• Home
  • »
  • News
  • »
  • business
  • »
  • Free Ration: ಪಡಿತರಕ್ಕಿಲ್ಲ ಇನ್ನೂ 3 ತಿಂಗಳು ಪರದಾಟ! 80 ಕೋಟಿ ಬಡವರಿಗೆ ದಸರಾ ಗಿಫ್ಟ್ ಕೊಟ್ಟ ಕೇಂದ್ರ ಸರ್ಕಾರ

Free Ration: ಪಡಿತರಕ್ಕಿಲ್ಲ ಇನ್ನೂ 3 ತಿಂಗಳು ಪರದಾಟ! 80 ಕೋಟಿ ಬಡವರಿಗೆ ದಸರಾ ಗಿಫ್ಟ್ ಕೊಟ್ಟ ಕೇಂದ್ರ ಸರ್ಕಾರ

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

Pradhan Mantri Garib Kalyan Anna Yojana: ಸೆಪ್ಟೆಂಬರ್ 30 ರ ನಂತರ ಬಡವರಿಗೆ ಉಚಿತ ಪಡಿತರ ( Free Ration) ವನ್ನು ಮುಂದಿನ 3 ತಿಂಗಳು ವಿಸ್ತರಿಸಿದೆ. ಪ್ರಧಾನ ಮಂತ್ರಿ ಗರೀಬ್ ಕಲ್ಯಾಣ್ ಅನ್ನ ಯೋಜನೆ 2020 ಅನ್ನು ಮಾರ್ಚ್ (March) ತಿಂಗಳಲ್ಲಿ ಜಾರಿಗೆ ತರಲಾಗಿತ್ತು. ಇದರ ಭಾಗವಾಗಿ 80 ಕೋಟಿ ಪಡಿತರ ಚೀಟಿ ಫಲಾನುಭವಿಗಳಿಗೆ ರಾಷ್ಟ್ರೀಯ ಆಹಾರ ಭದ್ರತಾ ಕಾಯ್ದೆಯಡಿ ಉಚಿತ ಅಕ್ಕಿ ನೀಡಲಾಗುತ್ತಿದೆ.

ಮುಂದೆ ಓದಿ ...
  • Share this:

ಕೇಂದ್ರ ಸರ್ಕಾರ ಪಡಿತರ ಚೀಟಿ (Ration Card) ಹೊಂದಿರುವವರಿಗೆ ಗುಡ್​​ ನ್ಯೂಸ್​ (Good News) ನೀಡಿದೆ. ಮೋದಿ (Modi) ಸರ್ಕಾರ ಗರೀಬ್ ಕಲ್ಯಾಣ ಯೋಜನೆ(PMGKAY) ಕುರಿತು ಪ್ರಮುಖ ನಿರ್ಧಾರವನ್ನು ತೆಗೆದುಕೊಂಡಿದೆ. ಸೆಪ್ಟೆಂಬರ್ 30 ರ ನಂತರ ಬಡವರಿಗೆ ಉಚಿತ ಪಡಿತರ ( Free Ration) ವನ್ನು ಮುಂದಿನ 3 ತಿಂಗಳು ವಿಸ್ತರಿಸಿದೆ. ಪ್ರಧಾನ ಮಂತ್ರಿ ಗರೀಬ್ ಕಲ್ಯಾಣ್ ಅನ್ನ ಯೋಜನೆ 2020 ಅನ್ನು ಮಾರ್ಚ್ (March) ತಿಂಗಳಲ್ಲಿ ಜಾರಿಗೆ ತರಲಾಗಿತ್ತು. ಇದರ ಭಾಗವಾಗಿ 80 ಕೋಟಿ ಪಡಿತರ ಚೀಟಿ ಫಲಾನುಭವಿಗಳಿಗೆ ರಾಷ್ಟ್ರೀಯ ಆಹಾರ ಭದ್ರತಾ ಕಾಯ್ದೆಯಡಿ ಉಚಿತ ಅಕ್ಕಿ ನೀಡಲಾಗುತ್ತಿದೆ. ಕೇಂದ್ರ ಸರ್ಕಾರದ ಈ ನಿರ್ಧಾರದಿಂದ ಪಡಿತರ ಚೀಟಿದಾರರಿಗೆ ನೆಮ್ಮದಿ ಸಿಗಲಿದೆ. ನೀವು ಇನ್ನೂ 3 ತಿಂಗಳವರೆಗೆ ಉಚಿತ ರೇಷನ್ ಪಡೆಯಬಹುದು. ಇದರಿಂದ ಕೇಂದ್ರಕ್ಕೆ ರೂ. 40 ಸಾವಿರ ಕೋಟಿ ಹೊರೆಯಾಗಲಿದೆ.


ನೆಮ್ಮದಿಯ ನಿಟ್ಟುಸಿರು ಬಿಟ್ಟ 80 ಕೋಟಿ ಫಲಾನುಭವಿಗಳು!


ಪ್ರಧಾನ ಮಂತ್ರಿ ಗರೀಬ್ ಕಲ್ಯಾಣ್ ಅನ್ನ ಯೋಜನೆಯ ವಿಸ್ತರಣೆಯು ಸುಮಾರು 80 ಕೋಟಿ ಫಲಾನುಭವಿಗಳಿಗೆ ಪ್ರಯೋಜನವನ್ನು ನೀಡುತ್ತದೆ ಎಂದು ಹೇಳಬಹುದು. ಕೊರೊನಾ ವೈರಸ್ ಲಾಕ್‌ಡೌನ್ ಹಿನ್ನೆಲೆಯಲ್ಲಿ ಕೇಂದ್ರ ಸರ್ಕಾರ ಈ ಯೋಜನೆಯನ್ನು ತಂದಿದೆ. ಈ ಯೋಜನೆಯನ್ನು ಮಾರ್ಚ್ 2020 ರಲ್ಲಿ ಪ್ರಾರಂಭಿಸಲಾಯಿತು. ಈ ಯೋಜನೆಯಡಿ ಪಡಿತರ ಚೀಟಿದಾರರಿಗೆ 5 ಕೆಜಿ ಅಕ್ಕಿ ಉಚಿತವಾಗಿ ಸಿಗಲಿದೆ. ಒಬ್ಬರಿಗೆ 5 ಕೆ.ಜಿ. ಅಂದರೆ ಪಡಿತರ ಚೀಟಿಯಲ್ಲಿ ನಾಲ್ಕು ಜನ ಇದ್ದರೆ ಅವರಿಗೆ 20 ಕೆಜಿ ಅಕ್ಕಿ ಉಚಿತವಾಗಿ ಸಿಗುತ್ತದೆ.


ಇನ್ನೂ ಮೂರು ತಿಂಗಳು ಉಚಿತ ಅಕ್ಕಿ!


ಈ ರೀತಿಯಾಗಿ, ವೈಯಕ್ತಿಕ ಆಧಾರದ ಮೇಲೆ, ಪ್ರತಿಯೊಬ್ಬ ವ್ಯಕ್ತಿಯು ಇನ್ನೂ ಮೂರು ತಿಂಗಳವರೆಗೆ 5 ಕೆಜಿ ಅಕ್ಕಿಯನ್ನು ಉಚಿತವಾಗಿ ಪಡೆಯಬಹುದು. ರಾಷ್ಟ್ರೀಯ ಆಹಾರ ಭದ್ರತಾ ಕಾಯಿದೆಯಡಿ ಎಲ್ಲಾ ಫಲಾನುಭವಿಗಳಿಗೆ ಈ ಪ್ರಯೋಜನ ದೊರೆಯುತ್ತದೆ. ಈ ಉಚಿತ ಅಕ್ಕಿಯು ರಾಜ್ಯ ಸರ್ಕಾರಗಳು ನೀಡುವ ಪಡಿತರ ಸಾಮಗ್ರಿಗಳಿಗೆ ಹೆಚ್ಚುವರಿಯಾಗಿದೆ ಎಂಬುದನ್ನು ಗಮನಿಸಬೇಕು.ಈ ಯೋಜನೆಯ ಗಡುವನ್ನು ಹಲವಾರು ಬಾರಿ ವಿಸ್ತರಿಸಲು ಕೇಂದ್ರ ಸರ್ಕಾರ ಈಗಾಗಲೇ ನಿರ್ಧಾರ ತೆಗೆದುಕೊಂಡಿದೆ.


ಇದನ್ನೂ ಓದಿ: ದಸರಾ ಹಬ್ಬಕ್ಕೆ ಕೇಂದ್ರದಿಂದ ಬಿಗ್​ ಗಿಫ್ಟ್​, ನೌಕರರ ಮುಖದಲ್ಲಿ ಮಂದಹಾಸ ಮೂಡಿಸಿದ ಮೋದಿ!


2020-21 ರಲ್ಲಿ, ಈ ಯೋಜನೆಯನ್ನು ಆರಂಭದಲ್ಲಿ ಮೂರು ತಿಂಗಳವರೆಗೆ ಒದಗಿಸಲು ಕೇಂದ್ರವು ನಿರ್ಧರಿಸಿದೆ. ಅಂದರೆ ಈ ಪ್ರಯೋಜನವನ್ನು ಏಪ್ರಿಲ್, ಮೇ ಮತ್ತು ಜೂನ್ 2020 ರ ತಿಂಗಳುಗಳಿಗೆ ಮಾತ್ರ ಅನ್ವಯಿಸಲು ಯೋಜಿಸಲಾಗಿದೆ. ಆದರೆ ನಂತರ ಅದನ್ನು ಜುಲೈನಿಂದ ನವೆಂಬರ್ 2020 ರವರೆಗೆ ವಿಸ್ತರಿಸಲಾಯಿತು. ಇದಲ್ಲದೆ, ಈ ಯೋಜನೆಯನ್ನು ಮತ್ತೆ ಮೇ ಮತ್ತು ಜೂನ್ 2021 ತಿಂಗಳುಗಳಿಗೆ ವಿಸ್ತರಿಸಲಾಗಿದೆ.


ಈ ಯೋಜನೆಯಿಂದ 3.4 ಲಕ್ಷ ಕೋಟಿ ಹೊರೆ!


ನಂತರ ಮತ್ತೆ ಯೋಜನೆಯನ್ನು ಜುಲೈನಿಂದ ನವೆಂಬರ್ 2021 ರವರೆಗೆ ವಿಸ್ತರಿಸಲಾಯಿತು. ಇದಲ್ಲದೆ, ಈ ಯೋಜನೆಯನ್ನು ಮತ್ತೆ ಡಿಸೆಂಬರ್ 2021 ರಿಂದ ಮಾರ್ಚ್ 2022 ರವರೆಗೆ ವಿಸ್ತರಿಸಲಾಗಿದೆ. ಮಾರ್ಚ್ 26 ರಂದು, ಕೇಂದ್ರವು ಮತ್ತೆ ಆರು ತಿಂಗಳವರೆಗೆ ಯೋಜನೆಯನ್ನು ವಿಸ್ತರಿಸಿತು. ಅಂದರೆ ಸೆಪ್ಟೆಂಬರ್ 30ರವರೆಗೆ ವಿಸ್ತರಿಸಲಾಗಿದೆ. ಈಗ ಮತ್ತೆ 3 ತಿಂಗಳ ಕಾಲ ಯೋಜನೆಯನ್ನು ವಿಸ್ತರಿಸಲಾಗಿದೆ.


ಇದನ್ನೂ ಓದಿ: ಹೂಡಿಕೆಯೊಂದಿಗೆ ಈ ಬ್ಯುಸಿನೆಸ್ ಆರಂಭಿಸಿ, ದಿನಕ್ಕೆ ಏನಿಲ್ಲಾ ಅಂದ್ರೂ 4 ಸಾವಿರ ಲಾಭ ಫಿಕ್ಸ್​!


ಉಚಿತ ಪಡಿತರ ಯೋಜನೆ ಸೆಪ್ಟೆಂಬರ್ 30 ರಂದು ಕೊನೆಗೊಳ್ಳಬೇಕಿತ್ತು. ಆದರೆ ಸರ್ಕಾರ ಅದನ್ನು ಮೂರು ತಿಂಗಳು ವಿಸ್ತರಿಸಿದೆ. ಅಂದರೆ ಡಿಸೆಂಬರ್ ವರೆಗೆ ಈ ಯೋಜನೆ ಲಭ್ಯವಿರುತ್ತದೆ. ಈ ಯೋಜನೆಯಿಂದಾಗಿ ಕೇಂದ್ರ ಸರ್ಕಾರಕ್ಕೆ ಸುಮಾರು ರೂ.3.4 ಲಕ್ಷ ಕೋಟಿ ಹೊರೆಯಾಗಿದೆ.

Published by:ವಾಸುದೇವ್ ಎಂ
First published: