Aadhaar card Ration card Link: ಬೇಗನೆ ರೇಷನ್ ಕಾರ್ಡ್ ಜೊತೆ ಆಧಾರ್ ಕಾರ್ಡ್ ಲಿಂಕ್ ಮಾಡಿ, ಹೇಗೆ ಮಾಡುವುದು ಎಂದು ಇಲ್ಲಿ ತಿಳಿಯಿರಿ

ದಿನಗೂಲಿಗಳು, ಹಂಗಾಮಿ ಕೆಲಸಗಾರರು ಮತ್ತು ವಲಸಿಗರು ತಮ್ಮ ಸಮೀಪದ ಪಡಿತರ ಕೇಂದ್ರದಿಂದ ಸಬ್ಸಿಡಿ ಆಹಾರ ಧಾನ್ಯಗಳ ಪ್ರಯೋಜನಗಳನ್ನು ಪಡೆಯಲು ಸಹಾಯ ಮಾಡಲು ಆಗಸ್ಟ್ 2019 ರಲ್ಲಿ ಒನ್ ನೇಷನ್ ಒನ್ ರೇಷನ್ ಕಾರ್ಡ್ (One Nation One Ration Card (ONORC) ಅನ್ನು ಪ್ರಾರಂಭಿಸಿದೆ.

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

 • Share this:
  ರೇಷನ್ ಕಾರ್ಡ್ ಜೊತೆಗೆ ಆಧಾರ್ ಕಾರ್ಡ್ ಲಿಂಕ್ ಮಾಡುವ ಗಡುವನ್ನು ಕೇಂದ್ರ ಸರ್ಕಾರ (Union Government) ವಿಸ್ತರಿಸಿದೆ. ರೇಷನ್ ಕಾರ್ಡ್ ಜೊತೆ ಆಧಾರ್ ಕಾರ್ಡ್​ ಲಿಂಕ್ ಮಾಡಲು ಈಮುನ್ನ ಇದ್ದ ಗಡುವಾದ ಮಾರ್ಚ್ 31 ನ್ನು ಜೂನ್ 30 ರವರೆಗೆ ವಿಸ್ತರಿಸಲಾಗಿದೆ. ಪಡಿತರ ಚೀಟಿಯೊಂದಿಗೆ (Ration Cards) ಆಧಾರ್ ಕಾರ್ಡ್‌ನ್ನು (Aadhaar Card) ಲಿಂಕ್ ಮಾಡುವುದರಿಂದ ಯಾವುದೇ ಫಲಾನುಭವಿಯು ಆಹಾರ ಧಾನ್ಯಗಳನ್ನು ಪಡೆಯದೇ ಇರಲು ಸಾಧ್ಯವಿಲ್ಲ. ಎಲ್ಲ ಫಲಾನುಭವಿಗಳಿಗೂ ಪಡಿತರ ಧಾನ್ಯ (Food) ದೊರೆಯಲಿದೆ ಎಂದು ಕೇಂದ್ರ ಸರ್ಕಾರ ಖಚಿತಪಡಿಸಿದೆ. ಈಮೂಲಕ ಇನ್ನೂ ಆಧಾರ್ ಕಾರ್ಡ್ ರೇಷನ್ ಕಾರ್ಡ್ ಲಿಂಕ್ ಮಾಡದವರಿಗೆ ಮತ್ತೊಂದು ಅವಕಾಶ ಒದಗಿಸಲಾಗಿದೆ.

  ರಾಷ್ಟ್ರೀಯ ಆಹಾರ ಭದ್ರತಾ ಕಾಯಿದೆಯಡಿಯಲ್ಲಿ ಒಂದು ಸ್ಥಳದಿಂದ ಇನ್ನೊಂದು ಸ್ಥಳಕ್ಕೆ ವಲಸೆ ಹೋಗುವ ಜನರಿಗೆ ತಾತ್ಕಾಲಿಕ ಕೆಲಸದ ಸ್ಥಳದಲ್ಲಿ ಪಡಿತರ ವಿತರಣೆ ಮಾಡಲು ಸಾಧ್ಯವಾಗಲಿದೆ. ಅರ್ಹ ಆಹಾರ ಧಾನ್ಯಗಳಿಂದ ವಂಚಿತರಾಗುವ ವಲಸೆ ಹೋಗುವ ಸಮುದಾಯಗಳ ದೃಷ್ಟಿಯಿಂದ ಆಧಾರ್ ಕಾರ್ಡ್‌ಗಳನ್ನು ಪಡಿತರ ಚೀಟಿಗಳೊಂದಿಗೆ ಲಿಂಕ್ ಮಾಡುವುದು ಮುಖ್ಯವಾಗಿದೆ.

  ಒಂದು ದೇಶ ಒಂದು ರೇಷನ್ ಕಾರ್ಡ್
  ದಿನಗೂಲಿಗಳು, ಹಂಗಾಮಿ ಕೆಲಸಗಾರರು ಮತ್ತು ವಲಸಿಗರು ತಮ್ಮ ಸಮೀಪದ ಪಡಿತರ ಕೇಂದ್ರದಿಂದ ಸಬ್ಸಿಡಿ ಆಹಾರ ಧಾನ್ಯಗಳ ಪ್ರಯೋಜನಗಳನ್ನು ಪಡೆಯಲು ಸಹಾಯ ಮಾಡಲು ಆಗಸ್ಟ್ 2019 ರಲ್ಲಿ ಒನ್ ನೇಷನ್ ಒನ್ ರೇಷನ್ ಕಾರ್ಡ್ (One Nation One Ration Card (ONORC) ಅನ್ನು ಪ್ರಾರಂಭಿಸಿದೆ.

  ಈ ಯೋಜನೆಯಡಿಯಲ್ಲಿ 80 ಕೋಟಿ ಫಲಾನುಭವಿಗಳಿದ್ದಾರೆ. ಫೆಬ್ರವರಿ ಮಧ್ಯದ ವೇಳೆಗೆ, ONORC ಅಡಿಯಲ್ಲಿ ಶೇಕಡಾ 96 ರಷ್ಟು ಫಲಾನುಭವಿಗಳು ದಾಖಲಾಗಿದ್ದಾರೆ. ಇದನ್ನು ಶೇಕಡಾ 100 ರಷ್ಟು ಮಾಡುವ ಗುರಿ ಹಲವು ರಾಜ್ಯಗಳ ಮುಂದಿದ್ದು ಈ ಗುರಿ ಸಾಧಿಸಕು ಇನ್ನು ಮೂರು ತಿಂಗಳ ಅವಧಿ ಅಗತ್ಯವಿದೆ ಎಂದು ಕೇಂದ್ರ ಸರ್ಕಾರದ ಹಿರಿಯ ಅಧಿಕಾರಿಯೋರ್ವರು ತಿಳಿಸಿದ್ದಾರೆ.

  ಇದನ್ನೂ ಓದಿ: Varuna Mitra Helpline: ನಿಮ್ಮೂರಲ್ಲಿ ಮಳೆ ಯಾವಾಗ ಬರುತ್ತೆ? ಒಂದೇ ಒಂದು ಫೋನ್ ಕರೆಯಲ್ಲಿ ಹೀಗೆ ತಿಳಿಯಿರಿ

  ಈ ಹಿಂದೆ ಆಧಾರ್ ಕಾರ್ಡ್ ಮತ್ತು ರೇಷನ್ ಕಾರ್ಡ್ ಎರಡನ್ನೂ ಲಿಂಕ್ ಮಾಡಲು ಡಿಸೆಂಬರ್ 31, 2021 ರ ಗಡುವನ್ನು ನೀಡಲಾಗಿತ್ತು. ಆದರೆ ಈ ಗಡುವನ್ನು ಮಾರ್ಚ್ 31, 2022 ರವರೆಗೆ ವಿಸ್ತರಿಸಲಾಗಿತ್ತು. ಆದರೆ ಇದೀಗ ಈ ಗಡುವನ್ನು ಜೂನ್ 30, 2022 ರವರೆಗೆ ವಿಸ್ತರಿಸಲಾಗಿದೆ.

  ಪಡಿತರ ಚೀಟಿಯನ್ನು ಆಧಾರ್‌ನೊಂದಿಗೆ ಲಿಂಕ್ ಮಾಡುವುದು ಹೇಗೆ?

  ಆಧಾರ್‌ನ ಅಧಿಕೃತ ವೆಬ್‌ಸೈಟ್‌ಗೆ ಹೋಗಿ - uidai.gov.in.

  ಇಲ್ಲಿ 'Start Now' ಮೇಲೆ ಕ್ಲಿಕ್ ಮಾಡಿ.

  ಜಿಲ್ಲೆ ಮತ್ತು ರಾಜ್ಯದ ಹೆಸರು ಸೇರಿದಂತೆ ನಿಮ್ಮ ವಿಳಾಸವನ್ನು ಭರ್ತಿ ಮಾಡಿ.

  ನಂತರ 'ರೇಷನ್ ಕಾರ್ಡ್ ಬೆನಿಫಿಟ್' ಆಯ್ಕೆಯನ್ನು ಕ್ಲಿಕ್ ಮಾಡಿ.

  ನಿಮ್ಮ ಆಧಾರ್ ಸಂಖ್ಯೆ, ಪಡಿತರ ಚೀಟಿ ಸಂಖ್ಯೆ, ಇ-ಮೇಲ್ ವಿಳಾಸ ಮತ್ತು ಮೊಬೈಲ್ ಸಂಖ್ಯೆಯನ್ನು ನಮೂದಿಸಿ.

  ಇದನ್ನೂ ಓದಿ: Nizam of Hyderabad: ಇವರು ಟಾಟಾ-ಬಿರ್ಲಾ ಅಲ್ಲ, ಆದರೆ ಕಲ್ಪನೆಗೂ ಮೀರಿದ ಶ್ರೀಮಂತ ದೊರೆ!

  ಇದನ್ನು ಮಾಡಿದ ನಂತರ ನಿಮ್ಮ ನೋಂದಾಯಿತ ಮೊಬೈಲ್ ಸಂಖ್ಯೆಗೆ OTP ಬರುತ್ತದೆ.

  ನೀವು OTP ಅನ್ನು ನಮೂದಿಸುತ್ತಿದ್ದಂತೆ, ನಿಮ್ಮ ಪರದೆಯ ಮೇಲೆ ಪ್ರಕ್ರಿಯೆ ಪೂರ್ಣಗೊಂಡ ಸಂದೇಶವನ್ನು ನೀವು ಪಡೆಯುತ್ತೀರಿ.

  ಸಂಪೂರ್ಣ ಪ್ರಕ್ರಿಯೆ ಪೂರ್ಣಗೊಂಡ ತಕ್ಷಣ, ನಿಮ್ಮ ಆಧಾರ್ ಅನ್ನು ಪರಿಶೀಲಿಸಲಾಗುತ್ತದೆ ಮತ್ತು ಅದನ್ನು ನಿಮ್ಮ ಪಡಿತರ ಚೀಟಿಗೆ ಲಿಂಕ್ ಮಾಡಲಾಗುತ್ತದೆ.
  Published by:guruganesh bhat
  First published: