• Home
  • »
  • News
  • »
  • business
  • »
  • Currency Notes: ನೋಟಿನ ಮೇಲೆ ಗಾಂಧಿ ಚಿತ್ರ ಬದಲಾಗಲ್ಲ! ಆರ್​ಬಿಐ ಸ್ಪಷ್ಟನೆ

Currency Notes: ನೋಟಿನ ಮೇಲೆ ಗಾಂಧಿ ಚಿತ್ರ ಬದಲಾಗಲ್ಲ! ಆರ್​ಬಿಐ ಸ್ಪಷ್ಟನೆ

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

ಇನ್ನು ಮುಂದೆ ನೋಟುಗಳ ಮೇಲೆ ಗಾಂಧೀಜಿ (Gandhiji) ಫೋಟೋ ಬದಲು, ರವೀಂದ್ರ ನಾಥ್​ ಟ್ಯಾಗೂರ್ (Rabindranath Tagore)​, ಎಪಿಜೆ ಅಬ್ದುಲ್​ ಕಲಾಮ್ (​ ಅವರ ಚಿತ್ರ ಇರಲಿದೆ ಎಂದು ಸುದ್ದಿಯಾಗಿತ್ತು. ಆದರೆ, ಇದೀಗ ಈ ಬಗ್ಗೆ ಸ್ವತಃ ರಿಸರ್ವ್​ ಬ್ಯಾಂಕ್​ ಆಫ್​ ಇಂಡಿಯಾ ಸ್ಪಷ್ಟನೆ ನೀಡಿದೆ.

ಮುಂದೆ ಓದಿ ...
  • Share this:

ನವೆಂಬರ್​ (November) 8 2016.. ಈ ದಿನವನ್ನು ಯಾವೊಬ್ಬ ಭಾರತೀಯನು ಮರೆಯಲು ಸಾಧ್ಯವಿಲ್ಲ. ಆ ದಿನ ಪ್ರಧಾನ ಮಂತ್ರಿ ಮೋದಿ (Prime Minister Modi) ಮಾಡಿದ ಆ ಒಂದು ಘೋಷಣೆ ಇಡೀ ಭಾರತವನ್ನೇ ನಡುಗಿಸಿಬಿಟ್ಟಿತ್ತು. ಬ್ಲ್ಯಾಕ್ ಮನಿ (Black money) ಕಳ್ಳರಿಗಂತೂ ಬರ ಸಿಡಿಲೆ ಬಡಿದಿತ್ತು. ಯಾಕೆಂದರೆ  ಅಂದು ಪ್ರಧಾನ ಮಂತ್ರಿ ಚಾಲ್ತಿಯಲ್ಲಿದ್ದ ನೋಟುಗಳನ್ನು ಬ್ಯಾನ್ (Note Ban)​ ಮಾಡಿ ಆದೇಶ ಹೊರಡಸಿದ್ದರು. 500 ರೂಪಾಯಿ 1000 ರೂಪಾಯಿ ನೋಟುಗಳನ್ನು ಬ್ಯಾನ್​ ಮಾಡಲಾ ಯಿತು. ಇದಾಗಿ 7 ವರ್ಷಗಳೇ ಕಳೆದಿವೆ. ಬೆಳಗ್ಗೆ ನೋಟುಗಳ ಬಗ್ಗೆ ಒಂದು ಸುದ್ದಿಯಾಗಿತ್ತು. ಇನ್ನು ಮುಂದೆ ನೋಟುಗಳ ಮೇಲೆ ಗಾಂಧೀಜಿ (Gandhiji) ಫೋಟೋ ಬದಲು, ರವೀಂದ್ರ ನಾಥ್​ ಟ್ಯಾಗೂರ್ (Rabindranath Tagore)​, ಎಪಿಜೆ ಅಬ್ದುಲ್​ ಕಲಾಮ್ (​ ಅವರ ಚಿತ್ರ ಇರಲಿದೆ ಎಂದು ಸುದ್ದಿಯಾಗಿತ್ತು. ಆದರೆ, ಇದೀಗ ಈ ಬಗ್ಗೆ ಸ್ವತಃ ರಿಸರ್ವ್​ ಬ್ಯಾಂಕ್​ ಆಫ್​ ಇಂಡಿಯಾ ಸ್ಪಷ್ಟನೆ ನೀಡಿದೆ.


ನೋಟುಗಳ ಫೋಟೋದಲ್ಲಿ ಬದಲಾವಣೆ ಇಲ್ಲ!


ಭಾರತೀಯ ರಿಸರ್ವ್ ಬ್ಯಾಂಕ್ ಮಹಾತ್ಮಾ ಗಾಂಧಿಯವರ ಮುಖವನ್ನು ಇತರರ ಮುಖಾಂತರ ಬದಲಿಸುವ ಮೂಲಕ ಅಸ್ತಿತ್ವದಲ್ಲಿರುವ ಕರೆನ್ಸಿ ಮತ್ತು ಬ್ಯಾಂಕ್​ ನೋಟುಗಳಿಗೆ ಬದಲಾವಣೆಗಳನ್ನು ಪರಿಗಣಿಸುತ್ತಿದೆ ಎಂದು ಮಾಧ್ಯಮದ ಕೆಲವು ವಿಭಾಗಗಳಲ್ಲಿ ವರದಿಗಳು ಪ್ರಸಾರವಾಗಿತ್ತು. ರಿಸರ್ವ್ ಬ್ಯಾಂಕ್‌ನಲ್ಲಿ ಅಂತಹ ಯಾವುದೇ ಪ್ರಸ್ತಾಪವಿಲ್ಲ ಎಂದ ಆರ್​​ಬಿಐ ಪ್ರೆಸ್​​ ನೋಟ್​ ಮೂಲಕ ಸ್ಪಷ್ಟನೆ ನೀಡಿದೆ.


ನೋಟುಗಳ ಮೇಲೆ ಚಿತ್ರ ಚೇಂಜ್​ ಆಗುತ್ತೆ ಸುದ್ದಿ ಸುಳ್ಳು!


ಕೇಂದ್ರ ಹಣಕಾಸು ಸಚಿವಾಲಯ ಮತ್ತು ಭಾರತೀಯ ರಿಸರ್ವ್ ಬ್ಯಾಂಕ್ (ಆರ್‌ಬಿಐ) ಕೆಲವು ಮುಖಬೆಲೆಯ ನೋಟುಗಳಲ್ಲಿ  ಮಿಸೈಲ್ ಮ್ಯಾನ್‌ನ ವಾಟರ್‌ಮಾರ್ಕ್‌ಗಳನ್ನು ಬಳಸಲು ಪರಿಗಣಿಸುತ್ತಿದೆ. ದಿ ನ್ಯೂ ಇಂಡಿಯನ್ ಎಕ್ಸ್‌ಪ್ರೆಸ್ ಪ್ರಕಾರ, ಸೆಕ್ಯುರಿಟಿ ಪ್ರಿಂಟಿಂಗ್ ಮತ್ತು ಮಿಂಟಿಂಗ್ ಕಾರ್ಪೊರೇಷನ್ ಆಫ್ ಇಂಡಿಯಾ (SPMCIL) ಮತ್ತು RBI ಟ್ಯಾಗೋರ್, ಗಾಂಧಿ ಮತ್ತು ಕಲಾಂ ಅವರೊಂದಿಗೆ ಎರಡು ಸೆಟ್ ಮಾದರಿಗಳ ವಾಟರ್‌ಮಾರ್ಕ್‌ಗಳನ್ನು ಹೊಂದಬಹುದು ಎಂದು ಹೇಳಲಾಗುತ್ತಿತ್ತು. ಅಂತಿಮ ನಿರ್ಧಾರವನ್ನು ಸರ್ಕಾರವು ಉನ್ನತ ಮಟ್ಟದಲ್ಲಿ ತೆಗೆದುಕೊಳ್ಳುತ್ತದೆ ಎಂದು ವರದಿ ಮಾಡಿತ್ತು.


ಇದನ್ನೂ ಓದಿ: ಇನ್ಮುಂದೆ ನೋಟಿನ ಮೇಲೆ ಗಾಂಧಿ ಚಿತ್ರ ಇರಲ್ವಂತೆ! ಇನ್ಯಾರ್​ ಫೋಟೋ ಇರಬಹುದು? ಗೆಸ್​​​​ ಮಾಡಿ


ಆಘಾತಕಾರಿ ಮಾಹಿತಿ ಕೊಟ್ಟ ಆರ್​​ಬಿಐ!


ಭಾರತೀಯ ರಿಸರ್ವ್ ಬ್ಯಾಂಕ್ ನೀಡಿರುವ ಮಾಹಿತಿಯಿಂದ ಇದೀಗ ಹಲವಾರು ರೀತಿಯ ಪ್ರಶ್ನೆಗಳು ಉದ್ಭವಿಸಿದೆ.  2016ರಲ್ಲಿ ಚಾಲ್ತಿಯಲ್ಲಿದ್ದ ರೂ.500 ಮತ್ತು ರೂ.1,000 ನೋಟುಗಳ ಅಮಾನ್ಯೀಕರಣದ ಪ್ರಮುಖ ಉದ್ದೇಶವೆಂದರೆ ನಕಲಿ ಕರೆನ್ಸಿ ನೋಟುಗಳ ಚಲಾವಣೆ ತಡೆಯುವುದಾಗಿತ್ತು. ಇದಾದ ಬಳಿಕ ನಕಲಿ ನೋಟುಗಳ ತಯಾರಿಕೆಗೆ ಬ್ರೇಕ್​ ಬಿದ್ದಿದೆ ಎಂದು ಎಲ್ಲರೂ ಭಾವಿಸಿದ್ದರು. ಆದರೆ, ಇದೀಗ ಆರ್​​ಬಿಐ ಆಘಾತಕಾರಿ ಮಾಹಿತಿ ನೀಡಿದೆ.  2022 ವಿತ್ತೀಯ ವರ್ಷದಲ್ಲಿ 500 ರೂ ಮುಖ ಬೆಲೆಯ 79,669 ನಕಲಿ ನೋಟುಗಳು ಪತ್ತೆಯಾಗಿದೆ ಎಂದು ಭಾರತೀಯ ರಿಸರ್ವ್ ಬ್ಯಾಂಕ್ ಹೇಳಿದೆ.


ಇದನ್ನೂ ಓದಿ: ಆನ್​ಲೈನ್​ನಲ್ಲಿ ಸರಳವಾಗಿ ಪಿಎಫ್​ ಹಣ ಡ್ರಾ ಮಾಡ್ಬಹುದು! ಆದ್ರೆ, ಈ ರೂಲ್ಸ್​ನ ಮರಿಬೇಡಿ


79, 669 ನಕಲಿ ನೋಟುಗಳು ಪತ್ತೆ!


2022 ವಿತ್ತೀಯ ವರ್ಷದಲ್ಲಿ 500 ರೂ ಮುಖ ಬೆಲೆಯ 79,669 ನಕಲಿ ನೋಟುಗಳ ಪತ್ತೆಯಾಗಿದ್ದು, ಹಿಂದಿನ ಹಣಕಾಸು ವರ್ಷದಲ್ಲಿ (2020–21) ಒಟ್ಟು 2.08 ಲಕ್ಷ ನಕಲಿ ನೋಟುಗಳು ಪತ್ತೆಯಾಗಿದ್ದವು. ಅದರಂತೆ ಮಾರ್ಚ್‌ 31ಕ್ಕೆ ಕೊನೆಗೊಂಡ ಹಣಕಾಸು ವರ್ಷದಲ್ಲಿ ದೇಶದಲ್ಲಿ ಒಟ್ಟು 2.30 ಲಕ್ಷ ನಕಲಿ ನೋಟುಗಳು ಪತ್ತೆಯಾಗಿವೆ. ಈ ವರ್ಷ ಇನ್ನೂ ಮುಗಿದಿಲ್ಲ. ಆಗಲೇ ಇಷ್ಟೊಂದು 500 ರೂಪಾಯಿಯ ನಕಲಿ ನೋಟುಗಳು  ಪತ್ತೆಯಾಗಿರೋದು ಆತಂಕ ಮೂಡಿಸಿರುವುದಂತೂ ನಿಜ.

Published by:Vasudeva M
First published: