ಕೊರೋನಾ (Corona) ಬಂದಾಗಿನಿಂದಲೂ ಯಾವ ಬ್ಯುಸಿನೆಸ್ (Business) ಗಳು ಕೂಡ ಹೆಚ್ಚಾಗಿ ಲಾಭ (Profit) ಕಂಡಿಲ್ಲ. ಸೋತು ಸುಣ್ಣವಾಗಿ ಅದೆಷ್ಟೋ ಬ್ಯುಸಿನೆಸ್ ಮಾಡುತ್ತಿದ್ದವರು ಮನೆ ಸೇರಿಕೊಂಡಿದ್ದಾರೆ. ಕೆಲವರು ಹೊಸ ಹೊಸ ವ್ಯಾಪಾರ ತೆರೆದು ಕೈ ಸುಟ್ಟುಕೊಂಡಿದ್ದಾರೆ. ಯಾವ ರೀತಿಯ ಬ್ಯುಸಿನೆಸ್ ಮಾಡಿದರೆ ಒಳಿತು ಎಂಬುದನ್ನು ತಿಳಿಯದೇ ಹಲವರು ಅಖಾಡಕ್ಕೆ ಇಳಿಯುತ್ತಿದ್ದಾರೆ. ಇದರಿಂದ ಸಕ್ಸಸ್ ರೇಟ್ (Success Rate) ಗಿಂತ ಫೇಲ್ಯೂರ್ ರೇಟ್ (Failure Rate) ಹೆಚ್ಚಿದೆ. ಆದರೆ, ಇಲ್ಲೊಬ ವೈದ್ಯರು (Doctor) ಮಾತ್ರ ಓದಿದ್ದು ವೈದ್ಯಕೀಯ ಆದರೂ, ಅದನೆಲ್ಲ ಬಿಟ್ಟು ಸ್ವಂತ ಬ್ಯುಸಿನೆಸ್ (Own Business) ಶುರು ಮಾಡಬೇಕು ಅಂತ ಛಲ ತೊಟ್ಟು ಸಾಧಿಸಿದ್ದಾರೆ. ಅದು ರಾಜಸ್ಥಾನ (Rajasthan) . ಮರುಭೂಮಿ ಪ್ರದೇಶವು ಹೆಚ್ಚು. ನೀರಾವರಿ ಇರಲಿ ಕುಡಿಯುವ ನೀರಿ (Drinking Water) ಗೂ ಅಲ್ಲಿ ಹಾಹಾಕಾರ.
ರಾಜಸ್ಥಾನದಲ್ಲಿ ಕಮಾಲ್ ಮಾಡುತ್ತಿರುವ ವೈದ್ಯ!
ನೀರಿನ ರಭಸಕ್ಕೆ ಅಲ್ಲಿನ ಜಮೀನುಗಳಲ್ಲಿ ಸಾಗುವಳಿ ಕಷ್ಟವಾಗಿದೆ. ಎಲ್ಲ ಜಮೀನುಗಳು ಬೀಲ್ಗಳಾಗಿ ಮಾರ್ಪಟ್ಟವು. ಅಂತಹ ಸ್ಥಳದಲ್ಲಿ ವೈದ್ಯರೊಬ್ಬರು ಅದ್ಭುತಗಳನ್ನು ಮಾಡುತ್ತಿದ್ದಾರೆ. ಸ್ವತಃ ರೈತರೇ ಆಗಿರುವ ವೈದ್ಯರೇ ವೀಳ್ಯದೆಲೆ ಕೊಯ್ಲು ಮಾಡುತ್ತಿದ್ದಾರೆ. ಪಾಳು ಬಿದ್ದಿರುವ ಭೂಮಿಯಲ್ಲಿ ಸೋಲಾರ್ ಪವರ್ ಪ್ಲಾಂಟ್ ಸ್ಥಾಪಿಸಿ ಪ್ರತಿ ತಿಂಗಳು ಲಕ್ಷಗಟ್ಟಲೆ ಆದಾಯ ಗಳಿಸುತ್ತಿದ್ದಾರೆ. ಈತ ಎಷ್ಟು ಭೂಮಿಯಲ್ಲಿ ಸೌರ ಸ್ಥಾವರನ್ನು ಸ್ಥಾಪಿಸಿದ್ದಾರೆ? ಇದಕ್ಕೆ ಎಷ್ಟು ಹಣ ವ್ಯಯಿಸಿದ್ದಾರೆ? ಎಷ್ಟು ವಿದ್ಯುತ್ ಉತ್ಪಾದಿಸಲಾಗುತ್ತದೆ? ಅದನ್ನು ಯಾರಿಗೆ ಮಾರುತ್ತಿದ್ದಾರೆ? ತಿಂಗಳಿಗೆ ಎಷ್ಟು ಸಂಪಾದಿಸುತ್ತೀರಿ? ಎಲ್ಲದ್ದಕ್ಕೂ ಮುಂದೆ ನೋಡಿ.
ವೃತ್ತಿಯಲ್ಲಿ ವೈದ್ಯ, ಕೃಷಿಯಲ್ಲಿ ಆಸಕ್ತಿ!
ಅಮಿತ್ ಸಿಂಗ್ ಯಾದವ್ ರಾಜಸ್ಥಾನದ ಕೊಟ್ಪುಟ್ಲಿಯಲ್ಲಿ ವೈದ್ಯರಾಗಿದ್ದಾರೆ. ಅವರಿಗೆ ಕೃಷಿ ಭೂಮಿಯು ಸಹ ಇದೆ. ಹೀಗಾಗಿ ಕೃಷಿಯಲ್ಲಿ ಅವರಿಗೆ ಇಂಟ್ರೆಸ್ಟ್ ಜಾಸ್ತಿಯಿತ್ತು. ಆದರೆ ಭೌಗೋಳಿಕ ಹಾಗೂ ಹವಾಮಾನ ವೈಪರೀತ್ಯದಿಂದ ನೀರಿನ ಸಮಸ್ಯೆಯಿಂದ ಬೆಳೆಗಳು ಸರಿಯಾಗಿ ಬೆಳೆಯುಲಾಗುತ್ತಿರಲಿಲ್ಲ. ಹೀಗಾಗಿ ಕೆಲ ದಿನಗಳಿಂದ ಅವರ ಜಮೀನು ಕಟಾವಿಗೆ ಬಂದಿಲ್ಲ. ಅವರು ಕೋಟಿಪುತ್ತಿಗೆ ಆಸ್ಪತ್ರೆಯನ್ನು ಹೊಂದಿದ್ದಾರೆ. ಆದರೆ, ಆಸ್ಪತ್ರೆಯ ಪ್ರಸ್ತುತ ವೆಚ್ಚವನ್ನು ಕಡಿಮೆ ಮಾಡಲು ಕೆಲವು ವರ್ಷಗಳ ಹಿಂದೆ ಸೌರ ಫಲಕಗಳನ್ನು ಅಳವಡಿಸಲಾಗಿದೆ. ಇದರಿಂದ ಅವರಿಗೆ ತಿಂಗಳಿಗೆ 15,000 ರೂಪಾಯಿ ಉಳಿತಾಯವಾಗಲಿದೆ.
ಇದನ್ನೂ ಓದಿ: 2 ವರ್ಷದಲ್ಲಿ ಮ್ಯಾಜಿಕ್! 20 ರೂಪಾಯಿ ಇದ್ದ ಸ್ಟಾಕ್ ಬೆಲೆ ಈಗ ಲಕ್ಷ-ಲಕ್ಷ ಸ್ವಾಮಿ
2 ಎಕರೆ ಜಮೀನಿನಲ್ಲಿ ಸೋಲಾರ್ ಪ್ಲಾಂಟ್
ಸೌರಶಕ್ತಿಯನ್ನು ಉತ್ತೇಜಿಸಲು ಕೇಂದ್ರ ಸರ್ಕಾರ ತಂದಿರುವ ಪ್ರಧಾನ ಮಂತ್ರಿ ಕುಸುಮ್ ಯೋಜನೆ ಬಗ್ಗೆ ಅಮಿತ್ ಸಿಂಗ್ ಯಾದವ್ ತಿಳಿದುಕೊಂಡರು. ಜಮೀನಿನಲ್ಲಿ ಸೌರವಿದ್ಯುತ್ ಸ್ಥಾವರವನ್ನು ಸ್ಥಾಪಿಸಿದರೆ, ಸರ್ಕಾರವು ಅದರ ವಿದ್ಯುತ್ ಅನ್ನು ನಿಖರವಾದ ದರದಲ್ಲಿ ಖರೀದಿಸುತ್ತದೆ. ಅಮಿತ್ ಯಾದವ್ ಈ ಕಲ್ಪನೆಯನ್ನು ಇಷ್ಟಪಟ್ಟರು ಮತ್ತು ತಮ್ಮ ಎರಡು ನಿವೇಶನಗಳಲ್ಲಿ ಸೋಲಾರ್ ಪ್ಲಾಂಟ್ ಅನ್ನು ಸ್ಥಾಪಿಸಿದರು.
ಇದನ್ನೂ ಓದಿ: ಕಾರುಗಳಿಗೆ ಸ್ಟಾರ್ ರೇಟಿಂಗ್! ಪ್ರಯಾಣಿಕರ ಸುರಕ್ಷತೆ, ಆತ್ಮನಿರ್ಭರ ಭಾರತವೇ ಉದ್ದೇಶ
ಒಟ್ಟು 2 ಎಕರೆ ಜಾಗದಲ್ಲಿ 1.1 ಮೆಗಾವ್ಯಾಟ್ ಸೌರ ವಿದ್ಯುತ್ ಸ್ಥಾವರವನ್ನು ಸ್ಥಾಪಿಸಲಾಗಿದೆ. 330 ವ್ಯಾಟ್ ಸಾಮರ್ಥ್ಯದ 3400 ಸೌರ ಫಲಕಗಳನ್ನು ಅಳವಡಿಸಲಾಗಿದೆ. ಸ್ಥಾವರವು ದಿನಕ್ಕೆ ಸರಾಸರಿ 5,000 ಯೂನಿಟ್ ವಿದ್ಯುತ್ ಉತ್ಪಾದಿಸುತ್ತದೆ. ಬೇಸಿಗೆಯಲ್ಲಿ ದಿನಕ್ಕೆ 5,500 ಯೂನಿಟ್ ಮತ್ತು ಚಳಿಗಾಲದಲ್ಲಿ 3500 ಯೂನಿಟ್. ಸೌರ ಸ್ಥಾವರವು ಡಿಸಿ ಕರೆಂಟ್ ಅನ್ನು ಉತ್ಪಾದಿಸುತ್ತದೆ. ಎಸಿಗೆ ಪರಿವರ್ತಿಸಿ.. 3 ಕಿ.ಮೀ. ದೂರದ ಉಪಕೇಂದ್ರಕ್ಕೆ ಸರಬರಾಜು ಮಾಡಲಾಗಿದೆ.
ತಿಂಗಳಿಗೆ 6 ಲಕ್ಷ ಆದಾಯ ಗಳಿಸ್ತಿರೋ ಅಮಿತ್!
ಅಮಿತ್ ಯಾದವ್ ಸ್ಥಾವರದಲ್ಲಿ ಉತ್ಪಾದಿಸುವ ವಿದ್ಯುತ್ ಅನ್ನು ಸರ್ಕಾರ ಖರೀದಿಸುತ್ತದೆ. ಇದಕ್ಕಾಗಿ ಅವರು ಸರ್ಕಾರದೊಂದಿಗೆ ಒಪ್ಪಂದ ಮಾಡಿಕೊಂಡಿದ್ದಾರೆ. ಪ್ರತಿದಿನ 5,000 ಯೂನಿಟ್ ವಿದ್ಯುತ್ ಉತ್ಪಾದಿಸಿದರೆ.. ಪ್ರತಿ ಯೂನಿಟ್ ಗೆ 4 ರೂ.ನಂತೆ ಮಾರಾಟ ಮಾಡುತ್ತಿದ್ದಾರೆ. ಹೀಗಾಗಿ ದಿನಕ್ಕೆ 20 ಸಾವಿರ ರೂ.ನಂತೆ.. ತಿಂಗಳಿಗೆ 6 ಲಕ್ಷ ರೂಪಾಯಿ ಆದಾಯ ಗಳಿಸುತ್ತಿದ್ದಾರೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ