Loan: ವೈಯಕ್ತಿಕ ಸಾಲ, ಪಿಪಿಎಫ್ ಖಾತೆಯ ಮೇಲೆ ಪಡೆಯುವ ಸಾಲ:ಎರಡರಲ್ಲಿ ಯಾವುದು ಸೂಕ್ತ!

ಪಿಪಿಎಫ್ ಮೇಲೆ ಸಾಲ ಅಥವಾ ವೈಯಕ್ತಿಕ ಸಾಲದ ನಡುವೆ ಯಾವುದನ್ನು ನಾವು ಆಯ್ಕೆ ಮಾಡಿಕೊಳ್ಳಬೇಕು ಎಂಬ ವಿಷಯಕ್ಕೆ ಬಂದಾಗ ಈ ಕೆಳಗಿನ ಅಂಶಗಳು ಮುಖ್ಯವಾಗುತ್ತದೆ.

ಪ್ರಾತಿನಿಧಿಕ ಚಿತ್ರ

ಪ್ರಾತಿನಿಧಿಕ ಚಿತ್ರ

  • Share this:

ಬಹಳಷ್ಟು ಜನರು ತಮ್ಮ ಅನೇಕ ತುರ್ತು ಅವಶ್ಯಕತೆಗಳಿಗಾಗಿ ಈ ಬ್ಯಾಂಕುಗಳಿಂದ ವೈಯಕ್ತಿಕ ಸಾಲಗಳನ್ನು (personal Debt) ಪಡೆಯುತ್ತಾರೆ. ಇನ್ನೂ ಕೆಲವರು ತಮ್ಮ ಪಿಪಿಎಫ್ ಖಾತೆಯ (PPF Account loan) ಮೇಲೆ ಸಾಲ ಪಡೆಯುತ್ತಾರೆ. ಬಹುತೇಕರಿಗೆ ಈ ಎರಡು ಸಾಲಗಳಲ್ಲಿ ಯಾವುದನ್ನು ತೆಗೆದುಕೊಳ್ಳುವುದು ಉತ್ತಮವಾಗಿರುತ್ತದೆ ಎಂದು ಗೊಂದಲವಿರುತ್ತದೆ.ವೈಯಕ್ತಿಕ ಸಾಲಗಳನ್ನು ಪಡೆಯುವುದು ತುರ್ತು ಪರಿಸ್ಥಿತಿಗಳಿಗೆ ಮೀಸಲಾಗಿದೆ. ಏಕೆಂದರೆ ಅವು ಸಾಲಗಾರರಿಗೆ ಲಭ್ಯವಿರುವ ಸಾಲಗಳ ಮೇಲೆ ಹೆಚ್ಚಿನ ಬಡ್ಡಿಯನ್ನು (intrest) ಹೊಂದಿರುತ್ತವೆ. ಅಲ್ಪಾವಧಿಯ ಆರ್ಥಿಕ ತೊಂದರೆಗೆ ಈ ಸಾಲ ಬಳಸಬಹುದು ಮತ್ತು ಯಾವುದಾದರೂ ದೊಡ್ಡ ಮೊತ್ತದ ಸಾಲ ಬೇಕಾದರೆ, ತಮ್ಮ ಪಿಪಿಎಫ್ ಮೇಲೆ ಸಾಲ ಪಡೆಯುವುದು ಸೂಕ್ತ.


ಆದರೂ, ಪಿಪಿಎಫ್ ಮೇಲೆ ಸಾಲ ಅಥವಾ ವೈಯಕ್ತಿಕ ಸಾಲದ ನಡುವೆ ಯಾವುದನ್ನು ನಾವು ಆಯ್ಕೆ ಮಾಡಿಕೊಳ್ಳಬೇಕು ಎಂಬ ವಿಷಯಕ್ಕೆ ಬಂದಾಗ ಈ ಕೆಳಗಿನ ಅಂಶಗಳನ್ನು ಒಮ್ಮೆ ಓದಿಕೊಳ್ಳುವುದು ಉತ್ತಮ.


ಸಾಲದ ಮಿತಿ

ನೀವು ವೈಯಕ್ತಿಕ ಸಾಲ ಪಡೆದರೆ ಅದರ ಮೇಲೆ ಇರುವ ಬಡ್ಡಿಯು ಬ್ಯಾಂಕುಗಳ ಪ್ರಕಾರ ಬದಲಾಗುತ್ತದೆ ಮತ್ತು ಸಾಲಗಾರರ ಪ್ರೊಫೈಲ್ ಮತ್ತು ಇತರ ಅಂಶಗಳನ್ನು ಆಧರಿಸಿ ನೀಡುತ್ತಾರೆ. ಆದರೆ ನಿಮ್ಮ ಪಿಪಿಎಫ್ ಮೇಲೆ ಸಾಲ ಪಡೆದರೆ, ಸಾಲದ ಮೊತ್ತವನ್ನು ಪಡೆದ ಎರಡನೇ ವರ್ಷದ ಕೊನೆಯಲ್ಲಿ ಖಾತೆಯಲ್ಲಿನ ಮೊತ್ತದ ಶೇ 25ಕ್ಕಿಂತ ಹೆಚ್ಚು ಸಾಲ ಪಡೆಯುವ ಮಿತಿಯು ಇರಲಾರದು. ಅಲ್ಲದೆ, ಪಿಪಿಎಫ್ ಖಾತೆ ತೆರೆದ ಮೂರನೇ ಮತ್ತು ಆರನೇ ಆರ್ಥಿಕ ವರ್ಷದ ನಡುವೆ ಪಿಪಿಎಫ್ ಖಾತೆಯಿಂದ ಸಾಲ ಪಡೆಯಬಹುದು.


ಬಡ್ಡಿ ದರ

ವೈಯಕ್ತಿಕ ಸಾಲಗಳು ಅಸುರಕ್ಷಿತವಾಗಿವೆ ಜೊತೆಗೆ ಅದರ ಮೇಲೆ ಬಡ್ಡಿ ದರಗಳೂ ಹೆಚ್ಚಾಗಿರುತ್ತವೆ. ಇದು ಸಾಮಾನ್ಯವಾಗಿ 10 ರಿಂದ 20 ಪ್ರತಿಶತದಷ್ಟು ಬಡ್ಡಿಯನ್ನು ಹಾಕುತ್ತಾರೆ. ಇದಕ್ಕೆ ವಿರುದ್ಧವಾಗಿ, ಪಿಪಿಎಫ್ ಮೇಲೆ ತೆಗೆದುಕೊಂಡ ಸಾಲದ ಮೇಲಿನ ಬಡ್ಡಿ ಕೇವಲ 1 ಪ್ರತಿಶತ ಆಗಿದ್ದು, ಸಾಲ ಮರುಪಾವತಿ ಮಾಡುವವರೆಗೆ ಖಾತೆದಾರನಿಗೆ ಪಿಪಿಎಫ್ ಮೊತ್ತದ ಮೇಲೆ ಯಾವುದೇ ಬಡ್ಡಿ ಪಾವತಿಸುವುದಿಲ್ಲ. ಆದ್ದರಿಂದ, ಪರಿಣಾಮಕಾರಿ ದರವು ಪಿಪಿಎಫ್ ಖಾತೆಯ ಮೇಲೆ ಪಡೆದ ಸಾಲದ ಮೇಲೆ ಬಡ್ಡಿ ದರಗಳು +1 ಪ್ರತಿಶತದಷ್ಟು ಚಾಲ್ತಿಯಲ್ಲಿರುವುದು.


ಇದನ್ನು ಓದಿ: ಸಾವರಿನ್ ಚಿನ್ನದ ಬಾಂಡ್‌ಗಳಲ್ಲಿ ಹೂಡಿಕೆ ಮಾಡುವುದು ಸರಿಯಾದ ನಿರ್ಧಾರವೇ..? ಇಲ್ಲಿದೆ ವಿವರ

ಆದರೂ, ಪಿಪಿಎಫ್ ಮೇಲೆ ಪಡೆದ ಸಾಲವು ಅಲ್ಪಾವಧಿಗೆ ಆಗಿದ್ದು ಮತ್ತು ಕಡಿಮೆ ಮೊತ್ತಕ್ಕೆ ತೆಗೆದುಕೊಂಡರೆ ತುಂಬಾನೇ ಸೂಕ್ತ ಎಂದು ತಜ್ಞರು ಹೇಳುತ್ತಾರೆ. ಹೆಚ್ಚಿನ ಮೊತ್ತದ ವೈಯಕ್ತಿಕ ಸಾಲಗಳನ್ನು ಪಡೆಯುವುದು ಉತ್ತಮ.


ಇದನ್ನು ಓದಿ: ಎಲ್​ಐಸಿಯ ಈ​ ಪಾಲಿಸಿ ಮೂಲಕ ತಿಂಗಳಿಗೆ ಕೇವಲ 1,302 ರೂ ಹೂಡಿಕೆ ಮಾಡಿ 28 ಲಕ್ಷ ಗಳಿಸಿ

ಪಿಪಿಎಫ್​ ಮರುಪಾವತಿ ಮಾಡುವ ಸಮಯ

ಪ್ರಸ್ತುತ ಪಿಪಿಎಫ್ ಬಡ್ಡಿದರವು 7.1 ಪ್ರತಿಶತದಷ್ಟು ಆಗಿದ್ದರೂ ವೈಯಕ್ತಿಕ ಸಾಲಕ್ಕಿಂತ ಇನ್ನೂ ಕಡಿಮೆ ಇದೆ ಎನ್ನುವುದು ಗಮನಿಸಬೇಕಾದ ಅಂಶವಾಗಿದೆ. ಒಂದು ವೇಳೆ ಸಾಲ ತೆಗೆದುಕೊಂಡರೆ, ಪಿಪಿಎಫ್ ಚಂದಾದಾರನು ಅಸಲು ಮೊತ್ತ ಮತ್ತು ಬಡ್ಡಿಯನ್ನು ಮರುಪಾವತಿ ಮಾಡುವ ಸಮಯದವರೆಗೆ ಯಾವುದೇ ಬಡ್ಡಿಯನ್ನು ಪಡೆಯುವುದಿಲ್ಲ.


ಅಲ್ಲದೆ, ಪಿಪಿಎಫ್ ಖಾತೆದಾರನು ಈ ಸಾಲದಿಂದಾಗಿ ತಮ್ಮ ಪಿಪಿಎಫ್ ಮೊತ್ತವನ್ನು ಕೊನೆಗೆ ಪಡೆಯುವಾಗ ಅದರ ಮೇಲೆ ಸಿಗುವ ಹೆಚ್ಚುವರಿ ಹಣ ಕಳೆದುಕೊಳ್ಳುತ್ತಾರೆ.


First published: