ಈ Post Office ಯೋಜನೆಯಲ್ಲಿ ಪತಿ-ಪತ್ನಿ ಜೊತೆಯಾಗಿ ಗಳಿಸಬಹುದು 59,400 ರೂ; ಸಿಗಲಿದೆ ಡಬಲ್ ಲಾಭ

ಪೋಸ್ಟ್ ಆಫೀಸ್ ಮಾಸಿಕ ಉಳಿತಾಯ ಯೋಜನೆಯಲ್ಲಿ ದಂಪತಿ ಪ್ರತಿ ತಿಂಗಳು ಒಟ್ಟಿಗೆ ಹಣ ಸಂಪಾದಿಸಬಹುದು. ಇದರಲ್ಲಿ ನೀವು ಜಂಟಿ ಖಾತೆಯನ್ನು ಸಹ ತೆರೆಯಬಹುದು.ಈ ಯೋಜನೆಯಲ್ಲಿ ನೀವು ಡಬಲ್ ಲಾಭವನ್ನು ಹೇಗೆ ಪಡೆಯುತ್ತೀರಿ ಎಂಬುದ ಸಂಪೂರ್ಣ ಮಾಹಿತಿ ಇಲ್ಲಿದೆ.

ಪೋಸ್ಟ್ ಆಫೀಸ್

ಪೋಸ್ಟ್ ಆಫೀಸ್

  • Share this:
ಮಧ್ಯಮ ವರ್ಗದ (Middle Class) ಜನರಿಗೆ ಪೋಸ್ಟ್ ಆಫೀಸ್ (Post Office) ‌ನಲ್ಲಿ ಹೂಡಿಕೆ ಮಾಡುವುದು ಸರಳ. ಪೋಸ್ಟ್ ಆಫೀಸ್ ನಲ್ಲಿ ಹಣ ಹೂಡಿಕೆ (Money Investment) ಮಾಡೋದರಿಂದ ಮಾರುಕಟ್ಟೆಯ ಅಪಾಯ (Market Risk) ಸಹ ಕಡಿಮೆ ಇರುತ್ತದೆ. ಹಾಗಾಗಿ ಹೆಚ್ಚಿನ ಜನರ ಮೊದಲ ಆಯ್ಕೆ ಪೋಸ್ಟ್ ಆಫೀಸ್. ಇಲ್ಲಿ ಅನೇಕ ಉಳಿತಾಯ ಯೋಜನೆ (Saving Schemes)ಗಳಿವೆ. ಇಂದು ನಾವು ನಿಮಗೆ ಪತಿ ಮತ್ತು ಪತ್ನಿ ಜೊತೆಯಾಗಿ ಹಣ ಹೂಡಿಕೆ ಮಾಡುವ ಯೋಜನೆ ಬಗ್ಗೆ ಹೇಳುತ್ತಿದ್ದೇವೆ. ಪತಿ ಮತ್ತು ಪತ್ನಿ (Husband And Wife) ಇಬ್ಬರೂ ಸೇರಿ ವಾರ್ಷಿಕ 59,400 ರೂ. ಹಣ ಹೂಡಿಕೆ ಮಾಡಬೇಕು. ಈ ಯೋಜನೆಯ ಹೆಸರು ಪೋಸ್ಟ್ ಆಫೀಸ್ ಮಾಸಿಕ ಉಳಿತಾಯ ಯೋಜನೆ (Post Office Monthly Investment Schemes). ಈ ಯೋಜನೆ ಮೂಲಕ ನೀವು ಪ್ರತಿ ತಿಂಗಳು ಸ್ಥಿರ ಆದಾಯವನ್ನು ಗಳಿಸಬಹುದಾಗಿದೆ. ಮಾಸಿಕವಾಗಿ ಈ ಯೋಜನೆಯಲ್ಲಿ 4,950 ರೂ. ಪಡೆಯಬಹುದು.

ಪೋಸ್ಟ್ ಆಫೀಸ್ ಮಾಸಿಕ ಉಳಿತಾಯ ಯೋಜನೆಯಲ್ಲಿ ದಂಪತಿ ಪ್ರತಿ ತಿಂಗಳು ಒಟ್ಟಿಗೆ ಹಣ ಸಂಪಾದಿಸಬಹುದು. ಇದರಲ್ಲಿ ನೀವು ಜಂಟಿ ಖಾತೆಯನ್ನು ಸಹ ತೆರೆಯಬಹುದು.ಈ ಯೋಜನೆಯಲ್ಲಿ ನೀವು ಡಬಲ್ ಲಾಭವನ್ನು ಹೇಗೆ ಪಡೆಯುತ್ತೀರಿ ಎಂಬುದ ಸಂಪೂರ್ಣ ಮಾಹಿತಿ ಇಲ್ಲಿದೆ.

ವಾರ್ಷಿಕವಾಗಿ ಅಧಿಕ ಹಣ

ಈ ಯೋಜನೆಯಲ್ಲಿ ಜಂಟಿ ಖಾತೆಯ ಮೂಲಕ ನಿಮ್ಮ ಲಾಭವು ದ್ವಿಗುಣಗೊಳ್ಳುತ್ತದೆ. ಇಂದು ನಾವು ಈ ವಿಶೇಷ ಯೋಜನೆ ಬಗ್ಗೆ ಸಂಪೂರ್ಣ ಮಾಹಿತಿಯನ್ನು ನೀಡುತ್ತಿದ್ದೇವೆ. ಈ ಯೋಜನೆಯಡಿ ಹೂಡಿಕೆ ಮಾಡುವ ದಂಪತಿ ವಾರ್ಷಿಕವಾಗಿ 59,400 ರೂ.ವರೆಗೆ ಹಣ ಪಡೆಯಬಹುದಾಗಿದೆ.

ಎಂಐಎಸ್ ಯೋಜನೆ ಎಂದರೇನು? ಎಷ್ಟು ಹೂಡಿಕೆ ಮಾಡಬಹುದು?

MIS ಯೋಜನೆಯಲ್ಲಿ ಖಾತೆಯನ್ನು ಏಕ ಮತ್ತು ಜಂಟಿ ಮೋಡ್‌ ನಲ್ಲಿ ತೆರೆಯಬಹುದು. ವೈಯಕ್ತಿಕ ಖಾತೆಯನ್ನು ತೆರೆಯುವಾಗ ನೀವು ಈ ಯೋಜನೆಯಲ್ಲಿ ಕನಿಷ್ಠ ರೂ 1,000 ಮತ್ತು ಗರಿಷ್ಠ ರೂ 4.5 ಲಕ್ಷ ಹೂಡಿಕೆ ಮಾಡಬಹುದು. ಆದರೆ ಜಂಟಿ ಖಾತೆಯಲ್ಲಿ ಠೇವಣಿ ಮಾಡಬಹುದಾದ ಗರಿಷ್ಠ ಮೊತ್ತ 9 ಲಕ್ಷ ರೂ.ವರಗೆ ಇದೆ. ಈ ಯೋಜನೆಯು ನಿವೃತ್ತ ನೌಕರರು ಮತ್ತು ಹಿರಿಯ ನಾಗರಿಕರಿಗೆ ತುಂಬಾ ಪ್ರಯೋಜನಕಾರಿಯಾಗಿದೆ.

ಇದನ್ನೂ ಓದಿ :  Business Idea: ಬಂಡವಾಳವಿಲ್ಲದೆಯೇ ಆದಾಯ ನೀಡುವ Online ಉದ್ಯಮಗಳ ಮಾಹಿತಿ ಇಲ್ಲಿದೆ!

MIS ಯೋಜನೆಯ ಪ್ರಯೋಜನಗಳೇನು?

ಎಂಐಎಸ್‌ನ ಉತ್ತಮ ವಿಷಯವೆಂದರೆ ಇಬ್ಬರು ಅಥವಾ ಮೂರು ಜನರು ಒಟ್ಟಾಗಿ ಜಂಟಿ ಖಾತೆ(Joint Account) ಯನ್ನು ತೆರೆಯಬಹುದು. ಈ ಖಾತೆಗೆ ಪ್ರತಿಯಾಗಿ ಪಡೆದ ಆದಾಯವನ್ನು ಪ್ರತಿಯೊಬ್ಬ ಸದಸ್ಯರಿಗೂ ಸಮಾನವಾಗಿ ನೀಡಲಾಗುತ್ತದೆ. ನೀವು ಯಾವುದೇ ಸಮಯದಲ್ಲಿ ಜಂಟಿ ಖಾತೆಯನ್ನು ಒಂದೇ ಖಾತೆಗೆ ಪರಿವರ್ತಿಸಬಹುದು.

ನೀವು ಒಂದೇ ಖಾತೆಯನ್ನು ಜಂಟಿ ಖಾತೆಯಾಗಿ ಪರಿವರ್ತಿಸಬಹುದು. ಖಾತೆಯಲ್ಲಿ ಯಾವುದೇ ಬದಲಾವಣೆಗಳನ್ನು ಮಾಡಲು, ಎಲ್ಲಾ ಖಾತೆಯ ಸದಸ್ಯರು ಜಂಟಿಯಾಗಿ ಅಂದ್ರೆ ಜೊತೆಯಾಗಿ ಅರ್ಜಿಯನ್ನು ನೀಡಬೇಕು.

ಎಷ್ಟು ಬಡ್ಡಿದರ?

ಈ ಯೋಜನೆಯಲ್ಲಿ ಪ್ರಸ್ತುತ ನೀವು 6.6 ಶೇಕಡಾ ದರದಲ್ಲಿ ವಾರ್ಷಿಕ ಬಡ್ಡಿಯನ್ನು ಪಡೆಯುತ್ತಿರಿ. ಯೋಜನೆಯ ಅಡಿಯಲ್ಲಿ ನಿಮ್ಮ ಒಟ್ಟು ಠೇವಣಿಗಳ ಮೇಲಿನ ವಾರ್ಷಿಕ ಬಡ್ಡಿಯ ಆಧಾರದ ಮೇಲೆ ಆದಾಯವನ್ನು ಲೆಕ್ಕ ಹಾಕಲಾಗುತ್ತದೆ. ಇದರಲ್ಲಿ ನಿಮ್ಮ ಒಟ್ಟು ಆದಾಯವನ್ನು ವಾರ್ಷಿಕ ಆಧಾರದ ಮೇಲೆ ಲೆಕ್ಕ ಮಾಡಲಾಗುತ್ತದೆ. ಪ್ರತಿ ತಿಂಗಳ ಪ್ರಕಾರ ಆದಾಯವನ್ನು 12 ಭಾಗಗಳಾಗಿ ವಿಂಗಡಿಸಲಾಗಿದೆ.

ಇದನ್ನೂ ಓದಿ:  Loan: ಸುಲಭವಾಗಿ ರೂ. 10 ಲಕ್ಷ ಸಾಲ ಪಡೆಯುವ ಅವಕಾಶ; ಹೀಗೆ ಅರ್ಜಿ ಸಲ್ಲಿಸಿ

ನೀವು ಪ್ರತಿ ತಿಂಗಳು ನಿಮ್ಮ ಖಾತೆಯಲ್ಲಿ ಈ ಯೋಜನೆಯ ಮೊತ್ತವನ್ನು ಪಡೆಯಬಹುದಾಗಿದೆ. ನಿಮಗೆ ಮಾಸಿಕ ಆಧಾರದ ಮೇಲೆ ಹಣದ ಅಗತ್ಯವಿಲ್ಲದಿದ್ದರೆ ಈ ಮೊತ್ತವನ್ನು ಅಸಲು ಮೊತ್ತಕ್ಕೆ ಸೇರಿಸುವುದರಿಂದ ಅದರ ಮೇಲಿನ ಬಡ್ಡಿಯನ್ನು ಸಹ ನೀಡಲಾಗುತ್ತದೆ.
Published by:Mahmadrafik K
First published: