• Home
  • »
  • News
  • »
  • business
  • »
  • Indian IT Companies: ಭಾರತೀಯ ಐಟಿ ಕಂಪನಿಗಳಿಗೆ ಕಿರಿಕಿರಿಯಾಗಿರುವ ಕನ್ಸಲ್ಟಿಂಗ್ ಸಂಸ್ಥೆಗಳು, ವರದಿ ಏನು ಹೇಳ್ತಿದೆ?

Indian IT Companies: ಭಾರತೀಯ ಐಟಿ ಕಂಪನಿಗಳಿಗೆ ಕಿರಿಕಿರಿಯಾಗಿರುವ ಕನ್ಸಲ್ಟಿಂಗ್ ಸಂಸ್ಥೆಗಳು, ವರದಿ ಏನು ಹೇಳ್ತಿದೆ?

ಸಾಂಕೇತಿಕ ಚಿತ್ರ

ಸಾಂಕೇತಿಕ ಚಿತ್ರ

ದೇಶದ ಸಾಫ್ಟ್‌ವೇರ್ ರಫ್ತುದಾರರಲ್ಲಿ ಅತಿದೊಡ್ಡ ಹೆಸರು ಮಾಡಿರುವ ಟಾಟಾ ಕನ್ಸಲ್ಟೆನ್ಸಿ ಸರ್ವಿಸಸ್ ಲಿಮಿಟೆಡ್, ನಿವ್ವಳ ಆದಾಯದಲ್ಲಿ ನಿರೀಕ್ಷೆಗಿಂತಲೂ ಉತ್ತಮವಾದ 8% ಬೆಳವಣಿಗೆಯನ್ನು ವರದಿ ಮಾಡಿದೆ. ಜೂನ್‌ವರೆಗಿನ ಮೂರು ತಿಂಗಳಲ್ಲಿ ಏಳು ವರ್ಷಗಳ ಕನಿಷ್ಠ ಮಟ್ಟ 23% ಕ್ಕೆ ಕುಸಿದ ಸಂಸ್ಥೆಯು, ಹೊಸ ನೇಮಕಾತಿ ಅನುಷ್ಠಾನವನ್ನು ಜಾರಿಗೆ ತಂದಿದ್ದರಿಂದ ಮುಂಬೈ ಮೂಲದ TCS ಸಂಸ್ಥೆ 1% ರಷ್ಟು ಏರಿಕೆಯನ್ನು ಕಂಡುಕೊಂಡಿದೆ ಎಂದು ವರದಿ ತಿಳಿಸಿದೆ.

ಮುಂದೆ ಓದಿ ...
  • Share this:

ಭಾರತದ (India) ಹೊರಗುತ್ತಿಗೆ ಸಂಸ್ಥೆಗಳಿಗೆ ತ್ರೈಮಾಸಿಕ ಗಳಿಕೆಯು ಆಶಾದಾಯಕವಾಗಿದೆ. ದೇಶದ ಸಾಫ್ಟ್‌ವೇರ್ ರಫ್ತುದಾರರಲ್ಲಿ ಅತಿದೊಡ್ಡ ಹೆಸರು ಮಾಡಿರುವ ಟಾಟಾ ಕನ್ಸಲ್ಟೆನ್ಸಿ ಸರ್ವಿಸಸ್ ಲಿಮಿಟೆಡ್, ನಿವ್ವಳ ಆದಾಯದಲ್ಲಿ (Net income) ನಿರೀಕ್ಷೆಗಿಂತಲೂ ಉತ್ತಮವಾದ 8% ಬೆಳವಣಿಗೆಯನ್ನು ವರದಿ ಮಾಡಿದೆ. ಜೂನ್‌ವರೆಗಿನ ಮೂರು ತಿಂಗಳಲ್ಲಿ ಏಳು ವರ್ಷಗಳ ಕನಿಷ್ಠ ಮಟ್ಟ 23% ಕ್ಕೆ ಕುಸಿದ ಸಂಸ್ಥೆಯು, ಹೊಸ ನೇಮಕಾತಿ ಅನುಷ್ಠಾನವನ್ನು ಜಾರಿಗೆ ತಂದಿದ್ದರಿಂದ ಮುಂಬೈ (Mumbai) ಮೂಲದ TCS ಸಂಸ್ಥೆ 1% ರಷ್ಟು ಏರಿಕೆಯನ್ನು ಕಂಡುಕೊಂಡಿದೆ ಎಂದು ವರದಿ ತಿಳಿಸಿದೆ. ಹೊರಗುತ್ತಿಗೆ ಕಂಪನಿ (Company) ಎನ್ನುವುದು ಒಂದು ಕಂಪನಿಯು ಮತ್ತೊಂದು ಕಂಪನಿಯನ್ನು ನೇಮಿಸಿಕೊಳ್ಳುವ ಒಪ್ಪಂದವಾಗಿದೆ.


ಐಟಿ ಸಂಸ್ಥೆಗಳನ್ನು ಬೆಂಬಿಡದಿರುವ ಸವಾಲುಗಳು
ಲಾಭದತ್ತ ಸಂಸ್ಥೆಗಳು ಮುಖಮಾಡಿದ್ದರೂ ಸವಾಲುಗಳು ಇದರ ಬೆನ್ನಲ್ಲೇ ಇವೆ. ಭಾರತೀಯ ಸಂಸ್ಥೆಗಳ ಮಾರಾಟದ ಕಾಲುಭಾಗದಿಂದ ಮೂರನೇ ಒಂದು ಭಾಗದಷ್ಟು ಪಾಲು ಹೊಂದಿರುವ ಯುರೋಪಿಯನ್ ಗ್ರಾಹಕರು, ಟೆಕ್ ಬಜೆಟ್‌ಗಳನ್ನು ಕಡಿತಗೊಳಿಸುವುದು ಬಹುತೇಕ ಖಚಿತವಾಗಿದೆ.


ಉಕ್ರೇನ್ ರಷ್ಯಾ ಯುದ್ಧಕೊನೆಗೊಳ್ಳುವವರೆಗೆ ಹಾಗೂ ಸಂಪನ್ಮೂಲ ಪೂರೈಕೆಯ ಸಾಮಾನ್ಯ ಮಟ್ಟಕ್ಕೆ ತಲುಪುವವರೆಗೆ ಬಜೆಟ್ ಕಡಿತವಿರಲಿದೆ ಎಂಬುದಾಗಿ ಊಹಿಸಲಾಗಿದೆ. ಹಣದುಬ್ಬರವನ್ನು ಸರಿದೂಗಿಸಲು ಫೆಡರಲ್ ರಿಸರ್ವ್ ಆರ್ಥಿಕತೆಯನ್ನು ನಿಧಾನಗೊಳಿಸುವುದರಿಂದ ಹೆಚ್ಚು ಪ್ರಮುಖವೆಂದೆನಿಸಿರುವ ಯುಎಸ್ ಮಾರುಕಟ್ಟೆ ಇದರಿಂದ ವಿಫಲಗೊಳ್ಳಲೂ ಬಹುದು.


ಹೊರಗುತ್ತಿಗೆ ಆರ್ಡರ್‌ಗಳನ್ನು ಅನ್ವೇಷಿಸುತ್ತಿರುವ ಅಮೆರಿಕನ್ ಕಂಪನಿಗಳು
ಕೆಲವೊಂದು ಅಮೆರಿಕನ್ ಕಂಪನಿಗಳು ಆರ್ಥಿಕ ಹಿಂಜರಿತದ ತೂಗು ಕತ್ತಿಯಲ್ಲಿ ತೂಗುತ್ತಿದ್ದು ವೆಚ್ಚ ನಿಯಂತ್ರಿಸುವ ಮಾಹಿತಿ ತಂತ್ರಜ್ಞಾನ ಸೇವೆಗಳನ್ನು ಅನ್ವೇಷಿಸಬಹುದು. ಅಂದರೆ ಹೊರಗುತ್ತಿಗೆ (ಬೇರೊಂದು ಕಂಪನಿಗಳನ್ನು ನೇಮಿಸಿಕೊಳ್ಳುವುದು) ಆರ್ಡರ್‌ಗಳನ್ನು ಹುಡುಕುವುದಾಗಿದೆ.


ಇದನ್ನೂ ಓದಿ: Business Idea For Women: ಹೆಣ್ಮಕ್ಕಳಿಗೆ ಹೇಳಿ ಮಾಡಿಸಿದ ಬ್ಯುಸಿನೆಸ್​ ಇದು, ಕಿಚನ್​ನಲ್ಲಿದ್ದೇ ಲಕ್ಷ ಲಕ್ಷ ಗಳಿಸಿ!


ಸಾಂಕ್ರಾಮಿಕವು ಆರ್ಥಿಕತೆಯ ಮೇಲೆ ಹೆಚ್ಚಿನ ಹಾನಿಯನ್ನುಂಟು ಮಾಡಿದ್ದರಿಂದ ಭಾರತೀಯ ಮಾರಾಟಗಾರರು ನಿಧಾನವಾಗಿ ಪ್ರಗತಿಯ ಮೆಟ್ಟಿಲೇರುತ್ತಿದ್ದಾರೆ. ಕೋವಿಡ್-19 ಲಾಕ್‌ಡೌನ್ ಸಮಯಗಳಲ್ಲಿ ಸುಲಭವಾಗಿ ನೇಮಿಸಿಕೊಳ್ಳಬಹುದಾದ ಕೋಡರ್‌ಗಳು ಜಾಗತಿಕ ಆರ್ಥಿಕತೆಯ ಪ್ರಗತಿಯೊಂದಿಗೆ ಇದೀಗ ಅಲಭ್ಯರಾಗುತ್ತಿದ್ದಾರೆ. ಕಳೆದ ತ್ರೈಮಾಸಿಕದಲ್ಲಿ ಟಿಸಿಎಸ್ ಅಟ್ರಿಷನ್ ದರ (ಉದ್ಯೋಗಿಗಳು ಸಂಸ್ಥೆಯನ್ನು ತೊರೆಯುವ ದರ) 21% ಕ್ಕಿಂತ ಹೆಚ್ಚಾಗಿದೆ ಎಂದು ವರದಿಯಾಗಿದೆ.


Y2K ಬಗ್ ಅಥವಾ ಮಿಲೇನಿಯಮ್ ಬಗ್
ಉದ್ಯಮದಲ್ಲಿ ತಲೆದೋರಿರುವ ಆರಂಭಿಕ ಸಮಸ್ಯೆಗಳಾಗಿ ಇವುಗಳನ್ನು ಕಾಣಲಾಗಿದೆ. Y2K ಬಗ್ ಭಾರತವನ್ನು ಟೆಕ್ ಸೇವೆಗಳ ಕ್ಷೇತ್ರದಲ್ಲಿ ಭಾರತವನ್ನು ಬೆಟ್ಟುಮಾಡಿದೆ. Y2K ಬಗ್ ಎಂಬುದು ಕಂಪ್ಯೂಟರ್ ದೋಷವಾಗಿದ್ದು ಇದನ್ನು ಮಿಲೇನಿಯಮ್ ಬಗ್ ಎಂದೂ ಕರೆಯುತ್ತಾರೆ. ಇದೊಂದು ಕೋಡಿಂಗ್ ಸಮಸ್ಯೆಯಾಗಿದ್ದು ಕಂಪ್ಯೂಟರ್‌ಗಳು ಮತ್ತು ಕಂಪ್ಯೂಟರ್ ನೆಟ್‌ವರ್ಕ್‌ಗಳಿಗೆ ಹಾನಿಯನ್ನುಂಟು ಮಾಡಿದೆ.


ಅದಾಗ್ಯೂ ಎರಡು ದಶಕಗಳ ನಂತರ ಭಾರತೀಯ ಸಾಫ್ಟ್‌ವೇರ್ ರಫ್ತುದಾರರು 100 ಶತಕೋಟಿಗಿಂತ ಹೆಚ್ಚಿನ ಆದಾಯವನ್ನು ಗಳಿಸಿದ್ದು, 2 ಮಿಲಿಯನ್ ಉದ್ಯೋಗಿಗಳನ್ನು ನೇಮಿಸಿಕೊಂಡಿದೆ ಮತ್ತು ಸುಮಾರು 350 ಶತಕೋಟಿ ಮಾರುಕಟ್ಟೆ ಬಂಡವಾಳವನ್ನು ಹೊಂದಿದೆ. ಇನ್ನು, ಟಿಸಿಎಸ್ ಮಾತ್ರವೇ IBMಗಿಂತ ಹೆಚ್ಚು ಮೌಲ್ಯಯುತ ಸ್ಥಾನವನ್ನು ಪಡೆದುಕೊಂಡಿದೆ. ಸಂಸ್ಥೆಯ ಹೊರಗುತ್ತಿಗೆ ಉದ್ಯಮವು ಜಾಗತಿಕ ಕಂಪನಿಗಳಿಗೆ ಕೆಲಸದಲ್ಲಿ ಘರ್ಷಣೆಯನ್ನು ಕಡಿಮೆ ಮಾಡಲು ಸಹಾಯ ಮಾಡಿವೆ.


ಪ್ರವೇಶ ಮಟ್ಟದ ಸ್ಥಾನಗಳು 20% ದಷ್ಟು ಕಡಿತ
ಮುಂದಿನ ಏಪ್ರಿಲ್‌ನಿಂದ ಪ್ರಾರಂಭವಾಗುವ ಹಣಕಾಸು ವರ್ಷದಲ್ಲಿ ಭಾರತೀಯ ಐಟಿ ಉದ್ಯಮದಲ್ಲಿ ಪ್ರವೇಶ ಮಟ್ಟದ ಸ್ಥಾನಗಳು 20% ದಷ್ಟು ಕಡಿತಗೊಳ್ಳಬಹುದು ಎಂದು ಸುದ್ದಿ ಪತ್ರಿಕೆ ವರದಿ ಮಾಡಿದೆ. ದೊಡ್ಡ ಪ್ರಮಾಣದ ಉದ್ಯಮ ಸಾಫ್ಟ್‌ವೇರ್‌ಗೆ ಬಂದಾಗ ಭಾರತೀಯ ಐಟಿ ಸಂಸ್ಥೆಗಳು ಇನ್ನೂ ಬಲವಾದ ಕಾರ್ಮಿಕ-ವೆಚ್ಚದ ಪ್ರಯೋಜನವನ್ನು ಹೊಂದಿವೆ. ಕ್ಲೌಡ್ ಆಧಾರಿತ ನಿರ್ವಹಣೆಯು ಸರ್ವೀಸ್ ನೌ ಇಂಕ್‌ನ ಆದಾಯದ ಏರಿಕೆಯನ್ನು ಆರು ಪ್ರತಿಶತ ಹೆಚ್ಚಿಸಿದೆ.


ಇದನ್ನೂ ಓದಿ:  Work From Home Rules: ವರ್ಕ್ ಫ್ರಮ್ ಹೋಮ್ ಅವರಿಗೆ ಮಾತ್ರ, ಐಟಿ ದಿಗ್ಗಜರ ಮಹತ್ವದ ನಿರ್ಧಾರ!


ಅಭಿವೃದ್ಧಿ ಪಥದಲ್ಲಿ ಮುಂದುವರಿಯುತ್ತಿರುವ ಜರ್ಮನ್ ಸ್ಟಾರ್ಟಪ್ ಸೆಲೋನಿಸ್, ಗ್ರಾಹಕರ ಕೊರತೆಗಳನ್ನು ಸರಿಪಡಿಸುವ ಪ್ರಕ್ರಿಯೆಗಳನ್ನು ಅನುಕರಿಸುತ್ತಿದೆ ಎಂದು ಹೇಳಿಕೊಂಡಿದ್ದು, ಸ್ಲ್ಯಾಕ್‌ ಉತ್ಪಾದಕತೆಯ ಸೇಲ್ಸ್‌ಫೋರ್ಸ್ Inc., 2017 ರಲ್ಲಿ SAP ಆದಾಯದ ಮೂರನೇ ಒಂದು ಭಾಗವನ್ನು ಹೊಂದಿತ್ತು. ಈಗ 12% ಕಡಿಮೆ ಆದಾಯಕ್ಕೆ ಕಾರಣವಾಗಿದೆ. ಶಾಪಿಫೈ Inc, ಒರಾಕಲ್‌ನ 6% ರ ವಿರುದ್ಧ ಡಿಜಿಟಲ್-ಕಾಮರ್ಸ್ ಸಾಫ್ಟ್‌ವೇರ್‌ನಲ್ಲಿ ಕಳೆದ ವರ್ಷ 19% ಪಾಲನ್ನು ಹೊಂದಿತ್ತು ಎಂದು ಬ್ಲೂಮ್‌ಬರ್ಗ್ ಇಂಟೆಲಿಜೆನ್ಸ್ ವರದಿ ಮಾಡಿದೆ.

Published by:Ashwini Prabhu
First published: