PVR and Inox: ಐನಾಕ್ಸ್ ಮತ್ತು ಪಿವಿಆರ್ ವಿಲೀನ ಆಗೋದು ಪಕ್ಕಾನಾ? ಈ ಬಗ್ಗೆ ಮೂಲಗಳು ಹೇಳುವುದೇನು?

ಸದ್ಯಕ್ಕೆ ನಡೆದಿರುವ ವಿದ್ಯಮಾನವೊಂದರ ಪ್ರಕಾರ, ಮಲ್ಟಿಪ್ಲೆಕ್ಸ್ ಆಪರೇಟರ್ ಪಿವಿಆರ್ (PVR) ತನ್ನ ಷೇರುದಾರರು (Shareholders) ಹಾಗೂ ಸಾಲದಾತರ, ಪ್ರತಿಸ್ಪರ್ಧಿಯಾದ ಐನಾಕ್ಸ್ (Inox) ಲೀಸರ್ ಜೊತೆಗಿನ ವಿಲೀನಕ್ಕೆ ಸಂಬಂಧಿಸಿದಂತೆ ಅನುಮೋದನೆ ಪಡೆಯಲು ಅಕ್ಟೋಬರ್ 11 ರಂದು ಸಭೆ ಕರೆದಿರುವುದಾಗಿ ತಿಳಿದುಬಂದಿದೆ. ಅದರಲ್ಲಿ ಏನಾಗುತ್ತೆ ಎನ್ನುವುದು ಸದ್ಯದ ಕುತೂಹಲ.

ಸಾಂಕೇತಿಕ ಚಿತ್ರ

ಸಾಂಕೇತಿಕ ಚಿತ್ರ

  • Share this:
ಈಗ ಎಲ್ಲಿ ನೋಡಿದರೂ ಸಾಕಷ್ಟು ಸ್ಪರ್ಧೆಯಿರುವುದು (competition) ಕಂಡುಬರುತ್ತದೆ. ಇದು ವ್ಯಾಪಾರ-ವ್ಯವಹಾರಗಳನ್ನೂ ಸಹ ಹೊರತುಪಡಿಸಿಲ್ಲ. ಪ್ರತಿಯೊಬ್ಬರೂ ಹೆಚ್ಚಿನ ಆದಾಯ (Income) ಹಾಗೂ ವಿಸ್ತರಣೆಗಾಗಿ ಹಲವು ಬಗೆಯ ವಿಲೀನದಂತಹ ಅಂಶಗಳಿಗೂ ಒತ್ತು ನೀಡುತ್ತಿದ್ದಾರೆ. ಸದ್ಯಕ್ಕೆ ನಡೆದಿರುವ ವಿದ್ಯಮಾನವೊಂದರ ಪ್ರಕಾರ, ಮಲ್ಟಿಪ್ಲೆಕ್ಸ್ ಆಪರೇಟರ್ ಪಿವಿಆರ್ (PVR) ತನ್ನ ಷೇರುದಾರರು (Shareholders) ಹಾಗೂ ಸಾಲದಾತರ, ಪ್ರತಿಸ್ಪರ್ಧಿಯಾದ ಐನಾಕ್ಸ್ (Inox) ಲೀಸರ್ ಜೊತೆಗಿನ ವಿಲೀನಕ್ಕೆ ಸಂಬಂಧಿಸಿದಂತೆ ಅನುಮೋದನೆ ಪಡೆಯಲು ಅಕ್ಟೋಬರ್ 11 ರಂದು ಸಭೆ ಕರೆದಿರುವುದಾಗಿ ತಿಳಿದುಬಂದಿದೆ. ಈ ವಿಷಯಕ್ಕೆ ಸಂಬಂಧಿಸಿದಂತೆ ಇತ್ತೀಚಿಗಷ್ಟೆ ನ್ಯಾಷನಲ್ ಕಂಪನಿ ಲಾ ಟ್ರಿಬ್ಯೂನಲ್ (NCLT) ಆಗಸ್ಟ್ 22 ರಂದು ಪಿವಿಆರ್ ಸಂಸ್ಥೆಗೆ ನಿರ್ದೇಶನ ನೀಡಿದ ಹಿನ್ನೆಲೆಯಲ್ಲಿ ಈ ಬೆಳವಣಿಗೆಯಾಗಿದೆ.

ಈ ಕುರಿತು ಪಿವಿಆರ್ ಹೇಳಿಕೆಯನ್ನು ಬಿಡುಗಡೆ ಮಾಡಿದ್ದು ಅದರಲ್ಲಿ, "ಆಗಸ್ಟ್ 22 ರಂದು ಹೊರಡಿಸಲಾದ ನಿರ್ದೇಶನ ನಮಗೆ ಸೆಪ್ಟೆಂಬರ್ 5ರಂದು ತಲುಪಿದ್ದು ಆ ಪ್ರಕಾರವಾಗಿ ನಾವು ನಮ್ಮ ಈಕ್ವಿಟಿ ಹೋಲ್ಡರುಗಳ ಸಭೆಯನ್ನು ವಿಡಿಯೋ ಮಾಧ್ಯಮ ಅಥವಾ ಅದಕ್ಕೆ ಸರಿಸಮಾನವಾದ ಯಾವುದಾದರೂ ಮಾಧ್ಯಮಗಳ ಮೂಲಕ ನಡೆಸಲು ಅಕ್ಟೋಬರ್ 11, 2022 ಬೆಳಗ್ಗೆ 11:30 ರಂದು ಆಯೋಜಿಸುತ್ತಿದ್ದೇವೆ" ಎಂದು ಹೇಳಿದೆ.

ಪಿವಿಆರ್ ಹಾಗೂ ಐನಾಕ್ಸ್ ಲೀಸರ್ ವಿಲೀನ ಕುರಿತು ಸಭೆ 
ಮುಂದುವರೆಯುತ್ತ ಪಿವಿಆರ್ ಈ ಸಂಬಂಧ ಭೌತಿಕ ಸಭೆಯನ್ನೂ ಸಹ ಆಯೋಜಿಸಿದೆ. ಆ ಕುರಿತು ಸಹ ಹೇಳಿಕೆ ನೀಡಿರುವ ಸಂಸ್ಥೆ, ಪಿವಿಆರ್ ಸಂಸ್ಥೆಯ ಕ್ರೆಡಿಟರ್ಸ್ ಗಳ ಭೌತಿಕ ಉಪಸ್ಥಿತಿಯುಳ್ಳ ಸಭೆಯನ್ನು ಅದೇ ದಿನ ಮುಂಬೈನ ನೋಂದಾಯಿತ ಕಚೇರಿಯಲ್ಲಿ ಮಧ್ಯಾಹ್ನ 3 ಗಂಟೆಗೆ ನಡೆಸಲಾಗುವುದೆಂದೂ ಸಹ ತಿಳಿಸಿದೆ. ಈ ಪರಿಸ್ಥಿತಿಗೆ ಸಂಬಂಧಿಸಿದಂತೆ ನೋಡುವುದಾದರೆ, ಈ ವರ್ಷದ ಜೂನ್ ತಿಂಗಳಿನಲ್ಲಿ ಪಿವಿಆರ್ ಹಾಗೂ ಐನಾಕ್ಸ್ ಲೀಸರ್ ಈ ಎರಡೂ ಘಟಕಗಳ ವಿಲೀನಕ್ಕೆ ಸಂಬಂಧಿಸಿದಂತೆ ಎನ್‍ಎಸ್‍ಇ ಹಾಗೂ ಬಿಎಸ್‍ಇ ಗಳೆರಡೂ ಹಸಿರು ನಿಶಾನೆ ತೋರಿಸಿದ್ದವು ಎಂಬುದನ್ನು ಇಲ್ಲಿ ಸ್ಮರಿಸಿಕೊಳ್ಳಬಹುದು.

ಇದನ್ನೂ ಓದಿ:  Amazon: ಇನ್ಮುಂದೆ ಇದನ್ನೆಲ್ಲಾ ಅಮೇಜಾನ್​ನಲ್ಲಿ ಮಾರಂಗಿಲ್ಲ, ಕೇಂದ್ರ ಸರ್ಕಾರದಿಂದಲೇ ಖಡಕ್​ ವಾರ್ನಿಂಗ್​!

ಆದರೆ, ಕಳೆದ ತಿಂಗಳು ಲಾಭರಹಿತ ಸಂಸ್ಥೆಯಾದ CUTS ಈ ಸಂಭಾವ್ಯ ವಿಲೀನ ಪ್ರಕ್ರಿಯೆಯನ್ನು ಪ್ರಶ್ನಿಸಿ ಹಾಗೂ ಇದು ಚಿತ್ರ ಪ್ರದರ್ಶನ ಕ್ಷೇತ್ರದಲ್ಲಿ ಸ್ಪರ್ಧಾ ವಿರೋಧಕ ಅಂಶವನ್ನು ಸೃಷ್ಟಿಸಲಿದೆ ಎಂದು ವಾದಿಸಿ ಕಾಂಪಿಟಿಷನ್ ಕಮಿಶನ್ ಆಫ್ ಇಂಡಿಯಾ (CCI) ಮುಂದೆ ಈ ಪ್ರಕರಣವನ್ನು ಕೊಂಡೊಯ್ದಿತ್ತು. ಈ ಸಂದರ್ಭದಲ್ಲಿ ಅದು ಇದರ ಕುರಿತು ತನಿಖೆ ನಡೆಸಬೇಕೆಂದು CCI ಗೆ ಕೇಳಿಕೊಂಡಿತ್ತು.

ಎರಡು ಥೀಯೇಟರ್ ಗಳೂ ಬೇರೆ ಬೇರೆಯಾಗುತ್ತಾ?
ಇದಕ್ಕೂ ಮುಂಚೆ, ಪಿವಿಆರ್ ಹಾಗೂ ಐನಾಕ್ಸ್ ಲೀಸರ್ ಎರಡೂ ಒಟ್ಟಾಗುವ ಬಗ್ಗೆ ಘೋಷಣೆ ಮಾಡಿದ್ದವು. ಈ ವಿಲೀನದ ಮೂಲಕ ಎರಡೂ ಸಂಸ್ಥೆಗಳು ತಮ್ಮಲ್ಲಿರುವ ಒಟ್ಟು 15,00ಕ್ಕೂ ಹೆಚ್ಚು ಪರದೆಗಳ ಮೂಲಕ ಚಿತ್ರ ವ್ಯವಹಾರವನ್ನು 3, 4, ಹಾಗೂ 5ನೇ ಸ್ತರದ ನಗರಗಳಲ್ಲೂ ವಿಸ್ತರಿಸುವ ಉದ್ದೇಶ ಹೊಂದಿವೆ ಎನ್ನಲಾಗಿದೆ. ಈ ಒಟ್ಟಾರೆ ವಿಲೀನದ ಬ್ರ್ಯಾಂಡಿಂಗ್ ಪಿವಿಆರ್ ಐನಾಕ್ಸ್ ಲಿಮಿಟೆಡ್ ಎಂಬ ಹೆಸರಿನಲ್ಲಿರಲಿದ್ದು ಪ್ರತ್ಯೇಕ ಸಿನೆ ಮಂದಿರಗಳು ಸದ್ಯ ಪಿವಿಆರ್ ಹಾಗೂ ಐನಾಕ್ಸ್ ಹೆಸರುಗಳಲ್ಲೇ ಮುಂದುವರೆಯುತ್ತವೆ ಎನ್ನಲಾಗಿದೆ.

ಇದನ್ನೂ ಓದಿ: iPhone 14: ಐಫೋನ್​ 14ರ ದುಡ್ಡನ್ನು ಆ್ಯಪಲ್​ನಲ್ಲೇ ಇನ್ವೆಸ್ಟ್​ ಮಾಡಿ, ಐಫೋನ್​ 15ನ್ನು ಉಚಿತವಾಗಿ ಮನೆಗೆ ತನ್ನಿ!

ಒಂದೊಮ್ಮೆ ಎಲ್ಲ ವಿಲೀನದ ಪ್ರಕ್ರಿಯೆ ಸಂಪೂರ್ಣವಾಯಿತೆಂದರೆ ತದನಂತಹ ಈ ಸಿನೆ ಮಂದಿರಗಳು ಪಿವಿಆರ್ ಐನಾಕ್ಸ್ ಹೆಸರಿನಡಿಯಲ್ಲಿ ಕಾರ್ಯನಿರ್ವಹಿಸಲಿವೆ ಎನ್ನಲಾಗಿದೆ. ಒಟ್ಟಿನಲ್ಲಿ ಈಗ ವ್ಯಾಪಾರೋದ್ಯಮದಲ್ಲಿ ಹಿಂದೆಂದಿಗಿಂತಲೂ ಹೆಚ್ಚಿನ ಬದಲಾವಣೆಗಳಾಗುತ್ತಿರುವುದನ್ನು ಕಾಣಬಹುದಾಗಿದೆ. ಹಿಂದೊಮ್ಮೆ ಏಕ ಚಿತ್ರಮಂದಿರಗಳಷ್ಟೆ ಹೊಂದಿರುತ್ತಿದ್ದ ನಗರಗಳಲ್ಲಿ ಇದೀಗ ನಿಧಾನವಾಗಿ ಮಲ್ಟಿಪ್ಲೆಕ್ಸುಗಳು ಬರಲಾರಂಭಿಸಿದ್ದು ಏಕ ಚಿತ್ರಮಂದಿರ ಹೊಂದಿರುವ ಮಾಲಿಕರು ಅತಿ ಹೆಚ್ಚಿನ ಸ್ಪರ್ಧಾ ಒತ್ತಡ ಅನುಭವಿಸುತ್ತಿದ್ದಾರೆಂದರೆ ತಪ್ಪಾಗಲಾರದು.
Published by:Ashwini Prabhu
First published: