• Home
  • »
  • News
  • »
  • business
  • »
  • Nursery Business: ತಾಯಿ ಜೊತೆ ಸೇರಿ ನರ್ಸರಿ ಬ್ಯುಸಿನೆಸ್,‌ ಇಂಜಿನಿಯರ್‌ ಮನೆಯ ಟೆರೆಸ್‌ನಲ್ಲಿ 3 ಸಾವಿರಕ್ಕೂ ಹೆಚ್ಚು ಗಿಡ!

Nursery Business: ತಾಯಿ ಜೊತೆ ಸೇರಿ ನರ್ಸರಿ ಬ್ಯುಸಿನೆಸ್,‌ ಇಂಜಿನಿಯರ್‌ ಮನೆಯ ಟೆರೆಸ್‌ನಲ್ಲಿ 3 ಸಾವಿರಕ್ಕೂ ಹೆಚ್ಚು ಗಿಡ!

ತಾಯಿ ಜೊತೆ ಸೇರಿ ನರ್ಸರಿ ಬ್ಯುಸಿನೆಸ್,‌ ಇಂಜಿನಿಯರ್‌ ಮನೆಯ ಟೆರೆಸ್‌ನಲ್ಲಿ 3 ಸಾವಿರಕ್ಕೂ ಹೆಚ್ಚು ಗಿಡ!

ತಾಯಿ ಜೊತೆ ಸೇರಿ ನರ್ಸರಿ ಬ್ಯುಸಿನೆಸ್,‌ ಇಂಜಿನಿಯರ್‌ ಮನೆಯ ಟೆರೆಸ್‌ನಲ್ಲಿ 3 ಸಾವಿರಕ್ಕೂ ಹೆಚ್ಚು ಗಿಡ!

ತಾಯಿ ಜೊತೆ ಸೇರಿ 3 ಸಾವಿರಕ್ಕೂ ಹೆಚ್ಚು ಗಿಡಗಳನ್ನು ಬೆಳೆಸಿ ನರ್ಸರಿ ಬ್ಯುಸಿನೆಸ್‌ ಮಾಡುತ್ತಿದ್ದಾರೆ ಅಂದ್ರೇ ನೀವು ನಂಬಲೇ ಬೇಕು. ಯಾರವರು ಅಂತ ಕೇಳ್ತೀರಾ, ಇಲ್ಲಿದೆ ಫುಲ್​ ವರದಿ.

  • Trending Desk
  • 5-MIN READ
  • Last Updated :
  • Share this:

ಪ್ರಕೃತಿಯ ಮಧ್ಯೆ ದಿನಗಳನ್ನು ಕಳೆಯೋದು ಬಹಳಷ್ಟು ಜನರಿಗೆ ಇಷ್ಟದ ಕೆಲಸ. ಇಂಥ ನಿಸರ್ಗದ ಭಾಗವಾಗಿರೋ ಮರಗಿಡಗಳನ್ನು ಬೆಳೆಸೋದು ಕೂಡ ಅಷ್ಟೇ ಖುಷಿ ನೀಡುವಂಥ ಕೆಲಸವಾಗಿದೆ. ಇಲ್ಲೊಬ್ಬರು ಇಂಥದ್ದೇ ಮನಸ್ಸಿಗೆ ಖುಷಿ ನೀಡುವ ಕೆಲಸಕ್ಕಾಗಿ ತಮ್ಮ ಇಂಜಿನಿಯರ್‌ ವೃತ್ತಿಯನ್ನೇ ತೊರೆದಿದ್ದಾರೆ. ತಾಯಿ ಜೊತೆ ಸೇರಿ 3 ಸಾವಿರಕ್ಕೂ ಹೆಚ್ಚು ಗಿಡಗಳನ್ನು ಬೆಳೆಸಿ ನರ್ಸರಿ ಬ್ಯುಸಿನೆಸ್‌ ಮಾಡುತ್ತಿದ್ದಾರೆ ಅಂದ್ರೇ ನೀವು ನಂಬಲೇ ಬೇಕು. ಎಸ್, ತಾನು ಹುಟ್ಟಿ ಬೆಳೆದಿದ್ದು ಮಂಗಳೂರಿನಲ್ಲಿ ಎನ್ನುವ 28 ವರ್ಷ ವಯಸ್ಸಿನ ಜ್ಞಾನ್‌ ಶೆಟ್ಟಿ ಚಿಕ್ಕಂದಿನಲ್ಲಿ ತೋಟಗಾರಿಕೆಯಲ್ಲಿ ಸಹಾಯ ಮಾಡುತ್ತಿದ್ದರು. ಆದ್ರೆ ಈ ಕೆಲಸ ಮಾಡೋದಕ್ಕಿಂತ ಹೆಚ್ಚಾಗಿ ನಾನು ನೀರಿನೊಂದಿಗೆ ಆಟವಾಡೋಕೆ ಇಷ್ಟಪಡ್ತಿದ್ದೆ ಅನ್ನೋದಾಗಿ ಅವರು ಹೇಳುತ್ತಾರೆ.


ಮೊದಲು ಇನ್​ಸ್ಟಾಗ್ರಾಂನಲ್ಲಿ ವಿಡಿಯೋಗಳನ್ನು ಪೋಸ್ಟ್‌ ಮಾಡಿದೆ!


ಗಾರ್ಡನಿಂಗ್‌ನಲ್ಲಿ ಆಸಕ್ತಿಯನ್ನು ಬೆಳೆಸಿಕೊಂಡಿದ್ದರೂ, ಅದು ಒಂದು ದಿನ ವ್ಯವಹಾರವಾಗಿ ಬದಲಾಗುತ್ತದೆ ಎಂದು ಅಂತ ಎಂದಿಗೂ ಅಂದುಕೊಂಡಿರಲಿಲ್ಲವಂತೆ ಜ್ಞಾನ್‌ ಶೆಟ್ಟಿ. ಅಷ್ಟಕ್ಕೂ ಜ್ಞಾನ್‌ ಶೆಟ್ಟಿ ಇಂಜಿನಿಯರ್‌ ಆಗಿ ಕೆಲಸ ಮಾಡಿದ್ದು ಮೂರು ವರ್ಷಗಳು. ಕೋವಿಡ್‌ ಸಾಂಕ್ರಾಮಿಕದಿಂದ ಮತ್ತೆ ತಮ್ಮ ಬಾಲ್ಯದ ಹವ್ಯಾಸ ಪುನರಾರಂಭಿಸಿದೆ ಎನ್ನುತ್ತಾರೆ.


ನನ್ನ ಇನ್‌ ಸ್ಟಾಗ್ರಾಂ ಖಾತೆಯಲ್ಲಿ ನಾನು ಉದ್ಯಾನದ ಫೋಟೋಗಳು ಮತ್ತು ವೀಡಿಯೊಗಳನ್ನು ಪೋಸ್ಟ್ ಮಾಡಿದೆ. ಈ ವೇದಿಕೆಯಲ್ಲಿ ಸಸ್ಯಗಳನ್ನು ಮಾರಾಟ ಮಾಡುವುದು ಒಳ್ಳೆಯ ಬ್ಯುಸಿನೆಸ್‌ ಅನ್ನೋದನ್ನು ಕಂಡುಕೊಂಡೆ ಎನ್ನುತ್ತಾರೆ.


ಬೆಂಗಳೂರು, ಮೈಸೂರು, ಹೈದರಾಬಾದ್‌ ಗಳಿಂದ ಸಾಕಷ್ಟು ಜನರು ಸಸ್ಯಗಳ ಕುರಿತು ವಿಚಾರಿಸಿದರು. ಮೊದ ಮೊದಲು ಕೆಲವು ಸಾಗಣೆಗಳು ಸಂಪೂರ್ಣ ವಿಫಲವಾದವು. ಆದ್ರೆ ಈಗ ಅದನ್ನೆಲ್ಲ ಸರಿ ಮಾಡಿದ್ದೇವೆ. ಈಗ ಅವು ಉತ್ತಮವಾಗಿ ಕಾರ್ಯ ನಿರ್ವಹಿಸುತ್ತವೆ ಎಂದಬುದಾಗಿ ಅವರು ಹೇಳುತ್ತಾರೆ.


3000ಕ್ಕೂ ಹೆಚ್ಚು ಗಿಡಗಳು!


ಆನ್‌ಲೈನ್ ಮಾರಾಟವನ್ನು ಪ್ರಾರಂಭಿಸಿದ ಒಂದು ವರ್ಷದ ನಂತರ ತನ್ನ ಮನೆಯ ಸಮೀಪ ನರ್ಸರಿ ಸ್ಥಾಪಿಸಲು ನಿರ್ಧರಿಸಿದರು. ಜನವರಿ 2022 ರಲ್ಲಿ, 'ನಮ್ಮ ಗಾರ್ಡನ್' ಅನ್ನು ಏಳು ಸೆಂಟ್ ಪ್ಲಾಟ್‌ನಲ್ಲಿ ಸ್ಥಾಪಿಸಲಾಯಿತು. ಇಲ್ಲಿ ಒಳಾಂಗಣ, ಹೂವು, ಅಲಂಕಾರಿಕ, ನೀರಿನ ಸಸ್ಯಗಳು ಮತ್ತು ಹಣ್ಣಿನ ಸಸಿಗಳಿವೆ ಎಂಬುದಾಗಿ ಜ್ಞಾನ್‌ ಹೇಳುತ್ತಾರೆ.


“ನನ್ನ ಟೆರೇಸ್ ಗಾರ್ಡನ್‌ನಲ್ಲಿ ಈಗಾಗಲೇ 3,000 ಕ್ಕೂ ಹೆಚ್ಚು ಗಿಡಗಳಿವೆ. ಇವೆಲ್ಲವೂ ನರ್ಸರಿಯಲ್ಲಿ ಲಭ್ಯವಿದೆ. ಮಾವು, ಚಿಕ್ಕು, ಸೀತಾಫಲ, ರಂಬುಟಾನ್, ಪೇರಲ, ಹಲಸು, ಹಿಪ್ಪುನೇರಳೆ, ನಿಂಬೆ, ದಾಳಿಂಬೆ ಹೀಗೆ ಐದು ಬಗೆಯ ಹಣ್ಣಿನ ಗಿಡಗಳನ್ನು ಇಲ್ಲಿ ಮಾರಾಟ ಮಾಡಲಾಗುತ್ತದೆ’ ಎಂದು ಅವರು ವಿವರಿಸುತ್ತಾರೆ.


30 ರೂ.ನಿಂದ 8 ಸಾವಿರ ಬೆಲೆಯ ಗಿಡಗಳೂ ದೊರೆಯುತ್ತವೆ!


ಹೆಚ್ಚುವರಿಯಾಗಿ, ಮನೆಗಳು, ಕಚೇರಿಗಳು ಮತ್ತು ಕೆಫೆಗಳಲ್ಲಿ ಗಾರ್ಡನ್‌ಗಳನ್ನು ಸ್ಥಾಪಿಸಲು ಜ್ಞಾನ್‌ ಆರ್ಡರ್‌ ಗಳನ್ನು ತೆಗೆದುಕೊಳ್ಳುತ್ತಾರೆ. 'ನಮ್ಮ ಗಾರ್ಡನ್' ಎಂಬ ಇನ್‌ಸ್ಟಾಗ್ರಾಮ್ ಸ್ಟೋರ್ ಹೊಂದಿದ್ದಾರೆ.


ಇದನ್ನೂ ಓದಿ: ಹಿರಿಯ ನಾಗರಿಕರಿಗೆ ರೈಲು ಪ್ರಯಾಣದಲ್ಲಿ ರಿಯಾಯಿತಿ, ಕೇಂದ್ರದ ಮಹತ್ವದ ನಿರ್ಧಾರ!


“ನಾನು ದೂರದಲ್ಲಿರುವಾಗ, ನರ್ಸರಿ ಚಟುವಟಿಕೆಗಳನ್ನು ತಾಯಿ ನೋಡಿಕೊಳ್ಳುತ್ತಾರೆ. ಪ್ರತಿದಿನ ತೋಟಗಾರಿಕೆಯನ್ನು ಸ್ವಚ್ಛಗೊಳಿಸಲು ಮತ್ತು ಸಹಾಯ ಮಾಡಲು ನಮ್ಮಲ್ಲಿ ಕೆಲಸದವರು ಇದ್ದಾರೆ”ಎಂದು ಜ್ಞಾನ್‌ ಹಂಚಿಕೊಳ್ಳುತ್ತಾರೆ.


ತಾವು ಬೆಳೆಸಿದ ಗಿಡ ಬೇರೆಯವರ ಮನೆಯಲ್ಲಿ ಅರಳುವುದನ್ನು ನೋಡುವುದು ಸಂತೋಷವಾಗಿದೆ ಎಂಬುದಾಗಿ ಅವರು ಹೇಳುತ್ತಾರೆ. “ಒಮ್ಮೆ ನಾನು ನನ್ನ ಅಜ್ಜಿಯ ಹೊಲದಲ್ಲಿ ಬೆಳೆದ ಪ್ಲುಮೆರಿಯಾ (ಫ್ರಾಂಗಿಪಾನಿ) ಮರದ ಕಾಂಡವನ್ನು ರಾಜಸ್ಥಾನದ ಗ್ರಾಹಕರಿಗೆ ಮಾರಾಟ ಮಾಡಿದೆ. ಒಂದು ವರ್ಷದ ನಂತರ ಅವರು ಅದರ ಫೋಟೋವನ್ನು ನನಗೆ ಕಳುಹಿಸಿದರು. ಅದನ್ನು ನೋಡಿ ನನಗೆ ತುಂಬಾ ಸಂತೋಷವಾಗಿತ್ತು ಎಂಬುದಾಗಿ ಹಂಚಿಕೊಳ್ಳುತ್ತಾರೆ.
ಇನ್ನು, ಕಿಚನ್ ಕಾಂಪೋಸ್ಟ್ ಅನ್ನು ಸಾವಯವ ಗೊಬ್ಬರವಾಗಿ ಬಳಸಲಾಗುತ್ತದೆ. ಗಾರ್ಡನ್ ಸ್ಥಾಪಿಸದಿದ್ದರೂ ತ್ಯಾಜ್ಯವನ್ನು ಕಡಿಮೆ ಮಾಡಲು ಕಾಂಪೋಸ್ಟ್ ಪಿಟ್ ಅನ್ನು ಸ್ಥಾಪಿಸುವುದು ಮುಖ್ಯ ಎಂದು ಜ್ಞಾನ್ ಹೇಳುತ್ತಾರೆ.


ಇಂದು ಹೆಚ್ಚಿನ ಜನರು ಒಳಾಂಗಣ ಸಸ್ಯಳನ್ನು ಬೆಳೆಸುವಲ್ಲಿ ಆಸಕ್ತಿ ತೋರುತ್ತಿದ್ದಾರೆ ಎನ್ನುವ ಜ್ಞಾನ್‌, ತಾಯಿ ಶೋಭಾ ಅವರಿಂದ ಉಪಯುಕ್ತ ಸಲಹೆಗಳನ್ನು ಪಡೆದುಕೊಳ್ಳುವುದಾಗಿ ಹೇಳುತ್ತಾರೆ. “ಈ ಕ್ಷೇತ್ರದಲ್ಲಿ ಸಮಯ ಮತ್ತು ಶಕ್ತಿಯನ್ನು ಕಳೆಯಲು ನನಗೆ ತುಂಬಾ ತೃಪ್ತಿ ಇದೆ. ನಾನು ಅದನ್ನು ಪ್ರಕೃತಿಯ ಜವಾಬ್ದಾರಿ ಎಂದು ಪರಿಗಣಿಸುತ್ತೇನೆ. ಎಲ್ಲಕ್ಕಿಂತ ಮಿಗಿಲಾಗಿ, ಬೇರೆ ಯಾವ ಕೆಲಸವೂ ಕೊಡಲಾಗದಷ್ಟು ನೆಮ್ಮದಿಯನ್ನು ಕೊಟ್ಟ ಜಾಗ ಇದು” ಎಂಬುದಾಗಿ ಜ್ಞಾನ್‌ ಹೇಳುತ್ತಾರೆ.

First published:

ಸುದ್ದಿ 18ಕನ್ನಡ ಟ್ರೆಂಡಿಂಗ್

ಮತ್ತಷ್ಟು ಓದು