• Home
  • »
  • News
  • »
  • business
  • »
  • Corgis Dog: ರಾಣಿ ಎಲಿಜಬೆತ್ ಅಚ್ಚುಮೆಚ್ಚಿನ ಕಾರ್ಗಿ ನಾಯಿಗಳಿಗೆ ಫುಲ್‌ ಡಿಮ್ಯಾಂಡ್‌!

Corgis Dog: ರಾಣಿ ಎಲಿಜಬೆತ್ ಅಚ್ಚುಮೆಚ್ಚಿನ ಕಾರ್ಗಿ ನಾಯಿಗಳಿಗೆ ಫುಲ್‌ ಡಿಮ್ಯಾಂಡ್‌!

ರಾಣಿ ಎಲಿಜಬೆತ್ ಅವರ ಪ್ರೀತಿಯ ನಾಯಿಗಳು

ರಾಣಿ ಎಲಿಜಬೆತ್ ಅವರ ಪ್ರೀತಿಯ ನಾಯಿಗಳು

Corgis Dog: ಮೊದಲಿನಿಂದಲೂ ನಾಯಿಗಳ ಸಾಕುವಿಕೆ ಬಗ್ಗೆ ಹೆಚ್ಚು ಆಸಕ್ತಿ ಹೊಂದಿದ್ದ ರಾಣಿ ಎಲಿಜಬೆತ್‌ ಕೊರ್ಗಿಸ್‌ ತಳಿಯ ನಾಯಿಗಳನ್ನು ಸಾಕಿದ್ದರು. ರಾಣಿಯ ಸಾವಿನ ನಂತರ ಈ ಕೊರ್ಗಿಸ್‌ ತಳಿಯ ನಾಯಿಗಳು ಹೆಚ್ಚು ಸುದ್ದಿಯಲ್ಲಿವೆ

  • Share this:

ರಾಣಿ ಎಲಿಜಬೆತ್ ನ ಅಚ್ಚುಮೆಚ್ಚಿನ ಕೊರ್ಗಿಸ್ ನಾಯಿಗಳಿಗೆ ಮಾರುಕಟ್ಟೆಯಲ್ಲಿ ಫುಲ್‌ ಡಿಮ್ಯಾಂಡ್ (Demand)‌‌ ಬಂದಿದೆಯಂತೆ. ಅಷ್ಟೇ ಅಲ್ಲ ಮೊದಲ ಬಾರಿಗೆ ಈ ನಾಯಿಗಳ ಬೆಲೆ (Price) ದುಪ್ಪಟ್ಟಾಗಿದೆ ಎಂದು ಮಾರುಕಟ್ಟೆ ಮೂಲಗಳು ತಿಳಿಸಿವೆ. ಇತ್ತೀಚೆಗಷ್ಟೇ ಸಾವನ್ನಪ್ಪಿದ ಬ್ರಿಟನ್ ಸಾಮ್ರಾಜ್ಯವನ್ನು ದೀರ್ಘಕಾಲ ಆಳಿದ ರಾಣಿ ಎಲಿಜಬೆತ್ ಶ್ವಾನ ಪ್ರಿಯರಾಗಿದ್ದರು. ರಾಣಿ ಎಲಿಜಬೆತ್ (Queen Elizabeth)‌ ಹಲವಾರು ನಾಯಿಗಳಿಗೆ ಆಶ್ರಯ ನೀಡಿದ್ದರು. ಇವರ ಸಾವಿನ (Death) ನಂತರ ಅವರ ಸಾಕುನಾಯಿಗಳು (Dogs) ಕೂಡ ಸಾಕಷ್ಟು ಚರ್ಚೆಯಲ್ಲಿದ್ದವು. ರಾಣಿಯ ಸಾವಿನ ನಂತರ ಯಾರು ಆ ನಾಯಿಗಳನ್ನು ನೋಡಿಕೊಳ್ಳುತ್ತಾರೆ ಎಂಬ ಪ್ರಶ್ನೆ (Question) ಎಲ್ಲರಲ್ಲೂ ಕಾಡಿತ್ತು.


ಮಾರುಕಟ್ಟೆಯಲ್ಲಿ ಕೊರ್ಗಿಸ್‌ ನಾಯಿಗೆ ಡಿಮ್ಯಾಂಡ್


ಮೊದಲಿನಿಂದಲೂ ನಾಯಿಗಳ ಸಾಕುವಿಕೆ ಬಗ್ಗೆ ಹೆಚ್ಚು ಆಸಕ್ತಿ ಹೊಂದಿದ್ದ ರಾಣಿ ಎಲಿಜಬೆತ್‌ ಕೊರ್ಗಿಸ್‌ ತಳಿಯ ನಾಯಿಗಳನ್ನು ಸಾಕಿದ್ದರು. ರಾಣಿಯ ಸಾವಿನ ನಂತರ ಈ ಕೊರ್ಗಿಸ್‌ ತಳಿಯ ನಾಯಿಗಳು ಹೆಚ್ಚು ಸುದ್ದಿಯಲ್ಲಿವೆ ಎನ್ನಬಹುದು.ಅಲ್ಲದೇ ಮಾರುಕಟ್ಟೆಯಲ್ಲಿ ಇವುಗಳ ಬೆಲೆ ಈಗ ದುಪ್ಪಟ್ಟಾಗಿದೆ ಎಂದು ಯುಕೆಯ ಅತಿದೊಡ್ಡ ಸಾಕುಪ್ರಾಣಿ ಮಾರುಕಟ್ಟೆ Pets4Homes ತಿಳಿಸಿದೆ.


ಸುದ್ದಿ ಮಾಧ್ಯಮಗಳ ಜೊತೆ ಮಾತನಾಡಿದ Pets4Homes ಸಿಬ್ಬಂದಿ " ಕಳೆದ ಒಂದು ವಾರದಿಂದ ಕೊರ್ಗಿಸ್‌ ನಾಯಿಗಳಿಗೆ ಬೇಡಿಕೆ ಹೆಚ್ಚಿದೆ. ಸಾಕಷ್ಟು ಮಂದಿ ಬಂದು ಕೊರ್ಗಿಸ್‌ ಜಾತಿಯ ನಾಯಿಗಳ ಲಭ್ಯತೆ ಬಗ್ಗೆ ವಿಚಾರಿಸುತ್ತಿದ್ದಾರೆ. ಈ ಹಿಂದಿನಕ್ಕಿಂತ ಕೊರ್ಗಿಸ್‌ ನಾಯಿಗಳ ಬೇಡಿಕೆ ಹೆಚ್ಚಿದೆ" ಎಂದು ತಿಳಿಸಿದರು.ಇದೇ ಸಮಯದಲ್ಲಿ ಅವುಗಳ ಬೆಲೆ ಕೂಡ ಮಾರುಕಟ್ಟೆಯಲ್ಲಿ ದುಪ್ಪಟ್ಟಾಗಿದೆ ಎಂದು Pets4Homes ತಿಳಿಸಿದರು. ಕೊರ್ಗಿಸ್‌ ನಾಯಿಗಳ ತಳಿಗಳನ್ನು ಮೊದಲ ಬಾರಿಗೆ ಈಗ $2,678 (ರೂ. 218,062) ಮಾರಟ ಮಾಡಲಾಗುತ್ತಿದೆ. ಇದೇ ಮೊದಲ ಬಾರಿಗೆ ಈ ಜಾತಿಯ ನಾಯಿಗಳನ್ನು ಈ ಬೆಲೆಗೆ ಮಾರುತ್ತಿರುವುದು ಎಂದು Pets4Homes ತಿಳಿಸಿದೆ.


ರಾಣಿಯ ಅತ್ಯುತ್ತಮ ಒಡನಾಡಿಯಾಗಿದ್ದ ಕೊರ್ಗಿಸ್


ರಾಣಿಗೆ ಕೊರ್ಗಿಸ್‌ ನಾಯಿಗಳು ಸಾಕಷ್ಟು ಅಚ್ಚುಮೆಚ್ಚಾಗಿದ್ದವು ಮತ್ತು ರಾಣಿಯ ಸೇವಕರಲ್ಲಿ ಅತ್ಯಂತ ನಿಷ್ಠಾವಂತರಾಗಿದ್ದವು. ಮೊನಚಾದ ಕಿವಿಗಳನ್ನು ಹೊಂದಿರುವ, ಮರಳು-ಬಣ್ಣದ ಕೊರ್ಗಿಸ್ ನಾಯಿಗಳು ರಾಣಿಯ ಆಸ್ಥಾನದಲ್ಲಿದ್ದವು. ರಾಣಿಯ ಜೊತೆ ಯಾವಾಗಲೂ ಇರುತ್ತಿದ್ದ ಈ ನಾಯಿಗಳು ಅಧಿಕೃತ ಫೋಟೋಗಳಲ್ಲಿ ಸಹ ಕಾಣಿಸಿಕೊಂಡಿವೆ.2012 ರ ಲಂಡನ್ ಒಲಿಂಪಿಕ್ಸ್‌ನ ಉದ್ಘಾಟನಾ ಸಮಾರಂಭಕ್ಕೆ ರಾಣಿಯು ಈ ನಾಯಿಗಳ ಜೊತೆ ಬಂದಿದ್ದರು. ಈ ವೇಳೆ ರಾಣಿಯೊಂದಿಗೆ ಚಿತ್ರೀಕರಿಸಲಾದ ಸ್ಪೂಫ್ ಜೇಮ್ಸ್ ಬಾಂಡ್ ಕ್ಲಿಪ್‌ನಲ್ಲಿ ಕೊರ್ಗಿಸ್‌ ಗಳಿಗೆ ಪ್ರಮುಖ ಪಾತ್ರವನ್ನು ನೀಡಲಾಯಿತು.


ಇದನ್ನೂ ಓದಿ: ಚಿನ್ನ ಕೊಳ್ಳೋರಿಗಿಲ್ಲ ಟೆನ್ಶನ್, ಬೆಳ್ಳಿ ದರದಲ್ಲೂ ಬದಲಾವಣೆ ಇಲ್ಲ: ಹೀಗಿದೆ ಇಂದಿನ ದರ


ತಮ್ಮ ಅಧಿಕಾರವಧಿಯ ಉದ್ದಕ್ಕೂ ರಾಣಿ ವಿಕ್ಟೋರಿಯಾ ಸುಮಾರು 30 ಕೊರ್ಗಿಗಳನ್ನು ಸಾಕಿದ್ದರು. "ರಾಣಿ ಹದಿನೆಂಟು ವರ್ಷದವಳಿದ್ದಾಗ ತನ್ನ ತಂದೆ ಕಿಂಗ್ ಜಾರ್ಜ್ VI ರಿಂದ ತನ್ನ ಮೊದಲ ಕೊರ್ಗಿ ಸುಸನ್ ಅನ್ನು ಉಡುಗೊರೆಯಾಗಿ ಪಡೆದರು. ನಂತರ ಅವರು ಹೆಚ್ಚು ಕೊರ್ಗಿಸ್‌ ನಾಯಿಗಳ ಸಾಕುವಿಕೆಗೆ ಆದ್ಯತೆ ನೀಡಿದರು" ಎಂದು ಕೆನಲ್ ಕ್ಲಬ್ ಮುಖ್ಯ ಕಾರ್ಯನಿರ್ವಾಹಕ ಮಾರ್ಕ್ ಬೀಜ್ಲೆ ತಿಳಿಸಿದರು.


ನಾಯಿಗಳ ಊಟವನ್ನು ಖುದ್ದು ಮೇಲ್ವಿಚಾರಣೆ ಮಾಡುತ್ತಿದ್ದ ರಾಣಿ


16 ನೇ ಶತಮಾನದಿಂದಲೂ ಬ್ರಿಟಿಷ್ ರಾಯಲ್ ಸಾಕುಪ್ರಾಣಿಗಳ ಕುರಿತು ಬರೆಯುತ್ತಿದ್ದ ಲೇಖಕ ಬ್ರಿಯಾನ್ ಹೋಯ್ ಬರೆದ "ಪೆಟ್ಸ್ ಬೈ ರಾಯಲ್ ಅಪಾಯಿಂಟ್‌ಮೆಂಟ್" ಪ್ರಕಾರ ರಾಣಿಯು ತಮ್ಮ ಸಾಕುನಾಯಿಗಳ ದಿನನಿತ್ಯದ ಊಟವನ್ನು ಅವರೇ ಖುದ್ದಾಗಿ ಮೇಲ್ವಿಚಾರಣೆ ಮಾಡುತ್ತಿದ್ದರಂತೆ.


ರಾಣಿಯ ಮರಣದ ನಂತರ ನಾಯಿಗಳು ಯಾರ ತೆಕ್ಕೆಗೆ?


ಪ್ರಸ್ತುತ ರಾಣಿಯ ಮರಣದ ನಂತರ ಅವರ ಮಗ ರಾಜಕುಮಾರ ಪ್ರಿನ್ಸ್‌ ಆ್ಯಂಡ್ರ್ಯೂ ಮತ್ತು ಅವರ ಮಾಜಿ ಸಂಗಾತಿ ಸಾರಾ ಫರ್ಗುಸನ್, ರಾಣಿಯ ಕೊರ್ಗಿಸ್‌ ನಾಯಿಗಳನ್ನು ನೋಡಿಕೊಳ್ಳುತ್ತಾರೆ ಎನ್ನಲಾಗುತ್ತಿದೆ.ಎರಡನೇ ಎಲಿಜಬೆತ್‌ ರಾಣಿಯ ಕೊರ್ಗಿಸ್‌ ತಳಿಯ ನಾಯಿಗಳಾದ ಮುಯಿಕ್ ಮತ್ತು ಸ್ಯಾಂಡಿಯನ್ನು ಪ್ರಿನ್ಸ್‌ ಆ್ಯಂಡ್ರ್ಯೂ ಮತ್ತು ಸಾರಾ ಫರ್ಗುಸನ್ ನೋಡಿಕೊಳ್ಳಲಿದ್ದಾರೆ ಎಂದು ಆಂಡ್ರ್ಯೂ ಅವರ ವಕ್ತಾರರು ತಿಳಿಸಿದ್ದಾರೆ.


ಇದನ್ನೂ ಓದಿ: ಆಧಾರ್ ಕಾರ್ಡ್ ಹೊಂದಿರುವವರಿಗೆ ಎಚ್ಚರಿಕೆ, ಈ 4 ಕೆಲಸಗಳನ್ನು ಮಾಡಲೇಬೇಡಿ!


ಇಂಗ್ಲೆಂಡ್‌ನ ವಿಂಡ್ಸರ್‌ನಲ್ಲಿರುವ ರಾಯಲ್ ಲಾಡ್ಜ್‌ನಲ್ಲಿ ವಿಚ್ಛೇದಿತ ದಂಪತಿಗಳೊಂದಿಗೆ ನಾಯಿಗಳು ವಾಸಿಸುತ್ತವೆ ಎನ್ನಲಾಗಿದೆ. ಎರಡು ಕೊರ್ಗಿಸ್ ತಳಿಯ ಶ್ವಾನಗಳಾದ ಮುಯಿಕ್ ಮತ್ತು ಸ್ಯಾಂಡಿ ಹಾಗೂ ಡೊರ್ಗಿ ತಳಿಯ ಶ್ವಾನ ಕ್ಯಾಂಡಿ ಜೊತೆಗೆ ಕಾಕರ್ ಸ್ಪೇನಿಯಲ್‌ ತಳಿಯ ಶ್ವಾನವನ್ನು ರಾಣಿ ಹೊಂದಿದ್ದರು.

Published by:ಗುರುಗಣೇಶ ಡಬ್ಗುಳಿ
First published: