• ಹೋಂ
 • »
 • ನ್ಯೂಸ್
 • »
 • ಬ್ಯುಸಿನೆಸ್
 • »
 • Interest Rates: ಶೀಘ್ರದಲ್ಲಿಯೇ ಹೆಚ್ಚಳವಾಗಲಿದೆ ಪಿಪಿಎಫ್, ಸುಕನ್ಯಾ ಸಮೃದ್ಧಿ ಯೋಜನೆಗಳ ಬಡ್ಡಿದರ! ಎಷ್ಟು ಗೊತ್ತಾ ಇಲ್ಲಿದೆ ನೋಡಿ

Interest Rates: ಶೀಘ್ರದಲ್ಲಿಯೇ ಹೆಚ್ಚಳವಾಗಲಿದೆ ಪಿಪಿಎಫ್, ಸುಕನ್ಯಾ ಸಮೃದ್ಧಿ ಯೋಜನೆಗಳ ಬಡ್ಡಿದರ! ಎಷ್ಟು ಗೊತ್ತಾ ಇಲ್ಲಿದೆ ನೋಡಿ

ಸಾಂಕೇತಿಕ ಚಿತ್ರ

ಸಾಂಕೇತಿಕ ಚಿತ್ರ

ಈ ವರ್ಷದ ಏಪ್ರಿಲ್ ನಿಂದ ಜೂನ್ ತ್ರೈಮಾಸಿಕದ ‘ತ್ರೈಮಾಸಿಕ ಪರಾಮರ್ಶೆ’ ಯಲ್ಲಿ, ಸಾರ್ವಜನಿಕ ಭವಿಷ್ಯ ನಿಧಿ (ಪಿಪಿಎಫ್) ಮತ್ತು ಸುಕನ್ಯಾ ಸಮೃದ್ಧಿ ಯೋಜನೆಯಂತಹ ಸಣ್ಣ ಉಳಿತಾಯ ಯೋಜನೆಗಳ ಮೇಲಿನ ಬಡ್ಡಿದರಗಳನ್ನು ಮಾರ್ಚ್ 31, 2022ಕ್ಕೆ ಕೊನೆಗೊಂಡ ತ್ರೈಮಾಸಿಕದಲ್ಲಿ ಅದೇ ರೀತಿ ಇರಿಸಿಕೊಳ್ಳಲು ಕೇಂದ್ರ ನಿರ್ಧರಿಸಿದೆ.

ಮುಂದೆ ಓದಿ ...
 • Share this:

ನಮ್ಮ ಭಾರತ (India) ದೇಶದಲ್ಲಿ ಬಹುತೇಕರು ಮಧ್ಯಮವರ್ಗದ ಜನರಾಗಿದ್ದು, ತಮಗೆ ಬರುವ ಕಡಿಮೆ ಆದಾಯದಲ್ಲಿಯೇ ಸ್ವಲ್ಪವಾದರೂ ಭವಿಷ್ಯದ ಸಲುವಾಗಿ ಉಳಿತಾಯ (Savings) ಮಾಡಬೇಕೆಂಬ ತುಡಿತ ಇರುವುದು ಸಹಜ. ಅನೇಕ ಜನರು ಈ ಅಂಚೆ ಕಚೇರಿಯ (Post Office) ಉಳಿತಾಯ ಯೋಜನೆಗಳನ್ನು ಅವಲಂಬಿಸಿರುತ್ತಾರೆ. ಅಂಚೆ ಕಚೇರಿ ಉಳಿತಾಯ ಯೋಜನೆಗಳು ಹೆಚ್ಚು ವಿಶ್ವಾಸಾರ್ಹವಾಗಿವೆ, ಏಕೆಂದರೆ ಅವು ಸರ್ಕಾರದಿಂದ (Government) ಬೆಂಬಲಿಸಲ್ಪಡುತ್ತವೆ ಮತ್ತು ದೇಶದ ಖಾಸಗಿ ಮತ್ತು ಸಾರ್ವಜನಿಕ (Public) ವಲಯಗಳು ಸೇರಿದಂತೆ ಹೆಚ್ಚಿನ ಬ್ಯಾಂಕುಗಳಿಗಿಂತ (Banks) ಹೆಚ್ಚಿನ ಬಡ್ಡಿದರವನ್ನು ಒದಗಿಸುತ್ತವೆ. ಆದಾಗ್ಯೂ, ದೀರ್ಘಕಾಲದಿಂದ, ಈ ಸಣ್ಣ ಉಳಿತಾಯ ಯೋಜನೆಗಳು ಸರ್ಕಾರವು ಅದನ್ನು ಪರಿಶೀಲಿಸಿದಾಗಿನಿಂದಲೂ ಬಡ್ಡಿದರಗಳಲ್ಲಿ ಹೆಚ್ಚಳವನ್ನು ಕಂಡಿಲ್ಲ.


ಇದನ್ನು ಗಮನದಲ್ಲಿಟ್ಟುಕೊಂಡು, ರಾಷ್ಟ್ರೀಯ ಉಳಿತಾಯ ಪ್ರಮಾಣಪತ್ರ, ಸುಕನ್ಯಾ ಸಮೃದ್ಧಿ ಯೋಜನೆ, ಹಿರಿಯ ನಾಗರಿಕರ ಉಳಿತಾಯ ಯೋಜನೆ ಅಥವಾ ಸಾರ್ವಜನಿಕ ಭವಿಷ್ಯ ನಿಧಿ (ಪಿಪಿಎಫ್) ಹೂಡಿಕೆದಾರರಿಗೆ ಮುಂದಿನ ತಿಂಗಳ ಕೊನೆಯಲ್ಲಿ ಒಳ್ಳೆಯ ಸುದ್ದಿ ಸಿಗುವ ಸಾಧ್ಯತೆಯಿದೆ.


ಮಾಧ್ಯಮ ವರದಿಗಳ ಪ್ರಕಾರ, ಜೂನ್ ನಲ್ಲಿ ಪಿಪಿಎಫ್, ಎನ್ಎಸ್‌ಸಿ ಅಥವಾ ಎಸ್ಎಸ್‌ವೈ ಯೋಜನೆಯ ಬಡ್ಡಿದರಗಳನ್ನು ಬದಲಾಯಿಸಲು ಸರ್ಕಾರ ಮುಂದಾಗಬಹುದು, ಆ ಮೂಲಕ ಈ ಯೋಜನೆಗಳ ಹೂಡಿಕೆದಾರರಿಗೆ ಪ್ರಯೋಜನವಾಗಬಹುದು ಎಂದಿದೆ.


ಸಣ್ಣ ಉಳಿತಾಯ ಯೋಜನೆಗಳ ಮೇಲೆ ಯಾವುದೇ ದರ ಏರಿಕೆ ಇಲ್ಲ
ಮೊದಲೇ ಹೇಳಿದಂತೆ, ಸರ್ಕಾರವು ಸಣ್ಣ ಉಳಿತಾಯ ಯೋಜನೆಗಳು ಮತ್ತು ಅಂಚೆ ಕಚೇರಿ ಯೋಜನೆಗಳ ಬಡ್ಡಿದರಗಳನ್ನು ದೀರ್ಘಾವಧಿಯಲ್ಲಿ ಹೆಚ್ಚಿಸಿಲ್ಲ, ಅದರಲ್ಲೂ ವಿಶೇಷವಾಗಿ ಕೋವಿಡ್ -19 ಸಾಂಕ್ರಾಮಿಕ ರೋಗವು ದೇಶದ ಆರ್ಥಿಕತೆಯ ಮೇಲೆ ಕೆಟ್ಟ ಪರಿಣಾಮ ಬೀರಿದ ನಂತರ ಇದನ್ನು ಬದಲಾಯಿಸುವುದಕ್ಕೆ ಹೋಗಿಲ್ಲ.


ಈ ವರ್ಷದ ಏಪ್ರಿಲ್ ನಿಂದ ಜೂನ್ ತ್ರೈಮಾಸಿಕದ ‘ತ್ರೈಮಾಸಿಕ ಪರಾಮರ್ಶೆ’ ಯಲ್ಲಿ, ಸಾರ್ವಜನಿಕ ಭವಿಷ್ಯ ನಿಧಿ (ಪಿಪಿಎಫ್) ಮತ್ತು ಸುಕನ್ಯಾ ಸಮೃದ್ಧಿ ಯೋಜನೆಯಂತಹ ಸಣ್ಣ ಉಳಿತಾಯ ಯೋಜನೆಗಳ ಮೇಲಿನ ಬಡ್ಡಿದರಗಳನ್ನು ಮಾರ್ಚ್ 31, 2022ಕ್ಕೆ ಕೊನೆಗೊಂಡ ತ್ರೈಮಾಸಿಕದಲ್ಲಿ ಅದೇ ರೀತಿ ಇರಿಸಿಕೊಳ್ಳಲು ಕೇಂದ್ರ ನಿರ್ಧರಿಸಿದೆ.


ಇದನ್ನೂ ಓದಿ:   Rs 2000 Notes: 2 ಸಾವಿರದ ನೋಟು ನಿಮ್ಮಲ್ಲಿದೆಯೇ? ತಪ್ಪದೇ ಇಲ್ಲಿ ಗಮನಿಸಿ


ನಿಯಮಗಳ ಪ್ರಕಾರ, ಸರ್ಕಾರಿ ಸಮಿತಿಯು ಶೀಘ್ರದಲ್ಲಿಯೇ ಸಭೆ ಸೇರಲಿದ್ದು, ಜುಲೈ 2022 ರಿಂದ ಪ್ರಾರಂಭವಾಗುವ ತ್ರೈಮಾಸಿಕದ ಹೊಸ ದರಗಳನ್ನು ಜೂನ್ 30ರೊಳಗೆ ಅಧಿಸೂಚನೆ ಹೊರಡಿಸಲಿದೆ.


ಅಂಚೆ ಕಚೇರಿ ಯೋಜನೆಗಳ ಮೇಲಿನ ಪ್ರಸ್ತುತ ಬಡ್ಡಿದರಗಳು
ಈ ವರ್ಷದ ಏಪ್ರಿಲ್ 1 ರಿಂದ ಜಾರಿಗೆ ಬಂದಿರುವ ಅಂಚೆ ಕಚೇರಿ ಉಳಿತಾಯ ಯೋಜನೆಗಳ ಮೇಲಿನ ಪ್ರಸ್ತುತ ಬಡ್ಡಿದರಗಳು ಇಲ್ಲಿವೆ ನೋಡಿ.


 • ಸಾರ್ವಜನಿಕ ಭವಿಷ್ಯ ನಿಧಿ: 7.1 ಪ್ರತಿಶತ

 • ರಾಷ್ಟ್ರೀಯ ಉಳಿತಾಯ ಪ್ರಮಾಣಪತ್ರ: 6.8 ಪ್ರತಿಶತ

 • ಸುಕನ್ಯಾ ಸಮೃದ್ಧಿ ಯೋಜನೆ: ಶೇ.7.6

 • ಕಿಸಾನ್ ವಿಕಾಸ್ ಪತ್ರ: 6.9 ಪ್ರತಿಶತ

 • ಉಳಿತಾಯ ಠೇವಣಿ: 4 ಪ್ರತಿಶತ

 • ಒಂದು ವರ್ಷದ ಅವಧಿಯ ಠೇವಣಿ: 5.5 ಪ್ರತಿಶತ

 • ಎರಡು ವರ್ಷಗಳ ಟೈಮ್ ಠೇವಣಿ: 5.5 ಪ್ರತಿಶತ

 • ಮೂರು ವರ್ಷಗಳ ಟೈಮ್ ಠೇವಣಿ: 5.5 ಪ್ರತಿಶತ

 • ಐದು ವರ್ಷಗಳ ಅವಧಿಯ ಠೇವಣಿ: 6.7 ಪ್ರತಿಶತ

 • ಐದು ವರ್ಷಗಳ ಮರುಕಳಿಸುವ ಠೇವಣಿ: 5.8 ಪ್ರತಿಶತ

 • ಐದು ವರ್ಷಗಳ ಹಿರಿಯ ನಾಗರಿಕರ ಉಳಿತಾಯ ಯೋಜನೆ: 7.4 ಪ್ರತಿಶತ

 • ಐದು ವರ್ಷಗಳ ಮಾಸಿಕ ಆದಾಯ ಖಾತೆ: 6.6 ಪ್ರತಿಶತ


ಪಿಪಿಎಫ್, ಸುಕನ್ಯಾ ಸಮೃದ್ಧಿ ಯೋಜನೆಯ ದರಗಳು ಈಗ ಏಕೆ ಹೆಚ್ಚಾಗುತ್ತವೆ?
ಪಿಪಿಎಫ್, ಸುಕನ್ಯಾ ಸಮೃದ್ಧಿ ಯೋಜನೆಗಳ ಬಡ್ಡಿದರಗಳನ್ನು ಸರ್ಕಾರ ಇಷ್ಟು ಸಮಯದಲ್ಲಿ ಹೆಚ್ಚಿಸಿಲ್ಲವೇ ಎಂದು ನಿಮಗೆ ಪ್ರಶ್ನೆಯೊಂದು ಮೂಡಬಹುದು. ಹಣದುಬ್ಬರವನ್ನು ನಿಯಂತ್ರಿಸಲು ಭಾರತೀಯ ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ ಆಫ್ ಮಹತ್ವದ ಸಭೆಯಲ್ಲಿ ತನ್ನ ರೆಪೋ ದರಗಳನ್ನು 40 ಬೇಸಿಸ್ ಪಾಯಿಂಟ್ ಗಳಷ್ಟು ಹೆಚ್ಚಿಸಿದೆ.


ಸಾಲಗಾರರು ಸಾಲಗಳ ಮೇಲೆ ಹೆಚ್ಚಿನ ಬಡ್ಡಿಯನ್ನು ಪಾವತಿಸಬೇಕಾಗುತ್ತದೆ ಎಂದು ಇದರ ಅರ್ಥವಾದರೂ, ಹೂಡಿಕೆದಾರರು ಉತ್ತಮ ಆದಾಯವನ್ನು ಪಡೆಯುತ್ತಾರೆ ಎಂಬ ಮಾತನ್ನು ನಾವು ಅಲ್ಲಗಳೆಯುವಂತಿಲ್ಲ.


ಇದನ್ನೂ ಓದಿ: LIC: ಮೇ 30ರಂದು ಗುಡ್ ನ್ಯೂಸ್ ನೀಡಲಿದೆ ಎಲ್ಐಸಿ, ನಿರೀಕ್ಷಿಸಿ


ಹಲವಾರು ರಾಷ್ಟ್ರೀಕೃತ ಮತ್ತು ಖಾಸಗಿ ಬ್ಯಾಂಕುಗಳು ಈಗ ತಮ್ಮ ಎಫ್‌ಡಿ ಮತ್ತು ಆರ್‌ಡಿ ದರಗಳನ್ನು ಹೆಚ್ಚಿಸುತ್ತಿವೆ, ಆದ್ದರಿಂದ ಸರ್ಕಾರವು ಮುಂದಿನ ತಿಂಗಳು ಪಿಪಿಎಫ್ ಬಡ್ಡಿದರಗಳು ಮತ್ತು ಎಸ್ಎಸ್‌ವೈ ಬಡ್ಡಿದರಗಳನ್ನು ಹೆಚ್ಚಿಸಲು ನಿರ್ಧಾರ ತೆಗೆದುಕೊಳ್ಳಬಹುದು.

Published by:Ashwini Prabhu
First published: