ಮುಂಬೈ: ರಿಲಯನ್ಸ್ ಅಧ್ಯಕ್ಷ ಮುಖೇಶ್ ಅಂಬಾನಿ (Mukesh Ambani) ಅವರ ದ್ವಿತೀಯ ಪುತ್ರ ಅನಂತ್ ಅಂಬಾನಿಯವರು (Anant Ambani) ಉದ್ಯಮಿ ವೀರೇನ್ ಮರ್ಚೆಂಟ್ ಪುತ್ರಿ ರಾಧಿಕಾ ಮರ್ಚೆಂಟ್ (Radhika Merchant) ಅವರೊಂದಿಗೆ ಅದ್ದೂರಿ ಸಮಾರಂಭದಲ್ಲಿ ವಿವಾಹವಾಗಲಿದ್ದಾರೆ. ಈಗಾಗಲೇ ನಿಶ್ಚಿತಾರ್ಥ ಕಾರ್ಯಕ್ರಮಗಳು ಮಂಗಳವಾರದಿಂದ ಆರಂಭಗೊಂಡಿದೆ. ನಿನ್ನೆ ಅದ್ಧೂರಿ ಮೆಹೆಂದಿ (Mehendi ) ಸಮಾರಂಭವನ್ನು ಆಯೋಜಿಸಲಾಗಿತ್ತು. ಈ ಕಾರ್ಯಕ್ರಮದ ಫೋಟೋಗಳು ಸಾಮಾಜಿಕ ಜಾಲಾತಾಣದಲ್ಲಿ ವೈರಲ್ ಆಗುತ್ತಿದೆ. ಈ ಸಮಾರಂಭದಲ್ಲಿ ರಾಧಿಕಾ ಮರ್ಚೆಂಟ್ ಗುಲಾಬಿ ಬಣ್ಣದ ಕಸೂತಿ, ಮಿರರ್ ವರ್ಕ್ವುಳ್ಳ ಹಾಗೂ ಡೀಪ್ ನೆಕ್ನ ಅಬು ಜಾನಿ ಸಂದೀಪ್ ಖೋಸ್ಲಾ(AJSK) ಲೆಹೆಂಗಾವನ್ನು ಧರಿಸಿದ್ದರು. ಅವರು ತೊಟ್ಟಿದ್ದ ಧಿರಿಸು, ಆಭರಣ ಸಾಮಾಜಿಕ ಜಾಲಾತಾಣದಲ್ಲಿ ಟ್ರೆಂಡ್ ಆಗುತ್ತಿದೆ.
ಈ ಸಮಾರಂಭದಲ್ಲಿ ಅಂಬಾನಿ ಕುಟುಂಬದ ಭಾವಿ ಸೊಸೆ 2019ರಲ್ಲಿ ಬಿಡುಗಡೆಯಾಗಿದ್ದ ಆಲಿಯಾ ಭಟ್ ಅವರ ಕಲಂಕ್ ಚಿತ್ರದ ಘರ್ ಮೋರ್ ಪರ್ದೇಸಿಯಾ ಹಾಡಿಗೆ ನೃತ್ಯ ಮಾಡಿ ನೆರೆದಿದ್ದ ಅತಿಥಿಗಳನ್ನು ರಂಜಿಸಿದರು. ರಾಧಿಕಾ ಮರ್ಚೆಂಟ್ ಅವರ ಈ ನೃತ್ಯದ ತುಣುಕು ಸಾಮಾಜಿಕ ಜಾಲತಾಣಲ್ಲಿ ಸೆನ್ಸೇಷನ್ ಸೃಷ್ಟಿಸಿದೆ. ಇನ್ನು ರಾಧಿಕಾ ಮರ್ಚೆಂಟ್ ಕಾರ್ಯಕ್ರಮದಲ್ಲಿ ಯಾವ ರೀತಿ ಉಡುಗೆ ತೊಡುಗೆ ಹಾಗೂ ಆಭರಣಗಳನ್ನು ಧರಿಸಿದ್ದರು ಎಂಬ ಮಾಹಿತಿ ಇಲ್ಲಿದೆ.
ಇದನ್ನೂ ಓದಿ: Radhika Merchant: ಅಂಬಾನಿ ಮನೆತನದ ಸೊಸೆಯಾಗಲಿರುವ ರಾಧಿಕಾ ಮರ್ಚೆಂಟ್ ಕುಟುಂಬದ ಬಗ್ಗೆ ಇಂಟ್ರೆಸ್ಟಿಂಗ್ ವಿಷಯಗಳಿವು!
AJSK ಲೆಹೆಂಗಾದಲ್ಲಿ ಮಿಂಚಿದ ರಾಧಿಕಾ
ಫ್ಯಾಷನ್ ಡಿಸೈನರ್ಗಳಾದ ಅಬು ಜಾನಿ ಮತ್ತು ಸಂದೀಪ್ ಖೋಸ್ಲಾ ಡಿಸೈನ್ ಮಾಡಿದ್ದ ಲೆಹೆಂಗಾವನ್ನು ರಾಧಿಕಾ ಧರಿಸಿದ್ದರು. ಇದನ್ನು ಸ್ವತಃ ಅಬು ಜಾನಿ ಮತ್ತು ಸಂದೀಪ್ ಖೋಸ್ಲಾ ತಮ್ಮ ಅಧಿಕೃತ ಇನ್ಸ್ಟಾಗ್ರಾಮ್ ಖಾತೆಯಲ್ಲಿ ಹಂಚಿಕೊಂಡಿದ್ದು, ರಾಧಿಕಾ ಅವರು ಮೆಹೆಂದಿ ಕಾರ್ಯಕ್ರಮದಲ್ಲಿ ತಮ್ಮದೇ ಕಾಸ್ಟ್ಯೂಮ್ ಧರಿಸಿರುವ ಸುಂದರವಾದ ಕೆಲವು ಫೋಟೋಗಳನ್ನು ಹಂಚಿಕೊಂಡಿದ್ದಾರೆ. " ದಿ ಹ್ಯೂಸ್ ಆಫ್ ಜಾಯ್! ರಾಧಿಕಾ ಮರ್ಚೆಂಟ್ ಮೆಹೆಂದಿ ಸಮಾರಂಭದಲ್ಲಿ ಫ್ಲೋರಲ್ ಡಿಸೈನ್ (ಹೂವಿನ್ ಕಸೂತಿ) ಮತ್ತು ಮಿರರ್ ವರ್ಕ್ ಇರುವ ಬಹು-ಬಣ್ಣದ ರೇಶಮ್ ಲೆಹೆಂಗಾದಲ್ಲಿ ಸಂಭ್ರಮಿಸುತ್ತಿದ್ದಾರೆ " ಎಂದು ಪೋಸ್ಟ್ಗೆ ಶೀರ್ಷಿಕೆ ನೀಡಿದ್ದಾರೆ.
ಲೆಹೆಂಗಾ ವಿನ್ಯಾಸ
ರಾಧಿಕಾ ಮರ್ಚೆಂಟ್ ಧರಿಸಿದ್ದ ಲೆಹೆಂಗಾ ವಿನ್ಯಾಸ ಬಗ್ಗೆ ನೋಡುವುದಾದರೆ, ಅವರು ಧರಿಸಿದ್ದ ಗುಲಾಬಿ ಬಣ್ಣದ ರೇಶಮ್ ಲೆಹೆಂಗಾವು ಬಹು-ಬಣ್ಣದ ಹೂವಿನ ಕಸೂತಿ, ಮಿರರ್ ವರ್ಕ್ ಮತ್ತು ವಿಶಾಲವಾದ ಪಟ್ಟಿಯ ಬಾರ್ಡರ್ ಒಳಗೊಂಡಿದೆ. ಬ್ಲೌಸ್ ಆಫ್ ಲೆಂತ್ ಸ್ಲೀವ್ , ಕ್ರಾಪ್ಡ್ ಹೆಮ್ ಹಾಗೂ ಸಂಕೀರ್ಣವಾದ ಅಲಂಕಾರವನ್ನು ಹೊಂದಿದೆ. ಲೇಯರ್ಡ್ ಎ-ಲೈನ್ ಸಿಲೂಯೆಟ್ ಮತ್ತು ಟಸೆಲ್-ಅಲಂಕೃತ ಡೋರಿ ಟೈಗಳನ್ನು ಒಳಗೊಂಡಿರುವ ಸ್ಕರ್ಟ್ನೊಂದಿಗೆ ಡಿಸೈನ್ ಮಾಡಲಾಗಿದೆ.
View this post on Instagram
ರಾಧಿಕಾ ಲೆಹೆಂಗಾ ಜೊತೆಗೆ ಅದಕ್ಕೆ ಸೂಕ್ತವಾದ ಗುಲಾಬಿ ಬಣ್ಣದ ದುಪಟ್ಟಾವನ್ನು ಧರಿಸಿದ್ದರು. ನವ ವಧು ಉದ್ದನೆಯ ನೆಕ್ಲೇಸ್, ಒಂದು ಚೋಕರ್ ನೆಕ್ಲೆಸ್, ಮಾಂಗ್ ಟೀಕಾ, ಜುಮ್ಕಿ ಮತ್ತು ಒಂದು ಉಂಗುರವನ್ನು ಧರಿಸಿದ್ದರು. ರಾಧಿಕಾ ಅವರು ಗ್ಲಾಮ್ ಪಿಕ್ಸ್ಗಾಗಿ ವಿಂಗ್ಸ್ ಐಲೈನರ್, ಕೋಲ್-ಲೈನ್ಡ್ ಐಸ್, ಫ್ಯೂಷಿಯಾ ಪಿಂಕ್ ಲಿಪ್ ಶೇಡ್, ಗ್ಲೋಯೊಂಗ್ ಸ್ಕಿನ್, ಸಬ್ಟೆಲ್ ಐ ಶ್ಯಾಡೋ ಮತ್ತು ಸೊಗಸಾದ ಬಿಂದಿಯನ್ನು ತಮ್ಮ ಅಲಂಕಾರಕ್ಕಾಗಿ ಆಯ್ಕೆ ಮಾಡಿಕೊಂಡಿದ್ದರು.
ಇನ್ನು ಅಂಬಾನಿ ಕುಟುಂಬದ ಹಲವಾರು ಅಭಿಮಾನಿಗಳ ಖಾತೆಗಳು ಅದ್ದೂರಿ ಕಾರ್ಯಕ್ರಮದ ಸುಂದರವಾದ ಫೋಟೋಗಳನ್ನು ಹಂಚಿಕೊಂಡಿದ್ದಾರೆ. ಜೊತೆಗೆ ರಾಧಿಕಾ ಅವರು ಕಾರ್ಯಕ್ರಮದಲ್ಲಿ ಆಲಿಯಾ ಭಟ್ ಅವರ ಕಲಂಕ್ನ ಘರ್ ಮೋರ್ ಪರ್ದೇಸಿಯಾ ಗೀತೆ ನೃತ್ಯ ಮಾಡುತ್ತಿರುವ ವಿಡಿಯೋವನ್ನು ಹಂಚಿಕೊಳ್ಳುತ್ತಿದ್ದಾರೆ.
ಡಿಸೆಂಬರ್ 29ರಂದು ನಿಶ್ಚಿತಾರ್ಥ
ರಾಧಿಕಾ ಮರ್ಚೆಂಟ್ ಹಾಗೂ ಅನಂತ್ ಅಂಬಾನಿ ಡಿಸೆಂಬರ್ 29ರಂದು ನಿಶ್ಚಿತಾರ್ಥ ಮಾಡಿಕೊಂಡಿದ್ದರು. ಈ ಕಾರ್ಯಕ್ರಮ ರಾಜಸ್ಥಾನದ ಶ್ರೀನಾಥ್ಜಿ ದೇವಾಲಯದಲ್ಲಿ ನಡೆದಿತ್ತು. ಈ ಕಾರ್ಯಕ್ರಮಕ್ಕೆ ಕೇವಲ ತುಂಬಾ ಹತ್ತಿರದ ಸ್ನೇಹಿತರು, ಬಂಧುಗಳ ಹಾಗೂ ಕುಟುಂಬಸ್ಥರನ್ನು ಮಾತ್ರ ಆಹ್ವಾನಿಸಲಾಗಿತ್ತು. ನಂತರ ಮುಂಬೈನಲ್ಲಿ ಅದ್ದೂರಿ ರೋಕಾ ಪಾರ್ಟಿ ನಡೆದಿದ್ದು, ಅದರಲ್ಲಿ ಶಾರುಖ್ ಖಾನ್, ಆಲಿಯಾ ಭಟ್, ರಣಭೀರ್ ಕಾಪೂರ್ ಹಾಗೂ ಇನ್ನಿತರ ಸೆಲೆಬ್ರೆಟಿಗಳು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.
ಇನ್ನೂ ರಾಧಿಕಾ ಮರ್ಚೆಂಟ್ ತಮ್ಮ ಅತ್ತೆ ನೀತಾ ಅಂಬಾನಿಯಂತೆ ಭರತ ನಾಟ್ಯ ಡ್ಯಾನ್ಸರ್ ಆಗಿದ್ದಾರೆ. ಗುರು ಭಾವನ ಟಾಕರ್ ಅವರ ಶಿಷ್ಯೆಯಾಗಿದ್ದಾರೆ. ಮುಂಬೈನ ನಿಭಾ ಆರ್ಟ್ಸ್ ಅಂಡ್ ಟ್ರೈನ್ಡ್ ಡ್ಯಾನ್ಸ್ ಅಕಾಡೆಮಿಯಲ್ಲಿ 8 ವರ್ಷಗಳ ಕಾಲ ಕ್ಲಾಸಿಕಲ್ ಡ್ಯಾನ್ಸ್ ಅಭ್ಯಾಸ ಮಾಡಿದ್ದಾರೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ