ನಿಯಮ ಉಲ್ಲಂಘನೆ: ಯೂನಿಯನ್ ಬ್ಯಾಂಕ್ ಆಫ್ ಇಂಡಿಯಾಗೆ 1 ಕೋಟಿ ರೂ. ದಂಡ ವಿಧಿಸಿದ RBI

ಕಂಪನಿಗಳ ಪಾವತಿಸಿದ ಷೇರು ಬಂಡವಾಳದ 30%ಕ್ಕಿಂತ ಹೆಚ್ಚಿನ ಮೊತ್ತವನ್ನು ಸಾಲಗಾರ ಕಂಪನಿಗಳಲ್ಲಿ ಷೇರುಗಳನ್ನು ಹೊಂದಿರುವ ಬ್ಯಾಂಕ್‌ಗಳಿಗೆ ಸಂಬಂಧಿಸಿದಂತೆ ನಿಯಮಗಳನ್ನು ಉಲ್ಲಂಘಿಸಿರುವುದು ಬಹಿರಂಗಗೊಂಡಿದೆ ಎಂದು ಆರ್‌ಬಿಐ ಹೇಳಿದೆ.

ಯೂನಿಯನ್ ಬ್ಯಾಂಕ್

ಯೂನಿಯನ್ ಬ್ಯಾಂಕ್

  • Share this:

ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ (RBI) ನವೆಂಬರ್ 29 ರಂದು ಯೂನಿಯನ್ ಬ್ಯಾಂಕ್ ಆಫ್ ಇಂಡಿಯಾದ ಮೇಲೆ ಒತ್ತಡದ ಆಸ್ತಿ (stressed assets) ಮಾರಾಟ ಮತ್ತು ವಂಚನೆಗಳ ವರದಿಗೆ ಸಂಬಂಧಿಸಿದ ಕೆಲವು ನಿಬಂಧನೆಗಳನ್ನು ಉಲ್ಲಂಘಿಸಿದ್ದಕ್ಕಾಗಿ ಒಂದು ಕೋಟಿ ರೂಪಾಯಿಗಳ ವಿತ್ತೀಯ ದಂಡ ವಿಧಿಸಿದೆ. ಕಾರ್ಯನಿರ್ವಹಿಸದೇ ಇರುವ ಆಸ್ತಿಗಳು ಅನುಮಾನಾಸ್ಪದವಾಗುತ್ತವೆ. ಹೀಗಾದಾಗ NPA ಗಳು (ಕಾರ್ಯನಿರ್ವಹಿಸದೇ ಇರುವ ಆಸ್ತಿ - Non performing assets) ಕೆಟ್ಟ ಸಾಲಗಳಾಗಿ ಮಾರ್ಪಾಡಾಗುತ್ತದೆ. 90 ದಿನಗಳ ಅವಧಿಯ ಮೊದಲು ಇಂತಹ ಆಸ್ತಿಗಳನ್ನು ಒತ್ತಡದ ಆಸ್ತಿ (stressed assets) ಎಂದು ಕರೆಯಲಾಗುತ್ತದೆ.


ದಂಡ ವಿಧಿಸಿದ್ದು ಯಾಕೆ?

ಪೂರ್ವ ಎಚ್ಚರಿಕೆಯ ಸಂಕೇತಗಳ ಉಪಸ್ಥಿತಿಯ ಹೊರತಾಗಿಯೂ ಖಾತೆಯನ್ನು ರೆಡ್ ಫ್ಲ್ಯಾಗ್ ಖಾತೆ ಎಂದು ವರ್ಗೀಕರಿಸುವ ನಿಯಮಗಳ ಅನುಸರಣೆ ಬಹಿರಂಗಪಡಿಸಿಲ್ಲವೆಂದು ಆರ್‌ಬಿಐ ತಪಾಸಣೆ ತಿಳಿಸಿದ್ದು, ತನ್ನ ವಾರ್ಷಿಕ ವರದಿಯಲ್ಲಿ ಭದ್ರತಾ ರಸೀದಿಗಳಿಗೆ (ಎಸ್‌ಆರ್‌ಗಳು Security Receipts) ನಿಬಂಧನೆಗಳನ್ನು ಬಹಿರಂಗಪಡಿಸಲು ಬ್ಯಾಂಕ್ ವಿಫಲವಾಗಿದೆ ಎಂದು ಕೇಂದ್ರ ಬ್ಯಾಂಕ್ ತಿಳಿಸಿದೆ.


ಈ ಕ್ರಮವು ನಿಯಂತ್ರಕ ಅನುಸರಣೆಯಲ್ಲಿನ ನ್ಯೂನತೆಗಳನ್ನು ಆಧರಿಸಿದೆ ಹಾಗೂ ಬ್ಯಾಂಕ್ ತನ್ನ ಗ್ರಾಹಕರೊಂದಿಗೆ ಮಾಡಿಕೊಂಡಿರುವ ಯಾವುದೇ ವಹಿವಾಟು ಇಲ್ಲವೇ ಒಪ್ಪಂದದ ಮಾನ್ಯತೆಯ ಮೇಲೆ ನಿರ್ಧರಿಸಲು ಉದ್ದೇಶಿಸಿಲ್ಲವೆಂದು ಆರ್‌ಬಿಐ ಸ್ಪಷ್ಟಪಡಿಸಿದೆ.


ಇದನ್ನೂ ಓದಿ: Reserve Bank of India| ನಿಯಮ ಉಲ್ಲಂಘಿಸಿದ್ದಕ್ಕೆ 14 ಬ್ಯಾಂಕುಗಳಿಗೆ ದಂಡ ವಿಧಿಸಿದ RBI

ಕಾನೂನು ಬದ್ಧ ತಪಾಸಣೆ

ಇದೇ ಸಮಯದಲ್ಲಿ ಮಾರ್ಚ್ 31, 2018 ಮತ್ತು ಮಾರ್ಚ್ 31, 2019ರಂತೆ ಬ್ಯಾಂಕ್‌ನ ಮೇಲ್ವಿಚಾರಣಾ ಮೌಲ್ಯಮಾಪನಕ್ಕಾಗಿ (ಯುಎಸ್‌ಇ) ಕಾನೂನು ಬದ್ಧ ತಪಾಸಣೆಯನ್ನು ಆರ್‌ಬಿಐ ತನ್ನ ಹಣಕಾಸು ಸ್ಥಾನಗಳನ್ನು ಉಲ್ಲೇಖಿಸಿ ನಡೆಸಿದೆ ಎಂದು ತಿಳಿಸಿದೆ.


ನಿಯಮಗಳನ್ನು ಉಲ್ಲಂಘಿಸಿರುವುದು ಬಹಿರಂಗ

ಅಪಾಯದ ಮೌಲ್ಯಮಾಪನ ವರದಿಗಳು, ತಪಾಸಣಾ ವರದಿ ಮತ್ತು ಎಲ್ಲಾ ಸಂಬಂಧಿತ ಪತ್ರವ್ಯವಹಾರಗಳ ಪರಿಶೀಲನೆಯಿಂದ ತಿಳಿದು ಬಂದಿರುವ ಮಾಹಿತಿಗಳ ಪ್ರಕಾರ ಕಂಪನಿಗಳ ಪಾವತಿಸಿದ ಷೇರು ಬಂಡವಾಳದ 30%ಕ್ಕಿಂತ ಹೆಚ್ಚಿನ ಮೊತ್ತವನ್ನು ಸಾಲಗಾರ ಕಂಪನಿಗಳಲ್ಲಿ ಷೇರುಗಳನ್ನು ಹೊಂದಿರುವ ಬ್ಯಾಂಕ್‌ಗಳಿಗೆ ಸಂಬಂಧಿಸಿದಂತೆ ನಿಯಮಗಳನ್ನು ಉಲ್ಲಂಘಿಸಿರುವುದು ಬಹಿರಂಗಗೊಂಡಿದೆ ಎಂದು ಆರ್‌ಬಿಐ ಹೇಳಿದೆ.


ನಿಯಮ ಉಲ್ಲಂಘಿಸಿದ್ದಕ್ಕೆ ಕಾರಣ ಕೇಳಿ ನೋಟಿಸ್ 

ಆರ್‌ಬಿಐ ನಿರ್ದೇಶನಗಳನ್ನು ಬ್ಯಾಂಕ್ ಪಾಲಿಸದೇ ಇರುವುದಕ್ಕಾಗಿ ದಂಡವನ್ನು ಏಕೆ ವಿಧಿಸಬಾರದು ಎಂಬ ಕಾರಣವನ್ನು ಸಮರ್ಥಿಸಲು ಬ್ಯಾಂಕ್‌ಗೆ ಸೂಚಿಸಲಾಯಿತು ಎಂದು ಕೇಂದ್ರ ಬ್ಯಾಂಕ್ ತಿಳಿಸಿದ್ದು, ನೋಟಿಸ್‌ಗೆ ಬ್ಯಾಂಕ್ ನೀಡಿರುವ ಪ್ರತಿಕ್ರಿಯೆ ಅಂತೆಯೇ ವಿಚಾರಣೆಯ ಸಮಯದಲ್ಲಿ ಬ್ಯಾಂಕ್ ಒದಗಿಸಿರುವ ಹೆಚ್ಚುವರಿ ಸಲ್ಲಿಕೆಗಳನ್ನು ಪರಿಗಣಿಸಿದ ನಂತರ ಆರ್‌ಬಿಐ ನಿರ್ದೇಶನಗಳನ್ನು ಅನುಸರಿಸದ ಆರೋಪವನ್ನು ಸಮರ್ಥಿಸುತ್ತದೆ ಮತ್ತು ವಿತ್ತೀಯ ದಂಡ ವಿಧಿಸಲು ಸಮರ್ಥವಾಗಿದೆ ಎಂಬ ತೀರ್ಮಾನಕ್ಕೆ ಬಂದಿದೆ.


ಇದನ್ನೂ ಓದಿ:  ಎಟಿಎಂನಲ್ಲಿ ದುಡ್ಡಿಲ್ಲ ಅಂದರೆ ಬ್ಯಾಂಕ್​ಗಳು 10 ಸಾವಿರ ದಂಡ ಕಟ್ಟಬೇಕು ಎಂದ ಆರ್​ಬಿಐ

ಸಾಲಗಾರ ಕಂಪನಿಗಳಲ್ಲಿ ಬ್ಯಾಂಕ್ ಹೊಂದಬಹುದಾದ ಷೇರುಗಳ ಪ್ರಮಾಣಕ್ಕೆ ಸಂಬಂಧಿಸಿದಂತೆ ಬ್ಯಾಂಕಿಂಗ್ ನಿಯಂತ್ರಣ (ಬಿಆರ್) ಕಾಯ್ದೆ, 1949ರಲ್ಲಿನ ನಿಬಂಧನೆ ಉಲ್ಲಂಘಿಸಿದ್ದಕ್ಕಾಗಿ ದೇಶದ ಅತಿದೊಡ್ಡ ಸಾಲದಾತ ಬ್ಯಾಂಕ್ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾಗೆ ಆರ್‌ಬಿಐ 1 ಕೋಟಿ ರೂಪಾಯಿಗಳ ವಿತ್ತೀಯ ದಂಡವನ್ನು ವಿಧಿಸಿತ್ತು.


HDFC ಬ್ಯಾಂಕ್ ಗೆ 10 ಕೋಟಿ ದಂಡ

2021 ಮೇನಲ್ಲಿ ರಿಸರ್ವ್​ ಬ್ಯಾಂಕ್​ ಆಫ್​ ಇಂಡಿಯಾ (RBI) ನಿಯಮ ಉಲ್ಲಂಘಿಸಿದ್ದ ಕಾರಣಕ್ಕೆ ಎಚ್​ಡಿಎಫ್​ಸಿ ಬ್ಯಾಂಕ್​ಗೆ 10 ಕೋಟಿ ದಂಡ ಹಾಕಿತ್ತು. 1949 ರ ಬ್ಯಾಂಕಿಂಗ್ ನಿಯಂತ್ರಣ ಕಾಯ್ದೆಯ ಸೆಕ್ಷನ್ 6 (2) ಮತ್ತು ಸೆಕ್ಷನ್ 8 ರ ನಿಯಮಗಳನ್ನು ಉಲ್ಲಂಘಿಸಿದ್ದಕ್ಕಾಗಿ HDFC ಬ್ಯಾಂಕ್ ಲಿಮಿಟೆಡ್‌ಗೆ ಆರ್‌ಬಿಐ ಶುಕ್ರವಾರದಂದು 10 ಕೋಟಿ ವಿತ್ತೀಯ ದಂಡ ವಿಧಿಸಿತ್ತು.

ರಿಸರ್ವ್​ ಬ್ಯಾಂಕ್​ ಆಫ್​ ಇಂಡಿಯಾ ಕಾಯ್ದೆಯಲ್ಲಿ ಸೆಕ್ಸನ್​ 47ಎ (1) (ಸಿ) ಜನತೆಗೆ ಸೆಕ್ಷನ್​ 46 (4)(ಐ) ಅಡಿ ಇರುವ ಅಧಿಕಾರವನ್ನು ಬಳಸಿಕೊಂಡು ಎಚ್​ಡಿಎಫ್​ಸಿ ಬ್ಯಾಂಕ್​ ಮೇಲೆ ದಂಡ ವಿಧಿಸಿದೆ. ಎಚ್​ಡಿಎಪ್​ಸಿ ಬ್ಯಾಂಕ್​ ವಾಹನ ಸಾಲದ ಪೋರ್ಟ್​ ಪೋಲಿಯೋದಲ್ಲಿ ನಡೆದಿದೆ ಎನ್ನಲಾದ ಅವ್ಯವಹಾರದ ಬಗ್ಗೆ ವಿಷಲ್​ ಬ್ಲೋವರ್​ ಒಬ್ಬರು ದೂರು ನೀಡದ್ದರು. ಇದನ್ನು ಪರಿಶೀಲಿಸಿದಾಗ ತಪ್ಪು ಕಂಡುಬಂದಿದೆ. ಅದಕ್ಕಾಗಿ ಎಚ್​ಡಿಎಫ್​ಸಿ ಬ್ಯಾಂಕ್​ ಮೇಲೆ ಈ ನಿರ್ಧಾರ ಕೈಗೊಂಡಿತ್ತು.
Published by:Mahmadrafik K
First published: