• Home
  • »
  • News
  • »
  • business
  • »
  • Electric Car: 4 ಲಕ್ಷದ ಹೊಸ ಮೈಕ್ರೋ ಎಲೆಕ್ಟ್ರಿಕ್​ ಕಾರು! ಜಸ್ಟ್ 2 ಸಾವಿರ ಕೊಟ್ಟು ಮನೆಗೆ ತನ್ನಿ!

Electric Car: 4 ಲಕ್ಷದ ಹೊಸ ಮೈಕ್ರೋ ಎಲೆಕ್ಟ್ರಿಕ್​ ಕಾರು! ಜಸ್ಟ್ 2 ಸಾವಿರ ಕೊಟ್ಟು ಮನೆಗೆ ತನ್ನಿ!

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

ಎಲೆಕ್ಟ್ರಿಕ್ ಕಾರು ಖರೀದಿಸಲು ಯೋಚಿಸುತ್ತಿರುವಿರಾ? ಸ್ವಲ್ಪ ತಾಳ್ಮೆಯಿಂದ ಇರಿ . ಏಕೆಂದರೆ ಮಾರುಕಟ್ಟೆಯಲ್ಲಿ ಹೊಸ ಮೈಕ್ರೋ ಎಲೆಕ್ಟ್ರಿಕ್ ಕಾರುಗಳು ಬರುತ್ತಿವೆ. ಇವುಗಳ ಬೆಲೆ ಕೂಡ ತೀರಾ ಕಡಿಮೆ.

  • Share this:

ಪೆಟ್ರೋಲ್​-ಡೀಸೆಲ್ (Petrol-Diesel)​ ವಾಹನಗಳಿಂದ ಬರುವ ಹೊಗೆಯಿಂದ ಪರಿಸರ ಹಾಳಾಗುತ್ತಿದೆ. ಹೀಗಾಗಿ ಎಲ್ಲರೂ ಎಲೆಕ್ಟ್ರಿಕ್ ವಾಹನ (Electric Vehicles) ಖರೀದಿಸುವವರ ಸಂಖ್ಯೆ ಹೆಚ್ಚುತ್ತಲೆ ಇದೆ. ಎಲೆಕ್ಟ್ರಿಕ್ ವಾಹನಗಳಿಗೆ ಬೆಂಕಿ (Fire) ಹೊತ್ತಿಕೊಳ್ಳುತ್ತಿದ್ದರೂ, ಜನ ಮಾತ್ರ ಎಲೆಕ್ಟ್ರಿಕ್​ ವಾಹನಗಳನ್ನು ಕೊಂಡುಕೊಳ್ಳಲು ಮುಗಿಬಿಳುತ್ತಿದ್ದಾರೆ. ಇದೀಗ ಮುಂಬೈ (Mumbai) ಮೂಲದ ಎಲೆಕ್ಟ್ರಿಕ್ ವಾಹನ ತಯಾರಿಕಾ ಕಂಪನಿ ಪಿಎಂವಿ ಎಲೆಕ್ಟ್ರಿಕ್ (PMV Electric) ಇತ್ತೀಚೆಗೆ ತನ್ನ ಪಾದಾರ್ಪಣೆ ಮಾಡಿದೆ. ಎಲೆಕ್ಟ್ರಿಕ್ ವಾಹನ(EV) ಮಾರುಕಟ್ಟೆಗೆ ತರಲು ಸಿದ್ಧವಾಗಿದೆ. ಈ ಕಂಪನಿ Is-E ಎಲೆಕ್ಟ್ರಿಕ್ ಕಾರು ಅನ್ನು ಮಾರುಕಟ್ಟೆಗೆ ತರಲು ಸಿದ್ಧವಾಗಿದೆ. ಈ ಎಲೆಕ್ಟ್ರಿಕ್ ಕಾರು ನವೆಂಬರ್ 16 ರಂದು ಮಾರುಕಟ್ಟೆ ಪ್ರವೇಶಿಸಲಿದೆ. ಇದು ಮೈಕ್ರೋ ಎಲೆಕ್ಟ್ರಿಕ್ ಕಾರು ( Micro Electric Car). ನೋಡಲು ತುಂಬಾ ಚಿಕ್ಕದಾಗಿ ಕಾಣುವ ಈ ಎಲೆಕ್ಟ್ರಿಕ್​ ಕಾರು ಸಾಕಷ್ಟು ವೈಶಿಷ್ಯತೆಗಳನ್ನು ಹೊಂದಿದೆ.


ಮಾರುಕಟ್ಟೆಗೆ ಲಗ್ಗೆ ಇಡಲಿದೆ ಹೊಸ ಎಲೆಕ್ಟ್ರಿಕ್ ಕಾರು!


ಇದು ಮೂರು ಮಾದರಿಯಲ್ಲಿ ಗ್ರಾಹಕರಿಗೆ ಲಭ್ಯವಾಗಲಿದೆ. ಇವಿ ಮಾದರಿ ಸಿದ್ಧವಾಗಿದೆ ಎಂದು ಕಂಪನಿ ತಿಳಿಸಿದೆ. ಪಿಎಂವಿ ಎಲೆಕ್ಟ್ರಿಕ್ ಸಂಸ್ಥಾಪಕ ಕಲ್ಪಿತ್ ಪಟೇಲ್ ಮಾತನಾಡಿ, ತಮ್ಮ ಹೊಸ ಉತ್ಪನ್ನವನ್ನು ಮಾರುಕಟ್ಟೆಗೆ ತರುತ್ತಿರುವುದು ರೋಮಾಂಚನಕಾರಿಯಾಗಿದೆ. ಕಂಪನಿಗೆ ಇದೊಂದು ಮೈಲಿಗಲ್ಲು ಎಂದು ಹೇಳಿದ್ದಾರೆ.ನಾವು ವಿಶ್ವ ದರ್ಜೆಯ ಉತ್ಪನ್ನವನ್ನು ರಚಿಸಿದ್ದೇವೆ ಎಂದು ಅವರು ಹೇಳಿದರು.


ದೈನಂದಿನ ಚಟುವಟಿಕೆಗೆ ಬೆಸ್ಟ್​ ಕಾರು!


ಪ್ರಥಮ ಬಾರಿಗೆ ವೈಯಕ್ತಿಕ ಮೊಬಿಲಿಟಿ ವಾಹನವನ್ನು ಮಾರುಕಟ್ಟೆಗೆ ತರುತ್ತಿದ್ದೇವೆ ಎಂದರು. ಈ ವಾಹನವು ದೈನಂದಿನ ಚಟುವಟಿಕೆಗಳಿಗೆ ಸೂಕ್ತವಾಗಿದೆ ಎನ್ನಲಾಗಿದೆ. ಈ ಕಾರಿನ ವ್ಯಾಪ್ತಿಯು 200 ಕಿಲೋಮೀಟರ್ ಆಗಿರಬಹುದು. ಇದು 10 kWh ಕಬ್ಬಿಣದ ಫಾಸ್ಫೇಟ್ ಬ್ಯಾಟರಿಯನ್ನು ಹೊಂದಿರುತ್ತದೆ. ಇದು ಸ್ಮಾರ್ಟ್ ಕಾರ್ ಆಗಿದ್ದು ಇದು ದೊಡ್ಡ ಕಿಟಕಿಗಳು, ಮಿಶ್ರಲೋಹದ ಚಕ್ರಗಳು, ಹಿಂಭಾಗದಲ್ಲಿ ಪುಲ್-ವಿಡ್ತ್ ಟೈಲ್ ಲೈಟ್‌ನಂತಹ ವೈಶಿಷ್ಟ್ಯಗಳನ್ನು ಹೊಂದಿದೆ. ಇದು 2 ಆಸನಗಳ ವಾಹನವಾಗಿದೆ.


ಇದನ್ನೂ ಓದಿ: ರಿವರ್ಸ್ ಟ್ರೈಕ್ ಎಲೆಕ್ಟ್ರಿಕ್ ವಾಹನ ತಯಾರಿಸಿದ ಹುಬ್ಬಳ್ಳಿ ಮೂಲದ ಸ್ಟಾರ್ಟ್ಅಪ್!


ಜಸ್ಟ್​ 2 ಸಾವಿರ ಕೊಟ್ಟು ಬುಕ್​ ಮಾಡಿ!


ಎಲ್‌ಸಿಡಿ ಇನ್‌ಸ್ಟ್ರುಮೆಂಟ್ ಕ್ಲಸ್ಟರ್, ಇನ್ಫೋಟೈನ್‌ಮೆಂಟ್ ಪ್ಯಾನೆಲ್, ಬ್ಲೂಟೂತ್, ಯುಎಸ್‌ಬಿ ಕನೆಕ್ಟಿವಿಟಿ, ಮಲ್ಟಿ-ಫಂಕ್ಷನಲ್ ಸ್ಟೀರಿಂಗ್ ವೀಲ್ ಮುಂತಾದ ವೈಶಿಷ್ಟ್ಯಗಳೂ ಇರಲಿದೆ. ಪಿಎಂವಿ ಎಕ್ಸ್ ಶೋರೂಂ ಮೈಕ್ರೋ ಎಸ್‌ಯುವಿ ಬೆಲೆ ರೂ. 4 ಲಕ್ಷದಿಂದ ಆರಂಭವಾಗಬಹುದು. ಕಂಪನಿಯ ವೆಬ್‌ಸೈಟ್‌ಗೆ ಹೋಗಿ ಮತ್ತು ಈ ಕಾರನ್ನು ರೂ. 2 ಸಾವಿರ ಮುಂಗಡ ಕಾಯ್ದಿರಿಸಬಹುದಾಗಿದೆ.


ಇದನ್ನೂ ಓದಿ: ಈ ಕಾರುಗಳ ಮೇಲೆ ಕಣ್ಮನ ಸೆಳೆಯುವ ರಿಯಾಯಿತಿ, ಯಾರಿಗುಂಟು-ಯಾರಿಗಿಲ್ಲ!


ಮತ್ತೊಂದೆಡೆ, ಆಟೋಮೊಬೈಲ್ ಉತ್ಪಾದನಾ ಕಂಪನಿ  ಮಹೀಂದ್ರಾ ಕೂಡ ಇದೇ ರೀತಿಯ ಬುಲ್ಲಿ ಎಲೆಕ್ಟ್ರಿಕ್ ಕಾರನ್ನು ತರುವ ಕೆಲಸದಲ್ಲಿ ತೊಡಗಿಸಿಕೊಂಡಿದೆ. ಶೀಘ್ರದಲ್ಲೇ ಈ ಕಾರು ಕೂಡ ಮಾರುಕಟ್ಟೆಗೆ ಬರಬಹುದು. ಕಾರಿನ ಬೆಲೆ ಕೂಡ ಇದೇ ಶ್ರೇಣಿಯ ಆಸುಪಾಸಿನಲ್ಲಿ ಇರಬಹುದು ಎಂದು ವರದಿಗಳು ಸೂಚಿಸುತ್ತವೆ. ಹಾಗಾಗಿ ಹೊಸ ಎಲೆಕ್ಟ್ರಿಕ್ ವಾಹನ ಖರೀದಿಸುವ ಯೋಚನೆಯಲ್ಲಿರುವವರು ಸ್ವಲ್ಪ ಸಮಯ ಕಾಯಬೇಕು. ಹೊಸ ಮಾದರಿಗಳು ಲಭ್ಯವಿರುತ್ತವೆ. ಅದು ಒಳ್ಳೆಯದಾಗಿದ್ದರೆ, ನೀವು ಅದನ್ನು ಖರೀದಿಸಬಹುದು.

Published by:ವಾಸುದೇವ್ ಎಂ
First published: