ಬೆಂಗಳೂರು: ಇದೀಗ ಸಾರ್ವಜನಿಕ-ಖಾಸಗಿ ಸಹಭಾಗಿತ್ವದ (PPP) ಅಡಿಯಲ್ಲಿ ಯೋಜನೆಗಳಿಗಿದ್ದ 25-ಕೋಟಿ ವೆಚ್ಚದ ಮಿತಿಯನ್ನು ರಾಜ್ಯ ಸರ್ಕಾರವು ಕೈಬಿಡಲು ನಿರ್ಧರಿಸಿದೆ. ಹೀಗಾಗಿ ಸಾರ್ವಜನಿಕ-ಖಾಸಗಿ ಸಹಭಾಗಿತ್ವದಲ್ಲಿ (Public Private Partnership) ಕೈಗೊಳ್ಳುವ ಯೋಜನೆಗಳಿಗೆ ಕನಿಷ್ಠ ದರವಾಗಿ ರೂ 25 ಕೋಟಿ ನಿಗದಿಪಡಿಸುವ ನಿರ್ಧಾರವನ್ನು ಸರ್ಕಾರ ಹಿಂಪಡೆದಿದೆ. ಜುಲೈ 2022 ರಲ್ಲಿ ರಾಜ್ಯ ಸರ್ಕಾರ ನೀತಿ ನಿರ್ಧಾರವನ್ನು ಕೈಗೊಂಡ ಐದು ತಿಂಗಳಲ್ಲಿ ಹಿಂತೆಗೆದುಕೊಂಡಿರುವ ಮಾಹಿತಿ ಕರ್ನಾಟಕ ಸರ್ಕಾರದಿಂದ (Karnataka Government) ಲಭ್ಯವಾಗಿದೆ.
ಸಭೆಯಲ್ಲಿ ತೆಗೆದುಕೊಂಡಿರುವ ತೀರ್ಮಾನಗಳೇನು?
23 ನೇ ರಾಜ್ಯಮಟ್ಟದ ಸಿಂಗಲ್ ವಿಂಡೋ ಏಜೆನ್ಸಿ (SLSWA) ಸಭೆಯಲ್ಲಿ PPP ಯೋಜನೆಗಳಿಗೆ 25 ಕೋಟಿ ರೂ.ಗಳ ಕನಿಷ್ಠ ವೆಚ್ಚದ ಮಿತಿಯನ್ನು ಹಿಂತೆಗೆದುಕೊಳ್ಳುವ ನಿರ್ಧಾರವನ್ನು ತೆಗೆದುಕೊಳ್ಳಲಾಗಿದೆ.
ಈ ಸಭೆಯಲ್ಲಿ ಕೈಗೊಂಡಿರುವ ತೀರ್ಮಾದಂತೆ PPP ಗೆ ಅರ್ಹತೆಯನ್ನು ನಿರ್ಧರಿಸಲು ಯೋಜನಾ ವೆಚ್ಚವನ್ನು ನಿಗದಿಪಡಿಸುವುದು ಸಮಂಜಸವಲ್ಲ ಎಂಬುದು ತಿಳಿದುಬಂದಿದೆ. PPP ಯೋಜನೆಗಳ ಪ್ರಕ್ರಿಯೆಯನ್ನು ಪರಿಸ್ಥಿತಿಗಳನ್ನು ಅವಲೋಕಿಸುವ ಮೂಲಕ ನಿರ್ಧರಿಸಬೇಕಾಗುತ್ತದೆ ಎಂಬ ತೀರ್ಮಾನವನ್ನು ಸಭೆಯಲ್ಲಿ ಕೈಗೊಳ್ಳಲಾಯಿತು ಎಂದು ವರದಿಯಾಗಿದೆ.
ಹೂಡಿಕೆದಾರರಿಗೆ ಪ್ರಯೋಜನಕಾರಿಯಾದುದಲ್ಲ
ಸರ್ಕಾರವ ತನ್ನ 2022ರ ಆರ್ಡರ್ ಅನ್ನು ಹಿಂತೆಗೆದುಕೊಳ್ಳುವ ಸೂಚನೆಯನ್ನು ಕಳೆದ ವಾರ ಬಿಡುಗಡೆ ಮಾಡಿದೆ ಎಂಬುದಾಗಿ ವರದಿಯಾಗಿದ್ದು, ಈ ಕುರಿತು ಹೆಚ್ಚುವರಿ ಮುಖ್ಯ ಕಾರ್ಯದರ್ಶಿ (ಮೂಲಸೌಕರ್ಯ ಅಭಿವೃದ್ಧಿ) ಗೌರವ್ ಗುಪ್ತಾ ಅವರನ್ನು ಸಂಪರ್ಕಿಸಲು ಆಗಿಲ್ಲ ಎಂದು ಸುದ್ದಿಮಾಧ್ಯಮ ವರದಿ ಮಾಡಿದೆ.
ಇದನ್ನೂ ಓದಿ: Successful Businessmen: ಆರಂಭದಲ್ಲಿ ಪತ್ನಿಯರಿಂದ ಸಾಲ ಪಡೆದು ಯಶಸ್ವಿ ಉದ್ಯಮಿಗಳಾದವರ ಪಟ್ಟಿ
PPP ಯೋಜನೆಗಳಿಗೆ ಕನಿಷ್ಠ ವೆಚ್ಚದ ಮಿತಿಯನ್ನು ನಿಗದಿಪಡಿಸುವ ನಿರ್ಧಾರವನ್ನು ಹಿಂದಿನ ಮೂಲಸೌಕರ್ಯ ಅಭಿವೃದ್ಧಿ ಅಧಿಕಾರಿ ಅನಿಲ್ ಕುಮಾರ್ ತೆಗೆದುಕೊಂಡಿದ್ದು ಇದೀಗ ಅವರು ನಿವೃತ್ತಿ ಹೊಂದಿರುವುದಾಗಿ ತಿಳಿದುಬಂದಿದೆ.
ಈ ಸಮಯದಲ್ಲಿ ಕುಮಾರ್ ನಿರ್ಧಾರದ ಬಗೆಗೆ ಅಸಮಾಧಾನ ಹೊಂದಿದ್ದಾರೆಂದು ತಿಳಿದುಬಂದಿದ್ದು, ರೂ 25 ಕೋಟಿಗಿಂತ ಕಡಿಮೆ ವೆಚ್ಚದ ಸಣ್ಣ ಯೋಜನೆಗಳು ಹೂಡಿಕೆದಾರರಿಗೆ ಸೂಕ್ತವಾದುದಲ್ಲ ಎಂದು ವಾದಿಸಿದ್ದರು ಎಂಬುದಾಗಿ ವರದಿಯಾಗಿದೆ.
PPP ವಿಧಾನದಲ್ಲಿರುವ ಸಮಸ್ಯೆಗಳು
2007 ರಿಂದ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದ ಯಶಸ್ಸಿನಿಂದ ಉತ್ತೇಜಿತವಾಗಿರುವ ರಾಜ್ಯ ಸರ್ಕಾರವು PPP ಅಡಿಯಲ್ಲಿ 105 ಮೂಲಸೌಕರ್ಯ ಯೋಜನೆಗಳಿಗೆ ಅನುಮೋದನೆ ನೀಡಿದೆ.
ಇದನ್ನೂ ಓದಿ: Uttara Kannada: ಬಿದಿರಿಗೆ ಸೆಡ್ಡು ಹೊಡೆಯುತ್ತಿದೆ ಈ ಕಬ್ಬು, ಆಕಾಶಕ್ಕೆ ತಟ್ಟೋದೊಂದು ಬಾಕಿ!
ಆದರೆ, ಅವುಗಳಲ್ಲಿ ಏಳು ಮಾತ್ರ ಕಾರ್ಯರೂಪಕ್ಕೆ ಬಂದಿವೆ, ಇದು ಸರ್ಕಾರದ ವಿಧಾನದಲ್ಲಿನ ಮೂಲಭೂತ ನ್ಯೂನತೆಗಳನ್ನು ಸೂಚಿಸುತ್ತದೆ ಜೊತೆಗೆ PPP ವಿಧಾನದಲ್ಲಿರುವ ಸಮಸ್ಯೆಗಳನ್ನು ಉಲ್ಲೇಖಿಸಿದೆ.
PPP ಅಡಿಯಲ್ಲಿ ಯೋಜನೆ ತೆರವುಗೊಳಿಸಿದ SLSWA
SLSWA 300.68 ಕೋಟಿ ಮೌಲ್ಯದ PPP ಯೋಜನೆಗಳನ್ನು ತೆರವುಗೊಳಿಸಿದೆ. DBFOT ಮಾದರಿಯ ಅಡಿಯಲ್ಲಿ (ಡಿಸೈನ್, ಬಿಲ್ಡ್, ಫೈನಾನ್ಸ್, ಆಪರೇಟ್ ಮತ್ತು ಟ್ರಾನ್ಸ್ಫರ್) ರಾಮನಗರದ ಮಂಚನಬೆಲೆ ಅಣೆಕಟ್ಟಿನ ಅಭಿವೃದ್ಧಿ, ಥೀಮ್ ಪಾರ್ಕ್, ರೆಸಾರ್ಟ್, ರೆಸ್ಟೋರೆಂಟ್, ಜಲಕ್ರೀಡೆ ಮತ್ತು ಮನರಂಜನಾ ಕೇಂದ್ರದಂತಹ ಪ್ರವಾಸಿ ಸೌಲಭ್ಯಗಳೊಂದಿಗೆ ಅಭಿವೃದ್ಧಿಪಡಿಸಲಾಗುತ್ತಿದೆ. ಯೋಜನೆಗೆ ಅಂದಾಜು 144.69 ಕೋಟಿ ರೂ. ವೆಚ್ಚ ನಿರ್ಧರಿಸಲಾಗಿದೆ.
ಸಮ್ಮಿಶ್ರ ಸರಕಾರದ ಸಮಯದಲ್ಲಿ ಜಾರಿಗೆ ಬಂದ ನೀತಿ
ಇತರೆ ಯೋಜನೆಗಳಲ್ಲಿ, ಯಲಹಂಕದಲ್ಲಿ (2.03 ಎಕರೆ) ರೂ 132.59 ಕೋಟಿ ಹಾಗೂ ಧಾರವಾಡದಲ್ಲಿ ರೂ 23.40 ಕೋಟಿ ವೆಚ್ಚದಲ್ಲಿ ಕರ್ನಾಟಕ ಆಹಾರ ಮತ್ತು ನಾಗರಿಕ ಸರಬರಾಜು ನಿಗಮ ಲಿಮಿಟೆಡ್ಗೆ ಸೇರಿದ ಜಮೀನಿನ PPP ಅಭಿವೃದ್ಧಿಕಾರ್ಯಗಳು ಒಳಗೊಂಡಿವೆ. ಅಸ್ತಿತ್ವದಲ್ಲಿರುವ ಗೋದಾಮುಗಳನ್ನು ಚಿಲ್ಲರೆ ಮತ್ತು ವ್ಯಾಪಾರ ಸೌಲಭ್ಯಗಳೊಂದಿಗೆ ಆಧುನೀಕರಿಸಲಾಗುತ್ತದೆ. ಕಾಂಗ್ರೆಸ್-ಜೆಡಿ(ಎಸ್) ಸಮ್ಮಿಶ್ರ ಅಧಿಕಾರದಲ್ಲಿದ್ದಾಗ ಜಾರಿಗೆ ತಂದ ಈ ನೀತಿಯು 14 ಕ್ಷೇತ್ರಗಳನ್ನು ಒಳಗೊಂಡಿದ್ದು, 96 ಉಪ ವಲಯಗಳನ್ನು ಹೊಂದಿದೆ.
ಪ್ರವಾಸಿ ತಾಣಗಳ ಅಭಿವೃದ್ಧಿ
ಹಂಪಿ-ಬಾದಾಮಿ-ಐಹೊಳೆ-ಪಟ್ಟದಕಲ್ಲು-ವಿಜಯಪುರ ಮತ್ತು ಮೈಸೂರು-ಶ್ರೀರಂಗಪಟ್ಟಣ-ಹಾಸನ-ಬೇಲೂರು-ಹಳೇಬೀಡು ಎರಡು ವಲಯಗಳ ಪ್ರವಾಸಿ ತಾಣಗಳನ್ನು ಅಭಿವೃದ್ಧಿಪಡಿಸಲು PPP ಗೆ SLSWA ತಾತ್ವಿಕ ಅನುಮೋದನೆಯನ್ನು ನೀಡಿದೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ