Power Cut in India: ಭಾರತದ ಪ್ರತಿ 5 ಮನೆಗಳಲ್ಲಿ 3 ರಲ್ಲಿ ವಿದ್ಯುತ್ ಕಡಿತ! ಸಮೀಕ್ಷೆಯಲ್ಲಿ ಶಾಕಿಂಗ್ ಸುದ್ದಿ ಬಹಿರಂಗ

ಅರ್ಧಕ್ಕಿಂತ ಹೆಚ್ಚು ಕುಟುಂಬಗಳು ವಿದ್ಯುತ್ ಕಡಿತದ ಬಗ್ಗೆ ತಮಗೆ ಸಂಬಂಧಿಸಿದ ವಿದ್ಯುತ್ ಇಲಾಖೆ  ಅಥವಾ ಕಂಪನಿಯಿಂದ ವಿದ್ಯುತ್ ಕಡಿತದ ಬಗ್ಗೆ ಸುಧಾರಿತ ಸೂಚನೆಯನ್ನು ಪಡೆಯುವುದೇ ಇಲ್ಲ ಎಂಬ ಮಾಹಿತಿ ಸಹ ಬಹಿರಂಗಗೊಂಡಿದೆ.

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

  • Share this:
    ಭಾರತದ ಅನೇಕ ಭಾಗಗಳಲ್ಲಿ ಹಗಲಿನಲ್ಲಿ ತಾಪಮಾನವು ಸುಮಾರು 50 ಡಿಗ್ರಿ ಸೆಲ್ಸಿಯಸ್‌ವರೆಗೂ ತಲುಪುತ್ತಿದೆ. ಕರ್ನಾಟಕದಲ್ಲಿ ಅಲ್ಲಲ್ಲಿ ಮಳೆ (Karnataka Rain) ಸುರಿಯುತ್ತಿದ್ದರೂ ದೆಹಲಿಯಂತಹ ನಗರಗಳಲ್ಲಿ ತಾಪಮಾನ (Delhi Temperature) ಇನ್ನೂ ಕಡಿಮೆಯಾಗಿಲ್ಲ.  ಇಂತಹ ಪರಿಸ್ಥಿತಿಯಲ್ಲಿ ದೇಶದಲ್ಲಿರುವ ಪ್ರತಿ ಐದು ಮನೆಗಳಲ್ಲಿ ಮೂರರಲ್ಲಿ ಪ್ರತಿದಿನ ಎರಡು ಗಂಟೆ ಅಥವಾ ಅದಕ್ಕಿಂತ ಹೆಚ್ಚು ಕಾಲ ವಿದ್ಯುತ್ ಕಡಿತ (Power Cut) ಉಂಟಾಗಲಿದೆ ಎಂದು ಸಮುದಾಯ-ಆಧಾರಿತ ವೇದಿಕೆಯಾದ ಲೋಕಲ್ ಸರ್ಕಲ್ಸ್‌ನ ಸಮೀಕ್ಷೆಯಲ್ಲಿ (Power Cut Survey) ತಿಳಿದುಬಂದಿದೆ. ಭಾರತದ 344 ಜಿಲ್ಲೆಗಳಲ್ಲಿ ನಡೆದ ಸಮೀಕ್ಷೆಯಲ್ಲಿ ನಾಗರಿಕರಿಂದ 35,000 ಕ್ಕೂ ಹೆಚ್ಚು ಪ್ರತಿಕ್ರಿಯೆಗಳನ್ನು ಸ್ವೀಕರಿಸಲಾಗಿದೆ.

    ಕಳಪೆ ಆಡಳಿತ ಹೊಂದಿರುವ ವಿದ್ಯುತ್ ಇಲಾಖೆಗಳು, ಕಳಪೆ ಪೂರೈಕೆ, ಕಳಪೆ ಮೂಲಸೌಕರ್ಯ ಮತ್ತು ನಿರ್ವಹಣೆ ಮತ್ತು ಭ್ರಷ್ಟಾಚಾರಗಳು ತಮ್ಮ ಪ್ರದೇಶದಲ್ಲಿ ವಿದ್ಯುತ್ ಕಡಿತಕ್ಕೆ ಪ್ರಮುಖ ಕಾರಣಗಳಾಗಿವೆ ಎಂದು ಸಮೀಕ್ಷೆಯಲ್ಲಿ ಭಾಗವಹಿಸಿದ ಜನರು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

    ವಿದ್ಯುತ್ ಕಡಿತದ ಬಗ್ಗೆ ಸೂಚನೆಯನ್ನೂ ಕೊಡೋದಿಲ್ಲ!
    ಅರ್ಧಕ್ಕಿಂತ ಹೆಚ್ಚು ಕುಟುಂಬಗಳು ವಿದ್ಯುತ್ ಕಡಿತದ ಬಗ್ಗೆ ತಮಗೆ ಸಂಬಂಧಿಸಿದ ವಿದ್ಯುತ್ ಇಲಾಖೆ  ಅಥವಾ ಕಂಪನಿಯಿಂದ ವಿದ್ಯುತ್ ಕಡಿತದ ಬಗ್ಗೆ ಸುಧಾರಿತ ಸೂಚನೆಯನ್ನು ಪಡೆಯುವುದೇ ಇಲ್ಲ ಎಂಬ ಮಾಹಿತಿ ಸಹ ಬಹಿರಂಗಗೊಂಡಿದೆ.

    ಸರ್ವೆಯಲ್ಲಿ ಭಾಗವಹಿಸಿದ ಜನರ ಅಂಕಿ ಅಂಶ ಎಷ್ಟು?
    ಪ್ರತಿಕ್ರಿಯಿಸಿದವರಲ್ಲಿ ಸುಮಾರು 63 ಪ್ರತಿಶತ ಪುರುಷರು ಮತ್ತು 37 ಪ್ರತಿಶತ ಮಹಿಳೆಯರಿದ್ದಾರೆ. ಶೇಕಡಾ 41 ಕ್ಕಿಂತ ಹೆಚ್ಚು ನಾಗರಿಕರು ಮಹಾನಗರಗಳು ಅಥವಾ ಅಭಿವೃದ್ಧಿ ಹೊಂದಿದ ಜಿಲ್ಲೆಗಳಿಂದ, 32% ರಷ್ಟು ಶ್ರೇಣಿ 2 ರ ಜಿಲ್ಲೆಗಳಿಂದ ಮತ್ತು 27% ರಷ್ಟು ಶ್ರೇಣಿ 3, 4 ಮತ್ತು ಗ್ರಾಮಾಂತರ ಜಿಲ್ಲೆಗಳ ನಾಗರಿಕರಾಗಿದ್ದಾರೆ.

    ಪ್ರತಿ ದಿನ ಎಷ್ಟು ಗಂಟೆಗಳ ವಿದ್ಯುತ್ ಸ್ಥಗಿತವನ್ನು ಅನುಭವಿಸುತ್ತಿದ್ದೀರಿ?
    “ನಿಮ್ಮ ಮನೆಯಲ್ಲಿ ಪ್ರತಿ ದಿನ ಎಷ್ಟು ಗಂಟೆಗಳ ವಿದ್ಯುತ್ ಸ್ಥಗಿತವನ್ನು ಅನುಭವಿಸುತ್ತಿದ್ದೀರಿ?" ಎಂಬ ಪ್ರಶ್ನೆಗೆ 11,897 ಪ್ರತಿಕ್ರಿಯೆಗಳು ಬಂದಿವೆ. ಅದರಲ್ಲಿ 38 ಪ್ರತಿಶತ ನಾಗರಿಕರು "ಯಾವುದೇ ನಿಲುಗಡೆಯನ್ನು ಎದುರಿಸುತ್ತಿಲ್ಲ" ಎಂದು ಹೇಳಿದ್ದಾರೆ.

    ಎಷ್ಟು ಗಂಟೆ ಕರೆಂಟ್ ಹೋಗುತ್ತೆ? ನಮಗಂತೂ ಗೊತ್ತಿಲ್ಲ
    29 ಪ್ರತಿಶತದಷ್ಟು ಜನರು "2 ಗಂಟೆಗಳವರೆಗೆ" ವಿದ್ಯುತ್ ಕಡಿತವನ್ನು ಎದುರಿಸುತ್ತಿದ್ದಾರೆ. 12 ಪ್ರತಿಶತದಷ್ಟು ಜನರು "2-4 ಗಂಟೆಗಳವರೆಗೆ" ಮತ್ತು 5 ಪ್ರತಿಶತ ಜನರು "4-8 ಗಂಟೆಗಳು" ಎಂದು ಉತ್ತರಿಸಿದ್ದಾರೆ. 2 ಶೇಕಡಾ ಜನರು "8-12 ಗಂಟೆಗಳು" ಮತ್ತು ಶೇಕಡಾ 13 "ನಮ್ಮಲ್ಲಿ 24*7 ಪವರ್ ಬ್ಯಾಕಪ್ ಇರುವುದರಿಂದ ಎಷ್ಟು ಗಂಟೆಗಳ ಕಾಲ ವಿದ್ಯುತ್ ಕಡಿತ ಆಗುತ್ತದೆ ಎಂಬುದು ಗೊತ್ತಿಲ್ಲ" ಎಂದು ತಿಳಿಸಿದ್ದಾರೆ.    

    ವ್ಯಕ್ತಿಗತವಾಗಿ ನೋಡುವುದಿದ್ದರೆ ಇಲ್ಲಿದೆ ಅಂಕಿ ಅಂಶ
    ಭಾರತದಲ್ಲಿ ಐದರಲ್ಲಿ ಮೂರು ಕುಟುಂಬಗಳು ಶಾಖದ ಅಲೆ ಮತ್ತು ಹೆಚ್ಚಿನ ತಾಪಮಾನದ ನಡುವೆ ವಿದ್ಯುತ್ ಕಡಿತವನ್ನು ಎದುರಿಸುತ್ತಿವೆ ಎಂದು ಸಮೀಕ್ಷೆಯು ಕಂಡುಹಿಡಿದಿದೆ. ವ್ಯಕ್ತಿಗತವಾಗಿ ನೋಡುವುದಿದ್ದರೆ ಭಾರತದ ಐದು ಜನರಲ್ಲಿ ಒಬ್ಬರಿಗೆ ಪ್ರತಿದಿನ ಎರಡು ಗಂಟೆ ಅಥವಾ ಅದಕ್ಕಿಂತ ಹೆಚ್ಚು ಗಂಟೆಗಳ ಕಾಲ ವಿದ್ಯುತ್ ಕೊರತೆ ಉಂಟಾಗಲಿದೆ.

    ಇದನ್ನೂ ಓದಿ: China Economy Collapsed: ಚೀನಾದಲ್ಲಿ ಕುಸಿಯುತ್ತಿದೆ ಆರ್ಥಿಕ ಚಟುವಟಿಕೆ! ಏನು ಕಾರಣ?

    ಏಪ್ರಿಲ್‌ನಲ್ಲಿ ನಡೆದ ಇದೇ ರೀತಿಯ ಸಮೀಕ್ಷೆಗೆ ಹೋಲಿಸಿದರೆ 34 ಪ್ರತಿಶತ ಕುಟುಂಬಗಳು ಈ ಹಿಂದೆ "ಯಾವುದೇ ರೀತಿಯ ವಿದ್ಯುತ್ ಕಡಿತ ಅಥವಾ ಸ್ಥಗಿತವನ್ನು ಎದುರಿಸುತ್ತಿಲ್ಲ" ಎಂದು ಹೇಳಿದ್ದವು. ಇದು ಮೇ ತಿಂಗಳಿನಲ್ಲಿ ವಿದ್ಯುತ್ ಸ್ಥಗಿತ ಆಗುತ್ತಿದೆ ಎಂದವರ ಸಂಖ್ಯೆ ಶೇ.38ಕ್ಕೆ ಹೆಚ್ಚಿದೆ.

    2 ಗಂಟೆಗಳವರೆಗೆ ಸ್ಥಗಿತವನ್ನು ಎದುರಿಸುತ್ತಿರುವ ಕುಟುಂಬಗಳು ಏಪ್ರಿಲ್‌ನಲ್ಲಿ ಶೇಕಡಾ 28 ರಿಂದ ಮೇ ತಿಂಗಳಲ್ಲಿ ಶೇಕಡಾ 29 ಕ್ಕೆ ಏರಿದೆ. ಮತ್ತೊಂದೆಡೆ ಎರಡು-ನಾಲ್ಕು ಗಂಟೆಗಳವರೆಗೆ ಸ್ಥಗಿತವನ್ನು ಎದುರಿಸುತ್ತಿರುವ ಕುಟುಂಬಗಳು ಶೇಕಡಾ 18 ರಿಂದ ಶೇಕಡಾ 12 ಕ್ಕೆ ಇಳಿದಿವೆ. 8-12 ಗಂಟೆಗಳವರೆಗೆ ಸ್ಥಗಿತವನ್ನು ಎದುರಿಸುತ್ತಿರುವವರ ಸಂಖ್ಯೆ ಸಹ ಏಪ್ರಿಲ್‌ನಲ್ಲಿ ಶೇಕಡಾ 10 ರಿಂದ ಶೇಕಡಾ 5 ಕ್ಕೆ ಇಳಿದಿದೆ.

    ಇದನ್ನೂ ಓದಿ: Petrol Bike EV Conversion: ಹೀರೋ ಸ್ಪ್ಲೆಂಡರ್ ಬೈಕ್​ನ್ನೂ ಎಲೆಕ್ಟ್ರಿಕ್ ಬೈಕ್ ಆಗಿ ಪರಿವರ್ತಿಸಬಹುದು!

    ಸಮೀಕ್ಷೆಯಲ್ಲಿ ತಿಳಿದುಬಂದ ಮತ್ತೊಂದು ಗಮನಾರ್ಹ ಅಂಶವೆಂದರೆ 24*7 ಪವರ್ ಬ್ಯಾಕಪ್ ಹೊಂದಿರುವ ಕುಟುಂಬಗಳ ಶೇಕಡಾವಾರು ಪ್ರಮಾಣವು ಏಪ್ರಿಲ್‌ನಲ್ಲಿ ಶೇಕಡಾ 6 ರಿಂದ ಮೇ ತಿಂಗಳಲ್ಲಿ ಶೇಕಡಾ 13 ಕ್ಕೆ ಏರಿದೆ.
    Published by:guruganesh bhat
    First published: