೆಲೆ ಸೂಚ್ಯಾಂಕ) ಹಣದುಬ್ಬರವು MPC ಯ ಅಂದಾಜು 6.6% ಕ್ಕಿಂತ ಗಮನಾರ್ಹವಾಗಿ ಕಡಿಮೆಯಾಗಿದೆ ಎಂದು ಅರ್ಥಶಾಸ್ತ್ರಜ್ಞರು ತಿಳಿಸಿದ್ದಾರೆ.


ರಿಟೇಲ್ ಹಣದುಬ್ಬರ ಡಿಸೆಂಬರ್‌ನಲ್ಲಿ 1 ವರ್ಷದಲ್ಲೇ ಕನಿಷ್ಠ ಮಟ್ಟಕ್ಕೆ ಇಳಿದಿದೆ


ಚಿಲ್ಲರೆ ಹಣದುಬ್ಬರವು ಡಿಸೆಂಬರ್‌ನಲ್ಲಿ ಒಂದು ವರ್ಷದ ಕನಿಷ್ಠ 5.72% ಗೆ ಇಳಿದಿದೆ. 20 ಅರ್ಥಶಾಸ್ತ್ರಜ್ಞರ ಸಮೀಕ್ಷೆಯು ಹಣದುಬ್ಬರವನ್ನು 5.9% ಎಂದು ಊಹಿಸಿತ್ತು.ಹಣದುಬ್ಬರದ ಒಟ್ಟಾರೆ ಕುಸಿತವು ಆರ್‌ಬಿಐ ತನ್ನ ಆರ್ಥಿಕ ನೀತಿ ಬಿಗಿಗೊಳಿಸುವಿಕೆಯನ್ನು ವಿರಾಮಗೊಳಿಸಬಹುದು ಎಂಬ ನಿರೀಕ್ಷೆಗಳನ್ನು ಹುಟ್ಟುಹಾಕಿದೆ.


ಇದನ್ನೂ ಓದಿ: ಜಾಗತಿಕ ಆರ್ಥಿಕ ಬೆಳವಣಿಗೆಯ ಮೇಲೆ ಪ್ರಭಾವ ಬೀರುವಲ್ಲಿ ಭಾರತವು ಚೀನಾವನ್ನು ಹಿಂದಿಕ್ಕಲಿದ್ಯಾ?


ಆದರೆ ಆಹಾರ ಮತ್ತು ಇಂಧನವನ್ನು ಹೊರತುಪಡಿಸಿದ ಪ್ರಮುಖ ಹಣದುಬ್ಬರವು ಡಿಸೆಂಬರ್‌ನಲ್ಲಿ 6.1% ರಷ್ಟಿತ್ತು ಎಂದು ಅರ್ಥಶಾಸ್ತ್ರಜ್ಞರು ತಿಳಿಸಿದ್ದಾರೆ.ಇದಲ್ಲದೆ, ಅನುಕೂಲಕರವಾದ ಮೂಲ ಪರಿಣಾಮವು ಕ್ಷೀಣಿಸುವ ಕಾರಣ ಚಿಲ್ಲರೆ ಹಣದುಬ್ಬರವು ಈ ತಿಂಗಳು ಏರಿಕೆಯಾಗುವ ನಿರೀಕ್ಷೆಯಿದೆ.


ಆರ್‌ಬಿಐ ಮೇ 2022 ರಿಂದ ರೆಪೊ ದರವನ್ನು 225 ಬೇಸಿಸ್ ಪಾಯಿಂಟ್‌ಗಳಿಂದ 6.25% ಗೆ ಹೆಚ್ಚಿಸಿದೆ. ಇದಕ್ಕೆ ವಿರುದ್ಧವಾಗಿ, US ಫೆಡರಲ್ ರಿಸರ್ವ್ ಬಡ್ಡಿದರಗಳನ್ನು 425 bps ನಿಂದ 4.25%-4.50% ಗೆ ಹೆಚ್ಚಿಸಿದೆ.


ಬಜೆಟ್ ಮೇಲೆ ಹೆಚ್ಚಿನ ಗಮನ


ಹಣಕಾಸಿನ ಸಾಮರ್ಥ್ಯವನ್ನು ಹೆಚ್ಚಿಸುವ ರೀತಿಯಲ್ಲಿ ಇನ್ನಷ್ಟು ಕ್ರಮಗಳನ್ನು ಕೈಗೊಳ್ಳಲಿದ್ದು, ಫೆ.1 ರಂದು ಮಂಡಿಸಲಿರುವ FY24 ಬಜೆಟ್‌ನಲ್ಲಿ ಬಂಡವಾಳ ವೆಚ್ಚದ ಮೇಲೆ ಹಣಕಾಸು ನೀತಿ ಹೆಚ್ಚು ಗಮನಹರಿಸುತ್ತದೆ ಎಂಬುದು ಪರಿಣಿತರ ಅಭಿಪ್ರಾಯವಾಗಿದೆ.


ಬಜೆಟ್ ಸುಮಾರು 5% ರಿಂದ 6% ರಷ್ಟು ಬೆಳೆಯಬಹುದು ಎಂದು ಪಾಠಕ್ ಹೇಳಿದರೆ, ಬಂಡವಾಳ ವೆಚ್ಚವು 15% ರಿಂದ 20% ವರೆಗೆ ಹೆಚ್ಚಾಗುತ್ತದೆ ಮತ್ತು ಆದಾಯ ವೆಚ್ಚವು 5% ರಿಂದ 7% ರಷ್ಟು ಹೆಚ್ಚಾಗುತ್ತದೆ ಎಂಬುದಾಗಿ ತಿಳಿಸಲಾಗಿದೆ.



ವಿಶ್ವಬ್ಯಾಂಕ್ ಮಾಹಿತಿ ಏನು?


ವಿಶ್ವ ಬ್ಯಾಂಕ್ ತನ್ನ ಇತ್ತೀಚಿನ ಆರ್ಥಿಕ ನವೀಕರಣದಲ್ಲಿ ಭಾರತದ ಆರ್ಥಿಕ ಬೆಳವಣಿಗೆ ದರವು 2022-23 ರಲ್ಲಿ ನಿರೀಕ್ಷಿತ ಶೇಕಡಾ 6.9 ರಿಂದ ಮುಂದಿನ ಹಣಕಾಸು ವರ್ಷದಲ್ಲಿ ಶೇಕಡಾ 6.6 ಕ್ಕೆ ಇಳಿಯಲಿದೆ ಎಂದು ತಿಳಿಸಿದೆ.

Published by:ವಾಸುದೇವ್ ಎಂ
First published: