Priyanka Chopra: ‘ಸೋನಾ ಹೋಮ್ಸ್’ ಹೆಸರಿನಲ್ಲಿ ಮತ್ತೊಂದು ಬ್ಯುಸಿನೆಸ್ ಶುರು ಮಾಡಿದ ಪ್ರಿಯಾಂಕಾ ಚೋಪ್ರಾ

ಸೋನಾ ಹೋಮ್ ಎಂಬ ಹೊಸ ಹೋಮ್‍ವೇರ್ ಲೈನ್ ಆರಂಭಿಸಿರುವುದರ ಕುರಿತು ಪ್ರಿಯಾಂಕ ಚೋಪ್ರಾ ತಮ್ಮ ಇನ್‍ಸ್ಟಾಗ್ರಾಂನಲ್ಲಿ ಘೋಷಣೆ ಮಾಡಿದರು. ಅದಕ್ಕೆ ಸಂಬಂಧಿಸಿದಂತೆ ಅವರು ಪೋಸ್ಟ್ ಮಾಡಿದ್ದ ಆ ವಿಡಿಯೋದಲ್ಲಿ, ತನ್ನ ಸೋನಾ ಹೋಮ್ ಬ್ರಾಂಡ್‍ನ ಕೆಲವು ವಸ್ತುಗಳನ್ನು ತೋರಿಸಿದ್ದಾರೆ.

ಸೋನಾ ಹೋಮ್ಸ್

ಸೋನಾ ಹೋಮ್ಸ್

  • Share this:
ಬಾಲಿವುಡ್ (Bollywood) ಮಾತ್ರವಲ್ಲದೆ, ಹಾಲಿವುಡ್‍ನಲ್ಲಿಯೂ ಜನಪ್ರಿಯತೆ ಗಳಿಸಿರುವ ಪ್ರಿಯಾಂಕ ಚೋಪ್ರಾ (Priyanka Chopra), ಪ್ರತಿಭೆಗೆ ತಕ್ಕಂತೆ ಅವಕಾಶಗಳನ್ನು ಗಿಟ್ಟಿಸಿಕೊಳ್ಳುವಲ್ಲಿ ಯಶಸ್ವಿಯಾಗಿರುವ ಭಾರತೀಯ ನಟಿಯರಲ್ಲಿ (Indian Actress) ಒಬ್ಬರು. ಹಾಲಿವುಡ್‍ನಲ್ಲಿ ನಟಿಸಲೆಂದು ಯೂಎಸ್‍ಗೆ ಹಾರಿದ್ದ ಪ್ರಿಯಾಂಕ, ಅಲ್ಲಿ ವೃತ್ತಿ ಜೀವನದಲ್ಲಿ ಯಶಸ್ಸನ್ನು ಪಡೆದದ್ದು ಮಾತ್ರವಲ್ಲ, ಗಾಯಕ ನಿಕ್ ಜೋನಸ್ (Nick Jonas) ಅನ್ನು ಮದುವೆಯಾಗಿ ಅಲ್ಲೇ ನೆಲೆಸಿರುವುದು ಎಲ್ಲರಿಗೂ ಗೊತ್ತಿರುವ ಸಂಗತಿ. ಪ್ರಿಯಾಂಕ ಈಗ ಒಬ್ಬ ಉದ್ಯಮಿಯೂ ಕೂಡ. ಕಳೆದ ವರ್ಷವಷ್ಟೆ ಆಕೆ ಯೂಎಸ್‍ನಲ್ಲಿ ಸೋನಾ ಎಂಬ ರೆಸ್ಟೊರೆಂಟ್ ಅನ್ನು ಆರಂಭಿಸಿದ್ದರು. ತನ್ನ ದೇಶದಿಂದ ದೂರ, ಯೂಎಸ್‍ನಲ್ಲಿ ವಲಸೆಗಾರಳಾಗಿ ನೆಲೆಸಿರುವುದರ ಬಗ್ಗೆ ಮತ್ತು ಸೋನಾ ಹೋಮ್ (Sona Homes) ಎಂಬ ಹೊಸ ಹೋಮ್‍ವೇರ್ ಲೈನ್ ಅನ್ನು ಆರಂಭಿಸಿರುವುದರ ಬಗ್ಗೆ ಪ್ರಿಯಾಂಕ ಮಾತನಾಡಿದ್ದಾರೆ.

ಕೆಲಸಕ್ಕೆಂದು ಯೂಎಸ್‍ಗೆ ಹೋದ ಬಳಿಕ ಮತ್ತು ನಟ-ಗಾಯಕ ನಿಕ್ ಜೋನಸ್ ಅನ್ನು ಮದುವೆಯಾದ ಬಳಿಕ, ಆ ದೇಶದಲ್ಲಿ ಎರಡನೇ ಮನೆಯನ್ನು ಮಾಡಿಕೊಳ್ಳುವುದು ಅವರ ಪಾಲಿಗೆ ಸವಾಲಿನ ಸಂಗತಿ ಆಗಿತ್ತಂತೆ.

ಸೋಶಿಯಲ್ ಮೀಡಿಯಾದಲ್ಲಿ ಸೋನಾ ಹೋಮ್ ಬಗ್ಗೆ ಪೋಸ್ಟ್
ತಾನು ಸೋನಾ ಹೋಮ್ ಎಂಬ ಹೊಸ ಹೋಮ್‍ವೇರ್ ಲೈನ್ ಅನ್ನು ಆರಂಭಿಸಿರುವುದರ ಕುರಿತು ಪ್ರಿಯಾಂಕ ಚೋಪ್ರಾ, ಬುಧವಾರ ಇನ್‍ಸ್ಟಾಗ್ರಾಂನಲ್ಲಿ ಘೋಷಣೆ ಮಾಡಿದರು. ಅದಕ್ಕೆ ಸಂಬಂಧಿಸಿದಂತೆ ಅವರು ಪೋಸ್ಟ್ ಮಾಡಿದ್ದ ಆ ವಿಡಿಯೋದಲ್ಲಿ, ತನ್ನ ಸೋನಾ ಹೋಮ್ ಬ್ರಾಂಡ್‍ನ ಕೆಲವು ವಸ್ತುಗಳನ್ನು ತೋರಿಸಿದ್ದಾರೆ.

ಇದನ್ನೂ ಓದಿ: Samantha: ಸಮಂತಾ ಬೋಲ್ಡ್ ಅವತಾರಕ್ಕೆ ಸುಸ್ತಾದ ನಿರ್ಮಾಪಕರು, ಇದೆಲ್ಲಾ ಬೇಡಮ್ಮಾ ಅಂತಿದ್ದಾರೆ ಫ್ಯಾನ್ಸ್

ಹೊಸ ಉದ್ಯಮದ ಬಗ್ಗೆ ನಟಿ ಹೇಳಿದ್ದು ಹೀಗೆ
“ಭಾರತದಲ್ಲಿ ನಮ್ಮ ಸಂಸ್ಕೃತಿ ಕುಟುಂಬಕ್ಕೆ ಸಂಬಂಧಿಸಿದ್ದು, ಸಮುದಾಯಕ್ಕೆ ಸಂಬಂಧಿಸಿದ್ದು, ಜನರನ್ನು ಒಂದು ಗೂಡಿಸುವುದಕ್ಕೆ ಸಂಬಂಧಿಸಿದ್ದು ಮತ್ತು ನನ್ನ ಪಾಲಿಗೆ ಸೋನಾ ಹೋಮ್‍ನ ಗುರಿ ಕೂಡ ಇದೆ” ಎಂದು ತನ್ನ ಹೊಸ ಉದ್ಯಮದ ಬಗ್ಗೆ ಹೇಳಿಕೊಂಡಿದ್ದಾರೆ ಪ್ರಿಯಾಂಕ.

“ನಾವು ಯಾವುದಾದರೂ ಪಾರ್ಟಿ ಅಥವಾ ಟೇಕ್‍ಔಟ್ ಮಾಡುತ್ತಿದ್ದರೆ, ಅದು ತುಂಬಾ ಮಜವಾಗಿ ಇರಬೇಕು ಎಂದು ಬಯಸುತ್ತೇವೆ. ನಮ್ಮ ಸ್ನೇಹಿತರು ಮತ್ತು ಕುಟುಂಬದವರ ಜೊತೆ ಸೇರಿ ನಾವು ಏನನ್ನೇ ಮಾಡುತ್ತಿದ್ದರೂ, ಅದು ಸಂಸ್ಕೃತಿಗೆ ಮತ್ತು ಮನೆಗೆ ಸಂಬಂಧಿಸಿರಬೇಕು, ಹಾಗೂ ನನಗೆ ಇದಕ್ಕಿಂತ ಒಳ್ಳೆಯ ಜಾಗ ಬೇರೆ ಯಾವುದೂ ಇಲ್ಲ ಎಂಬ ಭಾವನೆ ಮೂಡುವಂತಿರಬೇಕು ಎಂದು ನಾವು ಬಯಸುತ್ತೇವೆ” ಎಂದು ಮನೀಶ್ ಗೋಯಲ್ ಹೇಳಿದ್ದಾರೆ.

ತನ್ನ ಕುಟುಂಬದ ಬಗ್ಗೆ ಈಕೆ ಹೇಳಿದ್ದೇನು?
ಮನೆಯಿಂದ ಹೊರಗೆ ಮನೆಯೊಂದನ್ನು ಸೃಷ್ಟಿಸುವುದಕ್ಕೆ ಸಂಬಂಧಿಸಿದ್ದು. ಸ್ನೇಹಿತರು ಮತ್ತು ಕುಟುಂಬಗಳು ಜೊತೆ ಸೇರಿ ಸಮುದಾಯವನ್ನು ಸೃಷ್ಟಿಸಲು ಸಹಾಯ ಮಾಡಲೆಂದು ಇದನ್ನು ಸೃಷ್ಟಿಸಲಾಗಿದೆ ಮತ್ತು ಭಾರತದಿಂದ ಬಂದಿರುವ ಒಬ್ಬ ವಲಸೆಗಾರಳಾಗಿ ನನಗೆ ಅದು ತುಂಬಾ ಮುಖ್ಯವಾದದ್ದು. ನಾನು ನನ್ನ ಬೇರುಗಳನ್ನು ಹಿಂದೆ ಬಿಟ್ಟೆ, ಆದರೆ ನಿನ್ನನ್ನು ಮತ್ತು ಇಲ್ಲಿನ ನನ್ನ ಸ್ನೇಹಿತರು ಹಾಗೂ ಕುಟುಂಬವನ್ನು ಪಡೆದೆ. ಇಲ್ಲಿರುವ ನೀವು, ನಾನು ಆಯ್ಕೆ ಮಾಡಿಕೊಂಡಿರುವ ನನ್ನ ಕುಟುಂಬ ಮತ್ತು ಇದು ನಾನು ಸ್ವೀಕರಿಸಿದ ದೇಶ. ನಾನು ಬೆಳೆದ ಸ್ಥಳದ ಪರಂಪರೆಯನ್ನು ತರಲು ಮತ್ತು ಅಮೇರಿಕಾದ ದೇಶದುದ್ದಕ್ಕೂ ಇರುವ ಮನೆಗಳಿಗೆ ತಲುಪಿಸಲು ಸಾಧ್ಯವಾಗುತ್ತದೆ” ಎಂದು ಪ್ರಿಯಾಂಕ ಹೇಳಿದ್ದಾರೆ.

ಇದನ್ನೂ ಓದಿ: Rashmika Mandanna: ರಶ್ಮಿಕಾ ಬಗ್ಗೆ ಅಷ್ಟೇ ಅಲ್ಲ, ಅವ್ರ ನಾಯಿ ಬಗ್ಗೆಯೂ ಕೇಳಿಬಂತು ಗಾಸಿಪ್​! ಇದೇನ್​ ಹೊಸ ಕಥೆ ಅಂತೀರಾ? ಇಲ್ಲಿದೆ ನೋಡಿ

“ನನಗೆ ನಿಮ್ಮೆಲ್ಲರಿಗೂ ಸೋನಾ ಹೋಮ್ ಅನ್ನು ಪರಿಚಯಿಸಲು ಹೆಮ್ಮೆಯಾಗುತ್ತಿದೆ. ಭಾರತದಿಂದ ಬಂದು, ಅಮೇರಿಕಾವನ್ನು ಎರಡನೇ ಮನೆಯಾಗಿಸಿಕೊಳ್ಳುವುದು ಸವಾಲಿನ ಕೆಲಸವಾಗಿತ್ತು. ಆದರೆ, ನನ್ನ ಪಯಣ, ನನ್ನ ಎರಡನೇ ಕುಟುಂಬ ಮತ್ತು ಸ್ನೇಹಿತರನ್ನು ಪಡೆಯುವ ಸ್ಥಳಕ್ಕೆ ತಲುಪಿಸಿತು. ನಾನು ಮಾಡುವ ಪ್ರತಿಯೊಂದರಲ್ಲೂ ಭಾರತವನ್ನು ಬಿಂಬಿಸಲು ಪ್ರಯತ್ನಿಸುತ್ತೇನೆ ಮತ್ತು ಇದು ಆ ಆಯೋಚನೆಯ ಮುಂದುವರಿಕೆ” ಎಂದಿರುವ ಪ್ರಿಯಾಂಕ, ಮತ್ತೊಂದು ಪೋಸ್ಟಿನಲ್ಲಿ ತನ್ನ ಹೋಮ್‍ವೇರ್ ಲೈನ್‍ನ ಕೆಲವು ವಸ್ತುಗಳ ಫೋಟೋಗಳನ್ನು ಹಂಚಿಕೊಂಡಿದ್ದಾರೆ. ವೃತ್ತಿಗೆ ಸಂಬಂಧಿಸಿದಂತೆ, ಪ್ರಿಯಾಂಕ ಚೋಪ್ರಾ ಅವರ ಕೈಯಲ್ಲಿ ಈಗಾಗಲೇ ಸಾಕಷ್ಟು ಹಾಲಿವುಡ್ ಮತ್ತು ಬಾಲಿವುಡ್ ಪ್ರಾಜೆಕ್ಟುಗಳಿವೆ.
Published by:Ashwini Prabhu
First published: