Rana George: ಕಿಂಗ್‌ಫಿಶರ್‌ ಟವರ್ಸ್‌ ಐಷಾರಾಮಿ ಅಪಾರ್ಟ್‌ಮೆಂಟ್‌ ಖರೀದಿಸಿದ ಕೆಜೆ ಜಾರ್ಜ್‌ ಪುತ್ರ; ಬೆಲೆ ಎಷ್ಟು ಗೊತ್ತಾ?

ಕಿಂಗ್‌ಫಿಶರ್‌ ಟವರ್ಸ್‌ನ 29ನೇ ಮಹಡಿಯಲ್ಲಿರುವ 8321 ಚದರ ಅಡಿ ಇರುವ ಅಪಾರ್ಟ್‌ಮೆಂಟ್‌ ಅನ್ನು ಪ್ರೆಸ್ಟೀಜ್ ಎಸ್ಟೇಟ್ಸ್ ಪ್ರಾಜೆಕ್ಟ್ ಲಿಮಿಟೆಡ್‌ನ ಜಂಟಿ ವ್ಯವಸ್ಥಾಪಕ ನಿರ್ದೇಶಕ ರೆಜ್ವಾನ್ ರಜಾಕ್ ಅವರು ಮಾರಾಟ ಮಾಡಿದ್ದಾರೆ. ಮೇ 16ರಂದೇ ಈ ದುಬಾರಿ ವಹಿವಾಟು ನಡೆದಿದ್ದು, ಜಪ್ಕಿ ವೇದಿಕೆಯ ಮೂಲಕ ಸಾರ್ವಜನಿಕವಾಗಿ ಲಭ್ಯವಿರುವ ಆಸ್ತಿ ನೋಂದಣಿ ಮಾಹಿತಿಯನ್ನು ನೋಡಬಹುದಾಗಿದೆ.

ಪ್ರಾತಿನಿಧಿಕ ಚಿತ್ರ

ಪ್ರಾತಿನಿಧಿಕ ಚಿತ್ರ

  • Share this:
ಬೆಂಗಳೂರು: ಮಾಜಿ ಗೃಹ ಸಚಿವ  (Ex Home Minister) ಹಾಗೂ ಕಾಂಗ್ರೆಸ್‌ ನಾಯಕ (Congress Leader) ಕೆಜೆ ಜಾರ್ಜ್‌ (KJ George) ಅವರ ಪುತ್ರ ರಾಣಾ ಜಾರ್ಜ್‌ (Rana George) ಅವರು ಬೆಂಗಳೂರಿನ ಕಿಂಗ್‌ಫಿಶರ್‌ ಟವರ್ಸ್‌ನಲ್ಲಿ (Kingfisher Towers) ಐಷಾರಾಮಿ ಅಪಾರ್ಟ್‌ಮೆಂಟ್‌ ಒಂದನ್ನು ಖರೀದಿಸಿದ್ದಾರೆ. ಅತ್ಯಂತ ದುಬಾರಿ ವಸತಿ ಯೋಜನೆ ಎನಿಸಿಕೊಂಡಿರುವ ಕಿಂಗ್‌ಫಿಷರ್‌ ಟವರ್ಸ್‌ನಲ್ಲಿ ಪ್ರತಿ ಚದರ ಅಡಿಗೆ 42,262 ರೂ. ಅಂತೆ. ಈ ಪ್ರಕಾರ 35.16 ಕೋಟಿ ರೂ. ನೀಡಿ ಅಪಾರ್ಟ್‌ಮೆಂಟ್‌  ತಮ್ಮದಾಗಿಸಿಕೊಂಡಿದ್ದಾರೆ. ಕಿಂಗ್‌ಫಿಶರ್‌ ಟವರ್ಸ್‌ನ 29ನೇ ಮಹಡಿಯಲ್ಲಿರುವ 8321 ಚದರ ಅಡಿ ಇರುವ ಅಪಾರ್ಟ್‌ಮೆಂಟ್‌ ಅನ್ನು ಪ್ರೆಸ್ಟೀಜ್ ಎಸ್ಟೇಟ್ಸ್ ಪ್ರಾಜೆಕ್ಟ್ ಲಿಮಿಟೆಡ್‌ನ ಜಂಟಿ ವ್ಯವಸ್ಥಾಪಕ ನಿರ್ದೇಶಕ ರೆಜ್ವಾನ್ ರಜಾಕ್ (Rezwan Razack) ಅವರು ಮಾರಾಟ ಮಾಡಿದ್ದಾರೆ.

ಮೇ 16ರಂದೇ ಈ ದುಬಾರಿ ವಹಿವಾಟು ನಡೆದಿದ್ದು, ಜಪ್ಕಿ ವೇದಿಕೆಯ ಮೂಲಕ ಸಾರ್ವಜನಿಕವಾಗಿ ಲಭ್ಯವಿರುವ ಆಸ್ತಿ ನೋಂದಣಿ ಮಾಹಿತಿಯನ್ನು ನೋಡಬಹುದಾಗಿದೆ.

ಕಿಂಗ್‌ಫಿಶರ್‌ ಟವರ್ಸ್‌ ವಿಶೇಷತೆ!
ಕಿಂಗ್‌ಫಿಶರ್‌ ಟವರ್ಸ್‌ ಅನ್ನು4.5 ಎಕರೆ ವಿಶಾಲವಾದ ಜಾಗದಲ್ಲಿ ನಿರ್ಮಿಸಲಾಗಿದ್ದು, ಈ ಹಿಂದೆ ಇದೇ ಜಾಗದಲ್ಲಿ ಮದ್ಯದ ದೊರೆ ವಿಜಯ್ ಮಲ್ಯ ಅವರ ಪೂರ್ವಜರ ಮನೆ ಇತ್ತು. ಅದನ್ನು ನೆಲಸಮ ಮಾಡಿ 34 ಅಂತಸ್ತಿನ ಗಗನಚುಂಬಿ ಕಟ್ಟಡವನ್ನು ನಿರ್ಮಿಸಲಾಗಿದೆ. ಮೂರು ಬ್ಲಾಕ್‌ಗಳಲ್ಲಿ ಸುಮಾರು 81 ಅಪಾರ್ಟ್‌ಮೆಂಟ್‌ಗಳನ್ನು ಈ ಕಟ್ಟಡ ಹೊಂದಿದೆ. ಹಾಗೂ 40,000 ಚದರ ಅಡಿಯಲ್ಲಿ ಅರಮನೆ ಶೈಲಿಯ ಪೆಂಟ್‌ ಹೌಸ್‌ ಅನ್ನು ವಿಜಯ್‌ ಮಲ್ಯಗಾಗಿ ನಿರ್ಮಿಸಲಾಗಿತ್ತು.

ಇದನ್ನೂ ಓದಿ:  Viral Story: ಗಿಚ್ಚಿ ಗಿಲಿಗಿಲಿ! ಇವ್ನೇನ್ ಗುರೂ, ಫೋಟೋಗ್ರಾಫರ್​ ಬರಲಿಲ್ಲ ಅಂತ ಮದ್ವೆನೇ ಬೇಡ್ವಂತೆ

ಇನ್ನು, ಐಷಾರಾಮಿ ರಿಟೇಲ್‌ ಮಾಲ್‌ ಮತ್ತು ಕಚೇರಿ ಸ್ಥಳವಾದ ಯುಬಿ ಸಿಟಿ ಕಟ್ಟಡದ ವಿಸ್ತರಣೆಯಾಗಿ ಕಿಂಗ್‌ಫಿಶರ್‌ ಟವರ್ಸ್‌ ಅನ್ನು ಅಭಿವೃದ್ಧಿಪಡಿಸಲಾಗಿದೆ. ಯುನೈಟೆಡ್ ಬ್ರೂವರೀಸ್ ಹೋಲ್ಡಿಂಗ್ಸ್ ಲಿಮಿಟೆಡ್ ಮತ್ತು ಪ್ರೆಸ್ಟೀಜ್ ಎಸ್ಟೇಟ್ಸ್ ಪ್ರಾಜೆಕ್ಟ್ಸ್ ಲಿಮಿಟೆಡ್‌ಗಳು ಜಂಟಿಯಾಗಿ ಯುಬಿ ಸಿಟಿಯನ್ನು ಅಭಿವೃದ್ಧಿಪಡಿಸಿದ್ದವು. ಅದರಂತೆ ದಶಕದ ಹಿಂದೆ ಎರಡು ಸಂಸ್ಥೆಗಳು ಜಂಟಿಯಾಗಿ ಕಿಂಗ್‌ಫಿಶರ್‌ ಟವರ್ಸ್‌ ಅನ್ನು ಕೂಡ ಅಭಿವದ್ಧಿಪಡಿಸಿವೆ.

35 ಕೋಟಿ ರೂ.ಗೆ ಮರು ಮಾರಾಟ
ಕಿಂಗ್‌ಫಿಶರ್‌ ಟವರ್ಸ್‌ನಲ್ಲಿ ಪ್ರೆಸ್ಟಿಜ್‌ ಸಂಸ್ಥೆ 42 ಅಪಾರ್ಟ್‌ಮೆಂಟ್‌ಗಳನ್ನು ಹೊಂದಿದ್ದರೆ, ಯುಬಿಎಚ್‌ಎಲ್‌ ಸಂಸ್ಥೆ 39 ಅಪಾರ್ಟ್‌ಮೆಂಟ್‌ಗಳನ್ನು ಹಾಗೂ ಪೆಂಟ್‌ಹೌಸ್‌ ಅನ್ನು ತನ್ನ ಶೇರ್‌ಗಳಲ್ಲಿ ಹೊಂದಿತ್ತು. 2018ರ ಜೂನ್‌ನಿಂದ ಗ್ರಾಹಕರಿಗೆ ಇಲ್ಲಿನ ಐಷಾರಾಮಿ ಅಪಾರ್ಟ್‌ಮೆಂಟ್‌ಗಳನ್ನು ಹಸ್ತಾಂತರಿಸಲಾಗಿತ್ತು. ಆಗ ಒಂದು ಅಪಾರ್ಟ್‌ಮೆಂಟ್‌ 26 ರಿಂದ 27 ಕೋಟಿ ರೂ.ಗೆ ಮಾರಾಟವಾಗಿದ್ದವು.

ರೆಜ್ವಾನ್‌ ರಜಾಕ್ ಅವರು ಈ ಬಗ್ಗೆ ಯಾವುದೇ ಪ್ರತಿಕ್ರಿಯೆಯನ್ನು ನೀಡಿದಲ್ಲ. ರಾಣಾ ಜಾರ್ಜ್‌ ಅವರನ್ನು ಕೂಡ ಸಂಪರ್ಕಿಸಲು ಸಾಧ್ಯವಾಗಿಲ್ಲ. ಕಿಂಗ್‌ಫಿಶರ್ ಟವರ್ಸ್‌ ಕಟ್ಟಡದಲ್ಲಿ 2018ರಲ್ಲಿ ರೆಜ್ವಾನ್‌ ರಜಾಕ್‌ 8,450 ಚದರ ಅಡಿ ವಿಸ್ತೀರ್ಣ ಹೊಂದಿರುವ ಎರಡು ಅಪಾರ್ಟ್‌ಮೆಂಟ್‌ಗಳನ್ನು ಖರೀದಿಸಿರುವುದು ವರದಿಯಾಗಿದೆ. ಆಗ 35 ಕೋಟಿ ರೂ.ಗೆ ಅಪಾರ್ಟ್‌ಮೆಂಟ್‌ ಖರೀದಿಸಿದ್ದ ರಜಾಕ್‌, ಈಗ ಅವುಗಳನ್ನು ಮತ್ತೆ 35 ಕೋಟಿ ರೂ.ಗೆ ಮರು ಮಾರಾಟ ಮಾಡಿದ್ದಾರೆ.

ಹಲವು ಕೋಟ್ಯಾಧಿಪತಿಗಳ ನಿವಾಸ!
ಭಾರತದ ಯುವ ಕೋಟ್ಯಾಧಿಪತಿಯಲ್ಲಿ ಒಬ್ಬರಾಗಿರುವ ಝೇರೋದಾ ಸಂಸ್ಥೆಯ ಸಹ ಸಂಸ್ಥಾಪಕ ನಿಖಿಲ್‌ ಕಾಮತ್‌ ಅವರ ನಿವಾಸವು ಇದೇ ಕಿಂಗ್‌ಫಿಶರ್‌ ಟವರ್ಸ್‌ನಲ್ಲಿದೆ. ಸುಮಾರು 7 ಸಾವಿರ ಚದರ ಅಡಿ ವಿಸ್ತೀರ್ಣದ ಕಾಮತ್‌ ರೆಸಿಡೆನ್ಸಿಯಲ್ಲಿ ನಿಖಿಲ್‌ ಕಾಮತ್‌ ವಾಸಿಸುತ್ತಿದ್ದು, ಹಲವು ಕೋಟ್ಯಾಧಿಪತಿಗಳು ಕಿಂಗ್‌ಫಿಶರ್‌ ಟವರ್ಸ್‌ನಲ್ಲಿ ಐಷಾರಾಮಿ ಅಪಾರ್ಟ್‌ಮೆಂಟ್‌ ಅನ್ನು ಹೊಂದಿದ್ದಾರೆ. ಬೆಂಗಳೂರಿನ ಅಶೋಕ ನಗರ ಸಮೀಪದ ಕಸ್ತೂರ್‌ಬಾ ರೋಡ್‌ನಲ್ಲಿ ಈ ಕಿಂಗ್‌ಫಿಶರ್‌ ಟವರ್ಸ್‌ ಇದೆ.

ಇದನ್ನೂ ಓದಿ:  Dance Video: ‘ಲತ್ ಲಗ್ ಗಯೀ’ ಹಿಟ್ ಹಾಡಿಗೆ ಗಗನಸಖಿ ಡ್ಯಾನ್ಸ್! ಸಿಕ್ಕಾಪಟ್ಟೆ ವೈರಲ್

ಕೋವಿಡ್ ಬಳಿಕ ಉನ್ನತ ಮಟ್ಟದ ಜೀವನಶೈಲಿ, ಸೌಕರ್ಯಗಳು ಮತ್ತು ಕ್ಯುರೇಟೆಡ್ ವಿನ್ಯಾಸಗಳೊಂದಿಗೆ ಐಷಾರಾಮಿ ಅಪಾರ್ಟ್‌ಮೆಂಟ್‌ಗಳಿಗೆ ಉತ್ತಮ ಬೇಡಿಕೆ ಇದೆ. ಐಷಾರಾಮಿ ಅಪಾರ್ಟ್‌ಮೆಂಟ್‌ಗಳ ಮಾರಾಟ ಹೆಚ್ಚುತ್ತಿದ್ದು, ಬೇಡಿಕೆಯು ದೃಢವಾಗಿ ಕಾಣುತ್ತಿದೆ ಎಂದು ಜಪ್ಕಿ ವೇದಿಕೆಯ ಸಹ ಸಂಸ್ಥಾಪಕ ಸಂದೀಪ್ ರೆಡ್ಡಿ ಹೇಳಿದ್ದಾರೆ.
Published by:Ashwini Prabhu
First published: