Ombudsman Scheme: RBI ಹೊಸ ಒಂಬುಡ್ಸ್‌ಮನ್ ಯೋಜನೆ ಬಗ್ಗೆ ನಿಮಗೆಷ್ಟು ಗೊತ್ತು? ಇದರಲ್ಲಿ ದೂರು ಸಲ್ಲಿಸುವುದು ಹೇಗೆ?

ಒಂಬುಡ್ಸ್‌ಮನ್ ಯೋಜನೆಯಡಿ ನಿಮ್ಮ ದೂರನ್ನು ಸಲ್ಲಿಸಲು ಹಲವು ಮಾರ್ಗಗಳಿವೆ. ಅವರ ವೆಬ್‌ಸೈಟ್ https://cms.rbi.org.in ಗೆ ಭೇಟಿ ನೀಡುವ ಮೂಲಕ ನಿಮ್ಮ ದೂರನ್ನು ಆನ್‌ಲೈನ್‌ನಲ್ಲಿ ಸಲ್ಲಿಸಲು ನೀವು ಆಯ್ಕೆ ಮಾಡಬಹುದು.

RBI

RBI

  • Share this:
ಬ್ಯಾಂಕ್‌ಗಳು(Banks), ಪಾವತಿ ಸೇವಾ ನಿರ್ವಾಹಕರು ಮತ್ತು ಬ್ಯಾಂಕಿಂಗ್-ಅಲ್ಲದ ಹಣಕಾಸು ಕಂಪನಿಗಳ (NFFCs) ನಂತಹ ನಿಯಂತ್ರಿತ ಘಟಕಗಳ ವಿರುದ್ಧ ಗ್ರಾಹಕರ ದೂರುಗಳಿಗೆ ಸಂಬಂಧಿಸಿದಂತೆ ಪರಿಹಾರ ಕ್ರಮಗಳನ್ನು ಇನ್ನಷ್ಟು ಬಲಪಡಿಸುವ ನಿಟ್ಟಿನಲ್ಲಿ ಭಾರತೀಯ ರಿಸರ್ವ್ ಬ್ಯಾಂಕ್(Reserve Bank of India) ಒಟ್ಟುಗೂಡುವಿಕೆ ಸಾರ್ವಜನಿಕ ತನಿಖಾಧಿಕಾರಿ ಯೋಜನೆಯನ್ನು (Integrated Ombudsman Scheme) ಪರಿಚಯಿಸಿದೆ. ಒಂದು ರಾಷ್ಟ್ರ-ಒಂದು ಒಂಬುಡ್ಸ್‌ಮನ್ (ತನಿಖಾಧಿಕಾರಿ) ಗ್ರಾಹಕರಿಗೆ ದೂರು ಸಲ್ಲಿಸಲು ಅನುಗುಣವಾಗಿರುವಂತೆ ದೂರು ಟ್ರ್ಯಾಕ್ ಮಾಡಲು, ಪರಿಹಾರ ನೀಡಲು ಒಂದು ಸಂಪರ್ಕ ಸೇವಾ ಕೇಂದ್ರದಂತೆ ಕಾರ್ಯನಿರ್ವಹಿಸುತ್ತದೆ. ಇದರಿಂದ ಗ್ರಾಹಕರ ದೂರು ಸಲ್ಲಿಕೆಯ ವೇಳೆಯಲ್ಲಿ ಸಂಭವಿಸುವ ಜಗಳವನ್ನು ಕಡಿಮೆ ಮಾಡಬಹುದಾಗಿದೆ ಹಾಗೂ ತಮ್ಮ ಸಮಸ್ಯೆಗಳಿಗೆ ಶೀಘ್ರದಲ್ಲೇ ಪರಿಹಾರವನ್ನು ಗ್ರಾಹಕರು ಪಡೆಯುತ್ತಾರೆ. ಹಾಗಿದ್ದರೆ ಒಂಬುಡ್ಸ್‌ಮನ್ ಯೋಜನೆಯ ಅಡಿಯಲ್ಲಿ ದೂರು ಸಲ್ಲಿಸುವುದು ಹೇಗೆ ಎಂಬುದನ್ನು ಇಲ್ಲಿ ವಿವರವಾಗಿ ನೀಡಲಾಗಿದೆ.

ದೂರು ಸಲ್ಲಿಸುವ ಮಾರ್ಗಗಳು

ಒಂಬುಡ್ಸ್‌ಮನ್ ಯೋಜನೆಯಡಿ ನಿಮ್ಮ ದೂರನ್ನು ಸಲ್ಲಿಸಲು ಹಲವು ಮಾರ್ಗಗಳಿವೆ. ಅವರ ವೆಬ್‌ಸೈಟ್ https://cms.rbi.org.in ಗೆ ಭೇಟಿ ನೀಡುವ ಮೂಲಕ ನಿಮ್ಮ ದೂರನ್ನು ಆನ್‌ಲೈನ್‌ನಲ್ಲಿ ಸಲ್ಲಿಸಲು ನೀವು ಆಯ್ಕೆ ಮಾಡಬಹುದು ಅಥವಾ CRPC@rbi.org.in ನಲ್ಲಿ ಇಮೇಲ್ ಮೂಲಕ ದೂರು ನೀಡಲು ಆಯ್ಕೆ ಮಾಡಬಹುದು. ದೂರನ್ನು ದಾಖಲಿಸಲು ಟೋಲ್ ಫ್ರೀ ಸಂಖ್ಯೆ 14448 ಅನ್ನು ಸಹ ಬಳಸಬಹುದು. ಫಾರ್ಮ್ ಅನ್ನು ಭರ್ತಿ ಮಾಡುವ ಮೂಲಕ ಮತ್ತು ಅದನ್ನು ಚಂಡೀಗಢದಲ್ಲಿರುವ ಆರ್‌ಬಿಐನ (RBI) 'ಕೇಂದ್ರೀಕೃತ ರಸೀದಿ ಮತ್ತು ಸಂಸ್ಕರಣಾ ಕೇಂದ್ರ'ಕ್ಕೆ (Centralised Receipt and Processing Centre) ಮೇಲ್ ಮಾಡುವ ಮೂಲಕ ನೀವು ನಿಮ್ಮ ದೂರನ್ನು ಭೌತಿಕವಾಗಿ ಕಳುಹಿಸಬಹುದು.

ಇದನ್ನೂ ಓದಿ: Recurring Deposit: ಆರ್‌ಡಿ ಬಡ್ಡಿದರಗಳಿಗೆ ಸಂಬಂಧಿಸಿದ ನಿಮ್ಮ ಪ್ರಶ್ನೆಗಳಿಗೆ ಇಲ್ಲಿದೆ ಉತ್ತರ

ಆನ್‌ಲೈನ್‌ನಲ್ಲಿ ದೂರು ಸಲ್ಲಿಸಲು ಈ ಸರಳ ಹಂತಗಳನ್ನು ಅನುಸರಿಸಿದರೆ ಸಾಕು

  • cms.rbi.org.in ಗೆ ಲಾಗಿನ್ ಮಾಡಿ ಮತ್ತು ಮುಖಪುಟದಲ್ಲಿ ಲಭ್ಯವಿರುವ ‘ಫೈಲ್ ಎ ಕಂಪ್ಲೇಂಟ್’ (File A Complaint) ಆಯ್ಕೆಯ ಮೇಲೆ ಕ್ಲಿಕ್ ಮಾಡಿ.

  • ಮುಂದೆ, ನಿಮ್ಮ ಮೊಬೈಲ್ ಸಂಖ್ಯೆಯನ್ನು ವ್ಯಾಲಿಡೇಟ್ ಮಾಡುವ ಮೊದಲು ಮೊಬೈಲ್‌ ಮೂಲಕ ಮೊದಲು ನೀವು ಕ್ಯಾಪ್ಚಾವನ್ನು ಪರಿಶೀಲಿಸಬೇಕು.

  • ಅಗತ್ಯವಿರುವ ವೈಯಕ್ತಿಕ ವಿವರಗಳನ್ನು ನಮೂದಿಸಿ ಮತ್ತು ನಿಮ್ಮ ದೂರನ್ನು ನೋಂದಾಯಿಸಲು ನೀವು ಬಯಸುವ ವಿಭಾಗವನ್ನು ಆಯ್ಕೆಮಾಡಿ.

  • ನಿಯಂತ್ರಿತ ಘಟಕದೊಂದಿಗೆ ನೀವು ಸಲ್ಲಿಸಿರುವ ದೂರಿನ ವಿವರಗಳನ್ನು ನೀಡಿ ಮತ್ತು ದೂರಿನ ಪ್ರತಿಯನ್ನು ಲಗತ್ತಿಸಿ.

  • ದೂರು ಸಲ್ಲಿಸಲು ಕಾರ್ಡ್ ಸಂಖ್ಯೆ, ಸಾಲ ಅಥವಾ ಠೇವಣಿ ಖಾತೆ ವಿವರಗಳನ್ನು ನೀಡಿ.

  • ಲೋನ್ ಮತ್ತು ಮುಂಗಡಗಳು ಅಥವಾ ಮೊಬೈಲ್ ಬ್ಯಾಂಕಿಂಗ್‌ಗಾಗಿ ಲಭ್ಯವಿರುವ ಡ್ರಾಪ್-ಡೌನ್ ಮೆನುವಿನಿಂದ ದೂರು ವರ್ಗವನ್ನು ಆಯ್ಕೆಮಾಡಿ.

  • ಈಗ ಲಭ್ಯವಿರುವ ಆಯ್ಕೆಗಳಿಂದ ನಿಮ್ಮ ದೂರಿನ ಉಪವರ್ಗವನ್ನು ಆಯ್ಕೆಮಾಡಿ

  • ದೂರಿನ ನಿಜವಾದ ವಿವರಗಳನ್ನು ಒದಗಿಸಿ ಮತ್ತು ವಿವಾದದ ಮೊತ್ತ ಮತ್ತು ವಿನಂತಿಸಿದ ಪರಿಹಾರದ ವಿವರಗಳನ್ನು ನೀಡಿ

  • ನಿಮ್ಮ ದೂರನ್ನು ಅಂತಿಮವಾಗಿ ಸಲ್ಲಿಸುವ ಮೊದಲು ಪರಿಶೀಲಿಸಿ. ಭವಿಷ್ಯದ ಬಳಕೆ ಮತ್ತು ದಾಖಲೆಗಾಗಿ ನಕಲನ್ನು ಉಳಿಸಿ.


ಇದನ್ನೂ ಓದಿ: Recurring Deposit: ನೀವು RD ಕಟ್ಟುವುದನ್ನು ಮಿಸ್ ಮಾಡಿದ್ರೆ ಬ್ಯಾಂಕ್ ಎಷ್ಟು ದಂಡ ಹಾಕುತ್ತೆ ಗೊತ್ತಾ?

ಪ್ರೀಪೇಯ್ಡ್ ಉಪಕರಣಕ್ಕೆ ಸಂಬಂಧಿಸಿದ ವಂಚನೆ ಮತ್ತು ಪಾವತಿಯ ವೈಫಲ್ಯದ ಮೇಲಿನ ಕುಂದುಕೊರತೆಗಳನ್ನು ಪರಿಣಾಮಕಾರಿಯಾಗಿ ಪರಿಹರಿಸುವ ಮೂಲಕ ಗ್ರಾಹಕರ ವಿಶ್ವಾಸವನ್ನು ಹೆಚ್ಚಿಸುವ ಉದ್ದೇಶದಿಂದ ಒಂಬುಡ್ಸ್‌ಮನ್ ಯೋಜನೆಯನ್ನು ಪರಿಚಯಿಸಲಾಗಿದೆ. ಈ ಯೋಜನೆಯು ಗ್ರಾಹಕರಿಗೆ ಪರಿಹಾರ ಕಾರ್ಯವಿಧಾನವನ್ನು ಸರಳವಾಗಿಸುವ ಮೂಲಕ ಪಾರದರ್ಶಕವಾಗಿಸಲು ಶ್ರಮಿಸುತ್ತದೆ.
Published by:Latha CG
First published: