Ratan Tata's luxurious lifestyle: ಬಹಳಷ್ಟು ಜನಸಾಮಾನ್ಯರಿಗೆ, ಮಧ್ಯಮ ವರ್ಗದವರಿಗೆ ಸೆಲೆಬ್ರಿಟಿಗಳ ಬಗ್ಗೆ, ಶ್ರೀಮಂತ ಉದ್ಯಮಿಗಳ ಬಗ್ಗೆ, ಯಶಸ್ವಿ ವ್ಯಕ್ತಿಗಳ ಬಗ್ಗೆ ತಿಳಿದುಕೊಳ್ಳುವ ಆಸೆಯಿರುತ್ತದೆ. ಅವರ ಜೀವನ ಶೈಲಿ (Lifestyle) ಹೇಗಿರುತ್ತದೆ? ಅವರ ಮನೆ (House) ಹೇಗಿರುತ್ತದೆ? ಅವರ ಬಳಿ ಇರುವಂಥ ದುಬಾರಿ ಕಾರ್ ಗಳು (Casrs) ಯಾವುವು ? ಅವರು ಹೇಗೆ ಜೀವನ ನಡೆಸ್ತಾರೆ ಎನ್ನುವುದರ ಬಗ್ಗೆ ಕುತೂಹಲಗಳಿರುತ್ತವೆ. ಇದು ಸಹಜ. ಹಾಗಿದ್ರೆ ಇಂದು ನಾವು ಶ್ರೀಮಂತ ಉದ್ಯಮಿಯೊಬ್ಬರ ಬಗ್ಗೆ, ಅವರ ಬಳಿ ಇರುವ ಐಷಾರಾಮಿ ವಸ್ತುಗಳ ಬಗ್ಗೆ ಹೇಳುತ್ತೇವೆ. ಅವರೇ ವಿಶ್ವದ ಶ್ರೀಮಂತ ಉದ್ಯಮಿ ರತನ್ ಟಾಟಾ.
ಟಾಟಾ ಗ್ರೂಪ್‌ನ ರತನ್ ಟಾಟಾ ಬಗ್ಗೆ ಯಾರಿಗೆ ಗೊತ್ತಿಲ್ಲ ಹೇಳಿ? ವಿಶ್ವದ ಶ್ರೀಮಂತ ಉದ್ಯಮಿಗಳಲ್ಲಿ ಒಬ್ಬರಾದ ರತನ್ ಟಾಟಾ ಭಾರತ ಕಂಡ ಅಸಾಧಾರಣ ಉದ್ಯಮಿಗಳಲ್ಲಿ ಒಬ್ಬರು.
$1 ಶತಕೋಟಿಗೂ ಹೆಚ್ಚು ನಿವ್ವಳ ಮೌಲ್ಯದೊಂದಿಗೆ, ರತನ್ ಟಾಟಾ ಉದಾರ ಮನಸ್ಸಿನ ಮಾನವತಾವಾದಿಯಾಗಿದ್ದಾರೆ. ಅಲ್ಲದೇ ಇವರು ಸ್ಫೂರ್ತಿದಾಯಕ ಭಾಷಣಗಳನ್ನೂ ಮಾಡುತ್ತಾರೆ.
85 ವರ್ಷ ವಯಸ್ಸಿನ ರತನ್ ಟಾಟಾ ತಮ್ಮ ಸರಳ ವ್ಯಕ್ತಿತ್ವದಿಂದ ಭಾರತದ ಹೆಮ್ಮೆ ಎನಿಸಿಕೊಳ್ಳುತ್ತಾರೆ. ಬಹಳಷ್ಟು ಜನರಿಗೆ ಸ್ಪೂರ್ತಿಯಾಗುವ ರತನ್ ಟಾಟಾ ಬಗ್ಗೆ ತಿಳಿದುಕೊಂಡಷ್ಟೂ ಕಡಿಮೆ. ಸದ್ಯ ರತನ್ ಟಾಟಾ ಬಳಿ ಇರುವಂಥ ಇತರ ದುಬಾರಿ ವಸ್ತುಗಳ ವಿವರಗಳನ್ನು ನೋಡೋಣ.
ಫೆರಾರಿ ಕ್ಯಾಲಿಫೋರ್ನಿಯಾ
ಉದ್ಯಮಿ ರತನ್ ಟಾಟಾ ಅವರು ಕೆಂಪು ಫೆರಾರಿ ಕ್ಯಾಲಿಫೋರ್ನಿಯಾವನ್ನು ಹೊಂದಿದ್ದಾರೆ. ಹಾರ್ಡ್‌ಟಾಪ್ ಕನ್ವರ್ಟಿಬಲ್ 4.3-ಲೀಟರ್ V8 ಎಂಜಿನ್‌ನಿಂದ 504Nm ಮತ್ತು 552 bhp ಗರಿಷ್ಠ ಟಾರ್ಕ್ ಅನ್ನು ಇದು ಹೊಂದಿದೆ. ಸದ್ಯ ದೇಶದಲ್ಲಿ ಈ ಮಾಡೆಲ್‌ಅನ್ನು ನಿಲ್ಲಿಸಲಾಗಿದೆ.
ಡಸಾಲ್ಟ್ ಫಾಲ್ಕನ್ ಪ್ರೈವೇಟ್ ಜೆಟ್
ಮೂಲಗಳ ಪ್ರಕಾರ, ರತನ್ ಟಾಟಾ ಅವರು ಡಸಾಲ್ಟ್ ಫಾಲ್ಕನ್ 2000 ಪ್ರೈವೇಟ್ ಜೆಟ್ಅನ್ನು ಹೊಂದಿದ್ದಾರೆ. ರತನ್ ಟಾಟಾ ಅವರು ತಮ್ಮದೇ ಆದ ವಿಮಾನವನ್ನು ಹಾರಿಸಲು ಅಧಿಕಾರ ಹೊಂದಿದ್ದಾರೆ. ಕಾಂಪ್ಯಾಕ್ಟ್ ಬೀಸ್ಟ್ ಅವಳಿ-ಎಂಜಿನ್ ಅನ್ನು ಹೊಂದಿದ್ದು, ಪರಿಣಿತ ಫ್ರೆಂಚ್ ಎಂಜಿನಿಯರ್‌ಗಳಿಂದ ವಿನ್ಯಾಸಗೊಳಿಸಲಾಗಿದೆ.
ಸಮುದ್ರ ತೀರದ ಬಂಗಲೆ
ರತನ್ ಟಾಟಾ ಅವರು ಮುಂಬೈನಲ್ಲಿ ಸಮುದ್ರ ತೀರದ ಬಂಗಲೆ ಹೊಂದಿದ್ದು, ಕೊಲಾಬಾ ಬಂಗಲೆ ಅರೇಬಿಯನ್ ಸಮುದ್ರದ ಅದ್ಭುತ ನೋಟವನ್ನು ನೀಡುತ್ತದೆ.
15,000 ಚದರ ಅಡಿಗಳಲ್ಲಿ ಹರಡಿರುವ ಈ ಬಂಗಲೆ ಏಳು ಮಹಡಿಗಳನ್ನು ಹೊಂದಿದೆ. ದೊಡ್ಡ ಕಾರ್ ಪಾರ್ಕಿಂಗ್ ಸ್ಥಳ, ಮಾಧ್ಯಮ ಕೊಠಡಿ, ಸನ್ ಡೆಕ್, ಲಾಂಜ್ ಮತ್ತು ಒಂದು ಈಜುಕೊಳವಿದೆ. ಅಂದಹಾಗೆ ಇದು ನಗರದ ಅತ್ಯಂತ ದುಬಾರಿ ಮನೆಗಳಲ್ಲಿ ಒಂದಾಗಿದೆ.
Mr Ratan Tata's bungalow. #colaba pic.twitter.com/LqucCsJ8vI
— Mahafreed (@mahafreed) December 29, 2013
ರತನ್ ಟಾಟಾ ಅವರು ಮಾಸೆರೋಟಿ ಕ್ವಾಟ್ರೋಪೋರ್ಟ್ ಕಾರ್‌ಅನ್ನು ಹೊಂದಿದ್ದಾರೆ. ಪ್ರತಿಯೊಬ್ಬ ಆಟೋಮೊಬೈಲ್ ಎಕ್ಸ್‌ಪರ್ಟ್‌ನ ಕನಸಿನ ಕಾರು, ಮಾಸೆರೋಟಿ ಕ್ವಾಟ್ರೋಪೋರ್ಟ್.
ಇದು ಟ್ವಿನ್-ಟರ್ಬೊ V6 ಪೆಟ್ರೋಲ್ ಎಂಜಿನ್ ಅನ್ನು ಹೊಂದಿದೆ. ಅಲ್ಲದೇ ಇದು 424 bhp ಶಕ್ತಿ ಮತ್ತು 580 Nm ಟಾರ್ಕ್ ಅನ್ನು ಜನರೇಟ್ ಮಾಡುತ್ತದೆ.
ಇದನ್ನೂ ಓದಿ: Food Shortage: ಇಲ್ಲಿ ಒಬ್ಬರಿಗೆ ಎರಡೇ ಹಣ್ಣು-ತರಕಾರಿ ಖರೀದಿಸಬೇಕು, ಇಂಥ ಪರಿಸ್ಥಿತಿ ಯಾರಿಗೂ ಬೇಡ!
ಲ್ಯಾಂಡ್ ರೋವರ್ ಫ್ರೀಲ್ಯಾಂಡರ್
ಈ ಕಂಪನಿಯನ್ನು ಸ್ವಾಧೀನಪಡಿಸಿಕೊಳ್ಳುವ ಮೊದಲೇ ರತನ್ ಟಾಟಾ ಅವರು ಲ್ಯಾಂಡ್ ರೋವರ್ ಫ್ರೀಲ್ಯಾಂಡರ್ ಅನ್ನು ಖರೀದಿಸಿದ್ದಾರೆ ಎಂದು ಮಾಧ್ಯಮವೊಂದು ವರದಿ ಮಾಡಿತ್ತು. ಈ ಕಾರು ನಾಲ್ಕು ಸಿಲಿಂಡರ್ ಡೀಸೆಲ್ ಎಂಜಿನ್ ಹೊಂದಿದ್ದು 187 bhp ಶಕ್ತಿಯನ್ನು ಜನರೇಟ್ ಮಾಡುತ್ತದೆ.
ಇವಿಷ್ಟು ದೇಶದ ಸರಳ ವ್ಯಕ್ತಿತ್ವದ, ಉದಾರ ಮನಸ್ಸಿನ ವಿಶ್ವದ ಅತಿ ಶ್ರೀಮಂತ ಉದ್ಯಮಿ ಎಂದೇ ಖ್ಯಾತರಾಗಿರುವ ರತನ್ ಟಾಟಾ ಅವರ ಬಳಿ ಇರುವ ಕೆಲವಷ್ಟು ದುಬಾರಿ ವಸ್ತುಗಳ ಮಾಹಿತಿಯಾಗಿದೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ