ನಿಯಮ ಉಲ್ಲಂಘನೆಗಾಗಿ Paytm ಪೇಮೆಂಟ್ಸ್ ಬ್ಯಾಂಕ್‌ಗೆ 1 ಕೋಟಿ ದಂಡ ವಿಧಿಸಿದ RBI

ಅಂತಿಮ ದೃಢೀಕರಣ ಪತ್ರಕ್ಕಾಗಿ ಪೇಟಿಎಂ ಪೇಮೆಂಟ್ಸ್ ಬ್ಯಾಂಕ್‌ನ ಅರ್ಜಿ ಪರಿಶೀಲಿಸಿದಾಗ, ಸಂಸ್ಥೆಯು ನಿಜವಾದ ಪರಿಸ್ಥಿತಿಯನ್ನು ಪ್ರತಿಬಿಂಬಿಸದೇ ಇರುವ ಮಾಹಿತಿ ಸಲ್ಲಿಸಿರುವುದು ಆರ್‌ಬಿಐ ಗಮನಕ್ಕೆ ಬಂದಿದೆ ಎಂದು ತಿಳಿಸಿದೆ.

Paytm

Paytm

 • Share this:
  ಪೇಟಿಎಂ ಪೇಮೆಂಟ್ಸ್ ಬ್ಯಾಂಕ್ ಲಿಮಿಟೆಡ್ (PPBL-Paytm Payments Bank) ಕೆಲವೊಂದು ನಿಯಮಗಳನ್ನು ಉಲ್ಲಂಘಿಸಿರುವ ಕಾರಣಕ್ಕಾಗಿ ಒಂದು ಕೋಟಿ (one crore) ಆರ್ಥಿಕ ದಂಡ ವಿಧಿಸಿದೆ ಎಂದು ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ (RBI) ತಿಳಿಸಿದೆ. ಪಾವತಿ ಹಾಗೂ ಇತ್ಯರ್ಥ ವ್ಯವಸ್ಥೆಗಳ ಕಾಯಿದೆ 2007 (Payment and Settlement Systems Act) ವಿಭಾಗ 26ರಲ್ಲಿ ಉಲ್ಲೇಖಿಸಲಾಗಿರುವ ಅಪರಾಧಕ್ಕೆ ಸಂಬಂಧಿಸಿದಂತೆ ಪೇಟಿಎಂ ಸಂಸ್ಥೆಗೆ ದಂಡ ವಿಧಿಸಲಾಗಿದೆ ಎಂದು ಆರ್‌ಬಿಐ ಪತ್ರಿಕಾ ಪ್ರಕಟಣೆಯಲ್ಲಿ ಹೇಳಿಕೆ ನೀಡಿದೆ.

  ದಾಖಲೆಗಳನ್ನು ಒದಗಿಸುವಲ್ಲಿ ವಿಫಲ

  ಅಂತಿಮ ದೃಢೀಕರಣ ಪತ್ರಕ್ಕಾಗಿ ಪೇಟಿಎಂ ಪೇಮೆಂಟ್ಸ್ ಬ್ಯಾಂಕ್‌ನ ಅರ್ಜಿ ಪರಿಶೀಲಿಸಿದಾಗ, ಸಂಸ್ಥೆಯು ನಿಜವಾದ ಪರಿಸ್ಥಿತಿಯನ್ನು ಪ್ರತಿಬಿಂಬಿಸದೇ ಇರುವ ಮಾಹಿತಿ ಸಲ್ಲಿಸಿರುವುದು ಆರ್‌ಬಿಐ ಗಮನಕ್ಕೆ ಬಂದಿದೆ ಎಂದು ತಿಳಿಸಿದೆ. PSS ಕಾಯ್ದೆಯ ವಿಭಾಗ 26 (2)ರಲ್ಲಿ ಉಲ್ಲೇಖಿಸಿರುವಂತೆ ಪೇಟಿಎಂ ಸಲ್ಲಿಸಿರುವ ಮಾಹಿತಿಯು ಉಲ್ಲಂಘನೆಯ ವಿಧವಾಗಿದ್ದು ಎಂಬುದನ್ನು ಕಂಡುಕೊಂಡ ಕೇಂದ್ರ ಬ್ಯಾಂಕ್ ಈ ಕುರಿತು PPBLಗೆ ಸೂಚನೆ ನೀಡಿದೆ. ವೈಯಕ್ತಿಕ ವಿಚಾರಣೆಯ ಸಂದರ್ಭದಲ್ಲಿ ತಯಾರಿಸಲಾದ ಲಿಖಿತ ಪ್ರತಿಕ್ರಿಯೆಗಳು ಹಾಗೂ ಮೌಖಿಕ ಸಲ್ಲಿಕೆಗಳನ್ನು ಪರಿಶೀಲಿಸಿದ ನಂತರ ಪೇಟಿಎಂ ದಾಖಲೆಗಳನ್ನು ಒದಗಿಸುವಲ್ಲಿ ವಿಫಲವಾಗಿರುವುದನ್ನು ಕಂಡುಕೊಂಡಿರುವ ಆರ್‌ಬಿಐ ಆರೋಪವನ್ನು ದೃಢೀಕರಿಸಿದೆ ಮತ್ತು ಸಂಸ್ಥೆಗೆ ವಿತ್ತೀಯ ದಂಡ ವಿಧಿಸುವುದನ್ನು ಖಾತರಿಪಡಿಸಿದೆ ಎಂದು ಕೇಂದ್ರ ಬ್ಯಾಂಕ್ ಹೇಳಿದೆ.

  ನಿಯಮ ಉಲ್ಲಂಘಿಸಿ ಹಣ ವರ್ಗಾವಣೆ 

  ಇದೇ ಸಂದರ್ಭದಲ್ಲಿ ಹಣ ವರ್ಗಾವಣೆ ಸೇವಾ ಯೋಜನೆಯಲ್ಲಿನ ನಿರ್ದೇಶನ ಒಳಗೊಂಡಿರುವ ಕೆಲವು ನಿಬಂಧನೆಗಳನ್ನು ಪಾಲಿಸದೇ ಇರುವ ಕಾರಣಕ್ಕಾಗಿ ಆರ್‌ಬಿಐ, ಹಣ ವರ್ಗಾವಣೆ ಸೇವೆಯನ್ನೊದಗಿಸುವ ವೆಸ್ಟರ್ನ್ ಯೂನಿಯನ್ ಫೈನಾನ್ಶಿಯಲ್ ಸರ್ವೀಸಸ್‌ಗೆ 27.8 ಲಕ್ಷಗಳ ದಂಡ ವಿಧಿಸಿದೆ. ವೆಸ್ಟರ್ನ್ ಯೂನಿಯನ್ ಸಂಸ್ಥೆಯು ವರ್ಷಕ್ಕೆ ನಿಗದಿಪಡಿಸಿದ ಹಣದ ಮಿತಿ ಮೀರಿದೆ ಎಂದು ಆರ್‌ಬಿಐ ಆರೋಪಿಸಿದೆ. ವೆಸ್ಟರ್ನ್ ಯೂನಿಯನ್ ಪ್ರಕರಣದಲ್ಲಿ 2019 ಮತ್ತು 2020ರ ಕ್ಯಾಲೆಂಡರ್ ವರ್ಷಗಳಲ್ಲಿ ಪ್ರತಿ ಫಲಾನುಭವಿಗೆ 30 ಪಾವತಿ ಉಲ್ಲಂಘನೆಯ ಹಣ ವರ್ಗಾವಣೆ ಸೇವೆಯನ್ನು ವರದಿ ಮಾಡಿದೆ ಹಾಗೂ ಉಲ್ಲಂಘನೆಯ ಸಂಯೋಜನೆಗೆ ಅರ್ಜಿ ಸಲ್ಲಿಸಿದೆ ಎಂದು ಆರ್‌ಬಿಐ ತಿಳಿಸಿದೆ. ಸಂಯಕ್ತ ಅರ್ಜಿಯನ್ನು ವಿಶ್ಲೇಷಿಸಿದ ನಂತರ ಹಾಗೂ ವೈಯಕ್ತಿಕ ವಿಚಾರಣೆಯ ಸಂದರ್ಭದಲ್ಲಿ ಮಾಡಿದ ಮೌಖಿಕ ಸಲ್ಲಿಕೆಗಳನ್ನು ಪರಿಶೀಲನೆ ನಡೆಸಿದ ನಂತರ ಅನುಸರಣೆ ಇಲ್ಲದಿರುವ ಅಂಶಗಳಿಗಾಗಿ ವಿತ್ತೀಯ ದಂಡ ವಿಧಿಸಲಾಗಿದೆ ಎಂದು ಆರ್‌ಬಿಐ ತಿಳಿಸಿದೆ.

  ಉದ್ದೇಶದಿಂದ ಮಾಡಿಲ್ಲವೆಂದ ಪೇಟಿಎಂ 

  ನಿಯಂತ್ರಕ ಅನುಸರಣೆಯಲ್ಲಿನ ನ್ಯೂನತೆಗಳನ್ನು ಆಧರಿಸಿ ಈ ಕ್ರಮ ಕೈಗೊಳ್ಳಲಾಗಿದೆ ಹಾಗೂ ಯಾವುದೇ ವಹಿವಾಟಿನ ನ್ಯಾಯಸಮ್ಮತತೆ ಹಾಗೂ ಸಂಸ್ಥೆಗಳು ತಮ್ಮ ಗ್ರಾಹಕರೊಂದಿಗೆ ಮಾಡಿಕೊಂಡ ಒಪ್ಪಂದ ಘೋಷಿಸುವ ಉದ್ದೇಶದಿಂದ ಮಾಡಿಲ್ಲವೆಂದು ಆರ್‌ಬಿಐ ತಿಳಿಸಿದೆ. ಆರ್‌ಬಿಐ ವಿತ್ತೀಯ ದಂಡ: ವಾಣಿಜ್ಯ ಬ್ಯಾಂಕ್‌ಗಳು ಹಾಗೂ ಆಯ್ದ ಹಣಕಾಸು ಸಂಸ್ಥೆಗಳ ವಂಚನೆಗಳ ವಿಂಗಡಣೆ ಹಾಗೂ ವರದಿ ಮಾಡುವಿಕೆಗೆ ಸಂಬಂಧಿಸಿದ ನಿಯಮಗಳ ಉಲ್ಲಂಘನೆಯನ್ನು ಸೂಚಿಸುತ್ತದೆ ಎಂದು ಆರ್‌ಬಿಐ ತಿಳಿಸಿದೆ. ಇತ್ತೀಚೆಗಷ್ಟೇ ಸ್ಟೇಟ್‌ ಬ್ಯಾಂಕ್‌ ಆಫ್‌ ಇಂಡಿಯಾ ವಿರುದ್ಧವೂ ಆರ್‌ಬಿಐ ದಂಡ ವಿಧಿಸಿತ್ತು.

  ಇದನ್ನೂ ಓದಿ: Gold Price Today: ಚಿನ್ನ ಖರೀದಿಗೆ ಹೋಗ್ತಿದ್ದೀರಾ? ಇಲ್ಲಿದೆ ಇವತ್ತಿನ ಹಳದಿ ಲೋಹದ ಬೆಲೆ

  ಇನ್ನು ಇಂದು ದೇಶದಲ್ಲಿ ಪೆಟ್ರೋಲ್ ಮತ್ತು ಡೀಸೆಲ್​ ಬೆಲೆ (Petrol and Diesel Price) ನಿಯಂತ್ರಣಕ್ಕೆ ಬರುವ ಯಾವುದೇ ಲಕ್ಷಣ ಕಾಣಿಸುತ್ತಿಲ್ಲ. ಸೋಮವಾರ(Monday)ವಾದ ಇಂದೂ ಸಹ ತೈಲ ಬೆಲೆಯಲ್ಲಿ ಏರಿಕೆ ಕಂಡು ಬಂದಿದ್ದು, ಬಡವರ ಕೈಗೆ ಎಟುಕದಂತಾಗಿದೆ. ಈಗಾಗಲೇ ಎಲ್​ಪಿಜಿ ಬೆಲೆ (LPG) ಏರಿಕೆಯಿಂದ ಕಂಗಾಲಾಗಿರುವ ಜನ ದಿನನಿತ್ಯ(Everyday) ಏರುತ್ತಿರುವ ಪೆಟ್ರೋಲ್-ಡೀಸೆಲ್ ಬೆಲೆಯಿಂದಾಗಿ ಮತ್ತಷ್ಟು ಸಂಕಷ್ಟಕ್ಕೆ ಒಳಗಾಗುತ್ತಿದ್ದಾರೆ. ಇಂದು ಬೆಂಗಳೂರಿ(Bengaluru)ನಲ್ಲಿ ಪೆಟ್ರೋಲ್ ಮತ್ತು ಡೀಸೆಲ್ ಬೆಲೆ ಏರಿಕೆ(Price Hike)ಯಾಗಿದೆ. ಉಳಿದ ಹಲವು ಜಿಲ್ಲೆಗಳಲ್ಲಿ ಸಾಕಷ್ಟು ಏರಿಳಿತ ಕಂಡಿದೆ. ಪ್ರಸ್ತುತ ರಾಜಧಾನಿ ಬೆಂಗಳೂರಿನಲ್ಲಿ ಇಂದು 1 ಲೀಟರ್ ಪೆಟ್ರೋಲ್​ ಅನ್ನು 111.34 ರೂಗೆ ಮಾರಾಟ ಮಾಡುತ್ತಿದ್ದರೆ, ಡೀಸೆಲ್​ ಅನ್ನು 102.85 ರೂ.ಗೆ ಮಾರಾಟ ಮಾಡಲಾಗುತ್ತಿದೆ.
  First published: