ಕೇವಲ 417ನ ರೂ. ಜಮೆ ಮಾಡಿ ಲಕ್ಷಾಧೀಶರಾಗುವ ಯೋಜನೆಯ ಸಂಪೂರ್ಣ ಮಾಹಿತಿ ಇಲ್ಲಿದೆ

ಶೇ.7.1 ರಷ್ಟು ವಾರ್ಷಿಕ ಬಡ್ಡಿಯೊಂದಿಗೆ ಒಬ್ಬ ವ್ಯಕ್ತಿಯು ಪ್ರತಿದಿನ ಖಾತೆಯಲ್ಲಿ ಕೇವಲ 417 ರೂಪಾಯಿಗಳನ್ನು ಹೂಡಿಕೆ (Investment) ಮಾಡಬೇಕಾಗುತ್ತದೆ. ಈ ಯೋಜನೆಯ ಮುಕ್ತಾಯ ಅವಧಿಯು 15 ವರ್ಷ, ಆದರೆ ನೀವು ಅದನ್ನು 5-5 ವರ್ಷಗಳವರೆಗೆ ಎರಡು ಬಾರಿ ವಿಸ್ತರಿಸಬಹುದು. ಈ ಯೋಜನೆಯು ಪ್ರಮುಖ ತೆರಿಗೆ ಪ್ರಯೋಜನಗಳನ್ನು ಸಹ ನೀಡುತ್ತದೆ.

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

  • Share this:
ಅಂಚೆ ಕಛೇರಿಯು (India Post) ದೇಶದ ಅತ್ಯಂತ ವಿಶ್ವಾಸಾರ್ಹ ಹಣಕಾಸು ಸಂಸ್ಥೆಗಳಲ್ಲಿ ಒಂದಾಗಿದೆ. ಇದು ಖಾತರಿಯ ಆದಾಯ(Fixed Income)ವನ್ನು ಭರವಸೆ ನೀಡುವ ಅನೇಕ ಯೋಜನೆಗಳನ್ನು ನೀಡುತ್ತದೆ. ಪೋಸ್ಟ್ ಆಫೀಸ್‌ನ ಸಾರ್ವಜನಿಕ ಭವಿಷ್ಯ ನಿಧಿ (PPF) ಯೋಜನೆ ನಿಮ್ಮನ್ನು ಲಕ್ಷಾಧೀಶರನ್ನಾಗಿ ಮಾಡುತ್ತೆ .  ಶೇ.7.1 ರಷ್ಟು ವಾರ್ಷಿಕ ಬಡ್ಡಿಯೊಂದಿಗೆ ಒಬ್ಬ ವ್ಯಕ್ತಿಯು ಪ್ರತಿದಿನ ಖಾತೆಯಲ್ಲಿ ಕೇವಲ 417 ರೂಪಾಯಿಗಳನ್ನು ಹೂಡಿಕೆ (Investment) ಮಾಡಬೇಕಾಗುತ್ತದೆ. ಈ ಯೋಜನೆಯ ಮುಕ್ತಾಯ ಅವಧಿಯು 15 ವರ್ಷ, ಆದರೆ ನೀವು ಅದನ್ನು 5-5 ವರ್ಷಗಳವರೆಗೆ ಎರಡು ಬಾರಿ ವಿಸ್ತರಿಸಬಹುದು. ಈ ಯೋಜನೆಯು ಪ್ರಮುಖ ತೆರಿಗೆ ಪ್ರಯೋಜನಗಳನ್ನು ಸಹ ನೀಡುತ್ತದೆ.

ಈಗ, ನೀವು ಈ ಯೋಜನೆಯಲ್ಲಿ ಮುಕ್ತಾಯವಾಗುವವರೆಗೆ ಹೂಡಿಕೆ ಮಾಡಿದರೆ ಮತ್ತು ವಾರ್ಷಿಕವಾಗಿ ಗರಿಷ್ಠ 1.5 ಲಕ್ಷ ರೂ. ಅಂದರೆ ತಿಂಗಳಿಗೆ ರೂ. 12,500 ಅಥವಾ ದಿನಕ್ಕೆ ರೂ. 417 ಠೇವಣಿ ಮಾಡಿದರೆ, ನಿಮ್ಮ ಒಟ್ಟು ಹೂಡಿಕೆ ರೂ. 22.50 ಲಕ್ಷವಾಗಿರುತ್ತದೆ. ಅಂದರೆ, ಮೆಚ್ಯೂರಿಟಿಯ ಸಮಯದಲ್ಲಿ ವಾರ್ಷಿಕ ಶೇಕಡಾ 7.1 ರ ಬಡ್ಡಿಯೊಂದಿಗೆ ಚಕ್ರಬಡ್ಡಿಯ ಲಾಭವನ್ನು ನೀವು ಪಡೆಯುತ್ತೀರಿ. ಮುಕ್ತಾಯದ ಸಮಯದಲ್ಲಿ, ನೀವು 18.18 ಲಕ್ಷ ರೂಪಾಯಿಗಳನ್ನು ಬಡ್ಡಿಯಾಗಿ ಪಡೆಯುತ್ತೀರಿ. ಅಂದರೆ, ನಿಮಗೆ 40.68 ಲಕ್ಷ ರೂ. ಸಿಗುತ್ತದೆ.

ಇದನ್ನೂ ಓದಿ:  ಅಂಚೆ ಕಚೇರಿಯ ಈ 9 ಯೋಜನೆಗಳಲ್ಲಿ ನಿಮ್ಮ ಹಣ ಡಬಲ್ ಆಗುತ್ತೆ: ಇಲ್ಲಿದೆ ಸಂಪೂರ್ಣ ಮಾಹಿತಿ

ಇದನ್ನು ಹೊರತುಪಡಿಸಿ, ನೀವು  ಆಗಲು ಬಯಸಿದರೆ ನೀವು ಈ ಯೋಜನೆಯನ್ನು 15 ವರ್ಷಗಳ ನಂತರ 5-5 ವರ್ಷಗಳವರೆಗೆ ಎರಡು ಬಾರಿ ವಿಸ್ತರಿಸಿಕೊಳ್ಳಬೇಕು. ವಾರ್ಷಿಕವಾಗಿ ರೂ 1.5 ಲಕ್ಷ ಹೂಡಿಕೆ ಮಾಡುವ ಮೂಲಕ, ನಿಮ್ಮ ಒಟ್ಟು ಹೂಡಿಕೆ ರೂ 37.50 ಲಕ್ಷವಾಗಿರುತ್ತದೆ.ಯೋಜನೆಯ ಅವಧಿ ಮುಕ್ತಾಯದ ನಂತರ, ನೀವು 7.1 ಶೇಕಡಾ ಬಡ್ಡಿ ದರದೊಂದಿಗೆ 65.58 ಲಕ್ಷ ರೂಪಾಯಿಗಳನ್ನು ಪಡೆಯುತ್ತೀರಿ. ಅಂದರೆ, 25 ವರ್ಷಗಳ ನಂತರ, ನಿಮ್ಮ ಒಟ್ಟು ನಿಧಿ 1.03 ಕೋಟಿ ರೂ. ಅಗುತ್ತದೆ.

PPF ಖಾತೆಯನ್ನು ಯಾರು ತೆರೆಯಬಹುದು?

ಭಾರತದ ಯಾವುದೇ ನಿವಾಸಿ - ಸಂಬಳದಾರರು, ಸ್ವಯಂ ಉದ್ಯೋಗಿ, ಪಿಂಚಣಿದಾರರು ಇತ್ಯಾದಿ ಪೋಸ್ಟ್ ಆಫೀಸ್‌ನ PPF ನಲ್ಲಿ ಖಾತೆಯನ್ನು ತೆರೆಯಬಹುದು. ಈ ಯೋಜನೆಯು ಪ್ರತಿಯೊಬ್ಬ ವ್ಯಕ್ತಿಗೆ ಒಂದು ಖಾತೆಯನ್ನು ನೀಡುತ್ತದೆ. ಜಂಟಿ ಖಾತೆಗೆ ಯಾವುದೇ ಸೌಲಭ್ಯವಿಲ್ಲ.

ಇದನ್ನೂ ಓದಿ:  PM Kisan Yojana: ಈ ಪ್ರಕ್ರಿಯೆ ಇಲ್ಲದೇ ನಿಮಗೆ 10ನೇ ಕಂತು ಸಿಗಲ್ಲ, ತಕ್ಷಣ ಏನು ಮಾಡಬೇಕು ಗೊತ್ತಾ?

ಖಾತೆ ತೆರೆಯಲು ಅಗತ್ಯವಿರುವ ದಾಖಲೆಗಳು

- ಗುರುತಿನ ಪುರಾವೆ - ಮತದಾರರ ಐಡಿ, ಪಾಸ್‌ಪೋರ್ಟ್, ಚಾಲನಾ ಪರವಾನಗಿ, ಆಧಾರ್ ಕಾರ್ಡ್

- ವಿಳಾಸ ಪುರಾವೆ- ಮತದಾರರ ಐಡಿ, ಪಾಸ್‌ಪೋರ್ಟ್, ಚಾಲನಾ ಪರವಾನಗಿ, ಆಧಾರ್ ಕಾರ್ಡ್

- ಪ್ಯಾನ್ ಕಾರ್ಡ್

- ಪಾಸ್‌ಪೋರ್ಟ್ ಅಳತೆಯ ಭಾವಚಿತ್ರ

- ದಾಖಲಾತಿ ನಮೂನೆ ಇ (Application Form)

ಪೋಸ್ಟ್ ಆಫೀಸ್‌ ಫ್ರಾಂಚೈಸಿ

5,000 ರೂಪಾಯಿ ವೆಚ್ಚದಲ್ಲಿ ಹೊಸ ವ್ಯವಹಾರವನ್ನು (New Business) ಪ್ರಾರಂಭಿಸುವ ಮೂಲಕ ಪ್ರತಿ ವರ್ಷ ಲಕ್ಷ ರೂಪಾಯಿಗಳನ್ನು ಗಳಿಸಬಹುದು. ಪೋಸ್ಟ್ ಆಫೀಸ್‌ನ ಫ್ರಾಂಚೈಸಿಯನ್ನು (Post Office franchise) ತೆಗೆದುಕೊಳ್ಳುವ ಮೂಲಕ ಭರ್ಜರಿ ಲಾಭ ಗಳಿಸಬಹುದು.

ದೇಶದಲ್ಲಿ ಪ್ರಸ್ತುತ ಸುಮಾರು 1.55 ಲಕ್ಷ ಅಂಚೆ ಕಚೇರಿಗಳಿವೆ, ಆದರೆ ಇನ್ನೂ ಹಲವೆಡೆ ಅಂಚೆ ಕಚೇರಿಗಳಿಲ್ಲ. ಇದನ್ನು ಗಮನದಲ್ಲಿಟ್ಟುಕೊಂಡು ಫ್ರಾಂಚೈಸಿಗಳನ್ನು ನೀಡಲಾಗುತ್ತಿದೆ. ಅಂಚೆ ಕಚೇರಿಯು ಎರಡು ರೀತಿಯ ಫ್ರಾಂಚೈಸಿಗಳನ್ನು ನೀಡುತ್ತದೆ. ಮೊದಲನೆಯದು ಫ್ರಾಂಚೈಸಿ ಔಟ್ಲೆಟ್ ಮತ್ತು ಎರಡನೆಯದು ಪೋಸ್ಟಲ್ ಏಜೆಂಟ್ಸ್ ಫ್ರಾಂಚೈಸಿ ಆಗಿದೆ. ನೀವು ಈ ಯಾವುದೇ ಫ್ರಾಂಚೈಸಿಗಳನ್ನು ತೆಗೆದುಕೊಳ್ಳಬಹುದು.

 ನಗರ ಮತ್ತು ಗ್ರಾಮೀಣ ಪ್ರದೇಶಗಳಲ್ಲಿ ಅಂಚೆ ಚೀಟಿಗಳು ಮತ್ತು ಸ್ಟೇಷನರಿಗಳನ್ನು ಮನೆ-ಮನೆಗೆ ಸಾಗಿಸುವ ಏಜೆಂಟ್‌ಗಳನ್ನು ಅಂಚೆ ಏಜೆಂಟ್ ಎಂದು ಕರೆಯಲಾಗುತ್ತದೆ. ಫ್ರಾಂಚೈಸಿ ಪಡೆಯಲು ನೀವು ಕೇವಲ 50000 ರೂ. ವ್ಯಯಿಸಬೇಕು. ಫ್ರಾಂಚೈಸಿ ಪಡೆದ ನಂತರ ನೀವು ಕಮಿಷನ್ ಮೂಲಕ ಗಳಿಸಬಹುದು. ನೀವು ಎಷ್ಟು ಸಂಪಾದಿಸಬಹುದು ಎಂಬುದು ನಿಮ್ಮ ಕೆಲಸವನ್ನು ಅವಲಂಬಿಸಿರುತ್ತದೆ.
Published by:Mahmadrafik K
First published: