Rakesh Jhunjhunwala Stocks: ರಾಕೇಶ್ ಜುಂಜುನ್‌ವಾಲಾ ಪೋರ್ಟ್‌ಫೋಲಿಯೋ ಮೌಲ್ಯ 31,396.7 ಕೋಟಿಗೆ ಏರಿಕೆ!

ಮೌಲ್ಯದಲ್ಲಿ ಅವರ ಪೋರ್ಟ್‌ಫೋಲಿಯೋ ಒಂದು ವರ್ಷದಲ್ಲಿ 14,500 ಕೋಟಿ ರೂ.ಗಳಷ್ಟು ಹೆಚ್ಚಾಗಿದೆ ಎಂದು ಮೂಲಗಳು ತಿಳಿಸಿವೆ.

ರಾಕೇಶ್ ಜುಂಜುನ್‌ವಾಲಾ

ರಾಕೇಶ್ ಜುಂಜುನ್‌ವಾಲಾ

  • Share this:
ರಾಕೇಶ್ ಜುಂಜುನ್‌ವಾಲಾ! ಈ ಹೆಸರು ಭಾರತೀಯ ಮಾರುಕಟ್ಟೆಗಳಿಗೆ ಹೊಸದೇನಲ್ಲ. ಈಕ್ವಿಟಿಗಳೊಂದಿಗೆ ಅತ್ಯಂತ ಯಶಸ್ವಿಯಾಗಿ ಸಾಗುತ್ತಿರುವ ಷೇರು ಮಾರುಕಟ್ಟೆಯ ದೈತ್ಯ, ಹಿರಿಯ ಹೂಡಿಕೆದಾರ ರಾಕೇಶ್ ಜುಂಜುನ್‌ವಾಲಾ ಅವರ ಉದ್ಯಮದಲ್ಲಿ ತಮ್ಮ ಯಶಸ್ವಿ ಪ್ರಯಾಣವನ್ನು (Ace investors’ portfolio) ಹಣಕಾಸು ವರ್ಷ 2022ರಲ್ಲೂ ಮುಂದುವರೆಸಿದ್ದಾರೆ. ಹಣದುಬ್ಬರ, ಬೆಲೆ ಏರಿಕೆ, ಯುದ್ಧ, ರಾಜಕೀಯ ಸನ್ನಿವೇಶದಂತ ಪರಿಸ್ಥಿತಿಯಲ್ಲೂ ಜುಂಜುನ್‌ವಾಲಾ ಅವರ ಪೋರ್ಟ್‌ಫೋಲಿಯೋ (Rakesh Jhunjhunwala Stocks) ದೃಢವಾದ ಏರಿಕೆಯನ್ನು ಗಳಿಸಿದೆ. ರಾಕೇಶ್ ಜುಂಜುನ್‌ವಾಲಾ ಅವರು ತಮ್ಮ ಪತ್ನಿ ರೇಖಾ ಜುಂಜುನ್‌ವಾಲಾ ಮತ್ತು ಸಹವರ್ತಿಗಳೊಂದಿಗೆ ಹಲವು ಪೋರ್ಟ್‌ಫೋಲಿಯೋದಲ್ಲಿ 34 ಷೇರುಗಳನ್ನು ಹೊಂದಿದ್ದಾರೆ.

ಕಾರ್ಪೊರೇಟ್ ಷೇರುದಾರರ ಮಾದರಿಯ ಪ್ರಕಾರ ಬಿಲಿಯನೇರ್ ಹೂಡಿಕೆದಾರ ರಾಕೇಶ್ ಜುಂಜುನ್‌ವಾಲಾ ಅವರ ಪೋರ್ಟ್‌ಫೋಲಿಯೋ ಮಾರ್ಚ್ 2022 ತ್ರೈಮಾಸಿಕದ ಉದ್ದಕ್ಕೂ ವರ್ಷದಿಂದ ವರ್ಷಕ್ಕೆ (YoY) 87% ರಷ್ಟು ಏರಿಕೆಯಾಗಿ 31,396.7 ಕೋಟಿ ರೂ.ಗೆ ಏರಿಕೆ ಕಂಡಿದೆ ಎಂದು ವರದಿ ಮಾಡಿದೆ.

ಒಂದು ವರ್ಷದಲ್ಲಿ 14,500 ಕೋಟಿ ಹೆಚ್ಚಳ
ಒಂದು ವರ್ಷದ ಹಿಂದೆ ಇದೇ ಅವಧಿಯಲ್ಲಿ ಇವರು 16,727.2 ಕೋಟಿ ರೂ.ಗಿಂತ ಹೆಚ್ಚಿನ ನಿವ್ವಳ ಮೌಲ್ಯದೊಂದಿಗೆ ಸುಮಾರು 37 ಷೇರುಗಳನ್ನು ಹೊಂದಿದ್ದರು ಎಂದು ಸ್ಟಾಕ್ ವಿಶ್ಲೇಷಣೆ ವೆಬ್‌ಸೈಟ್ trendlyne.com ವರದಿ ಮಾಡಿತ್ತು. ಮೌಲ್ಯದಲ್ಲಿ ಅವರ ಪೋರ್ಟ್‌ಫೋಲಿಯೋ ಒಂದು ವರ್ಷದಲ್ಲಿ 14,500 ಕೋಟಿ ರೂ.ಗಳಷ್ಟು ಹೆಚ್ಚಾಗಿದೆ ಎಂದು ಮೂಲಗಳು ತಿಳಿಸಿವೆ.

ಯಾವ ಕಂಪನಿಗಳಲ್ಲಿ  ಪಾಲಿದೆ?
ಸ್ಟಾರ್ ಹೆಲ್ತ್ ಮತ್ತು ಅಲೈಡ್ ಇನ್ಶೂರೆನ್ಸ್ ಹಾಗೂ ಮೆಟ್ರೋ ಬ್ರ್ಯಾಂಡ್ಸ್‌ ಲಿಮಿಟೆಡ್‌ನ ಲಿಸ್ಟಿಂಗ್ ನಡುವೆ ಅವರ ಪೋರ್ಟ್‌ಫೋಲಿಯೋದ ಮೌಲ್ಯವು ಪ್ರಮುಖವಾಗಿ ಅಧಿಕವಾಗಿದೆ. ಜುಂಜುನ್‌ವಾಲಾ ಕ್ರಮವಾಗಿ 17.5 ಮತ್ತು 14.4 ಪ್ರತಿಶತ ಹಿಡುವಳಿಯೊಂದಿಗೆ ಈ ಕಂಪನಿಗಳಲ್ಲಿ ಅಲ್ಪಸಂಖ್ಯಾತ ಷೇರುದಾರರಲ್ಲಿ ಒಬ್ಬರಾಗಿದ್ದಾರೆ.

ಹೆಚ್ಚುವರಿ ಷೇರು ಖರೀದಿ ಎಲ್ಲೆಲ್ಲಿ?
ಮಾರ್ಚ್ 2022 ತ್ರೈಮಾಸಿಕದಲ್ಲಿ, ಭಾರತೀಯ ಷೇರು ಮಾರುಕಟ್ಟೆಗಳ ಬಿಗ್ ಬುಲ್ ಎಂದೂ ಕರೆಯಲ್ಪಡುವ ರಾಕೇಶ್ ಜುಂಜುನ್‌ವಾಲಾ ಅವರು ಜುಬಿಲಂಟ್ ಫಾರ್ಮೋವಾ, ಕೆನರಾ ಬ್ಯಾಂಕ್ ಮತ್ತು ಇಂಡಿಯಾಬುಲ್ಸ್ ಹೌಸಿಂಗ್ ಫೈನಾನ್ಸ್ ಲಿಮಿಟೆಡ್‌ನಲ್ಲಿ ಹೆಚ್ಚುವರಿ ಷೇರುಗಳನ್ನು ಸೇರಿಸಿದ್ದಾರೆ. ಆದರೆ ಅವರು ಮುಖ್ಯವಾಗಿ ಆಪ್ಟೆಕ್, ವೊಕ್‌ಹಾರ್ಟ್ ಷೇರುಗಳನ್ನು ಕಡಿತ ಮಾಡಿದ್ದಾರೆ ಎನ್ನಲಾಗಿದೆ.

ಡಿಸೆಂಬರ್ 2021ರ ತ್ರೈಮಾಸಿಕದಲ್ಲಿ, ಸ್ಟಾರ್ ಹೆಲ್ತ್ ಮತ್ತು ಮೆಟ್ರೋ ಬ್ರ್ಯಾಂಡ್‌ಗಳು ತ್ರೈಮಾಸಿಕದಲ್ಲಿ ಸೇರ್ಪಡೆಯಾದ ಎರಡು ಅಗ್ರ ಷೇರುಗಳಾಗಿವೆ. ಹೂಡಿಕೆದಾರರು ಸೆಪ್ಟೆಂಬರ್ 2021 ತ್ರೈಮಾಸಿಕದಲ್ಲಿ ಸರ್ಕಾರಿ ಸ್ವಾಮ್ಯದ ಕಂಪನಿಗಳಾದ ನ್ಯಾಷನಲ್ ಅಲ್ಯೂಮಿನಿಯಂ ಕಂಪನಿ ಮತ್ತು ಕೆನರಾ ಬ್ಯಾಂಕ್ ಅನ್ನು ಸಹ ಸೇರಿಸಿದ್ದಾರೆ.

ಇದನ್ನೂ ಓದಿ: Driving License New Rules 2022: ಹೊಸ ರೂಲ್ಸ್ ಪ್ರಕಾರ ಜುಲೈ 1ರಿಂದ ಡ್ರೈವಿಂಗ್ ಲೈಸೆನ್ಸ್ ಪಡೆಯೋದು ಹೇಗೆ?

ಜೂನ್ 2021 ತ್ರೈಮಾಸಿಕದಲ್ಲಿ ಹೂಡಿಕೆದಾರ ರಾಕೇಶ್ ಜುಂಜುನ್‌ವಾಲಾ ಸ್ಟೀಲ್ ಅಥಾರಿಟಿ ಆಫ್ ಇಂಡಿಯಾ ಲಿಮಿಟೆಡ್ (SAIL) ಷೇರುಗಳಲ್ಲಿ 1.4 ಪ್ರತಿಶತದಷ್ಟು ಪಾಲನ್ನು ಆಯ್ಕೆ ಮಾಡಿದರೆ, ಅವರು ಸೆಪ್ಟೆಂಬರ್ 2021 ರ ತ್ರೈಮಾಸಿಕದಲ್ಲಿ 0.4 ಶೇಕಡಾ ಪಾಲನ್ನು ಸೇರಿಸುವ ಮೂಲಕ ಹೆಚ್ಚುವರಿ ಷೇರುಗಳನ್ನು ಆಯ್ಕೆ ಮಾಡಿದರು. ಆದರೂ, ಡಿಸೆಂಬರ್‌ನಲ್ಲಿ ಅದನ್ನು ಕಡಿತ ಮಾಡಲಾಗಿದೆ ಮತ್ತು ಈಗ ಅದು ಮಾರ್ಚ್‌ನಲ್ಲಿ ಶೇಕಡಾ 1 ಕ್ಕಿಂತ ಕಡಿಮೆಯಾಗಿದೆ.

ಎರಡು ಟಾಟಾ ಗ್ರೂಪ್ ಸ್ಟಾಕ್​ಗಳು
ಸ್ಟಾರ್ ಹೆಲ್ತ್ ಮತ್ತು ಮೆಟ್ರೋ ಬ್ರ್ಯಾಂಡ್‌ಗಳ ಜೊತೆಗೆ, ರಾಕೇಶ್ ಜುಂಜುನ್‌ವಾಲಾ ಟೈಟಾನ್ ಕಂಪನಿ ಮತ್ತು ಟಾಟಾ ಮೋಟಾರ್ಸ್ ಎಂಬ ಎರಡು ಟಾಟಾ ಗ್ರೂಪ್ ಸ್ಟಾಕ್‌ಗಳನ್ನು ಹೊಂದಿದ್ದಾರೆ. ಇವು ಮೌಲ್ಯದ ದೃಷ್ಟಿಯಿಂದ ಗರಿಷ್ಠ ತೂಕವನ್ನು ಹೊಂದಿದೆ. ರಾಕೇಶ್ ಜುಂಜುನ್‌ವಾಲಾ 3,57,10,395 ಟೈಟನ್ ಕಂಪೆನಿ ಷೇರುಗಳನ್ನು ಹೊಂದಿದ್ದರೆ, ಅದು ಕಂಪೆನಿಯ ಒಟ್ಟಾರೆ ವಿತರಣೆಯಾದ ಪೇಯ್ಡ್ ಅಪ್ ಷೇರು ಬಂಡವಾಳದ ಶೇ 4.02ರಷ್ಟಾಗುತ್ತದೆ.

ಇದನ್ನೂ ಓದಿ: SBI Viral Message: ನಿಮ್ಮ ಅಕೌಂಟ್ ಬ್ಲಾಕ್ ಆಗುತ್ತಾ? ವೈರಲ್ ಮೆಸೇಜ್​ನಲ್ಲಿರೋದು ಏನು?

ಕ್ರಿಸಿಲ್ ಲಿಮಿಟೆಡ್, ಫೋರ್ಟಿಸ್ ಹೆಲ್ತ್ ಕೇರ್, ಇಂಡಿಯನ್ ಹೋಟೆಲ್ಸ್, ಫೆಡರಲ್ ಬ್ಯಾಂಕ್, ಡೆಲ್ಟಾ ಕಾರ್ಪ್, ಎನ್‌ಸಿಸಿ ರಾಕೇಶ್ ಜುಂಜುನ್‌ವಾಲಾ ಅವರ ಪೋರ್ಟ್‌ಫೋಲಿಯೋದಲ್ಲಿನ ಟಾಪ್ 10 ಸ್ಟಾಕ್‌ಗಳಲ್ಲಿ 500 ಕೋಟಿ ರೂ. ಮೌಲ್ಯದ ಹೂಡಿಕೆ ಮಾಡಿದ್ದಾರೆ.
Published by:guruganesh bhat
First published: