Success Stoty: ಮಾಡಿದ್ದು ಕೇವಲ 50 ಸಾವಿರ ಹೂಡಿಕೆ, ಆದರೆ ಇಂದು ಕೋಟಿಗಟ್ಟಲೆ ಉದ್ಯಮದ ಒಡೆಯ!

ರಾಮೇಶ್ವರ್ ರಾವ್​

ರಾಮೇಶ್ವರ್ ರಾವ್​

ಅನೇಕ ಕಷ್ಟಗಳ ನಡುವೆ ಓದಿ, ಉದ್ಯಮ ಪ್ರಾರಂಭಿಸಿ ಸಕ್ಸಸ್​ ಆದವರು ಎಷ್ಟೋ ಮಂದಿ ಇದ್ದಾರೆ. ಆ ಸಾಲಿನಲ್ಲಿ ರಾಮೇಶ್ವರ್ ರಾವ್​ ಅವರು ಸಹ ಒಬ್ಬರು. ಇವರು ಕೇವಲ 50 ಸಾವಿರ ಹೂಡಿಕೆ ಮಾಡಿ ಇಂದು ದೊಡ್ಡ ಉದ್ಯಮದ ಮಾಲೀಕರಾಗಿದ್ದಾರೆ.

  • Share this:

ಮೊದಲೆಲ್ಲಾ ಈಗಿದ್ದ ಯಾವುದೇ ಸೌಲಭ್ಯಗಳು (Fecility) ಅಷ್ಟಾಗಿ ಇರಲಿಲ್ಲ, ಒಂದು ಶಾಲೆಗೆ ಹೋಗಬೇಕಾದರೂ ಸಹ ನಡೆದುಕೊಂಡು ಹೋಗುವ ಅಥವಾ ಸ್ವಲ್ಪ ಹಣ ಇದ್ದವರು ಸೈಕಲ್, ರಿಕ್ಷಾಗಳಲ್ಲಿ ಹೋಗಬೇಕಿತ್ತು. ಶಾಲೆಗೆ (School) ಹೋಗೋದಕ್ಕೆ ತುಂಬಾನೇ ಸಮಯ ಮತ್ತು ಶ್ರಮ ತೆಗೆದುಕೊಳ್ಳುತ್ತಿದ್ದಂತಹ ಕಾಲ ಅದು. ಎಷ್ಟೋ ಜನರು ಇವತ್ತು ದೊಡ್ಡ ದೊಡ್ಡ ಸಾಧನೆ ಮಾಡಿರೋರು ಒಂದು ಹೊತ್ತಿನ ಊಟಕ್ಕೂ ಪರದಾಡಿದವರು ಮತ್ತು ಶಾಲೆಗೆ ಅಂತ ಎಷ್ಟೋ ಕಿಲೋ ಮೀಟರ್ ದೂರ ನಡೆದುಕೊಂಡು ಹೋದವರು.


ಜ್ಞಾನದ ಹಸಿವು ಮತ್ತು ಹೊಟ್ಟೆ ಹಸಿವು ಏನು ಅಂತ ತಿಳಿದುಕೊಂಡ ಜನರು ಜೀವನದಲ್ಲಿ ಯಶಸ್ಸು ಸಾಧಿಸುವುದು ತುಂಬಾನೇ ಜಾಸ್ತಿ. ಏಕೆಂದರೆ ಓದಬೇಕು, ಕಲಿಯಬೇಕು, ದೊಡ್ಡ ಉದ್ಯೋಗವನ್ನು ಸಂಪಾದಿಸಬೇಕು ಮತ್ತು ಕಡು ಬಡತನದಿಂದ ತನ್ನ ಕುಟುಂಬವನ್ನು ಹೊರಗೆ ತರಬೇಕು ಅನ್ನೋ ಹಂಬಲ ಇವರನ್ನು ಜೀವನದಲ್ಲಿ ಯಶಸ್ಸಿನ ಕಡೆಗೆ ಕರೆದೊಯ್ಯುತ್ತದೆ.


ಕಷ್ಟದಲ್ಲಿ ಬೆಳೆದು ಶ್ರೀಮಂತ ಉದ್ಯಮಿಯಾದ ರಾಮೇಶ್ವರ್ ರಾವ್


ಇಲ್ಲಿಯೂ ಸಹ ಹೀಗೆ ಒಬ್ಬ ವ್ಯಕ್ತಿ ಅನೇಕ ಕಷ್ಟಗಳ ಮಧ್ಯೆಯೇ ಬೆಳೆದು ಈಗ ದೊಡ್ಡ ಶ್ರೀಮಂತನಾಗಿದ್ದಾನೆ ನೋಡಿ. ರಾಮೇಶ್ವರ್ ರಾವ್ ಕೇವಲ 50 ಸಾವಿರ ಹಣದ ಹೂಡಿಕೆಯಿಂದ ತಮ್ಮ ಸ್ವಂತ ಉದ್ಯಮ ಶುರು ಮಾಡಿದವರು, ಇಂದು ಅದು 10,600 ಕೋಟಿ ರೂಪಾಯಿಗಳ ನಿವ್ವಳ ಮೌಲ್ಯವನ್ನು ಹೊಂದಿರುವಂತಹ ಉದ್ಯಮವಾಗಿ ಬೆಳೆದಿದೆ.


ಇದನ್ನೂ ಓದಿ: ಆ್ಯಪಲ್​ ಕಂಪನಿ ಸಿಇಒ ಟಿಮ್ ಕುಕ್ ತಿಂಗಳ ಸಂಬಳದಲ್ಲಿ ಒಂದು ಮನೆ ಖರೀದಿ ಮಾಡ್ಬೋದು!


ರಾಮೇಶ್ವರ ರಾವ್ ಅವರ ಜೀವನದ ಕಥೆಯು ಅನೇಕ ಜನರಿಗೆ ಸ್ಪೂರ್ತಿಯಾಗುವುದಂತೂ ಗ್ಯಾರೆಂಟಿ. ಮೈಲುಗಟ್ಟಲೆ ನಡೆದುಕೊಂಡು ಶಾಲೆಗೆ ಹೋಗಬೇಕಾಗಿ ಬಂದಿದ್ದರಿಂದ ಹಿಡಿದು, ಚಿಕ್ಕ ವಯಸ್ಸಿನಲ್ಲಿಯೇ ತಂದೆಯನ್ನು ಕಳೆದುಕೊಂಡು ಹೋಮಿಯೋಪತಿಯಾಗಿ ಸಾಧಾರಣ ಜೀವನವನ್ನು ಆರಿಸಿಕೊಂಡ ಹೈದರಾಬಾದ್ ಮೂಲದ ಕೈಗಾರಿಕೋದ್ಯಮಿ ಇಂದು ಬೃಹತ್ ವ್ಯಾಪಾರ ಸಾಮ್ರಾಜ್ಯದ ಚುಕ್ಕಾಣಿ ಹಿಡಿದಿದ್ದಾರೆ ಮತ್ತು 10,600 ಕೋಟಿ ರೂಪಾಯಿಗಿಂತ ಹೆಚ್ಚು ಎಂದರೆ 1.3 ಬಿಲಿಯನ್ ಡಾಲರ್ ನಿವ್ವಳ ಮೌಲ್ಯದ ಉದ್ಯಮವನ್ನು ಹೊಂದಿದ್ದಾರೆ.


ಮೂಲತಃ ರಾವ್ ಅವರು ಮೆಹಬೂಬ್ ನಗರ ಜಿಲ್ಲೆಯವರು


ಜೂಪಲ್ಲಿ ರಾಮೇಶ್ವರ ರಾವ್ ಅವರು ಈಗಿನ ತೆಲಂಗಾಣದ ಮೆಹಬೂಬ್ ನಗರ ಜಿಲ್ಲೆಯ ಹಳ್ಳಿಯಲ್ಲಿ ಸುಮಾರು 30 ಎಕರೆ ಭೂಮಿಯನ್ನು ಹೊಂದಿರುವ ರೈತ ಕುಟುಂಬದಲ್ಲಿ ಜನಿಸಿದರು. ಅವರು ಓದಲು ಶಾಲೆಗೆ ಹೋಗಲು ಅನೇಕ ಕಿಲೋ ಮೀಟರ್ ದೂರ ನಡೆದುಕೊಂಡು ಹೋಗುತ್ತಿದ್ದರು. 1974 ರಲ್ಲಿ, ಅವರು ಹೋಮಿಯೋಪತಿ ಅಧ್ಯಯನ ಮಾಡಲು ಮತ್ತು ಹೋಮಿಯೋಪತಿ ವೈದ್ಯರಾಗಿ ವೃತ್ತಿಜೀವನವನ್ನು ಶುರು ಮಾಡಲು ಹೈದರಾಬಾದ್ ಗೆ ಬಂದರು. ನಂತರ ಅವರು ತಮ್ಮ ಜೀವನದಲ್ಲಿ ಹಲವಾರು ಏಳು-ಬೀಳುಗಳನ್ನು ಎದುರಿಸಿದರು.


ರಾಮೇಶ್ವರ್ ರಾವ್​


ಮೊದಲನೆಯದು ಕಾಲೇಜಿನಲ್ಲಿದ್ದಾಗ, ಅವರು ವಿದ್ಯಾರ್ಥಿ ಸಂಘದ ನಾಯಕರಾದರು ಮತ್ತು ಅನೇಕ ರೀತಿಯ ಮುಷ್ಕರಗಳನ್ನು ಮುನ್ನಡೆಸಿದರು. ಅಲ್ಲಿ ರಾವ್ ಅವರು ತುಂಬಾನೇ ಪ್ರಾಮುಖ್ಯತೆ ಮತ್ತು ಅನೇಕ ಜನರ ಸಂಪರ್ಕಗಳನ್ನು ಪಡೆದರು. ಇದು ಹೈದರಾಬಾದ್ ನ ದಿಲ್ಸುಖ್ ನಗರ ಪ್ರದೇಶದಲ್ಲಿ ತಮ್ಮ ಹೋಮಿಯೋಪತಿ ಚಿಕಿತ್ಸಾಲಯವನ್ನು ಸ್ಥಾಪಿಸಲು ಸಹಾಯ ಮಾಡಿತು.


1980 ರಲ್ಲಿ ರಿಯಲ್ ಎಸ್ಟೇಟ್ ಜಗತ್ತಿಗೆ ಎಂಟ್ರಿ ಕೊಟ್ಟ ರಾವ್


ಅಷ್ಟಾಗಿ ಅಭಿವೃದ್ಧಿ ಹೊಂದದ ತಮ್ಮ ಕ್ಷೇತ್ರವನ್ನು ಸ್ವಲ್ಪ ಬದಿಗಿಟ್ಟು ರಾವ್ ಅವರು 1980 ರ ದಶಕದಲ್ಲಿ ರಿಯಲ್ ಎಸ್ಟೇಟ್ ಜಗತ್ತಿಗೆ ಪ್ರವೇಶಿಸಿದರು. ಆಗ ಕೇವಲ 50,000 ರೂಪಾಯಿಗಳ ಹೂಡಿಕೆಯಿಂದ ಶುರು ಮಾಡಿದ ಉದ್ಯಮ ರಾವ್ ಅವರ ಜೀವನದಲ್ಲಿ ದೊಡ್ಡ ಬದಲಾವಣೆಯನ್ನೇ ತಂದಿತು. ಅವರು ಅದನ್ನು ಸ್ನೇಹಿತನ ಸಲಹೆಯ ಮೇರೆಗೆ ಭೂಮಿಯಲ್ಲಿ ಹೂಡಿಕೆ ಮಾಡಿದರು ಮತ್ತು 3 ವರ್ಷಗಳ ನಂತರ ಅದನ್ನು ಮಾರಾಟ ಮಾಡಿದಾಗ ಪ್ರತಿಯಾಗಿ 1.5 ಲಕ್ಷ ರೂಪಾಯಿಗಳ ಲಾಭವನ್ನು ಸಹ ಪಡೆದರು. ನಂತರ ಅವರು ಹೋಮಿಯೋಪತಿಯನ್ನು ಬಿಟ್ಟು ಪೂರ್ಣ ಸಮಯದ ವ್ಯವಹಾರ ಜಗತ್ತಿಗೆ ಪ್ರವೇಶಿಸಿದರು.


ರಾವ್ ಅವರು 1981 ರಲ್ಲಿ ‘ಮೈ ಹೋಮ್ ಕನ್ಸ್ಟ್ರಕ್ಷನ್ಸ್’ ಎಂಬ ಕಂಪನಿಯನ್ನು ಸ್ಥಾಪಿಸಿದರು. ನಂತರದ ದಶಕಗಳಲ್ಲಿ, ಅವರು ದೇಶದ ಪ್ರಮುಖ ತೆಲುಗು ರಿಯಲ್ ಎಸ್ಟೇಟ್ ಉದ್ಯಮಿಗಳಲ್ಲಿ ಒಬ್ಬರಾದರು. ರಾವ್ ಅವರ ಕಂಪನಿಯು ಸೊಸೈಟಿಗಳು, ಅಪಾರ್ಟ್ಮೆಂಟ್ ಫ್ಲ್ಯಾಟ್ ಗಳು, ವಿಲ್ಲಾಗಳು ಮತ್ತು ಕಚೇರಿಗಳನ್ನು ನಿರ್ಮಿಸುತ್ತದೆ. ಅವರು ದಕ್ಷಿಣ ಭಾರತದ ಅತಿದೊಡ್ಡ ಸಿಮೆಂಟ್ ಉತ್ಪಾದಕರಲ್ಲಿ ಒಂದಾದ ಮಹಾ ಸಿಮೆಂಟ್ ಬ್ರ್ಯಾಂಡ್ ಅನ್ನು ಸಹ ಹೊಂದಿದ್ದಾರೆ. ಅವರ ಕಂಪನಿಯು 4,000 ಕೋಟಿ ರೂಪಾಯಿಗಿಂತ ಹೆಚ್ಚಿನ ವಹಿವಾಟು ಹೊಂದಿದೆ. ಅವರ ನಾಲ್ವರು ಪುತ್ರರು ಮತ್ತು ನಾಲ್ವರು ಸೊಸೆಯಂದಿರಲ್ಲಿ ಹೆಚ್ಚಿನವರು ರಾವ್ ಅವರ ಕಂಪನಿಯಲ್ಲಿ ವಿವಿಧ ಕಾರ್ಪೊರೇಟ್ ಕೆಲಸಗಳನ್ನು ನೋಡಿಕೊಳ್ಳುತ್ತಾರೆ.

First published: