• ಹೋಂ
  • »
  • ನ್ಯೂಸ್
  • »
  • ಬ್ಯುಸಿನೆಸ್
  • »
  • Interest Rate: ಪಿಪಿಎಫ್, ಹಿರಿಯ ನಾಗರಿಕ ಉಳಿತಾಯ ಯೋಜನೆ, ಸುಕನ್ಯಾ ಸಮೃದ್ಧಿ ಯೋಜನೆಗಳ ಬಡ್ಡಿದರ ಹೆಚ್ಚಾಗಲಿದ್ಯಾ?

Interest Rate: ಪಿಪಿಎಫ್, ಹಿರಿಯ ನಾಗರಿಕ ಉಳಿತಾಯ ಯೋಜನೆ, ಸುಕನ್ಯಾ ಸಮೃದ್ಧಿ ಯೋಜನೆಗಳ ಬಡ್ಡಿದರ ಹೆಚ್ಚಾಗಲಿದ್ಯಾ?

ಸಾಂಕೇತಿಕ ಚಿತ್ರ

ಸಾಂಕೇತಿಕ ಚಿತ್ರ

ಈ ಜೂನ್ 30 ರಂದು ಪ್ರಸಕ್ತ ಆರ್ಥಿಕ ವರ್ಷ 22-23ರ ಮೊದಲ ತ್ರೈಮಾಸಿಕ ಅಂತ್ಯವಾಗಲಿದೆ. ಅಲ್ಲದೆ, ಕಳೆದ ಹಲವು ತಿಂಗಳುಗಳಿಂದ ಸರ್ಕಾರವು ಬಡ್ಡಿದರಗಳನ್ನು ಬದಲಿಸದೆ ಯಥಾಸ್ಥಿತಿಯಲ್ಲಿಟ್ಟಿದೆ ಎಂಬುದನ್ನು ಕಾಣಬಹುದು.

  • Share this:

ಅಂಚೆ ಕಚೇರಿ ಉಳಿತಾಯ ಯೋಜನೆ (Post Office Savings Plan) ಬಡ್ಡಿ ದರಗಳು ಸಾಮಾನ್ಯವಾಗಿ ಮಾರುಕಟ್ಟೆಗಳು (Market) ಹೆಚ್ಚು ಏರಿಳಿತದ ಮೂಲಕ ಸಾಗುತ್ತಿರುವ ಸಮಯದಲ್ಲಿ, ಹಲವಾರು ಭಾರತೀಯ ನಾಗರಿಕರು (Indian citizens) ತಮ್ಮ ಅಂಚೆ ಕಚೇರಿ ಉಳಿತಾಯ ಯೋಜನೆಗಳು ಸೇರಿದಂತೆ ಸಣ್ಣ ಪುಟ್ಟ ಇತರೆ ಉಳಿತಾಯ ಯೋಜನೆಗಳಲ್ಲಿ ತಮ್ಮ ಹಣವನ್ನು (Money) ಸುರಕ್ಷಿತವಾಗಿ ಹೂಡಿಕೆ ಮಾಡುವ ಮೂಲಕ ಸ್ಥಿರವಾದ ಆದಾಯವನ್ನು ಪಡೆಯುವುದನ್ನು ಮುನ್ನೋಡುತ್ತಾರೆ. ಅಂಚೆ ಕಚೇರಿಯಲ್ಲಿನ ಸಣ್ಣ ಉಳಿತಾಯ ಯೋಜನೆಗಳು ಹೆಚ್ಚು ವಿಶ್ವಾಸಾರ್ಹವಾಗಿವೆ ಏಕೆಂದರೆ ಅವುಗಳು ಸರ್ಕಾರದ (Government) ಬೆಂಬಲವನ್ನು ಹೊಂದಿವೆ ಮತ್ತು ಷೇರು ಮಾರುಕಟ್ಟೆ ಸ್ಥಿತಿ-ಗತಿಗಳಿಗೆ ಒಳಪಡುವುದಿಲ್ಲ.


ಇಂತಹ ಯೋಜನೆಗಳೆಂದರೆ ಮಾಸಿಕ ಉಳಿತಾಯ ಯೋಜನೆ, ರಾಷ್ಟ್ರೀಯ ಉಳಿತಾಯ ಪ್ರಮಾಣಪತ್ರ, ಸುಕನ್ಯಾ ಸಮೃದ್ಧಿ ಯೋಜನೆ, ಹಿರಿಯ ನಾಗರಿಕರ ಉಳಿತಾಯ ಯೋಜನೆ ಅಥವಾ ಸಾರ್ವಜನಿಕ ಭವಿಷ್ಯ ನಿಧಿ ಯೋಜನೆ ಇತ್ಯಾದಿ. ಈ ರೀತಿಯ ಯೋಜನೆಗಳು ಪ್ರತಿ ತ್ರೈಮಾಸಿಕದ ಆರಂಭದಲ್ಲಿ ಸರ್ಕಾರವು ನಿಗದಿಪಡಿಸಿದ ನಿಶ್ಚಿತ ಆದಾಯದ ದರವನ್ನು ಹೊಂದಿರುತ್ತವೆ. ಅಲ್ಲದೆ, ಹಲವಾರು ಅಂಚೆ ಕಚೇರಿ ಉಳಿತಾಯ ಯೋಜನೆಗಳು, ಉದಾಹರಣೆಗೆ ಪಿಪಿಎಫ್, ಬ್ಯಾಂಕುಗಳಿಗಿಂತ ಹೆಚ್ಚಿನ ಬಡ್ಡಿಯನ್ನು ನೀಡುತ್ತವೆ ಎಂದರೂ ತಪ್ಪಾಗಲಾರದು.


ಜೂನ್ 30 ರಂದು ಬಡ್ಡಿದರಗಳ ನವೀಕರಣವನ್ನು ಪಡೆಯುವ ಸಾಧ್ಯತೆ
ಈಗ ರಾಷ್ಟ್ರೀಯ ಉಳಿತಾಯ ಪ್ರಮಾಣಪತ್ರ, ಸುಕನ್ಯಾ ಸಮೃದ್ಧಿ ಯೋಜನೆ, ಹಿರಿಯ ನಾಗರಿಕರ ಉಳಿತಾಯ ಯೋಜನೆ ಅಥವಾ ಸಾರ್ವಜನಿಕ ಭವಿಷ್ಯ ನಿಧಿ (ಪಿಪಿಎಫ್) ನಲ್ಲಿ ಹಣವನ್ನು ಹೂಡಿಕೆ ಮಾಡಿದವರು ಜೂನ್ 30 ರಂದು ಬಡ್ಡಿದರಗಳ ನವೀಕರಣವನ್ನು ಪಡೆಯುವ ಸಾಧ್ಯತೆಯಿದೆ ಎನ್ನಲಾಗಿದೆ.


ಅಲ್ಲದೆ, ಪಿಪಿಎಫ್, ಎನ್‍ಎಸ್ಸಿ ಅಥವಾ ಸುಕನ್ಯಾ ಸಮೃದ್ಧಿ ಯೋಜನೆಗಳ ಬಡ್ಡಿ ದರಗಳನ್ನು ಸರ್ಕಾರವು ಬದಲಿಸಲು ಪರಿಗಣಿಸಬಹುದು ಎನ್ನಲಾಗುತ್ತಿದೆ. ಇದರಿಂದಾಗಿ ಈ ಯೋಜನೆಗಳಲ್ಲಿ ಹಣ ಹೂಡಿದ ಹೂಡಿಕೆದಾರರಿಗೆ ಲಾಭವಾಗಬಹುದೆನ್ನಲಾಗಿದೆ. ಕೇಂದ್ರವು ಪ್ರತಿ ತ್ರೈಮಾಸಿಕದ ಕೊನೆಯಲ್ಲಿ ಪೋಸ್ಟ್ ಆಫೀಸ್ ಉಳಿತಾಯ ಯೋಜನೆಗಳಿಗೆ ಹೊಸ ದರಗಳನ್ನು ಪ್ರಕಟಿಸುತ್ತದೆ.


ಇದನ್ನೂ ಓದಿ: Loan in 30 seconds: ವಾಟ್ಸಪ್​ನಲ್ಲಿ Hi ಅಂತ ಮೆಸೇಜ್ ಕಳಿಸಿ, ಅರ್ಧ ನಿಮಿಷದಲ್ಲಿ ಪರ್ಸನಲ್ ಲೋನ್ ಪಡೆಯಿರಿ


ಈ ಜೂನ್ 30 ರಂದು ಪ್ರಸಕ್ತ ಆರ್ಥಿಕ ವರ್ಷ 22-23ರ ಮೊದಲ ತ್ರೈಮಾಸಿಕ ಅಂತ್ಯವಾಗಲಿದೆ. ಅಲ್ಲದೆ, ಕಳೆದ ಹಲವು ತಿಂಗಳುಗಳಿಂದ ಸರ್ಕಾರವು ಬಡ್ಡಿದರಗಳನ್ನು ಬದಲಿಸದೆ ಯಥಾಸ್ಥಿತಿಯಲ್ಲಿಟ್ಟಿದೆ ಎಂಬುದನ್ನು ಕಾಣಬಹುದು.


ಅಂಚೆ ಉಳಿತಾಯ ಯೋಜನೆಗಳ ಮೇಲಿನ ಪ್ರಸ್ತುತ ಬಡ್ಡಿ ದರಗಳು ಹೀಗಿವೆ
ಪೋಸ್ಟ್ ಆಫೀಸ್ ಉಳಿತಾಯ ಯೋಜನೆಗಳ ಪ್ರಸ್ತುತ ಬಡ್ಡಿದರಗಳು ಇಲ್ಲಿವೆ, ಇದು ಈ ವರ್ಷದ ಏಪ್ರಿಲ್ 1 ರಿಂದ ಜಾರಿಗೆ ಬಂದಿದೆ ಮತ್ತು ಈ ತಿಂಗಳ ಅಂತ್ಯದವರೆಗೆ ಅಂದರೆ ಜೂನ್ 30 ರವರೆಗೆ ಮಾನ್ಯವಾಗಿರುತ್ತದೆ.


  1. ಸಾರ್ವಜನಿಕ ಭವಿಷ್ಯ ನಿಧಿ: 7.1%

  2. ರಾಷ್ಟ್ರೀಯ ಉಳಿತಾಯ ಪ್ರಮಾಣಪತ್ರ: 6.8 %

  3. ಸುಕನ್ಯಾ ಸಮೃದ್ಧಿ ಯೋಜನೆ: 7.6 %

  4. ಕಿಸಾನ್ ವಿಕಾಸ್ ಪತ್ರ: 6.9 %

  5. ಉಳಿತಾಯ ಠೇವಣಿ: 4 %

  6. 1-ವರ್ಷದ ಸಮಯದ ಠೇವಣಿ: 5.5 %

  7. 2-ವರ್ಷದ ಸಮಯದ ಠೇವಣಿ: 5.5 %

  8. 3-ವರ್ಷದ ಸಮಯದ ಠೇವಣಿ: 5.5 %

  9.  5 ವರ್ಷದ ಸಮಯ ಠೇವಣಿ: 6.7 %

  10. 5 ವರ್ಷದ ಮರುಕಳಿಸುವ ಠೇವಣಿ: 5.8 %

  11. 5-ವರ್ಷದ ಹಿರಿಯ ನಾಗರಿಕರ ಉಳಿತಾಯ ಯೋಜನೆ: 7.4 %

  12. 5-ವರ್ಷದ ಮಾಸಿಕ ಆದಾಯ ಖಾತೆ: 6.6 %


ಪಿಪಿಎಫ್, ಸುಕನ್ಯಾ ಸಮೃದ್ಧಿ, ಮಾಸಿಕ ಉಳಿತಾಯ ಯೋಜನೆಗಳ ಬಡ್ಡಿದರಗಳನ್ನು ಈಗ ಸರ್ಕಾರ ಹೆಚ್ಚಿಸಲು ಏಕೆ ನಿರೀಕ್ಷಿಸಲಾಗಿದೆ?
ಈ ಹಿನ್ನೆಲೆಯಲ್ಲಿ ನೋಡುವುದಾದರೆ ಸರಕಾರವು ಎಂಐಎಸ್, ಪಿಪಿಎಫ್, ಸುಕನ್ಯಾ ಸಮೃದ್ಧಿ ಯೋಜನೆಗಳ ಬಡ್ಡಿದರವನ್ನು ಇಷ್ಟು ಸಮಯದವರೆಗೆ ಹೆಚ್ಚಿಸಿರುವುದನ್ನು ಗಮನಿಸಿದರೆ, ಈಗಲೂ ಅದೇ ರೀತಿ ಮಾಡಲು ಏಕೆ ನಿರೀಕ್ಷಿಸಲಾಗಿದೆ ಎಂಬ ಪ್ರಶ್ನೆಗಳು ಉದ್ಭವಿಸಬಹುದು.


ಏಕೆಂದರೆ, ದೇಶದಲ್ಲಿ ಏರುತ್ತಿರುವ ಹಣದುಬ್ಬರವನ್ನು ನಿಯಂತ್ರಿಸಲು ವಿತ್ತೀಯ ನೀತಿ ಸಮಿತಿಯ ಎರಡು ಸಭೆಗಳ ಮೇಲೆ ಭಾರತೀಯ ರಿಸರ್ವ್ ಬ್ಯಾಂಕ್ ತನ್ನ ರೆಪೊ ದರಗಳನ್ನು 90 ಬೇಸಿಸ್ ಪಾಯಿಂಟ್‌ಗಳಷ್ಟು ಹೆಚ್ಚಿಸಿದೆ. ಇದು, ಸಾಲಗಾರರು ಹಲವಾರು ಸಾಲದ ಅವಧಿಗಳಲ್ಲಿ ಹೆಚ್ಚಿನ ಬಡ್ಡಿಯನ್ನು ಪಾವತಿಸಬೇಕಾಗುತ್ತದೆ ಎಂದರ್ಥ ಹಾಗೂ ಇನ್ನೊಂದೆಡೆ ಹೂಡಿಕೆದಾರರು ಉತ್ತಮ ಆದಾಯವನ್ನು ಪಡೆಯಬಹುದು ಎಂಬುದನ್ನೂ ಸೂಚಿಸುತ್ತದೆ. ಇದರ ಪರಿಣಾಮದಿಂದಾಗಿ ಈಗಾಗಲೇ ಹಲವಾರು ರಾಷ್ಟ್ರೀಕೃತ ಮತ್ತು ಖಾಸಗಿ ಬ್ಯಾಂಕುಗಳು ತಮ್ಮ ಎಫ್‌ಡಿ ಮತ್ತು ಆರ್‌ಡಿ ದರಗಳನ್ನು ಹೆಚ್ಚಿಸುತ್ತಿವೆ.


ಇದನ್ನೂ ಓದಿ:  PM Kisan: ಪಿಎಂ ಕಿಸಾನ್ ರೈತರಿಗೆ ಹೊಸ ನಿಯಮ, ಈ ದಾಖಲೆ ಕೊಟ್ರೆ ಮಾತ್ರ ಸಿಗುತ್ತೆ ಹಣ!


ಇದಕ್ಕಾಗಿಯೇ ಸರ್ಕಾರವು ಮುಂದಿನ ತಿಂಗಳು ಪಿಪಿಎಫ್ ಬಡ್ಡಿದರಗಳು, ಎಂಐಎಸ್ ಬಡ್ಡಿದರಗಳು ಮತ್ತು ಸುಕನ್ಯಾ ಸಮೃದ್ಧಿ ಯೋಜನೆಯ ಬಡ್ಡಿದರಗಳನ್ನು ಹೆಚ್ಚಿಸಲು ಪರಿಗಣಿಸಬಹುದು ಎಂದು ಅಂದಾಜಿಸಲಾಗಿದೆ.

top videos
    First published: