ಪ್ರತಿಯೊಬ್ಬರಿಗೂ ತಮ್ಮದೇ ಆದ ವ್ಯವಹಾರ ಆರಂಭಿಸಬೇಕು ಕೈ ತುಂಬಾ ಹಣ ಸಂಪಾದಿಸಬೇಕು ಜೊತೆಗೆ ಮುಖ್ಯವಾಗಿ ತಮ್ಮ ಕೆಲಸಕ್ಕೆ ತಾವೇ ಬಾಸ್ ಆಗಿರಬೇಕು ಎಂಬ ಆಸೆ ಆಶಯ ಇದ್ದೇ ಇರುತ್ತದೆ. ಪ್ರತಿ ದಿನ ಬೆಳಗ್ಗೆ 9 ಕ್ಕೆ ಕಚೇರಿಗೆ ತಲುಪಿ ಸಂಜೆ 6, 7 ಗಂಟೆವರೆಗೆ ದುಡಿಯುತ್ತಾ ವೀಕೆಂಡ್ (Weekend ) ಯಾವಾಗ ಬರುತ್ತೋ ಅಂತ ಕಾಯುವ ಕೆಲಸಕ್ಕಿಂತ ತಮ್ಮದೇ ಬ್ಯುಸಿನೆಸ್ (Business ) ಉತ್ತಮ ಎಂಬುದು ಹೆಚ್ಚಿನವರ ಲೆಕ್ಕಾಚಾರವಾಗಿರುತ್ತದೆ. ಸರಿ ಬ್ಯುಸಿನೆಸ್ ಆರಂಭಿಸುವುದು ಉತ್ತಮ ವಿಚಾರವಾದರೂ ಇದಕ್ಕೆ ಹೂಡಿಕೆ ಮಾಡುವುದು ಮುಖ್ಯವಾಗಿರುತ್ತದೆ. ಸ್ವಂತ ಉದ್ಯಮ ಆರಂಭಿಸಬೇಕು ಎಂದು ಯೋಚಿಸಿದಾಗ ಅದಕ್ಕೆ ಬಂಡವಾಳ ಹೂಡುವುದೂ ಮುಖ್ಯವಾಗಿರುತ್ತದೆ. ನೀವು ಫ್ರಾಂಚೈಸಿ ಬ್ಯುಸಿನೆಸ್ (Business Idea) ಅನ್ನು ಆರಂಭಿಸಬೇಕೆಂದಿದ್ದರೆ ಇಲ್ಲಿದೆ ಕೆಲವೊಂದು ಹೆಸರಾಂತ ಫ್ರಾಂಚೈಸಿ ಸ್ಟೋರ್‌ಗಳ ವಿವರಗಳು. ಇವುಗಳನ್ನೇ ಆಧಾರವಾಗಿರಿಸಿಕೊಂಡು ಫ್ರಾಂಚೈಸಿಗಳನ್ನು ತೆರೆಯಬಹುದಾಗಿದೆ.
ಟಂಬಲ್‌ಡ್ರೈ:
ಬ್ಯುಸಿನೆಸ್ ಲೈನ್ – ಡ್ರೈ ಕ್ಲೀನ್ ಹಾಗೂ ಲಾಂಡ್ರಿ
ಹೂಡಿಕೆ 25 ಲಕ್ಷ
ಲಾಂಡ್ರಿ ಡ್ರೈಕ್ಲೀನ್ ಬ್ಯುಸಿನೆಸ್ ಆಗಿರುವ ಟಂಬಲ್ ಡ್ರೈ 2019 ರಲ್ಲಿ ಆರಂಭಗೊಂಡಿತು ಹಾಗೂ ಭಾರತದ ಅತಿದೊಡ್ಡ ಲಾಂಡ್ರಿ ಹಾಗೂ ಡ್ರೈಕ್ಲೀನ್ ಬ್ಯುಸಿನೆಸ್ ಆಗಿ ಖ್ಯಾತಿಹೊಂದಿದೆ. ದೇಶಾದ್ಯಂತ 300 ಕ್ಕಿಂತಲೂ ಹೆಚ್ಚಿನ ಶಾಖೆಗಳನ್ನು ಟಂಬಲ್‌ಡ್ರೈ ಹೊಂದಿದೆ.
ಕಲ್ಯಾಣ್ ಜ್ಯುವೆಲ್ಲರ್ಸ್:
ಬ್ಯುಸಿನೆಸ್ ಲೈನ್ – ಆಭರಣ
ಹೂಡಿಕೆ – 50 ಲಕ್ಷ- 1 ಕೋಟಿ
ಎಮ್.ಟಿ.ಎಸ್ ಕಲ್ಯಾಣರಾಮನ್ 1993 ರಲ್ಲಿ ಕಲ್ಯಾಣ್ ಜ್ಯುವೆಲ್ಲರ್ಸ್ ಅನ್ನು ಆರಂಭಿಸಿದರು ಹಾಗೂ ಕಲ್ಯಾಣರಾಮನ್ 45 ವರ್ಷಕ್ಕಿಂತಲೂ ಹೆಚ್ಚಿನ ವ್ಯವಹಾರ ಜ್ಞಾನವನ್ನು ಹೊಂದಿದ್ದಾರೆ. ಭಾರತದಲ್ಲಿ 21 ಕ್ಕಿಂತಲೂ ಹೆಚ್ಚಿನ ರಾಜ್ಯಗಳಲ್ಲಿ ಕಲ್ಯಾಣ್ ಜ್ಯುವೆಲ್ಲರ್ಸ್ ತನ್ನ ಶಾಖೆಗಳನ್ನು ಹೊಂದಿದೆ.
ಡಾಮಿನೊಸ್:
ಬ್ಯುಸಿನೆಸ್ ಲೈನ್ – ಫುಡ್ ಹಾಗೂ ಬೇವರೇಜಸ್
ಹೂಡಿಕೆ – 1.25 ಕೋಟಿ
1960 ರಲ್ಲಿ ಸ್ಥಾಪನೆಗೊಂಡ ಡಾಮಿನೊಸ್ ಸಂಸ್ಥಾಪಕರು ರಿಚರ್ಡ್ ಆಲಿಸನ್. ಇದೊಂದು ಅಮೆರಿಕನ್ ಮಲ್ಟಿನ್ಯಾಶನಲ್ ಪಿಜಾ ರೆಸ್ಟೋರೆಂಟ್ ಚೈನ್ ಆಗಿದೆ. 70 ಕ್ಕಿಂತ ಹೆಚ್ಚಿನ ದೇಶಗಳಲ್ಲಿ 15,000 ಶಾಖೆಗಳನ್ನು ಹೊಂದಿದೆ.
ಡಾರ್. ಲಾಲ್ ಪ್ಯಾಥ್‌ಲ್ಯಾಬ್ಸ್:
ಬ್ಯುಸಿನೆಸ್ ಲೈನ್ – ಡಯಾಗ್ನೊಸ್ಟಿಕ್ ಲ್ಯಾಬ್
ಹೂಡಿಕೆ – ಡಯಾಗ್ನೊಸ್ಟಿಕ್ ಸೆಂಟರ್: 25 ಲಕ್ಷ
ಡಾ ಲಾಲ್ ಪಾಥ್‌ಲ್ಯಾಬ್ಸ್ ಸಂಸ್ಥೆ ಡಯಾಗ್ನೋಸ್ಟಿಕ್ ಉದ್ಯಮದಲ್ಲಿ 60 ವರ್ಷಗಳಿಗೂ ಹೆಚ್ಚು ಕಾಲ ಭಾರತದ ಪ್ರಮುಖ ರೋಗನಿರ್ಣಯದ ಸಂಸ್ಥೆಯಾಗಿದೆ. ಬ್ರ್ಯಾಂಡ್ ನ್ಯೂಟ್ರಿಷನ್, ಜೆನೆಟಿಕ್ಸ್, ಬಯೋಫಿಸಿಕ್ಸ್, ಫ್ಲೋ ಸೈಟೋಮೆಟ್ರಿ, ಸೈಟೋಜೆನೆಟಿಕ್ಸ್, ಎಂಡೋಕ್ರೈನಾಲಜಿ, ಮೆಟಾಬಾಲಿಸಮ್, ಮಾಲಿಕ್ಯುಲರ್ ಡಯಾಗ್ನೋಸ್ಟಿಕ್ಸ್ ಮತ್ತು ಆಂಕೊಲಾಜಿ ಸೇರಿದಂತೆ 1650 ಕ್ಕೂ ಹೆಚ್ಚು ಪರೀಕ್ಷೆಗಳನ್ನು ನೀಡುತ್ತದೆ.
ಫಸ್ಟ್ ಕ್ರೈ:
ಬ್ಯುಸಿನೆಸ್ ಲೈನ್ – ಕಿಡ್ಸ್ ಹಾಗೂ ಮಕ್ಕಳ ಉತ್ಪನ್ನಗಳು
ಹೂಡಿಕೆ -20-30 ಲಕ್ಷ
ಆನ್‌ಲೈನ್‌ನಲ್ಲಿ ಕೈಗೆಟುಕುವ ಬೆಲೆಯ ಶ್ರೇಣಿಯಲ್ಲಿ ಉತ್ತಮ-ಗುಣಮಟ್ಟದ ಮಗುವಿನ ಉತ್ಪನ್ನಗಳನ್ನು ಒದಗಿಸಲು ಫಸ್ಟ್‌ಕ್ರೈ ಅನ್ನು 2010 ರಲ್ಲಿ ಮಹೀಂದ್ರಾ ಗ್ರೂಪ್ ಆಫ್ ಕಂಪನಿಗಳಿಂದ ಸ್ಥಾಪಿಸಲಾಯಿತು. ನಂತರ 2011 ರಲ್ಲಿ, ಅವರು ಫಸ್ಟ್‌ಕ್ರೈ ಫ್ರ್ಯಾಂಚೈಸ್ ವಿತರಣೆಯನ್ನು ಪ್ರಾರಂಭಿಸಿದರು.
ವಿಎಲ್‌ಸಿಸಿ:
ಬ್ಯುಸಿನೆಸ್ ಲೈನ್ ಹೆಲ್ತ್ ಏಂಡ್ ವೆಲ್‌ನೆಸ್
ಹೂಡಿಕೆ ಬ್ಯೂಟಿ ಸಲೂನ್: 30-32 ಲಕ್ಷ
VLCC ಗ್ರೂಪ್ ಜಾಗತಿಕ ಸ್ವಾಸ್ಥ್ಯ ಬ್ರ್ಯಾಂಡ್ ಆಗುವ ಹಾದಿಯಲ್ಲಿದೆ. 1989 ರಲ್ಲಿ ವಂದನಾ ಲೂತ್ರಾ ಪ್ರಾರಂಭಿಸಿದ ಬ್ರ್ಯಾಂಡ್ ಈಗಾಗಲೇ 5 ಮಿಲಿಯನ್ ಗ್ರಾಹಕರಿಗೆ ಸೇವೆ ಸಲ್ಲಿಸಿದೆ.
ಕಿಡ್ಜಿ:
ಬ್ಯುಸಿನೆಸ್ ಲೈನ್ – ಪ್ರಿ-ಸ್ಕೂಲ್
ಹೂಡಿಕೆ 12-15 ಲಕ್ಷ
ಸಕಾರಾತ್ಮಕ ಬದಲಾವಣೆಯನ್ನು ತರಲು ಕಿಡ್ಜಿ ಹೆಸರುವಾಸಿಯಾಗಿದೆ. ಇದು 900,000 ಕ್ಕಿಂತಲೂ ಹೆಚ್ಚು ಮಕ್ಕಳ ಶಾಲಾಪೂರ್ವ ಪ್ರಯಾಣದ ಒಂದು ಭಾಗವಾಗಿದೆ.
ಜಾಕಿ:
ಬ್ಯುಸಿನೆಸ್ ಲೈನ್ ಬಟ್ಟೆ
ಹೂಡಿಕೆ 45-50 ಲಕ್ಷ
ಜಾಕಿ ಇಂಟರ್‌ನ್ಯಾಶನಲ್ ಇಂಕ್ ಮೂಲ ವಿಸ್ಕಾನ್ಸಿನ್, USA ಆಗಿದೆ. ಎಲ್ಲಾ ವಯೋಮಾನದ ಜನರಿಗಾಗಿ ಅದರ ಒಳ ಉಡುಪು, ಸ್ಲೀಪ್‌ವೇರ್ ಮತ್ತು ಕ್ರೀಡಾ ಉಡುಪುಗಳಿಗಾಗಿ ಬ್ರ್ಯಾಂಡ್ ವ್ಯಾಪಕವಾಗಿ ವಿಶ್ವಾಸಾರ್ಹವಾಗಿದೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ