PM Narendra Modi: 3500 ರೂ. ಬೆಲೆಯ 50 ಕೆಜಿ ಯೂರಿಯಾ ಚೀಲಕ್ಕೆ ರೈತರು 300 ರೂ. ಪಾವತಿಸಿ ಸಾಕು: ಪ್ರಧಾನಿ ಮೋದಿ ಘೋಷಣೆ

ಈಮೂಲಕ ಬಿಜೆಪಿ ನೇತೃತ್ವದ ಎನ್‌ಡಿಎ ಸರ್ಕಾರ ಪ್ರತಿ ಚೀಲಕ್ಕೆ ₹ 3,200  ರಂತೆ ಖರ್ಚು ಮಾಡುತ್ತಿದೆ ಎಂದು ಪ್ರಧಾನಿ ನರೇಂದ್ರ ಮೋದಿ ಸಂದೇಶ ನೀಡಿದ್ದಾರೆ.

ಪ್ರಧಾನ ಮಂತ್ರಿ ನರೇಂದ್ರ ಮೋದಿ

ಪ್ರಧಾನ ಮಂತ್ರಿ ನರೇಂದ್ರ ಮೋದಿ

  • Share this:
    ಗಾಂಧೀನಗರ: ವಿದೇಶಗಳಿಂದ ಆಮದು ಮಾಡಿಕೊಳ್ಳುವ 50 ಕೆಜಿ ತೂಕದ ಪ್ರತಿ ಯೂರಿಯಾ ಚೀಲಕ್ಕೆ (Urea Bag) ತಗಲುವ ವೆಚ್ಚ ಸುಮಾರು ₹3,500.  ಆದರೆ ರೈತರಿಗೆ (Urea Bag Subsidy) ಈ ಯೂರಿಯಾ ಚೀಲವನ್ನು ಪ್ರತಿ ಚೀಲಕ್ಕೆ ₹300 ರಂತೆ ನೀಡಲಾಗುತ್ತದೆ ಎಂದು ಗಾಂಧಿನಗರದಲ್ಲಿ ನಡೆದ ಸಹಕಾರಿ ವಿಚಾರ ಸಂಕಿರಣದಲ್ಲಿ ಪ್ರಧಾನಿ ನರೇಂದ್ರ ಮೋದಿ (PM Narendra Modi) ತಿಳಿಸಿದ್ದಾರೆ. ಈಮೂಲಕ ಬಿಜೆಪಿ ನೇತೃತ್ವದ ಎನ್‌ಡಿಎ ಸರ್ಕಾರ (NDA Government) ಪ್ರತಿ ಚೀಲಕ್ಕೆ ₹ 3,200  ರಂತೆ ಖರ್ಚು ಮಾಡುತ್ತಿದೆ ಎಂದು ಪ್ರಧಾನಿ ನರೇಂದ್ರ ಮೋದಿ ಸಂದೇಶ ನೀಡಿದ್ದಾರೆ.

    ಶನಿವಾರ ಗಾಂಧಿನಗರದ 'ಸಹಕಾರ್ ಸೇ ಸಮೃದ್ಧಿ' ಕಾರ್ಯಕ್ರಮದಲ್ಲಿ ಇಫ್ಕೋ, ಕಲೋಲ್‌ನಲ್ಲಿ ನಿರ್ಮಿಸಲಾದ ನ್ಯಾನೋ ಯೂರಿಯಾ ಸ್ಥಾವರವನ್ನು ಉದ್ಘಾಟಿಸಿ ಮಾತನಾಡಿದ ಪ್ರಧಾನಿ ನರೇಂದ್ರ ಮೋದಿ ಅವರು ನಮ್ಮ ಸರ್ಕಾರವು ಯೋಜನೆಗಳನ್ನು 100 ಪ್ರತಿಶತದಷ್ಟು ನಾಗರಿಕರಿಗೆ ತಲುಪುವಂತೆ ಮಾಡಲು ಅಭಿಯಾನವನ್ನು ನಡೆಸುತ್ತಿದೆ ಎಂದು ಖಚಿತಪಡಿಸಿದರು.

    ಎಲ್ಲರಿಗೂ ಸರ್ಕಾರಿ ಯೋಜನೆಗಳ ಪ್ರಯೋಜನ
    ಕೇಂದ್ರದ ಬಿಜೆಪಿ ನೇತೃತ್ವದ ಎನ್‌ಡಿಎ ಸರ್ಕಾರವು ಬಡವರ ಸೇವೆಗೆ ಹೆಚ್ಚಿನ ಆದ್ಯತೆ ನೀಡಿದೆ ಎಂದು ಪ್ರಧಾನಿ ನರೇಂದ್ರ ಮೋದಿ ಈ ಹಿಂದೆಯೂ ತಿಳಿಸಿದ್ದರು. ಸರ್ಕಾರ ಜಾರಿಗೊಳಿಸುವ ಎಲ್ಲಾ ಯೋಜನೆಯ ಪ್ರಯೋಜನಗಳನ್ನು ಸಂಪೂರ್ಣವಾಗಿ ಬಳಸಿಕೊಳ್ಳಲಾಗಿದೆ ಎಂದು ಖಾತರಿಪಡಿಸುವ ಗುರಿಯನ್ನು ಆಡಳಿತವು ಹೊಂದಿದೆ ಎಂದು ಪ್ರಧಾನಿ ಮೋದಿ ಬಣ್ಣಿಸಿದರು.

    ಬಡವರ ಸೇವೆ, ಉತ್ತಮ ಆಡಳಿತ- ಕಲ್ಯಾಣಕ್ಕೆ ಮೊದಲ ಆದ್ಯತೆ
    ಸಭೆಯನ್ನುದ್ದೇಶಿಸಿ ಮಾತನಾಡಿದ ಪ್ರಧಾನಿ ನರೇಂದ್ರ ಮೋದಿ, ''ಕೇಂದ್ರದ ಬಿಜೆಪಿ ನೇತೃತ್ವದ ಎನ್‌ಡಿಎ ಸರಕಾರವು ದೇಶಕ್ಕೆ ಎಂಟು ವರ್ಷಗಳ ಸೇವೆಯನ್ನು ಪೂರ್ಣಗೊಳಿಸುತ್ತಿದೆ. ಈ ಸುದೀರ್ಘ ವರ್ಷಗಳಲ್ಲಿ ನಾವು ಬಡವರ ಸೇವೆ, ಉತ್ತಮ ಆಡಳಿತ ಮತ್ತು ಕಲ್ಯಾಣಕ್ಕೆ ಮೊದಲ ಆದ್ಯತೆ ನೀಡಿದ್ದೇವೆ. ಬಡವರು, ಸಬ್ಕಾ ಸಾಥ್, ಸಬ್ಕಾ ವಿಕಾಸ್, ಸಬ್ಕಾ ವಿಶ್ವಾಸ್ ಮತ್ತು ಸಬ್ಕಾ ಪ್ರಯಾಸ್ ಮಂತ್ರವನ್ನು ಅನುಸರಿಸಿ ನಾವು ದೇಶದ ಅಭಿವೃದ್ಧಿಗೆ ಹೊಸ ಚೈತನ್ಯವನ್ನು ನೀಡಿದ್ದೇವೆ ಎಂದು ತಿಳಿಸಿದರು.

    ಇದನ್ನೂ ಓದಿ: Sankarsh Chand: 100 ಕೋಟಿಯ ಒಡೆಯ ಈ 23ರ ಯುವಕ! ಕಾಲೇಜು ಓದಿದ್ದು ಎರಡೇ ವರ್ಷ!

    ಉಕ್ರೇನ್‌ನಲ್ಲಿ ಕೋವಿಡ್-19 ಸಾಂಕ್ರಾಮಿಕ ರೋಗ ಮತ್ತು ಯುದ್ಧದಿಂದಾಗಿ ರಸಗೊಬ್ಬರಗಳ ಬೆಲೆ ಹೆಚ್ಚಾಗಿದೆ. ಆದರೆ ದೇಶದಲ್ಲಿ ರೈತರು ಯೂರಿಯಾ ಮತ್ತು ಇತರ ಒಳಹರಿವಿನ ಕೊರತೆಯನ್ನು ಎದುರಿಸದಂತೆ ಸರ್ಕಾರ ಖಚಿತಪಡಿಸಿದೆ ಎಂದು ಸಹ ಪ್ರಧಾನಿ ನರೇಂದ್ರ ಮೋದಿ ಸ್ಪಷ್ಟಪಡಿಸಿದರು.

    ಇನ್ನೂ 8 ಘಟಕ ಸ್ಥಾಪನೆ
    ನ್ಯಾನೋ ಯೂರಿಯಾ ಉತ್ಪಾದನಾ ಘಟಕದಲ್ಲಿ 1.5 ಲಕ್ಷ ಬಾಟಲಿಗಳನ್ನು ತಯಾರಿಸುವ ಸಾಮರ್ಥ್ಯವನ್ನು ಹೊಂದಿದೆ ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದರು. ಆದರೆ ಮುಂಬರುವ ದಿನಗಳಲ್ಲಿ ಭಾರತದಲ್ಲಿ ಇನ್ನೂ 8 ಘಟಕಗಳನ್ನು ಸ್ಥಾಪಿಸಲಾಗುವುದು. ಒಂದು ಚೀಲ ಯೂರಿಯಾದಲ್ಲಿನ ಶಕ್ತಿಯನ್ನು ಈಗ ಚಿಕ್ಕ ವ್ಯವಸ್ಥೆಯಲ್ಲಿ ಒದಗಿಸುತ್ತೇವೆ. ಇದರಿಂದ ಸಾರಿಗೆ ವೆಚ್ಚಗಳು ಎಷ್ಟು ಕಡಿಮೆಯಾಗಿ ಸಣ್ಣ ರೈತರಿಗೆ ಪ್ರಯೋಜನವನ್ನು ನೀಡುತ್ತದೆ ಎಂದು ಪ್ರಧಾನಿ ನರೇಂದ್ರ ಮೋದಿ ತಿಳಿಸಿದರು.

    ಇದನ್ನೂ ಓದಿ: High Quality Seeds: ರೈತರೇ, ಗುಣಮಟ್ಟದ ಬೀಜ ಉತ್ಪಾದಿಸಲು ಹೀಗೆ ಮಾಡಿ! ನಕಲಿ ಕಂಪನಿಗಳಿಂದ ಮೋಸಹೋಗಬೇಡಿ

    ಇತ್ತೀಚಿಗೆ ತಮಿಳುನಾಡಿಗೆ ಭೇಟಿ ನೀಡಿದ್ದ ಪ್ರಧಾನಿ ನರೇಂದ್ರ ಮೋದಿ ವಿವಿಧ ಕಾಮಗಾರಿಗಳಿಗೆ ಚಾಲನೆ ನೀಡಿದ್ದರು. ಆ ಕಾರ್ಯಕ್ರಮದಲ್ಲೂ ಸಹ ದೇಶದ ಇತರ ಭಾಗಗಳಲ್ಲಿ ಬಹು ಮಾದರಿ ಲಾಜಿಸ್ಟಿಕ್ ಪಾರ್ಕ್‌ಗಳನ್ನು ಅಭಿವೃದ್ಧಿಪಡಿಸಲು ನಮ್ಮ ಸರ್ಕಾರ ಬದ್ಧವಾಗಿದೆ. ಇದು ನಮ್ಮ ದೇಶದ ವ್ಯಾಪಾರ ಪರಿಸರ ವ್ಯವಸ್ಥೆಯಲ್ಲಿ ಒಂದು ಮಾದರಿ ಬದಲಾವಣೆಯಾಗಲಿದೆ. ಇದು ಉದ್ಯೋಗ ಸೃಷ್ಟಿಯನ್ನು ಉತ್ತೇಜಿಸುತ್ತದೆ. 'ಆತ್ಮನಿರ್ಭರ್' ಎಂಬ ನಮ್ಮ ಸಂಕಲ್ಪವನ್ನು ಹೆಚ್ಚಿಸುತ್ತದೆ ಎಂದು ಸಹ ಪ್ರಧಾನಿ ಮೋದಿ ವಿವಿಧ ಯೋಜನೆಗಳಿಗೆ ಚಾಲನೆ ನೀಡಿ ಘೋಷಿಸಿದ್ದರು.
    Published by:guruganesh bhat
    First published: