• Home
 • »
 • News
 • »
 • business
 • »
 • ಭಾರತದ $5 ಟ್ರಿಲಿಯನ್ ಡಾಲರ್ ಆರ್ಥಿಕತೆಗೆ ಸುಸ್ಥಿರವಾದ ಚೈತನ್ಯ

ಭಾರತದ $5 ಟ್ರಿಲಿಯನ್ ಡಾಲರ್ ಆರ್ಥಿಕತೆಗೆ ಸುಸ್ಥಿರವಾದ ಚೈತನ್ಯ

ಭಾರತದ ಶುದ್ಧ ಇಂಧನ ಸಾಮರ್ಥ್ಯವು ಅಪೇಕ್ಷಣೀಯವಾಗಿದೆ. ಅದೇ ರೀತಿ ಈ ಕಾರ್ಯಕ್ರಮವನ್ನು ಅನುಷ್ಠಾನಗೊಳಿಸಲು ಇರುವಂಥ ರಾಜಕೀಯ ಇಚ್ಛಾಶಕ್ತಿ ಕೂಡಾ. QCIಯ ಗುಣಮಟ್ಟದ ಪರಿಸರ ವ್ಯವಸ್ಥೆಯು ಭಾರತವನ್ನು ಶುದ್ಧ ಇಂಧನದ ಭವಿಷ್ಯದೆಡೆಗೆ ಮುನ್ನಡೆಸಲು ಅಗತ್ಯವಾದ ಮಾರ್ಗಸೂಚಿಗಳು ಮತ್ತು ರಕ್ಷಾಕವಚವನ್ನು ಒದಗಿಸುತ್ತದೆ.

ಭಾರತದ ಶುದ್ಧ ಇಂಧನ ಸಾಮರ್ಥ್ಯವು ಅಪೇಕ್ಷಣೀಯವಾಗಿದೆ. ಅದೇ ರೀತಿ ಈ ಕಾರ್ಯಕ್ರಮವನ್ನು ಅನುಷ್ಠಾನಗೊಳಿಸಲು ಇರುವಂಥ ರಾಜಕೀಯ ಇಚ್ಛಾಶಕ್ತಿ ಕೂಡಾ. QCIಯ ಗುಣಮಟ್ಟದ ಪರಿಸರ ವ್ಯವಸ್ಥೆಯು ಭಾರತವನ್ನು ಶುದ್ಧ ಇಂಧನದ ಭವಿಷ್ಯದೆಡೆಗೆ ಮುನ್ನಡೆಸಲು ಅಗತ್ಯವಾದ ಮಾರ್ಗಸೂಚಿಗಳು ಮತ್ತು ರಕ್ಷಾಕವಚವನ್ನು ಒದಗಿಸುತ್ತದೆ.

ಭಾರತದ ಶುದ್ಧ ಇಂಧನ ಸಾಮರ್ಥ್ಯವು ಅಪೇಕ್ಷಣೀಯವಾಗಿದೆ. ಅದೇ ರೀತಿ ಈ ಕಾರ್ಯಕ್ರಮವನ್ನು ಅನುಷ್ಠಾನಗೊಳಿಸಲು ಇರುವಂಥ ರಾಜಕೀಯ ಇಚ್ಛಾಶಕ್ತಿ ಕೂಡಾ. QCIಯ ಗುಣಮಟ್ಟದ ಪರಿಸರ ವ್ಯವಸ್ಥೆಯು ಭಾರತವನ್ನು ಶುದ್ಧ ಇಂಧನದ ಭವಿಷ್ಯದೆಡೆಗೆ ಮುನ್ನಡೆಸಲು ಅಗತ್ಯವಾದ ಮಾರ್ಗಸೂಚಿಗಳು ಮತ್ತು ರಕ್ಷಾಕವಚವನ್ನು ಒದಗಿಸುತ್ತದೆ.

ಮುಂದೆ ಓದಿ ...
 • Share this:

  ಆರ್ಥಿಕ ಶಕ್ತಿ ಮತ್ತು ಮನುಕುಲ ಮತ್ತು ಗ್ರಹಕ್ಕೆ ಮುಖ್ಯವಾದ ದೊಡ್ಡ ನಿರೂಪಣೆಗಳನ್ನು ರೂಪಿಸುವಿಕೆ, ಈ ಎರಡರ ನಿಟ್ಟಿನಲ್ಲಿ ನವ ಆರ್ಥಿಕತೆಯು ಮುಖ್ಯ ಸ್ಥಾನವನ್ನು ಪಡೆದುಕೊಳ್ಳುತ್ತಿರುವುದರಿಂದ ಜಗತ್ತಿನಲ್ಲಿ ಶಕ್ತಿ ಮತ್ತು ಪ್ರಭಾವದ ದಿಕ್ಕು ಸೂಕ್ಷ್ಮವಾಗಿ ಬದಲಾಗುತ್ತಿವೆ. ಪಾಶ್ಚಿಮಾತ್ಯ ರಾಷ್ಟ್ರಗಳು ಚೌಕಟ್ಟನ್ನು ರಚಿಸಿ ಒಪ್ಪಂದಗಳಲ್ಲಿ ಮುಂಚೂಣಿಯಲ್ಲಿರುವ ಮತ್ತು ಉಳಿದ ರಾಷ್ಟ್ರಗಳು ಅವುಗಳನ್ನು ಅನುಸರಿಸುವ ಕಾಲ ಮುಗಿದುಹೋಗಿದೆ.


  ಇಂದು, ಉದಯೋನ್ಮುಖ ಆರ್ಥಿಕತೆಗಳು ತಮ್ಮದೇ ಆದ ಧ್ವನಿಯನ್ನು ಹೊಂದಿದೆ ಮತ್ತು ಅವುಗಳಲ್ಲಿ ಅತ್ಯಂತ ಶಕ್ತಿಯುತ ಧ್ವನಿ ನಮ್ಮದಾಗಿದೆ. ಭೌಗೋಳಿಕ ರಾಜಕೀಯ ಸ್ಥಿರತೆ, ಸಮ್ಮಿಳನ ಶಕ್ತಿ ಮತ್ತು ಅಂತರ್‌ಗ್ರಹ ಬಾಹ್ಯಾಕಾಶ ಯಾನ, ಮಹಿಳೆಯರನ್ನು ಅಧಿಕಾರವರ್ಗಕ್ಕೆ ಏರಿಸುವುದು, ಬಡತನ ನಿರ್ಮೂಲನೆ, ಆರೋಗ್ಯಸೇವೆ ಲಭ್ಯತೆ, ಸಂರಕ್ಷಣೆ, ಹವಾಮಾನ ಕ್ರಮಗಳು ಮತ್ತು ಸುಸ್ಥಿರತೆ ಯಾವುದೇ ಆಗಿರಲಿ, ಈ ಪ್ರತಿಯೊಂದು ಕ್ಷೇತ್ರದಲ್ಲೂ ಜಾಗತಿಕ ಗುರಿಗಳನ್ನು ಸಾಧಿಸಲು ಭಾರತವು ನಿರ್ಣಾಯಕವಾಗಿದೆ.


  ಯುಎನ್ ಸುಸ್ಥಿರ ಅಭಿವೃದ್ಧಿ  ಶೃಂಗಸಭೆ 2015ರಲ್ಲಿ ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿಯವರು ಹೇಳಿದಂತೆ, “ಮನುಕುಲದ ಆರನೇ ಒಂದು ಭಾಗದಷ್ಟು ಸುಸ್ಥಿರ ಅಭಿವೃದ್ಧಿಯು ಜಗತ್ತಿಗೆ ಮತ್ತು ನಮ್ಮ ಸುಂದರ ಗ್ರಹಕ್ಕೆ ಅತ್ಯುತ್ತಮ ಪರಿಣಾಮ ಬೀರಲಿದೆ. ಇದು ಕಡಿಮೆ ಸವಾಲುಗಳ ಮತ್ತು ಹೆಚ್ಚಿನ ಭರವಸೆಯ ಜಗತ್ತಾಗುತ್ತದೆ; ಮತ್ತು, ತನ್ನ ಯಶಸ್ಸಿನ ಬಗ್ಗೆ ಹೆಚ್ಚು ವಿಶ್ವಾಸ ಹೊಂದಿರುತ್ತದೆ”. ಆ ವೇಳೆಯಲ್ಲಿ ಜಗತ್ತಿನಾದ್ಯಂತ ಭಾರತೀಯರು ಎತ್ತರದಲ್ಲಿ ನಿಲ್ಲುತ್ತಾರೆ.


  ಈ ಮಾತುಗಳನ್ನು ತ್ವರಿತ ಕ್ರಮದಿಂದ ಅನುಸರಿಸಲಾಯಿತು. ಭಾರತ ಸರ್ಕಾರದ ಪ್ರಧಾನ ಚಿಂತಕರ ಚಾವಡಿಯಾದ ನೀತಿ ಆಯೋಗವು, ಯುಎಸ್ ಸುಸ್ಥಿರ ಅಭಿವೃದ್ಧಿ ಗುರಿಗಳನ್ನು(SDG ಗಳು) ಸಮನ್ವಯಗೊಳಿಸುವುದು, SDG ಗಳು ಮತ್ತು ಅವುಗಳ ಗುರಿಗಳಿಗೆ ಸಂಬಂಧಿಸಿದ ಯೋಜನೆಗಳನ್ನು ಮ್ಯಾಪಿಂಗ್ ಮಾಡುವುದು, ಪ್ರತಿ ಗುರಿಗೆ ಪ್ರಮುಖ ಮತ್ತು ಬೆಂಬಲ ಸಚಿವಾಲಯಗಳನ್ನು ಗುರುತಿಸುವ ಕಾರ್ಯವನ್ನು ವಹಿಸಲಾಯಿತು. ಕೇಂದ್ರ ಸಂಸ್ಥೆಯಾಗಿದ್ದುಕೊಂಡು, ನೀತಿ ಆಯೋಗವು ಇಡೀ ಕಾರ್ಯಕ್ರಮದ ಪಕ್ಷಿನೋಟವನ್ನು ಹೊಂದಿರುತ್ತದೆ ಮತ್ತು ಅನೇಕ ಗುರಿಗಳ ಮೇಲೆ ಏಕಕಾಲದಲ್ಲಿ ಪರಿಣಾಮ ಬೀರುವಲ್ಲಿನ ಪ್ರಯತ್ನದ ಮೇಲೆ ವಿಶೇಷ ಪ್ರಮುಖ್ಯತೆ ನೀಡುತ್ತದೆ.


  ಈ ಕ್ಷೇತ್ರಗಳಲ್ಲಿ ಪ್ರಮುಖವಾದುದು ಶುದ್ಧ ಇಂಧನದಲ್ಲಿ ಭಾರತದ ಹೂಡಿಕೆ. ಈ ಒಂದು ಕ್ಷೇತ್ರದ ಮೇಲೆ ಗಮನ ಹರಿಸುವ ಮೂಲಕ, ಭಾರತವು SDG 3 (ಉತ್ತಮ ಆರೋಗ್ಯ ಮತ್ತು ಸ್ವಾಸ್ಥ್ಯ), SDG 6 (ಶುದ್ಧ ನೀರು ಮತ್ತು ನೈರ್ಮಲ್ಯ), SDG 7 (ಕೈಗೆಟುಕುವ ಮತ್ತು ಶುದ್ಧ ಇಂಧನ), SDG 11 (ಸುಸ್ಥಿರ ನಗರಗಳು ಮತ್ತು ಸಮುದಾಯಗಳು), SDG 13 (ಹವಾಮಾನ ಕ್ರಮ), SDG 14 (ನೀರಿನೊಳಗಿನ ಜೀವಿಗಳು), ಮತ್ತು SDG 15 (ಭೂಮಿ ಮೇಲಿನ ಜೀವಿಗಳು) ಇವುಗಳಲ್ಲಿ ಗಮನಾರ್ಹ ಬದಲಾವಣೆಯನ್ನು ತರಲು ಸಾಧ್ಯವಾಯಿತು.


  ಭಾರತವು ಪ್ರಸ್ತುತ  ತನ್ನ 55% ರಷ್ಟು ವಿದ್ಯುತ್ ಅನ್ನು ಕಲ್ಲಿದ್ದಲಿನಿಂದ ಉತ್ಪಾದಿಸುತ್ತದೆ. ಆದಾಗ್ಯೂ, ಭಾರತದ ಶುದ್ಧ ಇಂಧನದ ಉತ್ಪಾದನೆಯ ಸಾಮರ್ಥ್ಯವು ಶ್ರೀಮಂತವಾಗಿರುವುದರಿಂದ ನಮಗದರ ಅಗತ್ಯವಿಲ್ಲ:


  • ಭಾರತದ ಸೌರಶಕ್ತಿ ಸಾಮರ್ಥ್ಯವು ಪ್ರತಿ ವರ್ಷಕ್ಕೆ ಭರ್ಜರಿ 5,000 ಟ್ರಿಲಿಯನ್ kWh ರಷ್ಟಿದೆ.

  • ದೇಶದಲ್ಲಿ ಒಟ್ಟಾರೆ ಪವನ ವಿದ್ಯುತ್ ಸಾಮರ್ಥ್ಯವು ನೆಲಮಟ್ಟದಿಂದ 100 ಮೀಟರ್ ಎತ್ತರದಲ್ಲಿ 302 GW ಮತ್ತು 120 ಮೀಟರ್ ಎತ್ತರದಲ್ಲಿ 695.50 GW ಆಗಿದೆ ಎಂಬುದಾಗಿ ಇತ್ತೀಚಿನ ಮೌಲ್ಯಮಾಪನ ಸೂಚಿಸುತ್ತದೆ

  • MNRE ಆಯೋಜಿಸಿದ ಇತ್ತೀಚಿನ ಅಧ್ಯಯನದ ಪ್ರಕಾರ, ಭಾರತವು ಪ್ರತಿ ವರ್ಷಕ್ಕೆ ಸುಮಾರು 750 ಮೆಟ್ರಿಕ್ ಟನ್‌ಗಳಷ್ಟು ಬಯೋಮಾಸ್ ಅನ್ನು ಉತ್ಪಾದಿಸುತ್ತದೆ. ಅಂದಾಜು ವಾರ್ಷಿಕ  230 ಮೆಟ್ರಿಕ್ ಟನ್‌ಗಳಷ್ಟು ಹೆಚ್ಚುವರಿ ಬಯೋಮಾಸ್ ಲಭ್ಯತೆಯು ಸರಿಸುಮಾರು 28 GW ಸಾಮರ್ಥ್ಯದ ಮೊತ್ತವಾಗಿದೆ. ಇದಲ್ಲದೇ, ವಿದ್ಯುತ್ ಅನ್ನು ಹೊರತೆಗೆಯಲು ದೇಶದ 550 ಸಕ್ಕರೆ ಕಾರ್ಖಾನೆಗಳಿಂದ ಈ ಸಕ್ಕರೆ ಕಾರ್ಖಾನೆಗಳು ತಾಂತ್ರಿಕವಾಗಿ ಮತ್ತು ಆರ್ಥಿಕವಾಗಿ ಅತ್ಯುತ್ತಮವಾದ ಸಹ ಉತ್ಪನ್ನ ಮಟ್ಟವನ್ನು ಅಳವಡಿಸಿಕೊಂಡರೆ  ಕಬ್ಬಿನ ಸಿಪ್ಪೆ ಆಧಾರಿತ ಸಹಉತ್ಪಾದನೆಯಿಂದ ಸುಮಾರು 14 GW ಹೆಚ್ಚುವರಿ ವಿದ್ಯುತ್ ಅನ್ನು ಉತ್ಪಾದಿಸಬಹುದಾಗಿದೆ.


  ಪಳೆಯುಳಿಕೆಯಲ್ಲದ ಮೂಲಗಳಿಂದ ಬರುವ ತನ್ನ ಸ್ಥಾಪಿತ ವಿದ್ಯುತ್ ಸಾಮರ್ಥ್ಯದ 40% ರೊಂದಿಗೆ, ಭಾರತವು ಈಗಾಗಲೇ ನವೀಕರಿಸಬಹುದಾದ ಇಂಧನದ ವಿಶ್ವದ ಮೂರನೇ ಅತಿ ದೊಡ್ಡ ಉತ್ಪಾದಕವಾಗಿದೆ ಎಂಬುದು ಹೆಚ್ಚಿನವರಿಗೆ ತಿಳಿದಿಲ್ಲ. ಈಗ, 2030ರ ವೇಳೆಗೆ, ಭಾರತವು ನವೀಕರಿಸಬಹುದಾದ ಮೂಲಗಳಿಂದ ತನ್ನ ಇಂಧನ ಅಗತ್ಯದ 50% ರಷ್ಟು ಸಾಧಿಸುವ ಮತ್ತು ತನ್ನ ನವೀಕರಿಸಬಹುದಾದ ಇಂಧನ ಸಾಮರ್ಥ್ಯವನ್ನು 500GW ವರೆಗೆ ಹೆಚ್ಚಿಸುವ ಗುರಿ ಹೊಂದಿದೆ.


  ಇದನ್ನು ಸಾಧಿಸಬಹುದು. ಇದಕ್ಕೆ ಅಗತ್ಯವಿರುವ ನೈಸರ್ಗಿಕ ಸಂಪನ್ಮೂಲಗಳು ನಮ್ಮ ಬಳಿ ಇವೆ: ಸೂರ್ಯ, ಗಾಳಿ ಮತ್ತು ಹೇರಳವಾದ ಕೃಷಿಯಿಂದ ಉತ್ಪಾದನೆಯಾಗುವ ಬಯೋಮಾಸ್. ನಮಗೆ ಈಗ ಬೇಕಾಗಿರುವುದು ಇದನ್ನು ಸಾಧ್ಯವಾಗಿಸುವವರು: ಬಂಡವಾಳ ಹೂಡಿಕೆಯ ಸ್ಥಿರ ಪೂರೈಕೆ, ನುರಿತ ಕಾರ್ಮಿಕರು ಮತ್ತು ದೀರ್ಘ ಬಾಳಿಕೆ ಮತ್ತು ಹೆಚ್ಚಿನ ಕಾರ್ಯಕ್ಷಮತೆಯನ್ನು ನಿರ್ಮಿಸುವ ಬಲವಾದ ಗುಣಮಟ್ಟದ ಚೌಕಟ್ಟು.


  ಈ ರೀತಿಯಾಗಿ ಕ್ವಾಲಿಟಿ ಕೌನ್ಸಿಲ್ ಆಫ್ ಇಂಡಿಯಾವು (QCI) ನಮ್ಮನ್ನು ಯಶಸ್ವಿಗೊಳಿಸಲು ವೇದಿಕೆ ಕಲ್ಪಿಸುತ್ತಿದೆ. ಪ್ರಾರಂಭವಾದಾಗಿನಿಂದ ಅಂದರೆ 25 ವರ್ಷಗಳ ಹಿಂದೆ, ತರಬೇತಿ, ಪ್ರಮಾಣೀಕರಣ, ಮಾನ್ಯತೆ ಮತ್ತು ಮೇಲ್ವಿಚಾರಣೆ ಮೂಲಕ ಗುಣಮಟ್ಟದ ಪರಿಸರವನ್ನು ರಚಿಸಲು QCI ಶ್ರಮಿಸುತ್ತಿದೆ. ಈ ಚೌಕಟ್ಟು, ಪೂರೈಕೆದಾರರು ಮತ್ತು ಒದಗಿಸುವವರು, ಉದ್ಯಮಗಳು ಮತ್ತು ನಿಯಂತ್ರಕರು, ನುರಿತ ಉದ್ಯೋಗಕ್ಕೆ ಸೇರಬಯಸುವವರು ಮತ್ತು ಉದ್ಯೋಗದಾತರು ಇಬ್ಬರಿಗೂ ಇರುತ್ತದೆ.


  ಬಹುಮುಖಿ ವಿಧಾನವನ್ನು ಕೈಗೆತ್ತಿಕೊಳ್ಳುವ ಮೂಲಕ QCI ಇದನ್ನು ಹೇಗೆ ಮಾಡುತ್ತದೆ. ಮೊದಲನೇ ಅಂಗವು ಕೌಶಲ್ಯ ಅಭಿವೃದ್ಧಿ. QCI ಹಲವಾರು ಮಂಡಳಿಗಳಿಂದ ಮಾಡಲ್ಪಟ್ಟಿದೆ. ದಿ ನ್ಯಾಷನಲ್ ಅಕ್ರೆಡಿಟೇಶನ್ ಬೋರ್ಡ್ ಫಾರ್ ಎಜುಕೇಶನ್ ಆಂಡ್ ಟ್ರೈನಿಂಗ್(NABET). NABET ಸೇವೆಗಳು, ಶಿಕ್ಷಣ (ಔಪಚಾರಿಕ ಮತ್ತು ಅನೌಪಚಾರಿಕ), ಕೈಗಾರಿಕೆ, ಪರಿಸರ ಮುಂತಾದ ಕ್ಷೇತ್ರಗಳಲ್ಲಿ ಒಟ್ಟಾರೆ ಗುಣಮಟ್ಟದ ಖಾತ್ರಿಗಾಗಿ ಕಾರ್ಯವಿಧಾನಗಳನ್ನು ಸ್ಥಾಪಿಸಿದೆ. ಇದರರ್ಥವೇನೆಂದರೆ,  ಶಿಕ್ಷಣ ಮತ್ತು ತರಬೇತಿ ನೀಡುವವರು ನಿಗದಿತ ಮಾನದಂಡಗಳಿಗೆ ಬದ್ಧರಾಗಿರುವುದು ಮಾತ್ರವಲ್ಲದೇ, ಫಲಿತಾಂಶಗಳನ್ನು ಸುಧಾರಿಸಲು ಅವರು NABET ನೊಂದಿಗೆ ನಿರಂತರ ಕಾರ್ಯನಿರ್ವಹಿಸುತ್ತಾರೆ ಎಂದಾಗಿದೆ.


  QCIಯ ಟ್ರೈನಿಂಗ್ ಆಂಡ್ ಕೆಪ್ಯಾಸಿಟಿ ಬಿಲ್ಡಿಂಗ್ (TCB) ಕೋಶವು ವಿವಿಧ ಡೊಮೇನ್‌ಗಳಲ್ಲಿ ಸಾಮರ್ಥ್ಯವನ್ನು ನಿರ್ಮಿಸಲು ಮತ್ತು ಭಾರತದಲ್ಲಿ ಜಾಗತಿಕವಾಗಿ ಅತ್ಯುತ್ತಮ ಅಭ್ಯಾಸಗಳನ್ನು ತರಲು ಅಂತಾರಾಷ್ಟ್ರೀಯ ಸಂಸ್ಥೆಗಳ ಸಂಯೋಗದೊಂದಿಗೆ ಕಾರ್ಯನಿರ್ವಹಿಸುತ್ತಿದೆ. ಸಮಯಕ್ಕೆ ಅನುಗುಣವಾಗಿ, TCB ಕ್ಲಾಸ್‌ರೂಂ ತರಬೇತಿ, ವರ್ಚುವಲ್ ತರಬೇತಿ, ವೆಬಿನಾರ್‌ಗಳು ಮತ್ತು ಇಲರ್ನಿಂಗ್‌ಗಳ ಮೂಲಕ ತರಬೇತಿ ನೀಡುತ್ತಿದೆ ಮತ್ತು GOI, ನಿಯಂತ್ರಕರು, ಶೈಕ್ಷಣಿಕ ಸಂಸ್ಥೆಗಳು ಮತ್ತು ಕೈಗಾರಿಕಾ ಸಂಘಗಳಿಗೆ ಕಸ್ಟಮೈಸ್ ಮಾಡಿದ ತರಬೇತಿ ಕೋರ್ಸ್‌ಗಳನ್ನು ರಚಿಸಲು ನೆರವಾಗುತ್ತಿದೆ.


  ಅದಕ್ಕೂ ಮಿಗಿಲಾಗಿ, NABETಯ ಎನ್ವಿರಾನ್ಮೆಂಟಲ್ ಇಂಪ್ಯಾಕ್ಟ್ ಅಸೆಸ್‌ಮೆಂಟ್ (EIA) ಯೋಜನೆಗಳು ಹಸಿರು ಮಾನದಂಡಗಳ ಕಟ್ಟುನಿಟ್ಟಾದ ಅನುಸರಣೆಯ ಮೇಲೆ GOI ನಿರ್ದೇಶನಗಳನ್ನು ಕೈಗಾರಿಕೆ ಮತ್ತು ಹೊಸ ಅಭಿವೃದ್ಧಿಗಳ ದೈನಂದಿನ ಕಾರ್ಯಗಳಲ್ಲಿ ನಿಧಾನವಾಗಿ ಅಳವಡಿಸಿಕೊಳ್ಳಲು ಅವಕಾಶ ನೀಡುತ್ತಿದೆ. EIA ವರದಿಗಳನ್ನು ತಯಾರಿಸುವುದರಲ್ಲಿ ತೊಡಗಿರುವ ಸಲಹೆಗಾರರು ಒಂದೇ ಮಾನದಂಡಗಳನ್ನು ಅನುಸರಿಸುತ್ತಿರುತ್ತಾರೆ ಮತ್ತು ಹಾಗೆ ಮಾಡುವುದರಿಂದ ಅವರು ಸಂಪೂರ್ಣ ಕೈಗಾರಿಕಾ ಪರಿಸರದಲ್ಲಿ ಅನುಸರಿಸುವವರ ಸಂಖ್ಯೆಯನ್ನು ಹೆಚ್ಚಿಸುತ್ತಾರೆ.


  ನ್ಯಾಷನಲ್ ಅಕ್ರೆಡಿಟೇಶನ್ ಬೋರ್ಡ್ ಫಾರ್ ಸರ್ಟಿಫಿಕೇಶನ್ ಬಾಡೀಸ್ (NABCB)  ಎನ್‌ಜಿಓಗಳಿಂದ ಹಿಡಿದು ದೊಡ್ಡ ಸಂಸ್ಥೆಗಳವರೆಗೆ ಅವುಗಳನ್ನು ಒಂದೇ ಗುಣಮಟ್ಟದ ಚೌಕಟ್ಟಿನೊಳಗೆ ಜೋಡಿಸುವ ಮೂಲಕ ಸಂಪೂರ್ಣ ಶ್ರೇಣಿಯ ಟ್ಯೂನಿಂಗ್ ಫೋರ್ಕ್‌ನಂತೆ ಕಾರ್ಯನಿರ್ವಹಿಸುತ್ತದೆ. QCIಯ ಗುಣಮಟ್ಟದ ಚೌಕಟ್ಟು ತಯಾರಕರು, ಅಂತಿಮ ಬಳಕೆದಾರರು ಮತ್ತು ದೊಡ್ಡ ಪ್ರಮಾಣದಲ್ಲಿ ಹೇಳುವುದಾದರೆ ಸಮಾಜದಲ್ಲಿ, ಹೂಡಿಕೆಗಳ ಮೇಲೆ ಸುಧಾರಿತ ಆದಾಯವನ್ನು ಪಡೆಯುತ್ತಿವೆ ಎಂಬುದನ್ನು ಖಾತ್ರಿಪಡಿಸುತ್ತದೆ.


  ನಿರ್ದಿಷ್ಟವಾಗಿ ನಾವು ಶುದ್ಧ ಇಂಧನದ ಬಗ್ಗೆ ಮಾತಾಡುವಾಗ, ಇಂಧನ ನಿರ್ವಹಣಾ ವ್ಯವಸ್ಥೆಗಳು, ಪರಿಸರ ನಿರ್ವಹಣಾ ವ್ಯವಸ್ಥೆಗಳು ಮತ್ತು ಗುಣಮಟ್ಟ ನಿರ್ವಹಣಾ ವ್ಯವಸ್ಥೆಗಳ ಮೇಲಿನ NABCB ಮಾನ್ಯತೆಗಳು ವಿಶೇಷವಾಗಿ ಸಂಬಂಧಿತವಾಗಿವೆ. ಈ ನಿರ್ದಿಷ್ಟ ಮಾನ್ಯತೆಗಳ ಹೊರತಾಗಿ NABCBಯು ಐಟಿ ಮತ್ತು ಐಟಿ ಭದ್ರತೆಯಿಂದ ಹಿಡಿದು ಔದ್ಯೋಗಿಕ ಆರೋಗ್ಯ ಮತ್ತು ಸುರಕ್ಷತೆಯವರೆಗೆ ಎಲ್ಲಾ ಬೆಂಬಲ ಕಾರ್ಯಗಳ ಮೇಲೆ ಮಾನದಂಡಗಳನ್ನು ವಿಧಿಸುತ್ತದೆ.


  ಇಂದು ಭಾರತೀಯ ಆರ್ಥಿಕತೆಯನ್ನು ಸಶಕ್ತಗೊಳಿಸಿರುವುದು MSME ಕ್ಷೇತ್ರದ ಸಾಮರ್ಥ್ಯ. ಇದು ಕೈಗಾರಿಕೆಗಳು, ಸೇವಾ ವಿಭಾಗಗಳು ಮತ್ತು ರಫ್ತುಗಳಾದ್ಯಂತ ಬೆಳವಣಿಗೆಯನ್ನು ಮುನ್ನಡೆಸುತ್ತಿದೆ. ಆದಾಗ್ಯೂ, MSME ಕ್ಷೇತ್ರವು ಜಾಗತಿಕ ಮಾರುಕಟ್ಟೆಯಲ್ಲಿ ಸ್ಪರ್ಧಾತ್ಮಕವಾಗಿರಲು ಕೈಹಿಡಿದು ಬೆಂಬಲಿಸುವ ಅಗತ್ಯವಿದೆ.  ಇದನ್ನು ಮಾಡುವುದಕ್ಕಾಗಿ MSME ಸಚಿವಾಲಯದ ಆಶ್ರಯದಲ್ಲಿ, ದಿ ಝೀರೋ ಎಫೆಕ್ಟ್ ಝೀರೋ ಡಿಫೆಕ್ಟ್ (ZED) ಯೋಜನೆಯನ್ನು ಪ್ರಾರಂಭಿಸಲಾಗಿದೆ. ಉತ್ತಮ ಗುಣಮಟ್ಟದ ಎರಡುಪಟ್ಟು ಭರವಸೆ ಮತ್ತು ಸುಸ್ಥಿರ ಮೂಲಗಳಿಂದ ಪಡೆದಿರುವುದರಿಂದ ಅಥವಾ ರಚಿಸಿರುವುದರಿಂದ ZED ಜಾಗತಿಕ ಮಾರುಕಟ್ಟೆಯಲ್ಲಿ ಭಾರತೀಯ ಉತ್ಪನ್ನಗಳನ್ನು ನಂಬಲಸಾಧ್ಯವಾದಷ್ಟು ಆಕರ್ಷಣೀಯವಾಗಿ ಮಾಡಿದೆ.


  MSMEಗಳು ZED ಪ್ರಮಾಣಿಕರಣಕ್ಕಾಗಿ ತಮ್ಮ ಸುಸ್ಥಿರತೆಯ ಅಭ್ಯಾಸಗಳಿಂದ ಮೌಲ್ಯಮಾಪನ ಮಾಡಲ್ಪಟ್ಟಿರುವುದರಿಂದ, ಅವುಗಳ ಶಕ್ತಿಯ ಮೂಲವು ಅಗಾಧ ವ್ಯತ್ಯಾಸವನ್ನು ಉಂಟುಮಾಡಬಹುದು. ಭಾರತದ ಅನೇಕ ರಾಜ್ಯಗಳಲ್ಲಿ ಬೇಸಿಗೆ ಸಮಯದಲ್ಲಿ ವಿದ್ಯುತ್ ಕಡಿತವು ಉತ್ತುಂಗಕ್ಕೇರುವಾಗ MSMEಗಳು ಸೌರಶಕ್ತಿಯನ್ನು ಅಳವಡಿಸಿಕೊಳ್ಳುವುದರಿಂದ  MSME ಗಳನ್ನು ಬಲಗೊಳಿಸುವಲ್ಲಿ ತುಂಬಾ ಮುಂದುವರಿಯಬಹುದು. ಇದು ವಿಶೇಷವಾಗಿ ಪಾಶ್ಚಿಮಾತ್ಯ ಮಾರುಕಟ್ಟೆಗಳಲ್ಲಿ ಅವುಗಳ ಸ್ಪರ್ಧಾತ್ಮಕತೆಗೆ ಎರಡು ಪಟ್ಟು ಲಾಭವನ್ನು ನೀಡುತ್ತದೆ ಅದೆಂದರೆ: ಶುದ್ಧ ಇಂಧನ ಮೂಲಗಳಿಂದ ಸುಸ್ಥಿರತೆ ಮತ್ತು ವಿಶ್ವಾಸಾರ್ಹ ಶಕ್ತಿಯ ಮೂಲದಿಂದ ಬರುವಂತಹ ಉದ್ಯಮ ನಿರಂತರತೆ.


  ಭಾರತವು ಬೆಳೆಯುತ್ತಿರುವ ಆರ್ಥಿಕತೆಯಾಗಿದೆ, ಇದರರ್ಥ ನಮ್ಮ ಇಂಧನ ಅವಶ್ಯಕತೆ ಬೆಳೆಯುತ್ತಲೇ ಇದೆ ಎಂಬುದಾಗಿದೆ. ಅಂದರೆ, ಭೂಮಿಗೆ ಯಾವುದು ಉತ್ತಮ ಮತ್ತು ಜನರಿಗೆ ಯಾವುದು ಉತ್ತಮ ಎಂಬ ಎರಡರ ನಡುವೆ ಯಾವುದನ್ನು ಆಯ್ಕೆ ಮಾಡಬೇಕು ಎಂಬುದು ಇದರ ಅರ್ಥವೇ? ಅಲ್ಲ. ಸ್ಪಷ್ಟವಾಗಿ ಉತ್ತಮ ಮಾರ್ಗವಿದೆ. ಶುದ್ಧ ಇಂಧನಗಳಲ್ಲಿ ನಮ್ಮ ಹೂಡಿಕೆಗಳು ನಮ್ಮ ಆರ್ಥಿಕ ಸಮೃದ್ಧಿಗೆ ಶಕ್ತಿ ತುಂಬಲು ಸಾಧ್ಯವಾಗಿಸುವುದಷ್ಟೇ ಅಲ್ಲದೇ, ಮುಂಚೂಣಿ ತಂತ್ರಜ್ಞಾನದಲ್ಲಿ ಹೆಚ್ಚಿನ ಉದ್ಯೋಗವನ್ನು ಸೃಷ್ಟಿಸುವುದು, ಎಲ್ಲಾ ನಾಗರಿಕರಿಗೆ ಸುಧಾರಿತ ಜೀವನದ ಗುಣಮಟ್ಟ, ಸ್ವಚ್ಛ ಗಾಳಿ ಮತ್ತು ನೀರು ಮತ್ತು ಬಳಕೆಗಾಗಿ ಸುಧಾರಿತ ಭೂಮಿಯನ್ನು ನೀಡುತ್ತದೆ.


  ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿಯವರು 2015ರಲ್ಲಿ ನಮಗೆ ಯೋಗ್ಯ ಗುರಿಗಳನ್ನು ಹಾಕಿಕೊಟ್ಟರು: ಅಭಿವೃದ್ಧಿ ಮತ್ತು ಸುಸ್ಥಿರತೆ ಒಂದಕ್ಕೊಂದು ಪ್ರತ್ಯೇಕವಲ್ಲ ಎಂಬುದನ್ನು ತೋರಿಸುವುದು. ನಮ್ಮ ಆರ್ಥಿಕತೆಗೆ ಯಾವುದೇ ಧಕ್ಕೆ ಬಾರದಂತೆ ಈ ಎಲ್ಲಾ ಗುರಿಗಳನ್ನು ಒಂದೊಂದಾಗಿ ಸಾಧಿಸಲು, ಭಾರತವು ತನ್ನು ನವೀಕರಿಸುವ ಇಂಧನ ಶಕ್ತಿಯನ್ನು ಸಾಧಿಸಬೇಕು. ಅದೃಷ್ಟವಶಾತ್, ನಮ್ಮ ನವೀಕರಿಸುವ ಇಂಧನ ಕಾರ್ಯಕ್ರಮಕ್ಕೆ ಗುಣವತ್ತಾ ಸೇ ಆತ್ಮನಿರ್ಭರತಾವನ್ನು ತರುವ QCI's ಪರಿಸರ ವ್ಯವಸ್ಥೆಯಂತೆ ರಾಜಕೀಯ ಎರಡೂ ಇಚ್ಛಾಶಕ್ತಿಗಳೂ ಅಸ್ತಿತ್ವದಲ್ಲಿದೆ.

  Published by:Rahul TS
  First published: