ಈ ಬ್ಯಾಂಕ್ ಗ್ರಾಹಕರಿಗೆ (Bank Customers) ಬಿಗ್ ಶಾಕಿಂಗ್ ನ್ಯೂಸ್ (Shocking News) ಇದು. ನೀವು ಈಗ ನಾವು ಹೇಳುವ ಬ್ಯಾಂಕ್‌ಗಳಲ್ಲಿ ಹಣ (Money) ಇಟ್ಟಿದ್ರೆ, ಖಾತೆ ಹೊಂದಿದ್ದರೆ ಬೇಗಾ ಎಚ್ಚೆತ್ತುಕೊಳ್ಳಿ. ಏಕೆಂದರೆ ದೇಶದ ಈ ಎರಡು ಪ್ರಮುಖ ಬ್ಯಾಂಕ್‌ಗಳ ಪರವಾನಗಿ, ಚೆಕ್ (Cheque) ವಿವರಗಳನ್ನು ಆರ್‌ಬಿಐ ರದ್ದುಗೊಳಿಸಿದೆ. ಎರಡು ಬ್ಯಾಂಕ್‌ಗಳ ವಿರುದ್ಧ ಸಾಲ ನೀಡಿಕೆಯಲ್ಲಿ ನಿಯಂತ್ರಕ ಲೋಪ ಮತ್ತು ಗ್ರಾಹಕರಿಗೆ ಕಿರುಕುಳ ನೀಡಿರುವ ಬಗ್ಗೆ ಆರೋಪ ಮಾಡಿರುವ ಆರ್‌ಬಿಐ ಲೈನೆಸ್ಸ್ ರದ್ದು (License Cancel) ಮಾಡುವ ಮೂಲಕ ಕಠಿಣ ಕ್ರಮ ತೆಗೆದುಕೊಂಡಿದೆ. ಈ ಎರಡೂ ಬ್ಯಾಂಕೇತರ ಹಣಕಾಸು ಸಂಸ್ಥೆ (NBFC) ಗಳು ಸಾಲ ನೀಡಿಕೆಯಲ್ಲಿ ನಿಯಂತ್ರಕ ಲೋಪಗಳನ್ನು ಹೊಂದರುವ ಕಾರಣ ಬ್ಯಾಂಕ್ ಪರವಾನಗಿಯನ್ನು, ನೋಂದಣಿ ಪ್ರಮಾಣಪತ್ರವನ್ನು ಮತ್ತು ಚೆಕ್ ವಿವರಗಳನ್ನು ರದ್ದು ಮಾಡಿದೆ.
ಯಾವ ಬ್ಯಾಂಕ್‌ಗಳ ಪರವಾನಿಗೆ ರದ್ದಾಗಿದೆ?
ಆರ್‌ಬಿಐ, ಪುಣೆ ಮೂಲದ ಕುಡೋಸ್ ಫೈನಾನ್ಸ್ ಮತ್ತು ಇನ್ವೆಸ್ಟ್‌ಮೆಂಟ್ ಲಿಮಿಟೆಡ್ (ಕುಡೋಸ್ ಫೈನಾನ್ಸ್ ಮತ್ತು ಇನ್ವೆಸ್ಟ್‌ಮೆಂಟ್ ಪ್ರೈವೇಟ್ ಲಿಮಿಟೆಡ್) ಮತ್ತು ಮುಂಬೈ ಮೂಲದ ಕ್ರೆಡಿಟ್ ಗೇಟ್ ಪ್ರೈವೇಟ್ ಲಿಮಿಟೆಡ್ ನೋಂದಣಿಯನ್ನು ರದ್ದುಗೊಳಿಸಿದೆ. ಈ ಬಗ್ಗೆ ಆರ್‌ಬಿಐ ಕೂಡ ಸ್ಪಷ್ಟಪಡಿಸಿದೆ.
ರಿಸರ್ವ್ ಬ್ಯಾಂಕ್ (ಆರ್‌ಬಿಐ) ಬಿಡುಗಡೆ ಮಾಡಿದ ಹೇಳಿಕೆಯು ನೋಂದಣಿ ಪ್ರಮಾಣಪತ್ರವನ್ನು (ಸಿಒಆರ್) ರದ್ದುಗೊಳಿಸಿದ ನಂತರ, ಎರಡೂ ಎನ್‌ಬಿಎಫ್‌ಸಿಗಳು (ಎನ್‌ಬಿಎಫ್‌ಸಿ) ಬ್ಯಾಂಕಿಂಗ್ ಅಲ್ಲದ ಹಣಕಾಸು ಸಂಸ್ಥೆಗಳ (ಎನ್‌ಬಿಎಫ್‌ಐ) ವ್ಯವಹಾರವನ್ನು ಮಾಡುವಂತಿಲ್ಲ ಎಂದು ಸೂಚನೆ ನೀಡಿದೆ.
ಆರ್‌ಬಿಐ ಬ್ಯಾಂಕ್‌ಗಳ ವಿರುದ್ಧ ಮಾಡಿರುವ ಆರೋಪವೇನು?
ಥರ್ಡ್ ಪಾರ್ಟಿ ಅಪ್ಲಿಕೇಶನ್‌ಗಳ ಮೂಲಕ ಡಿಜಿಟಲ್ ಲೋನ್ ಕಾರ್ಯಾಚರಣೆಗಳ ಕೆಲಸದಲ್ಲಿ ಹೊರಗುತ್ತಿಗೆ ಮತ್ತು ನ್ಯಾಯಯುತ ವ್ಯವಹಾರ ಚಟುವಟಿಕೆಗಳ ಕುರಿತು RBI ಮಾರ್ಗಸೂಚಿಗಳನ್ನು ಉಲ್ಲಂಘಿಸಿದ ಕಾರಣ ನೋಂದಣಿಯನ್ನು ರದ್ದುಗೊಳಿಸಲಾಗಿದೆ ಎಂದು ಆರ್‌ಬಿಐ ತನ್ನ ಹೇಳಿಕೆಯಲ್ಲಿ ತಿಳಿಸಿದೆ.
ಗ್ರಾಹಕರಿಗೆ ವಿನಾಕಾರಣ ಕಿರುಕುಳ ನೀಡಿದ್ದ ಬ್ಯಾಂಕ್‌ಗಳು
ಅಲ್ಲದೇ ಆರ್‌ಬಿಐ ಕುಡೋಸ್ ಫೈನಾನ್ಸ್ ಮತ್ತು ಇನ್ವೆಸ್ಟ್‌ಮೆಂಟ್ ಲಿಮಿಟೆಡ್ ಮತ್ತು ಮುಂಬೈ ಮೂಲದ ಕ್ರೆಡಿಟ್ ಗೇಟ್ ಪ್ರೈವೇಟ್ ಲಿಮಿಟೆಡ್ ಎರಡೂ ಎನ್‌ಬಿಎಫ್‌ಸಿಗಳು ಹೆಚ್ಚಿನ ಬಡ್ಡಿ ವಿಧಿಸುವ ಬಗ್ಗೆ ಅಸ್ತಿತ್ವದಲ್ಲಿರುವ ನಿಯಮಗಳನ್ನು ಗಾಳಿಗೆ ತೂರಿವೆ. ಇದರೊಂದಿಗೆ ಸಾಲ ವಸೂಲಾತಿ ವಿಚಾರದಲ್ಲಿ ಗ್ರಾಹಕರಿಗೆ ವಿನಾಕಾರಣ ಕಿರುಕುಳ ನೀಡಿವೆ ಎಂದು ಹೇಳಿದೆ.
2022 ರಲ್ಲಿ 12 ಸಹಕಾರಿ ಬ್ಯಾಂಕ್‌ಗಳ ಪರವಾನಗಿ ರದ್ದು
ಆರ್‌ಬಿಐ ನಿಯಮ ಉಲ್ಲಂಘನೆ ಮಾಡುವ ಬ್ಯಾಂಕ್‌ಗಳ ವಿರುದ್ಧ ಮುಲಾಜಿಲ್ಲದೇ ಕ್ರಮ ತೆಗೆದುಕೊಳ್ಳುತ್ತದೆ. ಇದಕ್ಕೆ ಸಾಕ್ಷಿ ಎನ್ನುವಂತೆ ಭಾರತೀಯ ರಿಸರ್ವ್ ಬ್ಯಾಂಕ್ (RBI) 2022 ರಲ್ಲಿ 12 ಸಹಕಾರಿ ಬ್ಯಾಂಕ್‌ಗಳ ಪರವಾನಗಿಗಳನ್ನು ರದ್ದುಗೊಳಿಸಿದೆ ಮತ್ತು ದಂಡವನ್ನು ಕೂಡ ವಿಧಿಸಿದೆ.
ಇದನ್ನೂ ಓದಿ: ಈ ರೀತಿ ಪೋಸ್ಟ್ ಆಫೀಸ್ ಉಳಿತಾಯ ಖಾತೆ ಬ್ಯಾಲೆನ್ಸ್ ಚೆಕ್ ಮಾಡಿ!
ಸ್ವಾತಂತ್ರ್ಯ ಸಹಕಾರಿ ಬ್ಯಾಂಕ್ ಲಿಮಿಟೆಡ್, ಮಂಥ ಅರ್ಬನ್ ಕೋಆಪರೇಟಿವ್ ಬ್ಯಾಂಕ್ ಲಿಮಿಟೆಡ್, ಪೀಪಲ್ಸ್ ಕೋಆಪರೇಟಿವ್ ಬ್ಯಾಂಕ್ ಲಿಮಿಟೆಡ್, ಮುಧೋಳ ಸಹಕಾರಿ ಬ್ಯಾಂಕ್ ಲಿಮಿಟೆಡ್, ಮಿಲ್ಲತ್ ಸಹಕಾರಿ ಬ್ಯಾಂಕ್ ಲಿಮಿಟೆಡ್ ಮತ್ತು ಇತರೆ ಬ್ಯಾಂಕ್‌ಗಳ ಪರವಾನಗಿಯನ್ನು ರದ್ದು ಮಾಡಿದೆ.
ಕೇಂದ್ರ ಬ್ಯಾಂಕ್ ಕಳೆದ ಕೆಲವು ವರ್ಷಗಳಿಂದ ಅಕ್ರಮ ಸಹಕಾರಿ ಬ್ಯಾಂಕ್‌ಗಳ ಮೇಲೆ ಕಡಿವಾಣ ಹಾಕುತ್ತಿದೆ. ಹಳ್ಳಿಗಳಲ್ಲಿ ಬ್ಯಾಂಕಿಂಗ್ ಸೇವೆಗಳನ್ನು ವಿಸ್ತರಿಸುವಲ್ಲಿ ನಿರ್ಣಾಯಕ ಪಾತ್ರ ವಹಿಸಿರುವ ಸಹಕಾರಿ ಬ್ಯಾಂಕ್‌ಗಳು ದ್ವಿ ನಿಯಂತ್ರಣ, ದುರ್ಬಲ ಹಣಕಾಸು ಮತ್ತು ಸ್ಥಳೀಯ ರಾಜಕಾರಣಿಗಳ ಹಸ್ತಕ್ಷೇಪ ಸೇರಿದಂತೆ ಹಲವಾರು ಸಮಸ್ಯೆಗಳನ್ನು ಎದುರಿಸುತ್ತಿವೆ.
2020 ರಲ್ಲಿ 32,300 ಕೋಟಿ ರೂ.ಗಳಿಂದ 2021 ರಲ್ಲಿ ನಗರ ಸಹಕಾರಿ ಬ್ಯಾಂಕ್‌ಗಳ ಒಟ್ಟು ಅನುತ್ಪಾದಕ ಆಸ್ತಿಗಳು (ಜಿಎನ್‌ಪಿಎ) 36,500 ಕೋಟಿಗಳಿಗೆ ಏರಿದೆ ಎಂದು ಆರ್‌ಬಿಐನೊಂದಿಗಿನ ಡೇಟಾ ತೋರಿಸುತ್ತದೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ