• Home
  • »
  • News
  • »
  • business
  • »
  • PPF Calculation: ಪಿಪಿಎಫ್​​ನಲ್ಲಿ 1 ಕೋಟಿ ಗಳಿಸುವ ಕನಸೇ? ಹಾಗಿದ್ರೆ ನೀವೆಷ್ಟು ಹಣ ಹೂಡಿಕೆ ಮಾಡಬೇಕು?

PPF Calculation: ಪಿಪಿಎಫ್​​ನಲ್ಲಿ 1 ಕೋಟಿ ಗಳಿಸುವ ಕನಸೇ? ಹಾಗಿದ್ರೆ ನೀವೆಷ್ಟು ಹಣ ಹೂಡಿಕೆ ಮಾಡಬೇಕು?

ಸಾಂಕೇತಿಕ ಚಿತ್ರ

ಸಾಂಕೇತಿಕ ಚಿತ್ರ

ನೀವೂ ಮಿಲಿಯನೇರ್ ಆಗಲು ಬಯಸಿದರೆ, ಈಗ ನಿಮಗೆ ಸಮಯ ಬಂದಿದೆ. ಮಿಲಿಯನೇರ್ ಆಗಲು, ಇಂದಿನಿಂದಲೇ ಹೂಡಿಕೆ ಮಾಡಲು ಪ್ರಾರಂಭಿಸಿ. ಇದಕ್ಕಾಗಿ ನಿಮಗೆ ಹೆಚ್ಚಿನ ಹೂಡಿಕೆಯ ಅಗತ್ಯವಿಲ್ಲ, ಆದರೆ ಪ್ರತಿ ತಿಂಗಳು ಸ್ವಲ್ಪ ಹಣವನ್ನ ಮಾತ್ರ ಸಾರ್ವಜನಿಕ ಭವಿಷ್ಯ ನಿಧಿಯಲ್ಲಿ ಹೂಡಿಕೆ ಮಾಡಬೇಕು. ಇಲ್ಲಿ ಉಲ್ಲೇಖಿಸಿದ ರೀತಿಯಲ್ಲಿ ನೀವು ಹೂಡಿಕೆ ಮಾಡಿದರೆ. ನೀವು ಖಂಡಿತವಾಗಿಯೂ ಮಿಲಿಯನೇರ್ ಆಗುತ್ತೀರಿ.

ಮುಂದೆ ಓದಿ ...
  • Share this:

ನೀವೂ ಮಿಲಿಯನೇರ್ (Millionaire) ಆಗಲು ಬಯಸಿದರೆ, ಈಗ ನಿಮಗೆ ಸಮಯ ಬಂದಿದೆ. ಮಿಲಿಯನೇರ್ ಆಗಲು, ಇಂದಿನಿಂದಲೇ ಹೂಡಿಕೆ ಮಾಡಲು ಪ್ರಾರಂಭಿಸಿ. ಇದಕ್ಕಾಗಿ ನಿಮಗೆ ಹೆಚ್ಚಿನ ಹೂಡಿಕೆಯ (Investment) ಅಗತ್ಯವಿಲ್ಲ, ಆದರೆ ಪ್ರತಿ ತಿಂಗಳು ಸ್ವಲ್ಪ ಹಣವನ್ನ ಮಾತ್ರ ಸಾರ್ವಜನಿಕ ಭವಿಷ್ಯ ನಿಧಿಯಲ್ಲಿ (Public Provident Fund) ಹೂಡಿಕೆ ಮಾಡಬೇಕು. ಇಲ್ಲಿ ಉಲ್ಲೇಖಿಸಿದ ರೀತಿಯಲ್ಲಿ ನೀವು ಹೂಡಿಕೆ ಮಾಡಿದರೆ. ನೀವು ಖಂಡಿತವಾಗಿಯೂ ಮಿಲಿಯನೇರ್ ಆಗುತ್ತೀರಿ. ಸಾರ್ವಜನಿಕರಿಗೆ ಸಹಾಯವಾಗಲೆಂದು ಭಾರತ ಸರ್ಕಾರವು (Indian Government) ಸಾರ್ವಜನಿಕ ಭವಿಷ್ಯ ನಿಧಿ ಅಥವಾ ಪಿಪಿಎಫ್ (PPF) ಅನ್ನು ಹಲವಾರು ವರ್ಷಗಳ ಹಿಂದೆಯೇ ಪ್ರಾರಂಭಿಸಿದ್ದು ಬಹುತೇಕರಿಗೆ ಗೊತ್ತಿರುವ ವಿಚಾರವೇ ಆಗಿದೆ.


ಇದು ಸಣ್ಣ ಉಳಿತಾಯಗಾರರಿಗೆ ತುಂಬಾನೇ ಪ್ರಯೋಜನವನ್ನು ನೀಡುತ್ತದೆ, ಅವರು ಪ್ರತಿ ತಿಂಗಳು ಅವರಿಗೆ ಸಾಧ್ಯವಾದಷ್ಟು ಹಣವನ್ನು ಉಳಿತಾಯ ಮಾಡಿದರೆ ಸಾಕು, ಅದು ಮುಂದೆ ದೊಡ್ಡ ಮೊತ್ತದ ಆದಾಯವನ್ನು ತರಬಲ್ಲದು.


ತೆರಿಗೆ ಮುಕ್ತ ಉಳಿತಾಯ
ಇದು ಭಾರತದ ಅತ್ಯಂತ ಜನಪ್ರಿಯ ಸರ್ಕಾರಿ-ಬೆಂಬಲಿತ ಉಳಿತಾಯ ಯೋಜನೆಗಳಲ್ಲಿ ಒಂದಾಗಿದೆ. ಪಿಪಿಎಫ್ ತನ್ನ ವೈಶಿಷ್ಟ್ಯದೊಂದಿಗೆ ತೆರಿಗೆಗಳನ್ನು ಉಳಿಸಲು ಸಾರ್ವಜನಿಕರಿಗೆ ಆಯ್ಕೆಯನ್ನು ಒದಗಿಸುವ ಕೆಲವೇ ಯೋಜನೆಗಳಲ್ಲಿ ಒಂದಾಗಿದೆ, ಅಂದರೆ ಇದು ಸಂಪೂರ್ಣವಾಗಿ ತೆರಿಗೆ ಮುಕ್ತ ಉಳಿತಾಯ ಆಯ್ಕೆಯಾಗಿದೆ. 1968 ರಲ್ಲಿ ಹಣಕಾಸು ಸಚಿವಾಲಯದ ನ್ಯಾಷನಲ್ ಸೇವಿಂಗ್ಸ್ ಇನ್ಸ್ಟಿಟ್ಯೂಟ್ ಪರಿಚಯಿಸಿದ ಪಿಪಿಎಫ್ ಭಾರತೀಯರಿಗೆ ಒಂದು ಪ್ರಬಲ ಸಾಧನವಾಗಿ ಮಾರ್ಪಟ್ಟಿದೆ, ಇದರಲ್ಲಿ ಅವರು ತೆರಿಗೆ ಪ್ರಯೋಜನಗಳನ್ನು ಸಹ ಪಡೆಯಬಹುದು.


ಇದನ್ನೂ ಓದಿ: EPF: ನೀವು ಪಿಎಫ್ ಸದಸ್ಯರಾ? ಹಾಗಿದ್ರೆ ಆನ್‌ಲೈನ್ ನಲ್ಲಿ ಯುಎಎನ್ ಪಡೆಯುವುದು ಹೇಗೆ ಅಂತ ನೋಡ್ಕೊಳ್ಳಿ


ಪಬ್ಲಿಕ್ ಪ್ರಾವಿಡೆಂಟ್ ಫಂಡ್ ಒಂದು ನಿವೃತ್ತಿ ಕೇಂದ್ರಿತ ಹೂಡಿಕೆಗೆ ಬೆಸ್ಟ್‌ ಎಂದು ಹೇಳಬಹುದು. ದೀರ್ಘಾವಧಿಯ ಸಮಯಕ್ಕೆ ಹಣದ ಕೊರತೆ ಆಗದಂತೆ ಮಾಡಲು ಈ ಹೂಡಿಕೆ ನೀವು ಮಾಡಬೇಕಾಗುತ್ತದೆ. ದೀರ್ಘಾವಧಿಯ ಇನ್ವೆಸ್ಟ್‌ಗಳು ನಿಮ್ಮನ್ನು ಶ್ರೀಮಂತರನ್ನಾಗಿ ಮಾಡುತ್ತವೆ. ಅದಕ್ಕಾಗಿ ನೀವು ನಿಜವಾಗಿಯೂ ರೂ. 1 ಕೋಟಿಗಿಂತ ಹೆಚ್ಚು ಗಳಿಸಲು ಈ ಸಣ್ಣ ಹೂಡಿಕೆ ನಿಮಗೆ ಪ್ರಮುಖ ಸಹಾಯ ಮಾಡಬಹುದು.


ಹಾಗಿದ್ರೆ ಕೋಟ್ಯಾಧಿಪತಿಗಳಾಗುವುದು ಹೇಗೆ?
ಪ್ರಸ್ತುತ, ಸರ್ಕಾರವು ಪಿಪಿಎಫ್ ಖಾತೆಗೆ 7.1% ವಾರ್ಷಿಕ ಬಡ್ಡಿಯನ್ನು ನೀಡುತ್ತದೆ. ಈ ಪಿಪಿಎಫ್‌ ಬಡ್ಡಿಯನ್ನು ಸರ್ಕಾರವು ಪ್ರತಿ ತ್ರೈಮಾಸಿಕದಲ್ಲಿ ಪರಿಷ್ಕರಿಸುತ್ತದೆ. ಈಗ, ಪಿಪಿಎಫ್‌ ಹೂಡಿಕೆ ಮೇಲೆ 7.1 % ಬಡ್ಡಿದರವು ದೀರ್ಘಾವಧಿಯಲ್ಲಿ ಸ್ಥಿರವಾಗಿರುತ್ತದೆ ಮತ್ತು ಹೂಡಿಕೆದಾರರು 25 ವರ್ಷಗಳವರೆಗೆ ಹಣವನ್ನು ಇಲ್ಲಿ ಹೂಡಿಕೆ ಮಾಡುತ್ತಾರೆ. ಒಂದು ಹಣಕಾಸು ವರ್ಷದಲ್ಲಿ ಯಾವ ವ್ಯಕ್ತಿ ಅನುಮತಿ ನೀಡಿರುವ ಹೂಡಿಕೆಗಳಿಂತ ಹೆಚ್ಚಿನ ಬಾರಿ ಹಣವನ್ನು ಪಿಪಿಎಫ್‌ನಲ್ಲಿ ಹೂಡಿಕೆ ಮಾಡುತ್ತಾರೋ ಅವರು ಮುಂದೆ ದೊಡ್ಡ ಮೊತ್ತದ ಆದಾಯ ಪಡೆಯುತ್ತಾರೆ. ಇಲ್ಲಿ ಹಣವು ದೀರ್ಘಕಾಲದವರೆಗೆ ಹೂಡಿಕೆ ಆಗುವುದರಿಂದ, ಬಹು ವೇಗವಾಗಿ ಹಣ ಒಂದಕ್ಕೆ ಎರಡರಷ್ಟು ಬೆಳೆಯುತ್ತದೆ.


ಆನ್‌ಲೈನ್‌ ಹೂಡಿಕೆ ಪ್ಲಾಟ್‌ಫಾರ್ಮ್‌ ಆದ ಗ್ರೋವ್ ನೀಡಿದ ಲೆಕ್ಕಾಚಾರಗಳ ಪ್ರಕಾರ - “ಯಾವುದೇ ಒಬ್ಬ ವ್ಯಕ್ತಿ ಪ್ರತಿ ತಿಂಗಳಿಗೆ ರೂ 12,500 ಹೂಡಿಕೆಯನ್ನು ಪ್ರಾರಂಭಿಸಿದರೆ (ಪಿಪಿಎಫ್‌ನಲ್ಲಿ ಮಾಡಬಹುದಾದ ಗರಿಷ್ಠ ಮಾಸಿಕ ಹೂಡಿಕೆ) ಮತ್ತು ಈ ಹೂಡಿಕೆಯ ಪಿಪಿಎಫ್ ಖಾತೆಯನ್ನು 15 ವರ್ಷಗಳವರೆಗೆ ಮುಂದುವರಿಸಿದರೆ, ಆ ವ್ಯಕ್ತಿ 15 ವರ್ಷದ ನಂತರ ಒಟ್ಟು ರೂ. 43 ಲಕ್ಷಕ್ಕಿಂತ ಹೆಚ್ಚು ಹಣ ಗಳಿಸಬಹುದಾಗಿದೆ” ಎಂದು ಹೇಳಿದೆ.


ಇನ್ನೂ ಹೆಚ್ಚಿನ ಪ್ರಯೋಜನ ಪಡೆಯುವುದು ಹೇಗೆ
ಇನ್ನೇನು ಆ ಖಾತೆಯ ಅವಧಿ ಮುಗಿಯುತ್ತದೆ ಎಂದಾದರೆ, ಆ ಖಾತೆಯ ಮುಕ್ತಾಯದ ಒಂದು ವರ್ಷದೊಳಗೆ ಇನ್ನೂ ಐದು ವರ್ಷಗಳವರೆಗೆ ವಿಸ್ತರಿಸುವುದರಿಂದ ಇನ್ನು ಹೆಚ್ಚಿನ ಪ್ರಯೋಜನಗಳನ್ನು ಪಡೆಯಬಹುದು. ಈ ಹೂಡಿಕೆಯ ಪಿಪಿಎಫ್‌ ಖಾತೆಯನ್ನು 20 ವರ್ಷಗಳಿಗೆ ಮುಂದುವರಿಸಿದರೆ ನೀವು ಸುಮಾರು ರೂ. 73 ಲಕ್ಷಗಳನ್ನು ಗಳಿಸಬಹುದಾಗಿದೆ.


ಇದನ್ನೂ ಓದಿ:  LIC Housing Finance: ಎಲ್ಐಸಿ ಹೌಸಿಂಗ್ ಫೈನಾನ್ಸ್ ಸಂಸ್ಥೆಯ ನಿವ್ವಳ ಲಾಭ 925.48 ಕೋಟಿ ರೂಪಾಯಿಗೆ ಏರಿಕೆ


ಈಗ, 1 ಕೋಟಿ ರೂಪಾಯಿಗಳನ್ನು ಪಡೆಯಲು, ಹೂಡಿಕೆದಾರರು ಖಾತೆಯನ್ನು ಇನ್ನೂ ಐದು ವರ್ಷಗಳವರೆಗೆ ವಿಸ್ತರಿಸಬೇಕಾಗುತ್ತದೆ. ಆಗ ಇಲ್ಲಿ ನೀವು ರೂ. 1,16,60,769 ಗಳನ್ನು ಗಳಿಸಬಹುದಾಗಿದೆ. ಹೇಗಿದೆ ಪ್ಲಾನ್‌? ಸೂಪರ್‌ ಆಗಿದೆ ಅಲ್ವಾ. ನೀವು ಕೋಟ್ಯಾಧಿಪತಿಗಳು ಆಗಬೇಕೆಂದಿದ್ದರೆ ಈಗಲೇ ಈ ಪಿಪಿಎಫ್‌ ಖಾತೆಯಲ್ಲಿ ಹೂಡಿಕೆ ಮಾಡಿ.

Published by:Ashwini Prabhu
First published: