ಷರಿಯಾ ಕಾನೂನು (Shariah Law) ಇಸ್ಲಾಮಿಕ್ ಸಂಪ್ರದಾಯದ ಒಂದು ಭಾಗವಾಗಿರುವ ಧಾರ್ಮಿಕ ಕಾನೂನು. ಇದು ಇಸ್ಲಾಂ ಧರ್ಮದ (Islam) ಧಾರ್ಮಿಕ ನಿಯಮಗಳಿಂದ, ನಿರ್ದಿಷ್ಟವಾಗಿ ಕುರಾನ್ ಮತ್ತು ಹದೀಸ್ನಿಂದ ಹುಟ್ಟಿಕೊಂಡಿದೆ. ಅರೇಬಿಕ್ ಭಾಷೆಯಲ್ಲಿ, ಷರಿಯಾ ಎಂಬ ಪದವು ದೇವರ ದೈವಿಕ ಕಾನೂನನ್ನು (Shariah Law) ಸೂಚಿಸುತ್ತದೆ. ಇಸ್ಲಾಂ ಈ ಕಾನೂನು ಹಣ ಹೂಡಿಕೆಗೆ ಸಂಬಂಧಿಸಿದಂತೆ ಕೆಲವು ಮಾನದಂಡಗಳನ್ನು ನಿಗದಿಪಡಿಸಿದೆ. ಜೊತೆಗೆ ಕೆಲವು ಸಲಹೆ ಸೂಚನೆಗಳನ್ನು ನೀಡಿದೆ. ಷರಿಯಾ ಕಾನೂನು ತನ್ನ ನಿಯಮಗಳ ಅನುಸಾರ ಹೂಡಿಕೆ ಮಾಡಲು ಕೆಲವು ಮ್ಯೂಚುವಲ್ ಪಂಡ್ಗಳನ್ನು (Shariah Compliant Mutual Funds) ಹೆಸರಿಸಿದೆ. ಭಾರತದಲ್ಲಿ ಲಭ್ಯವಿರುವ ಕೆಲವು ಷರಿಯಾ-ಕಂಪ್ಲೈಂಟ್ ಮ್ಯೂಚುಯಲ್ ಫಂಡ್ಗಳು (Mutual Funds To Invest) ಈ ಕೆಳಗಿನಂತಿವೆ.
ಟಾಟಾ ಎಥಿಕಲ್ ಫಂಡ್ ಪ್ರಸ್ತುತ ಈ ನಿಧಿಯು ತನ್ನ ಹೂಡಿಕೆಯ ಸುಮಾರು ಶೇಕಡಾ 57 ರಷ್ಟು ದೊಡ್ಡ ಕ್ಯಾಪ್ ಕಂಪನಿಗಳಲ್ಲಿ ಮತ್ತು 42% ಮಿಡ್ ಮತ್ತು ಸ್ಮಾಲ್-ಕ್ಯಾಪ್ ಕಂಪನಿಗಳಲ್ಲಿ ಹೊಂದಿದೆ. ಇದು 27 ಜನವರಿ 2021 ರಂತೆ ಹಿಂದಿನ 5 ವರ್ಷಗಳ ಅವಧಿಯಲ್ಲಿ 11.61% ನಷ್ಟು ಲಾಭವನ್ನು ನೀಡಿದೆ.
ಟಾರಸ್ ಎಥಿಕಲ್ ಫಂಡ್ ಪ್ರಸ್ತುತ ಈ ನಿಧಿಯು ಅದರ ಅರ್ಧದಷ್ಟು ಆಸ್ತಿಯನ್ನು ದೊಡ್ಡ ಕ್ಯಾಪ್ ಕಂಪನಿಗಳಲ್ಲಿ ಹೂಡಿಕೆ ಮಾಡಿದೆ ಮತ್ತು ಅದರ ಉಳಿದ ಸ್ವತ್ತುಗಳನ್ನು ಸ್ಮಾಲ್-ಕ್ಯಾಪ್ ಮತ್ತು ಮಿಡ್-ಕ್ಯಾಪ್ ಕಂಪನಿಗಳಲ್ಲಿ ಹೂಡಿಕೆ ಮಾಡಿದೆ. ಇದು 27 ಜನವರಿ 2021 ರಂತೆ ಹಿಂದಿನ 5 ವರ್ಷಗಳ ಅವಧಿಯಲ್ಲಿ 13.03% ನಷ್ಟು ಲಾಭವನ್ನು ನೀಡಿದೆ.
ನಿಪ್ಪಾನ್ ಇಂಡಿಯಾ ಇಟಿಎಫ್ ಷರಿಯಾ ಬೀಸ್ ಈ ಯೋಜನೆಯು ಸಿಎನ್ಎಕ್ಸ್ ನಿಫ್ಟಿ ಷರಿಯಾ ಸೂಚ್ಯಂಕದ ಘಟಕಗಳಾಗಿರುವ ಇಕ್ವಿಟಿ ಸೆಕ್ಯುರಿಟಿಗಳಲ್ಲಿ ಕನಿಷ್ಠ 90% ತನ್ನ ಸ್ವತ್ತುಗಳನ್ನು ಹೂಡಿಕೆ ಮಾಡುತ್ತದೆ. ಸೂಚ್ಯಂಕದಂತೆಯೇ ಸ್ವತ್ತುಗಳ ಹಂಚಿಕೆಯನ್ನು ಹೊಂದಿದೆ. ಇದು 27 ಜನವರಿ 2021 ರಂತೆ ಹಿಂದಿನ 5 ವರ್ಷಗಳ ಅವಧಿಯಲ್ಲಿ 15.76% ನಷ್ಟು ಲಾಭವನ್ನು ನೀಡಿದೆ.
ಈ ಎರಡೂ ನಿಧಿಗಳು ಷರಿಯಾ ಕಾನೂನಿನ ನಿರ್ಬಂಧಗಳನ್ನು ಅನುಸರಿಸಿ ಈಕ್ವಿಟಿಗಳಲ್ಲಿ ಹೂಡಿಕೆ ಮಾಡುತ್ತವೆ. ಇವುಗಳನ್ನು ಹೊರತುಪಡಿಸಿ ಚಿನ್ನದ ಮೇಲೆ ಹೂಡಿಕೆ ಮಾಡುವುದನ್ನು ಷರಿಯಾ-ಕಾಂಪ್ಲೈಂಟ್ ಎಂದು ಪರಿಗಣಿಸಲಾಗುತ್ತದೆ. ಆದರೆ ಹೆಚ್ಚಿನ ಚಿನ್ನದ ನಿಧಿಗಳು ತಮ್ಮ ಹಣದ ಕೆಲವು ಭಾಗವನ್ನು ಸ್ಥಿರ ಆದಾಯದ ಭದ್ರತೆಗಳಲ್ಲಿ ಹೂಡಿಕೆ ಮಾಡುವುದರಿಂದ ಇದು ನೈತಿಕವಾಗಿ ಒಂದು ಆಯ್ಕೆಯಾಗಿಲ್ಲ. ಆದರೂ ಗೋಲ್ಡ್ ಇಟಿಎಫ್ನಲ್ಲಿ ಹೂಡಿಕೆ ಮಾಡುವುದನ್ನು ಪರಿಗಣಿಸಬಹುದಾಗಿದೆ..
ಹಲಾಲ್ ಷರಿಯಾ-ಕಾಂಪ್ಲೈಂಟ್ ಮ್ಯೂಚುಯಲ್ ಫಂಡ್ಗಳಲ್ಲಿ ಯಾರು ಹೂಡಿಕೆ ಮಾಡಬಹುದು? ಷರಿಯಾ-ಕಂಪ್ಲೈಂಟ್ ಮ್ಯೂಚುಯಲ್ ಫಂಡ್ ಮಾಡಿದ ಹೂಡಿಕೆಗಳು ಷರಿಯಾ ಕಾನೂನಿನ ಪ್ರಕಾರವಾಗಿದ್ದರೂ ಸಹ ಯಾವುದೇ ವ್ಯಕ್ತಿ, ಎನ್ಆರ್ಐ, ಕಂಪನಿ ಅಥವಾ ಎಚ್ಯುಎಫ್ಗೆ ಈ ಫಂಡ್ಗಳಲ್ಲಿ ಹೂಡಿಕೆ ಮಾಡಲು ಅನುಮತಿ ಇದೆ.
ಷರಿಯಾ-ಕಂಪ್ಲೈಂಟ್ ಮ್ಯೂಚುವಲ್ ಫಂಡ್ಗಳಿಗೆ ಹೇಗೆ ತೆರಿಗೆ ವಿಧಿಸಲಾಗುತ್ತದೆ? ಈಗಿನಂತೆ ಷರಿಯಾ-ಕಂಪ್ಲೈಂಟ್ ಮ್ಯೂಚುವಲ್ ಫಂಡ್ಗಳಲ್ಲಿ ಹೂಡಿಕೆದಾರರಿಗೆ ಯಾವುದೇ ವಿಶೇಷ ತೆರಿಗೆ ಪ್ರಯೋಜನಗಳಿಲ್ಲ. ಮೇಲೆ ತಿಳಿಸಲಾದ ಎರಡೂ ನಿಧಿಗಳು ಇಕ್ವಿಟಿ ಆಧಾರಿತ ನಿಧಿಗಳಾಗಿರುವುದರಿಂದ, ಇಕ್ವಿಟಿ ಆಧಾರಿತ ನಿಧಿಗಳಿಗೆ ತೆರಿಗೆಯ ನಿಯಮಗಳ ಪ್ರಕಾರ ಅವುಗಳಿಗೂ ತೆರಿಗೆ ವಿಧಿಸಲಾಗುತ್ತದೆ.
1 ವರ್ಷಕ್ಕಿಂತ ಕಡಿಮೆ ಹಿಡುವಳಿಗಳ ಸಂದರ್ಭದಲ್ಲಿ ಸಂಚಿತ ಯಾವುದೇ ಲಾಭಗಳನ್ನು ಅಲ್ಪಾವಧಿಯ (STCG) ಎಂದು ಪರಿಗಣಿಸಲಾಗುತ್ತದೆ. ಅಂತಹ STCG ಗೆ 15% ದರದಲ್ಲಿ ತೆರಿಗೆ ವಿಧಿಸಲಾಗುತ್ತದೆ. 1 ವರ್ಷ ಅಥವಾ ಅದಕ್ಕಿಂತ ಹೆಚ್ಚಿನ ಹಿಡುವಳಿಗಳ ಸಂದರ್ಭದಲ್ಲಿ ಬಂಡವಾಳ ಲಾಭಗಳನ್ನು ದೀರ್ಘಾವಧಿಯೆಂದು ಪರಿಗಣಿಸಲಾಗುತ್ತದೆ.
ಆದ್ದರಿಂದ ದೀರ್ಘಾವಧಿಯ ಬಂಡವಾಳ ಲಾಭಗಳ (LTCG) ತೆರಿಗೆ ಅನ್ವಯಿಸುತ್ತದೆ. ಅಂತಹ ಲಾಭಗಳಿಗೆ ತೆರಿಗೆ ದರವು 10% ಆಗಿದೆ. ಆದರೂ ಪ್ರತಿ ಹಣಕಾಸು ವರ್ಷದಲ್ಲಿ ರೂ.1,00,000 ವರೆಗಿನ ಲಾಭವು ತೆರಿಗೆಯಿಂದ ಮುಕ್ತವಾಗಿರುತ್ತದೆ.
ಹೀಗಿದೆ ತೆರಿಗೆ ಚಿನ್ನದ ನಿಧಿಯ ಸಂದರ್ಭದಲ್ಲಿ, ಲಾಭಗಳ ಹಿಡುವಳಿ ಅವಧಿಯು ದೀರ್ಘಾವಧಿಯ ಡೀಮ್ ಮಾಡಲು 3 ವರ್ಷಗಳು. ಯೂನಿಟ್ಗಳನ್ನು ಖರೀದಿಸಿದ ದಿನಾಂಕದಿಂದ 3 ವರ್ಷಗಳ ಮೊದಲು ವಿಮೋಚನೆಯ ಸಂದರ್ಭದಲ್ಲಿ, ಲಾಭಗಳನ್ನು ಅಲ್ಪಾವಧಿ ಎಂದು ಪರಿಗಣಿಸಲಾಗುತ್ತದೆ.
ಗಳಿಸಿದ ಲಾಭಗಳನ್ನು ಒಬ್ಬರ ಆದಾಯಕ್ಕೆ ಸೇರಿಸಲಾಗುತ್ತದೆ. ಚಾಲ್ತಿಯಲ್ಲಿರುವ ತೆರಿಗೆ ದರದಲ್ಲಿ ತೆರಿಗೆ ವಿಧಿಸಲಾಗುತ್ತದೆ. ದೀರ್ಘಾವಧಿಯ ಹಿಡುವಳಿಗಳಿಗೆ, 20% ದರದಲ್ಲಿ ಲಾಭವನ್ನು ಇಂಡೆಕ್ಸೇಶನ್ ಪ್ರಯೋಜನದೊಂದಿಗೆ ತೆರಿಗೆ ವಿಧಿಸಲಾಗುತ್ತದೆ.
ಷರಿಯಾ-ಕಂಪ್ಲೈಂಟ್ ಮ್ಯೂಚುವಲ್ ಫಂಡ್ನಲ್ಲಿ ಕನಿಷ್ಠ ಹೂಡಿಕೆ ಎಷ್ಟು?
ಒಂದು ದೊಡ್ಡ ಹೂಡಿಕೆಯ ಸಂದರ್ಭದಲ್ಲಿ ಕನಿಷ್ಠ ಹೂಡಿಕೆಯು ರೂ. 500. ಆದರೂ SIP ಗಳ ಸಂದರ್ಭದಲ್ಲಿ ಕೇವಲ 100 ರೂ. ಹೂಡಿಕೆಯೊಂದಿಗೆ ಪ್ರಾರಂಭಿಸಬಹುದು. ಆದರೆ ನಿಯತಕಾಲಿಕವಾಗಿ ಪಾವತಿಸಬೇಕಾಗುತ್ತದೆ.
ಗಮನಿಸಿ: ಈ ಮ್ಯೂಚುವಲ್ ಫಂಡ್ಗಳು ಷರಿಯಾ ಕಾನೂನಿನಿಂದ ಸೂಚಿಸಲ್ಪಟ್ಟಿದ್ದರೂ ಹೂಡಿಕೆ ಮಾಡುವಾಗ ಸ್ವಯಂ ಸಂಶೋಧನೆ ನಡೆಸಲೇಬೇಕು. ನಿಮ್ಮ ಹಣಕ್ಕೆ ನೀವೇ ಜವಾಬ್ದಾರರಾಗಿ ಇರುತ್ತೀರಿ ಎಂಬುದನ್ನು ನೆನಪಿಡಿ.
Published by:guruganesh bhat
First published:
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ