ಪಡಿತರ ಚೀಟಿದಾರರಿಗೆ (Ration Card) ಮಹತ್ವದ ಸುದ್ದಿಯೊಂದು ಕೇಳಿಬಂದಿದೆ. ಹೌದು, ಪಡಿತರ ಚೀಟಿಯನ್ನು ಆಧಾರ್ ಕಾರ್ಡ್ಗೆ (Aadhar Card) ಲಿಂಕ್ ಮಾಡುವ ಕೊನೆಯ ದಿನಾಂಕವನ್ನು ಸರ್ಕಾರ ವಿಸ್ತರಿಸಿದೆ . ಪಡಿತರ ಚೀಟಿದಾರರು ತಮ್ಮ ಪಡಿತರ ಚೀಟಿಗಳನ್ನು ಜೂನ್ 30, 2022 ರ ವರೆಗೆ ಲಿಂಕ್ (Link) ಮಾಡಬಹುದು. ನೀವು ಇನ್ನೂ ಪಡಿತರ ಚೀಟಿಗೆ ಆಧಾರ್ ಲಿಂಕ್ ಮಾಡದಿದ್ದರೆ, ಶೀಘ್ರದಲ್ಲೇ ಲಿಂಕ್ ಮಾಡಿ. ಈ ಸಂಬಂಧ ಆಹಾರ ಮತ್ತು ಸಾರ್ವಜನಿಕ ವಿತರಣಾ ಇಲಾಖೆ ಅಧಿಸೂಚನೆ ಹೊರಡಿಸಿದೆ. ಪಡಿತರ ಚೀಟಿಯನ್ನು ಆಧಾರ್ಗೆ ಲಿಂಕ್ ಮಾಡಲು ಕೊನೆಯ ದಿನಾಂಕ ಮಾರ್ಚ್ 31 ಆಗಿತ್ತು, ಆದರೆ ಈಗ ಅದು 31 ಜೂನ್ 2022 (June 31) ವಿಸ್ತರಣೆಯನ್ನು ಮಾಡಿದ್ದು ಅನೇಕರಿಗೆ ಸಹಾಯವಾಗಲಿದೆ.
ಒಂದು ರಾಷ್ಟ್ರ ಒಂದು ಪಡಿತರ ಚೀಟಿ ಯೋಜನೆ:
ಪಡಿತರ ಚೀಟಿ ಬಹಳ ಮುಖ್ಯವಾದ ಸರ್ಕಾರಿ ದಾಖಲೆಯಾಗಿದೆ. ಪಡಿತರ ಚೀಟಿಯಲ್ಲಿ ಕಡಿಮೆ ದರದಲ್ಲಿ ಅಗ್ಗದ ಆಹಾರ ಧಾನ್ಯಗಳನ್ನು ಪಡೆಯಬಹುದು. ಅದರ ಜೊತೆಗೆ ಇನ್ನೂ ಅನೇಕ ಪ್ರಯೋಜನಗಳಿವೆ. ಕೇಂದ್ರ ಸರ್ಕಾರವು 'ಒಂದು ರಾಷ್ಟ್ರ ಒಂದು ಪಡಿತರ ಚೀಟಿ' ಯೋಜನೆಯನ್ನು ಪ್ರಾರಂಭಿಸಿದೆ .
ದೇಶದಾದ್ಯಂತ ಲಕ್ಷಾಂತರ ಜನರು ಈ ಯೋಜನೆಯಿಂದ ಪ್ರಯೋಜನ ಪಡೆಯುತ್ತಾರೆ. ಪಡಿತರ ಚೀಟಿಯೊಂದಿಗೆ ಆಧಾರ್ ಕಾರ್ಡ್ ಅನ್ನು ಲಿಂಕ್ ಮಾಡಿದ ನಂತರ, ಒಬ್ಬರು 'ಒಂದು ರಾಷ್ಟ್ರ ಒಂದು ಪಡಿತರ ಚೀಟಿ' ಯೋಜನೆಯ ಪ್ರಯೋಜನವನ್ನು ಪಡೆಯಬಹುದು. ಇದರಿಂದ ದೇಶದ ಯಾವುದೇ ರಾಜ್ಯದ ಪಡಿತರ ಅಗ್ಗದ ಆಹಾರ ಮಳಿಗೆಗಳಿಂದ ಆಹಾರ ಧಾನ್ಯಗಳನ್ನು ಖರೀದಿಸಲು ಸಾಧ್ಯವಾಗುತ್ತದೆ. ಒಂದು ರಾಜ್ಯದ ಪಡಿತರ ಚೀಟಿಯನ್ನು ಇನ್ನೊಂದು ರಾಜ್ಯದಲ್ಲಿ ಬಳಸಬಹುದು.
ಇದನ್ನೂ ಓದಿ: Aadhar Card ಬಳಕೆದಾರರಿಗೆ ಎಚ್ಚರಿಕೆ ನೀಡಿದ UIDAI, ನಿಮ್ಮ ಆಧಾರ್ ದುರ್ಬಳಕೆ ಆಗುತ್ತಿದೆಯೇ ಎಂದು ಹೀಗೆ ಕಂಡುಹಿಡಿಯಿರಿ
ಆನ್ಲೈನ್ನಲ್ಲಿ ಪಡಿತರ ಚೀಟಿಗೆ ಆಧಾರ್ ಲಿಂಕ್ ಮಾಡುವುದು ಹೇಗೆ:
- ಮೊದಲು ಅಧಿಕೃತ ವೆಬ್ಸೈಟ್
uidai.gov.in ಗೆ ಹೋಗಿ
- ಇಲ್ಲಿ ಈಗ ಸ್ಟಾರ್ಟ್ ಕ್ಲಿಕ್ ಮಾಡಿ
- ನಂತರ ನೀವು ವಿಳಾಸ, ಜಿಲ್ಲೆ, ರಾಜ್ಯ ಮುಂತಾದ ವಿವರಗಳನ್ನು ಭರ್ತಿ ಮಾಡಿ
- ನಂತರ 'ಪಡಿತರ ಕಾರ್ಡ್ ಪ್ರಯೋಜನಗಳು' ಕ್ಲಿಕ್ ಮಾಡಿ
- ಇಲ್ಲಿ ಆಧಾರ್ ಸಂಖ್ಯೆ, ಪಡಿತರ ಚೀಟಿ ಸಂಖ್ಯೆ, ಇಮೇಲ್, ಮೊಬೈಲ್ ಸಂಖ್ಯೆ ವಿವರಗಳನ್ನು ಭರ್ತಿ ಮಾಡಿ
- ನಂತರ ನೋಂದಾಯಿತ ಮೊಬೈಲ್ ಸಂಖ್ಯೆಗೆ OTP ಬರುತ್ತದೆ
- ಈಗ OTP ಸೇರಿಸಿ. ನಂತರ ಪ್ರಕ್ರಿಯೆಯು ಪೂರ್ಣಗೊಂಡಿದೆ ಎಂಬ ಸಂದೇಶವು ಕಾಣಿಸಿಕೊಳ್ಳುತ್ತದೆ
- ಅದರ ನಂತರ ಆಧಾರ್ ಅನ್ನು ಪರಿಶೀಲಿಸಲಾಗುತ್ತದೆ ಮತ್ತು ನಿಮ್ಮ ಆಧಾರ್ ಕಾರ್ಡ್ ಅನ್ನು ಪಡಿತರ ಚೀಟಿಗೆ ಲಿಂಕ್ ಮಾಡಲಾಗುತ್ತದೆ.
ಆಫ್ಲೈನ್ ಲಿಂಕ್ ಮಾಡುವುದು ಹೇಗೆ?:
ಪಡಿತರ ಚೀಟಿಯನ್ನು ಆಧಾರ್ನೊಂದಿಗೆ ಲಿಂಕ್ ಮಾಡಲು, ಪಡಿತರ ಚೀಟಿದಾರರ ಆಧಾರ್ ಕಾರ್ಡ್ ಪ್ರತಿ, ರೇಷನ್ ಕಾರ್ಡ್ ನಕಲು ಮತ್ತು ಪಾಸ್ಪೋರ್ಟ್ ಅಳತೆಯ ಫೋಟೋದಂತಹ ಕೆಲವು ದಾಖಲೆಗಳನ್ನು ಪಡಿತರ ಚೀಟಿ ಕೇಂದ್ರದಲ್ಲಿ ಸಲ್ಲಿಸಬೇಕು. ಹೆಚ್ಚುವರಿಯಾಗಿ, ನಿಮ್ಮ ಆಧಾರ್ ಕಾರ್ಡ್ ಬಯೋಮೆಟ್ರಿಕ್ ಡೇಟಾ ಪರಿಶೀಲನೆಯನ್ನು ಪಡಿತರ ಚೀಟಿ ಕೇಂದ್ರದಲ್ಲಿ ಮಾಡಬಹುದು.
ಇದನ್ನೂ ಓದಿ: Jan Dhan Yojana: ಜನಧನ್ ಖಾತೆಗೆ ಆಧಾರ್ ಲಿಂಕ್ ಹೀಗೆ ಮಾಡಿ, ಇಲ್ಲವಾದಲ್ಲಿ ಈ ಯೋಜನೆಗಳಿಂದ ವಂಚಿತರಾಗುತ್ತೀರಿ!
ನಿಮ್ಮನ್ನು ಗುರುತಿಸಲು ನೀಡಿದ ಪ್ರಮುಖ ದಾಖಲೆಗಳಲ್ಲಿ ಒಂದು:
ನಿಮ್ಮ ಗುರುತನ್ನು ಸಾಬೀತುಪಡಿಸುವ ಪ್ರಮುಖ ದಾಖಲೆಗಳಲ್ಲಿ ಆಧಾರ್ ಕಾರ್ಡ್ ಒಂದಾಗಿದೆ. ಇದು ಎಲ್ಲಾ ಭಾರತೀಯ ನಾಗರಿಕರಿಗೆ UIDAI ನೀಡಿದ 12 ಅಂಕಿಗಳ ವಿಶಿಷ್ಟ ಗುರುತಿನ ಸಂಖ್ಯೆಯಾಗಿದೆ. ಆಧಾರ್ ಕಾಯಿದೆಯಡಿಯಲ್ಲಿ, ಇ-ಆಧಾರ್ ಅನ್ನು ಆಧಾರ್ ಕಾರ್ಡ್ನ ನೇರ ಪ್ರತಿ ಎಂದು ಗುರುತಿಸಲಾಗಿದೆ ಎಂಬುದನ್ನು ಗಮನಿಸುವುದು ಮುಖ್ಯ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ