Pm Kisan Sinchai Yojana: ಈ ಯೋಜನೆಯಿಂದ ರೈತರ ಹೊಲಗಳಿಗೆ ಸಿಗಲಿದೆ ನೀರು

ಹೊಲಗಳಲ್ಲಿ ನೀರಿನ ಕೊರತೆಯಾಗದಂತೆ ಸರ್ಕಾರ (Government) ಪ್ರಧಾನ ಮಂತ್ರಿ ಕೃಷಿ ಸಿಂಚಾಯಿ ಯೋಜನೆ (Pm Kisan Sinchai Yojana) ಆರಂಭಿಸಿದೆ.

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

  • Share this:
Pm Kisan Sinchai Yojana: ಹೊಲದಲ್ಲಿ ಬೆಳೆ ಬೆಳೆದರೆ ಅದರ ಹಿಂದೆ ರೈತನ (Farmer) ರಕ್ತ, ಬೆವರಿನ ಶ್ರಮ ಅಡಗಿರುತ್ತದೆ. ರೈತ ಹೊಲವನ್ನು ಉಳುಮೆ ಮಾಡಿ, ಬಿತ್ತನೆ ಮಾಡಿ, ಅಗತ್ಯಕ್ಕೆ ತಕ್ಕಂತೆ ನೀರುಣಿಸಿ, ನಂತರ ಹೊಲ ಹಸಿರಾಗಿ ಕಾಣುತ್ತದೆ. ಸುಧಾರಿತ ಬೆಳೆಗಳನ್ನು ಬೆಳೆಯುವಲ್ಲಿ ನೀರಾವರಿ (Irrigation) ಪ್ರಮುಖ ಪಾತ್ರ ವಹಿಸುತ್ತದೆ. ಇಂತಹ ಹಲವು ಬೆಳೆಗಳು ಹೆಚ್ಚು ನೀರು (Water) ಬೇಕಾಗುತ್ತವೆ ಮತ್ತು ಕೆಲವು ಕಡಿಮೆ ನೀರಿನಲ್ಲಿಯೂ ಉತ್ತಮ ಇಳುವರಿಯನ್ನು ನೀಡುತ್ತವೆ. ಇಂದಿಗೂ ನೀರಾವರಿಯು ಭಾರತದ ರೈತರಿಗೆ ಒಂದು ಮರೀಚಿಕೆ  ಆಗಿದೆ. ಇನ್ನೂ ಎಷ್ಟೋ ಜನರು ಮಳೆಯನ್ನೇ ಆಧರಿಸಿ ಬೆಳೆ ಬೆಳೆಯುತ್ತಾರೆ. ಏಕೆಂದರೆ ಎಲ್ಲೋ ಸಾಕಷ್ಟು ನೀರಿದ್ರೆ ಮತ್ತೊಂದು ಕಡೆ  ನೀರಿನ ಕೊರತೆಯಿದೆ. ರೈತರು ನೀರಾವರಿಯಲ್ಲಿ ತಂತ್ರಜ್ಞಾನವನ್ನು ಬಳಸಿದರೆ, ನೀರಿನ ಉಳಿತಾಯವೂ ಆಗುತ್ತದೆ ಮತ್ತು ಇಳುವರಿಯೂ ಉತ್ತಮವಾಗಿರುತ್ತದೆ. ಇದರಿಂದಾಗಿ ಆದಾಯವೂ ಹೆಚ್ಚಾಗುತ್ತದೆ. ಇದನ್ನು ಗಮನದಲ್ಲಿಟ್ಟುಕೊಂಡು ಹೊಲಗಳಲ್ಲಿ ನೀರಿನ ಕೊರತೆಯಾಗದಂತೆ ಸರ್ಕಾರ (Government) ಪ್ರಧಾನ ಮಂತ್ರಿ ಕೃಷಿ ಸಿಂಚಾಯಿ ಯೋಜನೆ (Pm Kisan Sinchai Yojana) ಆರಂಭಿಸಿದೆ.

ಕೃಷಿ ತಜ್ಞರ ಪ್ರಕಾರ ಸ್ಪ್ರಿಂಕ್ಲರ್ ವಿಧಾನದಲ್ಲಿ (Sprinkler method) ನೀರಾವರಿ ಮಾಡಿದರೆ ಕಡಿಮೆ ನೀರಲ್ಲೂ ಉತ್ತಮ ಫಸಲು ಪಡೆಯಬಹುದು. ಇದಕ್ಕಾಗಿ ಸ್ಪ್ರಿಂಕ್ಲರ್ ಉಪಕರಣಗಳನ್ನು ಖರೀದಿಸಲು ಸರ್ಕಾರ ಸಹಾಯ ಧನವನ್ನೂ ನೀಡುತ್ತಿದೆ.

ಇದನ್ನೂ ಓದಿ:  Mutual Fundನಲ್ಲಿ ಹೂಡಿಕೆ ಮಾಡುವಾಗ ಈ ತಪ್ಪುಗಳನ್ನು ಮಾಡಬೇಡಿ

ಪ್ರಧಾನ ಮಂತ್ರಿ ಕೃಷಿ ಸಿಂಚಾಯಿ ಯೋಜನೆ ಎಂದರೇನು?

ರೈತರಿಗೆ ನೀರಿನ ಕೊರತೆಯಾಗದಂತೆ ನೋಡಿಕೊಳ್ಳಲು ಸರ್ಕಾರ ಈ ಯೋಜನೆಯಲ್ಲಿ ಐವತ್ತು ಸಾವಿರ ಕೋಟಿ ರೂ. ಸ್ಪ್ರಿಂಕ್ಲರ್ ವಿಧಾನದ ನೀರಾವರಿಗೆ ಸರ್ಕಾರ ವೆಚ್ಚದ 80 ರಿಂದ 90 ರಷ್ಟು ಸಹಾಯಧನ ನೀಡುತ್ತದೆ. ಈ ವಿಧಾನದಿಂದ, ಹೊಲವನ್ನು ಸಮತಟ್ಟು ಮಾಡದೆಯೇ ನೀರಾವರಿ ಮಾಡಬಹುದು. ಈ ವಿಧಾನವು ಇಳಿಜಾರುಗಳಲ್ಲಿ ಅಥವಾ ಕಡಿಮೆ ಎತ್ತರದಲ್ಲಿ ಬಹಳ ಪರಿಣಾಮಕಾರಿಯಾಗುತ್ತಿದೆ.

ಯೋಜನೆಯ ಲಾಭ ಪಡೆಯಲು ಅರ್ಹತೆ ಏನು?

>> ರೈತನಿಗೆ ಬೇಸಾಯಕ್ಕೆ ಯೋಗ್ಯವಾದ ಭೂಮಿ ಇರಬೇಕು.

>> ಇದರ ಲಾಭ ಎಲ್ಲ ರೈತರಿಗೆ ಸಿಗಲಿದೆ.

>> ಕೃಷಿಗೆ ಸಂಬಂಧಿಸಿದ ಎಲ್ಲಾ ಮಾನ್ಯತೆ ಪಡೆದ ಸಂಸ್ಥೆಗಳು ಸಹ ಈ ಯೋಜನೆಯ ಪ್ರಯೋಜನವನ್ನು ಪಡೆಯುತ್ತವೆ. ಉದಾ: ಸ್ವಸಹಾಯ ಗುಂಪುಗಳು, ಟ್ರಸ್ಟ್‌ಗಳು, ಸಹಕಾರ ಸಂಘಗಳು, ಇತ್ಯಾದಿ.

>> ಈ ಯೋಜನೆಯ ಲಾಭವನ್ನು ಕೃಷಿಕರು ಗುತ್ತಿಗೆ ಬೇಸಾಯವನ್ನು ತೆಗೆದುಕೊಳ್ಳುವ ಮೂಲಕ ಅಂದರೆ ಲೀಸ್‌ನಲ್ಲಿ ಪಡೆಯಬಹುದು. ಕನಿಷ್ಠ 7 ವರ್ಷ ಬೇಸಾಯ ಮಾಡಬೇಕು ಎಂಬುದು ಷರತ್ತು.

ನೀರಾವರಿ ಯೋಜನೆ ಪಡೆಯಲು ನೀಡಬೇಕಾದ ಪ್ರಮುಖ ದಾಖಲೆಗಳು

  • ಆಧಾರ್ ಕಾರ್ಡ್

  • ಗುರುತಿನ ಚೀಟಿಗಾಗಿ ಯಾವುದೇ ಪ್ರಮಾಣಪತ್ರ

  • ಭೂಮಿ ಕಾಗದಗಳು

  • ಜಮೀನಿನ ಜಮಾಬಂದಿ

  • ಬ್ಯಾಂಕ್ ಖಾತೆ ವಿವರಗಳು

  • ಪಾಸ್ ಪೋರ್ಟ್ ಗಾತ್ರದ ಫೋಟೋ

  • ಮೊಬೈಲ್ ನಂಬರ್


ಸ್ಪ್ರಿಂಕ್ಲರ್ ವಿಧಾನದಿಂದ ಯಾವ ಬೆಳೆ ಬೆಳೆಯಬಹುದು?

ಆಲೂಗಡ್ಡೆ, ಅವರೆಕಾಳು, ಈರುಳ್ಳಿ, ಕೋಸುಗಡ್ಡೆ, ಸ್ಟ್ರಾಬೆರಿ, ನೆಲಗಡಲೆ, ಸಾಸಿವೆ, ಎಲೆಯ ತರಕಾರಿ, ನಾಡಿ, ಚಹಾ, ಶುಂಠಿ, ಹೂ ಕೋಸು, ಎಲೆಕೋಸು, ಬೆಳ್ಳುಳ್ಳಿ ಇತ್ಯಾದಿ ಬೆಳೆಗಳು.

ಇದನ್ನೂ ಓದಿ:  SBI ATM Withdrawal Rule: ಎಟಿಎಂನಿಂದ ಹಣ ತೆಗೆಯುವಾಗ OTP ಕಡ್ಡಾಯ ಮಾಡಿದ್ದೇಕೆ?

ಪಿಎಂ ಕಿಸಾನ್ ಯೋಜನೆಯ ಹಣ ಬಂದಿಲ್ಲವೇ?

PM ಕಿಸಾನ್ ಯೋಜನೆಗೆ ಸಂಬಂಧಿಸಿದ ಯಾವುದೇ ಸಮಸ್ಯೆಗೆ ನೀವು 155261 ಅಥವಾ 011-24300606 ಗೆ ಕರೆ ಮಾಡಬಹುದು. ಕರೆ ಮಾಡಿದ ನಂತರ, ನಿಮ್ಮ ಸಮಸ್ಯೆಯನ್ನು ಕೇವಲ ಕೇಳದೇ ಕಡಿಮೆ ಸಮಯದಲ್ಲಿ ನಿಮಗೆ ಪರಿಹಾರವನ್ನು ಸಹ ನೀಡಲಾಗುವುದು.

ಕಚೇರಿಗೆ ತೆರಳಿ ದೂರು ನೀಡಬಹುದು

ಪಟ್ಟಿಯಲ್ಲಿ ಹೆಸರು ಇಲ್ಲದಿದ್ದರೆ, ರೈತರಿಗೆ ಕರೆ ಹೊರತುಪಡಿಸಿ ಬೇರೆ ಆಯ್ಕೆಗಳಿವೆ. ನೀವು ಜಿಲ್ಲಾ ಅಥವಾ ರಾಜ್ಯ ಕೃಷಿ ಕಛೇರಿಗೆ ಭೇಟಿ ನೀಡಿ ಸಂಬಂಧಪಟ್ಟ ಅಧಿಕಾರಿಯನ್ನು ಭೇಟಿ ಮಾಡಿ ನಿಮ್ಮ ದೂರನ್ನು ದಾಖಲಿಸಬಹುದು. ಇವುಗಳಲ್ಲದೆ ಪಿಎಂ ಕಿಸಾನ್ ವೆಬ್‌ಸೈಟ್‌ನಲ್ಲೂ ದೂರು ನೀಡುವ ಸೌಲಭ್ಯವನ್ನು ನೀಡಲಾಗಿದೆ.

ಇಲ್ಲಿ ನಿಮ್ಮ ಆಧಾರ್ ಸಂಖ್ಯೆ, ಬ್ಯಾಂಕ್ ಖಾತೆ ಸಂಖ್ಯೆ ಅಥವಾ ಮೊಬೈಲ್ ಸಂಖ್ಯೆಯನ್ನು ನಮೂದಿಸುವ ಮೂಲಕ ನೀವು ದೂರು ನೀಡಬಹುದು. ದೂರಿನ ಮೇಲೆ ಕೈಗೊಂಡ ಕ್ರಮಗಳ ಬಗ್ಗೆ ನಿಗಾ ಇಡುವ ಸೌಲಭ್ಯವನ್ನೂ ವೆಬ್‌ಸೈಟ್‌ನಲ್ಲಿ ನೀಡಲಾಗಿದೆ.
Published by:Mahmadrafik K
First published: