RBIನ ಈ ಯೋಜನೆ ಜೊತೆಗೂಡಿ FDಗಿಂತ ಹೆಚ್ಚಿನ ಬಡ್ಡಿಯನ್ನು ನಿಮ್ಮದಾಗಿಸಿಕೊಳ್ಳಿ

ಪ್ರಸ್ತುತ ಸಾರ್ವಜನಿಕ (Public) ಮತ್ತು ಖಾಸಗಿ (Private) ಬ್ಯಾಂಕ್ ‌ಗಳು ಸ್ಥಿರ ಠೇವಣಿಗಳ ಮೇಲಿನ ಬಡ್ಡಿ ದರವನ್ನು ಶೇ.6ಕ್ಕಿಂತಲೂ ಕಡಿಮೆ ನೀಡುತ್ತಿದೆ. ಆದ್ದರಿಂದ ಹೂಡಿಕೆದಾರರು (Investors) ಹೆಚ್ಚು ಆದಾಯ ನೀಡುವ ಯೋಜನೆಗಳನ್ನು ಹುಡುಕುತ್ತಿದ್ದಾರೆ. ಜೊತೆ ಮಾರುಕಟ್ಟೆ ಅಪಾಯ ಕಡಿಮೆ ಇರುವಂತಹ ಯೋಜನೆಗಳತ್ತ ಜನ ಆಕರ್ಷಿತರಾಗುತ್ತಿದ್ದಾರೆ.

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

  • Share this:
ಪ್ರಸ್ತುತ ಸಾರ್ವಜನಿಕ (Public) ಮತ್ತು ಖಾಸಗಿ (Private) ಬ್ಯಾಂಕ್ ‌ಗಳು ಸ್ಥಿರ ಠೇವಣಿಗಳ ಮೇಲಿನ ಬಡ್ಡಿ ದರವನ್ನು ಶೇ.6ಕ್ಕಿಂತಲೂ ಕಡಿಮೆ ನೀಡುತ್ತಿದೆ. ಆದ್ದರಿಂದ ಹೂಡಿಕೆದಾರರು (Investors) ಹೆಚ್ಚು ಆದಾಯ ನೀಡುವ ಯೋಜನೆಗಳನ್ನು ಹುಡುಕುತ್ತಿದ್ದಾರೆ. ಜೊತೆ ಮಾರುಕಟ್ಟೆ ಅಪಾಯ ಕಡಿಮೆ ಇರುವಂತಹ ಯೋಜನೆಗಳತ್ತ ಜನ ಆಕರ್ಷಿತರಾಗುತ್ತಿದ್ದಾರೆ. ಅಂತಹ ಹೂಡಿಕೆದಾರರು ಭಾರತೀಯ ರಿಸರ್ವ್ ಬ್ಯಾಂಕ್ (RBI Bonds) ಬಾಂಡ್‌ ಗಳಲ್ಲಿ ಹಣವನ್ನು ಹೂಡಿಕೆ ಮಾಡಬಹುದು. RBI ಜುಲೈ 1, 2020 ರಂದು ಫ್ಲೋಟಿಂಗ್ ರೇಟ್ ಸೇವಿಂಗ್ ಬಾಂಡ್ (Floating Rate Saving Bond) ಅನ್ನು ಪ್ರಾರಂಭಿಸಿದೆ. ಈ ಬಾಂಡ್ ಗಳ ಪ್ರಸ್ತುತ ಬಡ್ಡಿದರವು ಶೇಕಡ 7.15 ಆಗಿದೆ. ಪ್ರತಿ ಆರು ತಿಂಗಳಿಗೊಮ್ಮೆ ಇದರ ದರಗಳನ್ನು ಪರಿಷ್ಕರಿಸಲಾಗುತ್ತದೆ.

ಆರ್‌ಬಿಐ ಬಾಂಡ್‌ನ ಮುಕ್ತಾಯ ಅವಧಿ 7 ವರ್ಷಗಳು ಆಗಿರುತ್ತದೆ. ಹಿರಿಯ ನಾಗರಿಕರು 4 ವರ್ಷಗಳ ನಂತರ ಪ್ರೀ-ಮೆಚ್ಯೂರ್ ನಿರ್ಗಮನದ (Premature Exit) ಆಯ್ಕೆಯನ್ನು ಪಡೆಯುತ್ತಾರೆ, ಅದರ ಮೇಲೆ ಕೆಲವು ಕಡಿತವನ್ನು ಮಾಡಲಾಗುತ್ತದೆ. ಇದರ ಬಡ್ಡಿಯನ್ನು 6 ತಿಂಗಳಿಗೊಮ್ಮೆ ಪಾವತಿಸಲಾಗುತ್ತದೆ, ಅದರ ಮೇಲೆ ಸ್ಲ್ಯಾಬ್ ಪ್ರಕಾರ ತೆರಿಗೆ ಪಾವತಿಸಬೇಕು. ಅದರ ರಿಟರ್ನ್ (Return) ಮೇಲೆ ಟಿಡಿಎಸ್ (TDS) ಕೂಡ ಕಡಿತಗೊಳ್ಳುತ್ತದೆ.

ಈ ಬಾಂಡ್ ಗಳಲ್ಲಿ ಅನಿವಾಸಿ ಭಾರತೀಯರು ಹೂಡಿಕೆ ಮಾಡುವಂತಿಲ್ಲ

ಯಾವುದೇ ಭಾರತೀಯ ನಾಗರಿಕ ಅಥವಾ ಹಿಂದೂ ಅವಿಭಾಜ್ಯ ಕುಟುಂಬ - HUF ರಿಸರ್ವ್ ಬ್ಯಾಂಕ್‌ ಬಾಂಡ್ ‌ಗಳಲ್ಲಿ ಹಣವನ್ನು ಹೂಡಿಕೆ ಮಾಡಬಹುದು. ಪೋಷಕರು ತಮ್ಮ ಅಪ್ರಾಪ್ತ ಮಕ್ಕಳ ಹೆಸರಿನಲ್ಲಿ ಈ ಬಾಂಡ್‌ನಲ್ಲಿ ಹೂಡಿಕೆ ಮಾಡಬಹುದು ಅಥವಾ ಜಂಟಿಯಾಗಿ ಖರೀದಿಸಲು ಸಹ ಅರ್ಜಿ ಸಲ್ಲಿಸಬಹುದು.

ಇದನ್ನೂ ಓದಿ:  Cooking Oils: ಅಡುಗೆ ಎಣ್ಣೆ ಬೆಲೆ ಏರುತ್ತಿದೆಯಾ? ಅದಕ್ಕೆ ಕಾರಣ ಇಲ್ಲಿದೆ

ಆದರೆ NRI (Non-resident Indian) ಗಳಿಗೆ ಈ ಬಾಂಡ್‌ನಲ್ಲಿ ಹಣ ಹೂಡಿಕೆ ಮಾಡಲು ಅವಕಾಶವಿಲ್ಲ. ಕನಿಷ್ಠ 1,000 ರೂ.ಗಳಿಂದ ಹೂಡಿಕೆಯನ್ನು ಪ್ರಾರಂಭಿಸಬಹುದು, ಆದರೆ ಗರಿಷ್ಠ ಹೂಡಿಕೆಗೆ ಯಾವುದೇ ಮಿತಿ ಇಲ್ಲ.

20 ಸಾವಿರದವರೆಗೆ ಮಾತ್ರ ನಗದು ರೂಪದಲ್ಲಿ ಹೂಡಿಕೆಗೆ ಅವಕಾಶ

ಈ ಬಾಂಡ್ ಅನ್ನು ಎಲೆಕ್ಟ್ರಾನಿಕ್ ರೂಪದಲ್ಲಿ ಮಾತ್ರ ಖರೀದಿಸಲು ಅನುಮತಿ ನೀಡಲಾಗಿದೆ. ಹೂಡಿಕೆದಾರರು ಬಯಸಿದರೆ ಈ ಬಾಂಡ್ ಗಳನ್ನು ನಗದು ರೂಪದಲ್ಲಿ ಖರೀದಿಸಬಹುದು, ಆದರೆ ಅದರ ಗರಿಷ್ಠ ಮಿತಿ 20 ಸಾವಿರ ರೂ.ವೆರೆಗೆ ಮಾತ್ರ ಅವಕಾಶ ನೀಡಲಾಗಿದೆ. ನೀವು SBI ಸೇರಿದಂತೆ ಯಾವುದೇ ಸರ್ಕಾರಿ ಬ್ಯಾಂಕ್ ಅಥವಾ ICICI, IDBI, HDFC ಮತ್ತು Axis ನಂತಹ ಖಾಸಗಿ ಬ್ಯಾಂಕ್‌ ಗಳಿಂದ ಈ ಬಾಂಡ್ ನ್ನು ಖರೀದಿಸಬಹುದು.

ಬಡ್ಡಿದರವನ್ನು NSC ಗೆ ಲಿಂಕ್

RBI ಬಾಂಡ್‌ಗಳ ಬಡ್ಡಿದರಗಳು ರಾಷ್ಟ್ರೀಯ ಉಳಿತಾಯ ಪ್ರಮಾಣ ಪತ್ರಕ್ಕೆ (NSC) ಲಿಂಕ್ ಆಗಿರುತ್ತವೆ. ಎನ್‌ಎಸ್‌ಸಿಗೆ ಸರ್ಕಾರವು ಯಾವುದೇ ಬಡ್ಡಿಯನ್ನು ಪಾವತಿಸಿದರೂ, ಶೇಕಡಾ 0.35 ಹೆಚ್ಚಿನ ಬಡ್ಡಿಯನ್ನು ಹೆಚ್ಚಿಸಲಾಗುತ್ತದೆ. ಆದ್ದರಿಂದ ಎನ್‌ಎಸ್‌ಸಿಯ ಬಡ್ಡಿದರಗಳಲ್ಲಿನ ಯಾವುದೇ ಬದಲಾವಣೆಯು ಆರ್‌ಬಿಐನ ಫ್ಲೋಟಿಂಗ್ ಬಾಂಡ್‌ಗಳ ಮೇಲೂ ಪರಿಣಾಮ ಬೀರುತ್ತದೆ.

ಹೂಡಿಕೆದಾರರು ಬಾಂಡ್ ಖರೀದಿಸುವ ಮುನ್ನ ಈ ಅಂಶಗಳನ್ನು ಗಮನಿಸಿ

ಆರ್‌ಬಿಐ ಬಾಂಡ್‌ಗಳನ್ನು ಖರೀದಿಸುವ ಹೂಡಿಕೆದಾರರು ಈ ಬಾಂಡ್ ಅನ್ನು ವರ್ಗಾಯಿಸಲಾಗುವುದಿಲ್ಲ ಎಂದು ತಿಳಿದುಕೊಳ್ಳುವುದು ಸಹ ಮುಖ್ಯವಾಗಿದೆ. ಹೂಡಿಕೆದಾರರ ಮರಣದ ನಂತರವೇ ಅದನ್ನು ನಾಮಿನಿಯ ಹೆಸರಿಗೆ ವರ್ಗಾಯಿಸಬಹುದು.

ಇದನ್ನೂ ಓದಿ:  Work from Home Ends: ಉದ್ಯೋಗಿಗಳನ್ನು ಕಚೇರಿಗೆ ಕರೆದ ಕಂಪನಿಗಳು! ವರ್ಕ್‌ ಫ್ರಂ ಹೋಂ ಸ್ಟಾಪ್ ?

ಇದರ ಹೊರತಾಗಿ ಈ ಬಾಂಡ್‌ನ ವಹಿವಾಟನ್ನು ಸಹ ಷೇರು ಮಾರುಕಟ್ಟೆಯಲ್ಲಿ ಮಾಡಲಾಗುವುದಿಲ್ಲ. ಹೂಡಿಕೆದಾರರು ಬ್ಯಾಂಕುಗಳು, ಹಣಕಾಸು ಸಂಸ್ಥೆಗಳು, ಎನ್‌ಬಿಎಫ್‌ಸಿ(NBFC)ಗಳು ಇತ್ಯಾದಿಗಳಿಂದ ಈ ಬಾಂಡ್ ‌ಗಳ ವಿರುದ್ಧ ಸಾಲವನ್ನು ತೆಗೆದುಕೊಳ್ಳಲು ಸಾಧ್ಯವಿಲ್ಲ.
Published by:Mahmadrafik K
First published: