• Home
  • »
  • News
  • »
  • business
  • »
  • Elon Musk - Ratan Tata: ರತನ್ ಟಾಟಾ ಅವರನ್ನು ಹೊಗಳಿದ ಎಲಾನ್ ಮಸ್ಕ್​, ನ್ಯಾನೋ ಅದ್ಭುತ ಕಲ್ಪನೆ ಎಂದ ಟ್ವಿಟ್ಟರ್ ಒಡೆಯ

Elon Musk - Ratan Tata: ರತನ್ ಟಾಟಾ ಅವರನ್ನು ಹೊಗಳಿದ ಎಲಾನ್ ಮಸ್ಕ್​, ನ್ಯಾನೋ ಅದ್ಭುತ ಕಲ್ಪನೆ ಎಂದ ಟ್ವಿಟ್ಟರ್ ಒಡೆಯ

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

Elon Musk About Ratan Tata: ಇತಿಹಾಸದಲ್ಲಿಯೇ ಭಾರತದ ಅತ್ಯಂತ ಅಗ್ಗದ ಕಾರು ಎಂಬ ಬಿರುದಿಗೆ ಪಾತ್ರವಾಗಿರುವ ಟಾಟಾ ನ್ಯಾನೋ ಭಾರತದ ಆಟೋಮೊಬೈಲ್ ಉದ್ಯಮದ ಇತಿಹಾಸದಲ್ಲಿ ಈ ಕಾರು ವಿಶೇಷವಾಗಿ ಉಳಿದಿದೆ.

  • Share this:

ಹೊಸದಿಲ್ಲಿ: ಖ್ಯಾತ ಕೈಗಾರಿಕೋದ್ಯಮಿ ಮತ್ತು ಟಾಟಾ ಸನ್ಸ್‌ನ (Tata) ಮಾಜಿ ಅಧ್ಯಕ್ಷ ರತನ್ ಟಾಟಾ (Ratan Tata) ಅವರು ಭಾರತದಲ್ಲಿ ಮಾತ್ರವಲ್ಲದೆ ಜಗತ್ತಿನಾದ್ಯಂತ ಅವರ ಸಾಧನೆಯಿಂದಲೇ ಹೆಸರು ಮಾಡಿದ್ದಾರೆ. ಅನೇಕ ಉದ್ಯಮಿಗಳಿಗೆ ರತನ್‌ ಟಾಟಾ ಅವರ ವ್ಯಕ್ತಿತ್ವ ಮತ್ತು ಸಾಧನೆ ಸ್ಫೂರ್ತಿಯಾಗಿದೆ. ವಿಶ್ವದ ಅತ್ಯಂತ ಶ್ರೀಮಂತ ವ್ಯಕ್ತಿ ಎಂಬ ಹೆಗ್ಗಳಿಕೆ ಪಾತ್ರರಾಗಿರುವ ಟೆಸ್ಲಾ, ಟ್ವಿಟರ್ ಮತ್ತು ಸ್ಪೇಸ್‌ ಎಕ್ಸ್‌ ಸಿಇಒ ಎಲಾನ್‌ ಮಸ್ಕ್‌ (Elon Musk) ಕೂಡ ರತನ್‌ ಟಾಟಾ ಅವರ ಮೇಲೆ ವಿಶೇಷ ಗೌರವ, ಮೆಚ್ಚುಗೆ ಭಾವ ವ್ಯಕ್ತಪಡಿಸಿದ್ದಾರೆ.‌ ಎಲಾನ್‌ ಮಸ್ಕ್‌ ರತನ್‌ ಟಾಟಾ ಅವರನ್ನು ಸಜ್ಜನ ಮತ್ತು ವಿದ್ವಾಂಸ ಎಂದು ಅವರ ವ್ಯಕ್ತಿತ್ವ ಮತ್ತು ಚಾಣಾಕ್ಷತನವನ್ನು ಹೊಗಳಿದ್ದಾರೆ.


"ರತನ್‌ ಟಾಟಾ ಅವರು ಸಜ್ಜನ ಮತ್ತು ವಿದ್ವಾಂಸ"
ಹಳೆಯ ಸಂದರ್ಶನವೊಂದರಲ್ಲಿ,  ಬಿಲಿಯನೇರ್ ಮಸ್ಕ್ ಟಾಟಾ ಮೋಟಾರ್ಸ್ ಮತ್ತು ಭಾರತದಲ್ಲಿ ಕಂಪನಿಯು ಏನು ಮಾಡುತ್ತಿದೆ ಎಂಬುದರ ಕುರಿತು ಅವರ ಅಭಿಪ್ರಾಯಗಳನ್ನು ಹಂಚಿಕೊಳ್ಳಲು ಕೇಳಿದಾಗ, ರತನ್ ಟಾಟಾ ಅವರನ್ನು "ಸಂಭಾವಿತ ಮತ್ತು ವಿದ್ವಾಂಸ" ಎಂದು ಪ್ರೀತಿಯಿಂದ ಹೊಗಳಿದ್ದಾರೆ.


2009 ರಲ್ಲಿ ನಡೆದ ಸಂದರ್ಶನ
ಮಸ್ಕ್, 2009 ರಲ್ಲಿ ನಡೆದ ಚಾರ್ಲಿ ರೋಸ್ ಅವರೊಂದಿಗಿನ ಸಂದರ್ಶನದಲ್ಲಿ, ಟಾಟಾ ಮತ್ತು ಭಾರತೀಯ ಮಾರುಕಟ್ಟೆಯಲ್ಲಿ ಕಡಿಮೆ ಬೆಲೆಯ ನ್ಯಾನೋ ಕಾರನ್ನು ಪರಿಚಯಿಸುವ ರತನ್‌ ಟಾಟಾ ಅವರ ಆಲೋಚನೆ ಕುರಿತು ಕೇಳಲಾಗಿತ್ತು.


ನ್ಯಾನೋ ಕಾರು ಕುರಿತು ಮಸ್ಕ್‌ ಏನು ಹೇಳಿದ್ದರು?
ಈ ಬಗ್ಗೆ ಪ್ರತಿಕ್ರಿಯಿಸಿದ ಮಸ್ಕ್‌ ಕೈಗೆಟುಕುವ ಕಾರುಗಳನ್ನು ಒದಗಿಸುವ ಟಾಟಾದ ಕಲ್ಪನೆಯನ್ನು ಮೆಚ್ಚಿಕೊಂಡರು ಆದರೆ ಅದರ ಭವಿಷ್ಯದ ಬಗ್ಗೆ ತನಗೆ ತನ್ನದೇ ಆದ ಅನುಮಾನಗಳಿವೆ ಎಂದು ಹೇಳಿದರು. "ಕೈಗೆಟುಕುವ ಕಾರುಗಳನ್ನು ಮಾರುಕಟ್ಟೆಯಲ್ಲಿ ಬಿಡುಗಡೆ ಮಾಡುವುದು ಉತ್ತಮ ಎಂದು ನಾನು ಭಾವಿಸುತ್ತೇನೆ. ಆದರೆ ಇಂತಹ ಕಾರುಗಳ ಸಮಸ್ಯೆ ಬಗ್ಗೆ ನಾನು ಹೇಳುವುದಿಲ್ಲ ಏಕೆಂದರೆ ಇದು ಬಹುಶಃ ರತನ್‌ ಟಾಟಾ ಅವರ ಉತ್ತಮ ಕಲ್ಪನೆಯಾಗಿದೆ. ರತನ್ ಟಾಟಾ ಅವರು ಒಬ್ಬ ಸಂಭಾವಿತ ವ್ಯಕ್ತಿ ಎಂದು ನಾನು ಭಾವಿಸುತ್ತೇನೆ. ಮತ್ತು ಅವರು ಈ ರೀತಿಯ ವ್ಯವಹಾರದಲ್ಲಿ ವಿದ್ವಾಂಸರು" ಎಂದು ಮಸ್ಕ್ ಮೆಚ್ಚುಗೆ ವ್ಯಕ್ತಪಡಿಸಿದರು.


ಇದನ್ನೂ ಓದಿ: 2023 ರಿಂದ ಹೊಸ ಅಪ್​ಡೇಟ್ಸ್​​ನೊಂದಿಗೆ ಬರಲಿದೆ ಆಂಡ್ರಾಯ್ಡ್​​ ಟಿವಿಗಳು! ಇಲ್ಲಿದೆ ಕಾರಣ.


ನ್ಯಾನೋ ಕುರಿತಾಗಿ ಎಲಾನ್‌ ಮಸ್ಕ್‌ ತಮ್ಮದೇ ಅಭಿಪ್ರಾಯಗಳನ್ನು ತಳೆದಿದ್ದರು. ಇಂಧನ ಬೆಲೆಗಳ ಹೆಚ್ಚಳದಿಂದಾಗಿ ಭವಿಷ್ಯದಲ್ಲಿ ಕಾರು ಸಮಸ್ಯೆಯಾಗಬಹುದು ಎಂದು ಹೇಳಿದರು. "ಆದರೆ ಭವಿಷ್ಯದಲ್ಲಿ ಗ್ಯಾಸೋಲಿನ್ ಬೆಲೆ ಏರಿದಾಗ ಇದು ಸವಾಲಾಗಲಿದೆ, ಕಾರನ್ನು ಖರೀದಿ ಮಾಡುವ ವೆಚ್ಚವು ಕಾರನ್ನು ಚಲಾಯಿಸುವ ವೆಚ್ಚಕ್ಕಿಂತ ಕಡಿಮೆ ಸಮಸ್ಯೆಯಾಗಿದೆ" ಎಂದು ಮಸ್ಕ್‌ ಆ ಸಂದರ್ಭದಲ್ಲಿ ಹೇಳಿದ್ದರು.


ಮಸ್ಕ್‌ ಕೂಡ ಹಲವಾರು ವಹಿವಾಟುಗಳನ್ನು ನಿಭಾಯಿಸುತ್ತಿದ್ದು, ವಿಶ್ವದ ನುರಿತ ಉದ್ಯಮಿಯಾಗಿದ್ದಾರೆ. ಟಾಟಾ ನ್ಯಾನೋ ಭವಿಷ್ಯದ ಬಗ್ಗೆ ಅವರು ತಮ್ಮದೇ ಅಭಿಪ್ರಾಯ ಹೊಂದಿದ್ದರು. ನ್ಯಾನೋ ಕಾರು ಪ್ರಸ್ತುತ ಸ್ಥಗಿತಗೊಂಡಿದ್ದು, . ಬೇಡಿಕೆಯ ಕುಸಿತದ ಕಾರಣ 2019 ರಲ್ಲಿ ಉತ್ಪಾದನೆ ನಿಲ್ಲಿಸಲಾಯಿತು.


ನ್ಯಾನೋ ಕಾರು ತಯಾರಾಗಿದ್ದರ ಬಗ್ಗೆ ರತನ್‌ ಟಾಟಾ ಬಿಚ್ಚಿಟ್ಟ ರಹಸ್ಯ
ಈ ವರ್ಷದ ಆರಂಭದಲ್ಲಿ, ರತನ್ ಟಾಟಾ ಅವರು ನ್ಯಾನೋ ತಯಾರಿಸಲು ತಮಗಾದ ಪ್ರೇರಣೆಯನ್ನು ಹಂಚಿಕೊಂಡಿದ್ದರು. ಭಾರತೀಯ ಕುಟುಂಬಗಳಿಗೆ ರಸ್ತೆ ಪ್ರಯಾಣವನ್ನು ಸುರಕ್ಷಿತವಾಗಿಸಬೇಕೆಂಬ ಬಯಕೆಯನ್ನು ರತನ್ ಟಾಟಾ ಹೊಂದಿದ್ದರು. ಈ ಬಯಕೆಯೇ ಟಾಟಾ ನ್ಯಾನೋವನ್ನು ರಚಿಸಲು ರತನ್ ಟಾಟಾ ಅವರನ್ನು ಪ್ರೇರೇಪಿಸಿತು ಎಂದು ಸ್ವತಃ ರತನ್ ಟಾಟಾ ಅವರೇ ಬರೆದುಕೊಂಡಿದ್ದಾರೆ. ಭಾರತೀಯ ಕುಟುಂಬಗಳಿಗೆ ರಸ್ತೆ ಪ್ರಯಾಣವನ್ನು ಸುರಕ್ಷಿತವಾಗಿಸಬೇಕೆಂಬ ಅಂಶ ನನ್ನನ್ನು ನಿಜವಾಗಿಯೂ ನ್ಯಾನೋ ಕಾರಿನ ವಿನ್ಯಾಸ ಮಾಡಲು ಪ್ರೇರೇಪಿಸಿತು ಎಂದು ತಿಳಿಸಿದ್ದಾರೆ.


“ಹತ್ತಾರು ಭಾರತೀಯ ಕುಟುಂಬವು ಸ್ಕೂಟರ್‌ಗಳಲ್ಲು ಹೋಗುವುದನ್ನು ನಾನು ನೋಡಿದ್ದೇನೆ.ಒಂದು ಗಾಡಿಯಲ್ಲಿ ತಂದೆ, ತಾಯಿ, ಮಗು ಎಲ್ಲವೂ ಸಹ ಪ್ರಯಾಣಿಸುತ್ತಾರೆ. ಬಹುಶಃ ಮಗು ತಾಯಿ ಮತ್ತು ತಂದೆಯ ನಡುವೆ ಸ್ಯಾಂಡ್ವಿಚ್ ಥರಹ ನಜ್ಜುಗುಜ್ಜು ಆಗಿರಬಹುದಾದ ಸಂದರ್ಭವೂ ನ್ಯಾನೋ ಕಾರನ್ನು ರೂಪಿಸಲು ಪ್ರೇರೇಪಣೆ ನೀಡಿರಬೇಕು" ಎಂದು ಹೇಳಿದ್ದಾರೆ.


ಇದನ್ನೂ ಓದಿ: ಟ್ವಿಟರ್‌ಗೆ ಬಣ್ಣ ಬಳಿಯೋಕೆ ಮುಂದಾದ ಎಲಾನ್ ಮಸ್ಕ್! ಬ್ಲೂ ಒಂದೇ ಅಲ್ಲ, ಕಲರ್ ಕಲರ್‌ನಲ್ಲೂ ಬರುತ್ತಂತೆ ಟಿಕ್!


ಇದುವರೆಗಿನ ಇತಿಹಾಸದಲ್ಲಿಯೇ ಭಾರತದ ಅತ್ಯಂತ ಅಗ್ಗದ ಕಾರು ಎಂಬ ಬಿರುದಿಗೆ ಪಾತ್ರವಾಗಿರುವ ಟಾಟಾ ನ್ಯಾನೋ ಭಾರತದ ಆಟೋಮೊಬೈಲ್ ಉದ್ಯಮದ ಇತಿಹಾಸದಲ್ಲಿ ಈ ಕಾರು ವಿಶೇಷವಾಗಿ ಉಳಿದಿದೆ. ಟಾಟಾ ಹೆಸರಿನಲ್ಲಿ ಅನೇಕ ಕಂಪನಿಗಳನ್ನು ದೊಡ್ಡದಾಗಿ ಬೆಳೆಸಿ ಸಮಾಜಕ್ಕೆ ಅಪಾರ ಕೊಡುಗೆ ನೀಡಿದವರು ರತನ್ ಟಾಟಾ. ಸಮಾಜ ಸೇವೆ, ಉದ್ಯಮ ನಡೆಸುತ್ತಾ ಇಂದಿನ ಯುವ ಜನತೆಗೆ ದೊಡ್ಡ ಸ್ಫೂರ್ತಿಯಾಗಿದ್ದಾರೆ.

Published by:Sandhya M
First published: