Quiet Quitting: ಹೊಸ ಟ್ರೆಂಡ್ ಆಗ್ತಿದೆ ಕ್ವೈಟ್ ಕ್ವಿಟ್ಟಿಂಗ್! ಇದು ಉದ್ಯಮ ಕ್ಷೇತ್ರದಲ್ಲಿಹೇಗೆ ಪ್ರಭಾವ ಬೀರುತ್ತೆ?

ಕ್ವೈಟ್ ಕ್ವಿಟ್ಟರ್ಸ್‌ಗಳು ತಮಗೆ ನಿಯೋಜಿಸಿದ್ದಕ್ಕಿಂತ ಹೆಚ್ಚಿನ ಕೆಲಸವನ್ನು ಮಾಡದ ಉದ್ಯೋಗಿಗಳಾಗಿದ್ದು ಯಾವುದೇ ಒತ್ತಡವನ್ನು ತೆಗೆದುಕೊಳ್ಳದೆಯೇ, ನಿರ್ದಿಷ್ಟ ಅವಧಿಯಲ್ಲಿ ಕೆಲಸ ಮಾಡುವವರಾಗಿದ್ದಾರೆ. ಕಳೆದ ಕೆಲವು ವರ್ಷಗಳಿಂದ ಈ ಪದವು ಹೆಚ್ಚು ಪ್ರಸ್ತುತಿಯಲ್ಲಿದೆ.

ಸಾಂಕೇತಿಕ ಚಿತ್ರ

ಸಾಂಕೇತಿಕ ಚಿತ್ರ

  • Share this:
ಕಳೆದ ಎರಡು ತಿಂಗಳುಗಳಲ್ಲಿ, ಟ್ವಿಟರ್ ಮತ್ತು ಟಿಕ್‌ಟಾಕ್‌ನಂತಹ ಸಾಮಾಜಿಕ ಮಾಧ್ಯಮ ಪ್ಲಾಟ್‌ಫಾರ್ಮ್‌ಗಳಲ್ಲಿ ಕ್ವೈಟ್ ಕ್ವಿಟ್ಟಿಂಗ್ (Quiet Quitting) ಎಂದು ಕರೆಯಲಾದ ಹೊಸ ಪ್ರವೃತ್ತಿ ಪರಿಣಾಮ ಬೀರುತ್ತಿದೆ. ಕ್ವೈಟ್ ಕ್ವಿಟ್ಟರ್ಸ್‌ಗಳು ತಮಗೆ ನಿಯೋಜಿಸಿದ್ದಕ್ಕಿಂತ ಹೆಚ್ಚಿನ ಕೆಲಸವನ್ನು ಮಾಡದ ಉದ್ಯೋಗಿಗಳಾಗಿದ್ದು (Employees) ಯಾವುದೇ ಒತ್ತಡವನ್ನು ತೆಗೆದುಕೊಳ್ಳದೆಯೇ, ನಿರ್ದಿಷ್ಟ ಅವಧಿಯಲ್ಲಿ (specific period) ಕೆಲಸ ಮಾಡುವವರಾಗಿದ್ದಾರೆ. ಕಳೆದ ಕೆಲವು ವರ್ಷಗಳಿಂದ ಈ ಪದವು ಹೆಚ್ಚು ಪ್ರಸ್ತುತಿಯಲ್ಲಿದೆ. ಸಾಂಕ್ರಾಮಿಕ ಸಂಬಂಧಿತ ಪ್ರಮುಖ ಬೆಳವಣಿಗೆಯಾಗಿ ಈ ಟ್ರೆಂಡ್ ಅನ್ನು (Trend) ಗುರುತಿಸಲಾಗಿದ್ದು, ಕೆಲಸದ (Work) ಅವಧಿಗಿಂತ ಹೆಚ್ಚು ಕೆಲಸ ಮಾಡಿದಲ್ಲಿ ಹೆಚ್ಚಿನ ಪಾವತಿ ನೀಡಲಾಗುತ್ತದೆಯೇ ಎಂದು ಇದೀಗ ಉದ್ಯೋಗಿಗಳು ಪ್ರಶ್ನಿಸುತ್ತಿದ್ದಾರೆ.

ಕ್ವೈಟ್ ಕಿಟ್ಟರ್ಸ್ ವಿಶೇಷತೆಗಳೇನು?
ಹಾಗಿದ್ದರೆ ಕ್ವಿಟ್ ಕ್ವಿಟ್ಟಿಂಗ್ ಎಂಬುದು ಉದ್ಯೋಗದಾತರಿಗೆ ನಷ್ಟವನ್ನುಂಟು ಮಾಡುತ್ತಿದೆಯೇ ಇಲ್ಲವೇ, ಒತ್ತಡದಿಂದ ತಪ್ಪಿಸಿಕೊಳ್ಳಲು ಹಾಗೂ ಮಾನಸಿಕ ಆರೋಗ್ಯವನ್ನು ಪಡೆಯಲು ಉದ್ಯೋಗಿಗಳಿಗೆ ನೆರವಾಗಿದೆಯೇ ಎಂಬುದರ ಮೇಲೆ ಇಂದಿನ ಲೇಖನ ಬೆಳಕು ಚೆಲ್ಲಲ್ಲಿದೆ. ತಮ್ಮ ಕೆಲಸವನ್ನು ಮಾತ್ರವೇ ಮಾಡುವ ಕ್ವಿಟ್ ಕ್ವಿಟ್ಟರ್ಸ್ ಬೇರೆ ಯಾವುದೇ ಕೆಲಸಗಳನ್ನು ನಿರ್ವಹಿಸುವುದಿಲ್ಲ.

ಇದನ್ನೂ ಓದಿ: Explained: Moonlighting ಅಂದ್ರೇನು? ಒಂದು ಕಂಪೆನಿಯಲ್ಲಿದ್ದುಕೊಂಡು ಇನ್ನೊಂದು ಕಡೆ ಕೆಲಸ ಮಾಡುವುದೆಷ್ಟು ಸರಿ?

ಶಿಫ್ಟ್ ಮುಗಿದೊಡನೆ ಕೆಲಸವನ್ನು ನಿಲ್ಲಿಸುವುದು, ಹೆಚ್ಚಿನ ಕೆಲಸಕ್ಕೆ ಹೆಚ್ಚಿನ ವೇತವನ್ನು ಕೇಳುವುದು, ಮಹತ್ವಾಕಾಂಕ್ಷೆಯ ಯೋಜನೆಗಳಲ್ಲಿ ಪಾಲ್ಗೊಳ್ಳದೇ ಇರುವುದು, ಒಬ್ಬರ ಗುರುತನ್ನು ಅವರ ಉದ್ಯೋಗಗಳಿಂದ ಬೇರ್ಪಡಿಸುವುದು ಮತ್ತು/ಅಥವಾ ಸ್ಪಷ್ಟವಾದ ಕೆಲಸದ-ಜೀವನದ ಗಡಿಯನ್ನು ಹೊಂದಿಸುವುದು ಕ್ವಿಟ್ ಕ್ವಿಟ್ಟರ್ಸ್‌ ವಿಶೇಷತೆಯಾಗಿದೆ.

ಕೆಲಸ ಮತ್ತು ವೈಯಕ್ತಿಕ ಜೀವನವನ್ನು ಸಮತೋಲಗೊಳಿಸುವ ವಿಧಾನವಾಗಿ ಕ್ವಿಟ್ ಕ್ವಿಟ್ಟರ್ಸ್ ವಿಧಾನವನ್ನು ಕೆಲವರು ಪರಿಗಣಿಸುತ್ತಿದ್ದು, ಕೆಲವರು ಇದೊಂದು ಸೋಮಾರಿ ವಿಧ, ನಿಷ್ಟೆಯಿಲ್ಲದ ಹಾಗೂ ಲಾಭವಿಲ್ಲದ ವಿಧಾನ ಎಂದು ಜರಿದಿದ್ದಾರೆ.

ಕ್ವೈಟ್ ಕ್ವಿಟ್ಟಿಂಗ್ ಇದು ಏಕೆ ಸಂಭವಿಸುತ್ತಿದೆ?
ಅತ್ಯಂತ ಹಳೆಯ ಮ್ಯಾನೇಜ್‌ಮೆಂಟ್ ಕನ್ಸಲ್ಟಿಂಗ್ ಕಂಪನಿಯಾದ ಆರ್ಥರ್ ಡಿ. ಲಿಟಲ್‌ನ ಭಾರತ ಮತ್ತು ದಕ್ಷಿಣ ಏಷ್ಯಾದ ವ್ಯವಸ್ಥಾಪಕ ಪಾಲುದಾರರಾದ ಬಾರ್ನಿಕ್ ಮೈತ್ರಾ ಹೇಳುವಂತೆ ಕೋವಿಡ್ ನಂತರದ ರಿಮೋಟ್ ಇಲ್ಲವೇ ಹೈಬ್ರೀಡ್ ಕೆಲಸದ ಸಂಸ್ಕೃತಿಯ ಪರಿಣಾಮವು ಉದ್ಯೋಗದ ಮೇಲೆ ತೀವ್ರತರವಾಗಿದ್ದು, ಕೆಲಸದ ವಿಧಾನ ಈಗ ಬದಲಾಗುತ್ತಿದೆ ಎಂದು ಹೇಳಿದ್ದಾರೆ. ಸಾಂಕ್ರಾಮಿಕವು ಸಾಲು ಸಾಲು ಸವಾಲುಗಳನ್ನೇ ಪರಿಚಯಿಸಿದ್ದು, ಉದ್ಯೋಗಿಗಳ ಬೇಡಿಕೆ ಇದರಿಂದ ಹೆಚ್ಚಿತು ಅಂತೆಯೇ ಪರ್ಯಾಯ ಕೆಲಸದ ವ್ಯವಸ್ಥೆಗಳು ಹೇಗಿರಬೇಕು ಎಂಬುದನ್ನು ಕಲ್ಪಿಸಲು ಉದ್ಯೋಗಿಗಳಿಗೆ ಅವಕಾಶ ಮಾಡಿಕೊಟ್ಟಿತು ಎಂದು ತಿಳಿಸುತ್ತಾರೆ.

ರಿಮೋಟ್ ಉದ್ಯೋಗವು ಕ್ವೈಟ್ ಕ್ವಿಟ್ಟಿಂಗ್‌ ಅನ್ನು ಬಹುವಾಗಿ ಉತ್ತೇಜಿಸಿದೆ ಎಂದು ತಿಳಿಸಿರುವ ಅವರು ರಿಮೋಟ್ ಕೆಲಸವು ಉದ್ಯೋಗಿಗಳ ಕೆಲಸದ ಅವಧಿಯನ್ನು ಹೆಚ್ಚಿಸಿದ್ದು ಇದರಿಂದ ಅವರ ಮಾನಸಿಕ ಹಾಗೂ ದೈಹಿಕ ಒತ್ತಡದ ಮೇಲೆ ಪರಿಣಾಮ ಬೀರಿದೆ, ಹೀಗಾಗಿಯೇ ಅವರು ಕೆಲವೊಂದು ಜವಬ್ದಾರಿಗಳನ್ನು ನಿರ್ವಹಿಸುವಲ್ಲಿಂದ ನುಣುಚಿಕೊಂಡರು ಹಾಗೂ ಕ್ವೈಟ್ ಕ್ವಿಟ್ಟಿಂಗ್‌ನ ಮೊರೆ ಹೋಗುತ್ತಿದ್ದಾರೆ ಎಂದು ತಿಳಿಸಿದ್ದಾರೆ.

ಸುದ್ದಿ ಪತ್ರಿಕೆಯು ವರದಿ ಮಾಡಿರುವಂತೆ ಏಪ್ರಿಲ್ 2020 ರಲ್ಲಿ ಮನೆಯಿಂದಲೇ ಕೆಲಸ ನಿರ್ವಹಿಸುವ ಅಮೆರಿಕನ್ನರು ಪ್ರತೀ ದಿನ ಮೂರುಗಂಟೆಗಳ ಕಾಲ ಕೆಲಸ ಮಾಡಿ ಕೆಲಸದ ಉಳಿದ ಸಮಯವನ್ನು ಜೂಮ್ ಮೀಟಿಂಗ್ ಹಾಗೂ ಸ್ಲಾಕ್ ಸಂದೇಶವಾಗಿ ಮಾರ್ಪಡಿಸಿಕೊಂಡರು ಎಂದು ಉಲ್ಲೇಖಿಸಿದೆ. ಯುವ ಉದ್ಯೋಗಿಗಳು ಕ್ವೈಟ್ ಕ್ವಿಟ್ಟಿಂಗ್ ಪ್ರವೃತ್ತಿಗೆ ಹೆಚ್ಚು ಒಳಗಾಗುತ್ತಿದ್ದಾರೆ. ಎಂಪ್ಲಾಯ್‌ಮೆಂಟ್ ಹೀರೋ 2022 ರ ಅಧ್ಯಯನದ ಪ್ರಕಾರ 53% ದಷ್ಟು ಉದ್ಯೋಗಿಗಳು ಕೆಲಸದ ಒತ್ತಡದಿಂದ ಪರಿಣಾಮಕ್ಕೊಳಗಾಗಿದ್ದು 52% ದಷ್ಟು ಉದ್ಯೋಗಿಗಳ ವೃತ್ತಿ ಹಾಗೂ ವೈಯಕ್ತಿಕ ಜೀವನ ದುರ್ಬಲವಾಗಿದೆ ಎಂದು ಉಲ್ಲೇಖಿಸಿದೆ.

ಕ್ವೈಟ್ ಕ್ವಿಟ್ಟಿಂಗ್ ಕಂಪೆನಿಗಳ ಮೇಲೆ ಹೇಗೆ ಪರಿಣಾಮ ಬೀರುತ್ತದೆ?
ಗ್ಯಾಲಪ್‌ನ ಸ್ಟೇಟ್ ಆಫ್ ದಿ ಗ್ಲೋಬಲ್ ವರ್ಕ್‌ಪ್ಲೇಸ್ ವರದಿಯ ಪ್ರಕಾರ, ಉದ್ಯೋಗಿಗಳ ಕ್ವೈಟ್ ಕ್ವಿಟ್ಟಿಂಗ್ ನೀತಿಯಿಂದ ಜಾಗತಿಕ ಆರ್ಥಿಕತೆಯು $7.8 ಟ್ರಿಲಿಯನ್ ನಷ್ಟು ಉತ್ಪಾದಕತೆಯನ್ನು ಕಳೆದುಕೊಂಡಿದೆ ಎಂದಾಗಿದೆ.

ಇದನ್ನೂ ಓದಿ:  Wipro: ವಿಪ್ರೋ ಸಂಸ್ಥೆಯಿಂದ 300 ಉದ್ಯೋಗಿಗಳ ವಜಾ, ಕಂಪನಿ ನಿಯಮ ಉಲ್ಲಂಘನೆಗೆ ಶಿಕ್ಷೆ!

ಈ ವರ್ಷದ ಎರಡನೇ ತ್ರೈಮಾಸಿಕದಲ್ಲಿ, US ಕಾರ್ಮಿಕರ ಉತ್ಪಾದಕತೆಯು ಕಳೆದ ವರ್ಷದ ಇದೇ ಅವಧಿಗೆ ಹೋಲಿಸಿದರೆ ಶೇಕಡಾ 2.5 ರಷ್ಟು ಕುಸಿದಿದೆ. ಬ್ಯೂರೋ ಆಫ್ ಲೇಬರ್ ಸ್ಟ್ಯಾಟಿಸ್ಟಿಕ್ಸ್ ಪ್ರಕಾರ ಇದು ವಾರ್ಷಿಕ ಕುಸಿತಕ್ಕೆ ಕಾರಣವಾಗಿದೆ ಎಂದಾಗಿದೆ.
Published by:Ashwini Prabhu
First published: