ದೇಶದ ಕೋಟಿಗಟ್ಟಲೆ ರೈತರು (Farmers) ಪ್ರಧಾನಮಂತ್ರಿ ಕಿಸಾನ್ ಯೋಜನೆಯ (Pradhan Mantri kisan Yojana) 10ನೇ ಕಂತನ್ನು ಬ್ಯಾಂಕ್ ಖಾತೆಗೆ ಜಮೆ ಆಗೋದನ್ನು ಕಾತರದಿಂದ ಕಾಯುತ್ತಿದ್ದಾರೆ. ಈ ಕಂತಿನ (ಪಿಎಂ ಕಿಸಾನ್ ಯೋಜನೆ 10ನೇ ಕಂತು) ಎರಡು ಸಾವಿರ ರೂಪಾಯಿ ಕಳೆದ ವಾರವಷ್ಟೇ ರೈತರ ಖಾತೆಗೆ ಜಮೆಯಾಗುವ ನಿರೀಕ್ಷೆ ಇತ್ತು. ಈಗ ಮುಂದಿನ ಕಂತು ಈ ವಾರ ಡಿಸೆಂಬರ್ 25 ರವರೆಗೆ ಯಾವುದೇ ದಿನ ಬಿಡುಗಡೆಯಾಗಬಹುದು ಎಂದು ವರದಿ ಆಗಿದೆ. ಪ್ರಧಾನ ಮಂತ್ರಿ ಕಿಸಾನ್ ಯೋಜನೆಯ 10 ನೇ ಕಂತಿನ ಕುರಿತು ಇನ್ನೂ ಯಾವುದೇ ಅಧಿಕೃತ ಪ್ರಕಟನೆಗಳು ಹೊರ ಬಂದಿಲ್ಲ. ಕಳೆದ ವರ್ಷದ ಕೊನೆಯ ಕಂತಿನ ಹಣ ಡಿ.25ರಂದು ಬಿಡುಗಡೆಯಾಗಿದ್ದು, ಈ ವರ್ಷವೂ ಡಿಸೆಂಬರ್ 25ರೊಳಗೆ ರೈತರಿಗೆ ಹಣ ಸಿಗಲಿದೆ ಎಂದು ಹೇಳಲಾಗುತ್ತಿದೆ. ಈ ಬಗ್ಗೆ ಅಧಿಕೃತ ಹೇಳಿಕೆ ಮಾತ್ರ ಇದುವರೆಗೂ ಹೊರ ಬಂದಿಲ್ಲ.
ಹಣ ಜಮೆ ವಿಳಂಬಕ್ಕೆ ಕಾರಣ ಏನು?
ಇಂತಹ ಪರಿಸ್ಥಿತಿಯಲ್ಲಿ ಯೋಜನೆಯ ಫಲಾನುಭವಿ ರೈತರು 10ನೇ ಕಂತು ಹಣಕ್ಕಾಗಿ ಸ್ವಲ್ಪ ದಿನ ಕಾಯಬೇಕಾಗಬಹುದು. ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರ ಕಾರ್ಯಕ್ರಮದಿಂದ ಹಣ ಬಿಡುಗಡೆ ವಿಳಂಬವಾಗಿದೆ. ಡಿಸೆಂಬರ್ 16ರಂದು ಪ್ರಧಾನಿಗಳು ರೈತ ಕಾರ್ಯಕ್ರಮದಲ್ಲಿ ಭಾಗವಹಿಸಿದ ನಂತರ ಅಥವಾ ಅದೇ ದಿನ ಹಣ ರೈತರ ಖಾತೆಗೆ ಜಮೆ ಆಗಲಿದೆ ಎಂಬ ಮಾತುಗಳು ಕೇಳಿ ಬಂದಿವೆ. ಆದ್ರೆ ಕಾರ್ಯಕ್ರಮ ಮುಗಿದು ನಾಲ್ಕು ದಿನಗಳು ಕಳೆದ್ರೂ, ಹಣದ ಜಮೆ ಆಗಿಲ್ಲ. ಈ ಕಾರ್ಯಕ್ರಮ ನೈಸರ್ಗಿಕ ಕೃಷಿ (Natural Farming) ಕುರಿತಾಗಿತ್ತು.
ಇದನ್ನೂ ಓದಿ: PM Kisan Yojana: ಫಲಾನುಭವಿಗಳ ಪಟ್ಟಿಯಲ್ಲಿ ನಿಮ್ಮ ಹೆಸ್ರು ಇಲ್ಲವೇ? ಹಾಗಿದ್ರೆ ಈ ಸಂಖ್ಯೆಗೆ ಕರೆ ಮಾಡಿ
11 ಕೋಟಿಗೂ ಅಧಿಕ ರೈತರ ಖಾತೆಗೆ ಹಣ ಜಮೆ
11 ಕೋಟಿಗೂ ಹೆಚ್ಚು ರೈತರು ಪ್ರಯೋಜನ ಪಡೆಯುತ್ತಿದ್ದಾರೆ. ಪ್ರಧಾನಿ ಕಿಸಾನ್ ಯೋಜನೆಯು ಮೋದಿ ಸರ್ಕಾರದ ಮಹತ್ವಾಕಾಂಕ್ಷೆಯ ಯೋಜನೆಗಳಲ್ಲಿ ಒಂದಾಗಿದೆ ಎಂಬುದು ಗಮನಾರ್ಹ. ರೈತರ ಆರ್ಥಿಕ ಸ್ಥಿತಿ ಸುಧಾರಿಸಲು ಪ್ರಧಾನಿ ನರೇಂದ್ರ ಮೋದಿ ಸರ್ಕಾರ ಈ ಯೋಜನೆ ಆರಂಭಿಸಿತ್ತು. ಕಳೆದ ಲೋಕಸಭೆ ಚುನಾವಣೆಗೂ ಮುನ್ನವೇ ಇದನ್ನು ಆರಂಭಿಸಲಾಗಿತ್ತು. ಇದೀಗ ಈ ಯೋಜನೆಯ ಫಲಾನುಭವಿಗಳ ಸಂಖ್ಯೆ (ಪಿಎಂ ಕಿಸಾನ್ ಯೋಜನೆ ಫಲಾನುಭವಿಗಳು) 11.10 ಕೋಟಿಗೂ ಅಧಿಕವಾಗಿದೆ.
ಮೂರು ಕಂತುಗಳಲ್ಲಿ ಹಣ ಜಮೆ
ಪ್ರಧಾನಮಂತ್ರಿ ಕಿಸಾನ್ ಯೋಜನೆಯಡಿ ದೇಶಾದ್ಯಂತ ಕೋಟ್ಯಂತರ ರೈತರಿಗೆ ವರ್ಷದಲ್ಲಿ ಆರು ಸಾವಿರ ರೂ. ಈ ಮೊತ್ತವನ್ನು ರೈತರಿಗೆ ಮೂರು ಕಂತುಗಳಲ್ಲಿ ತಲಾ ಎರಡು ಸಾವಿರ ರೂ. ಸರ್ಕಾರ ಈ ಹಣವನ್ನು ನೇರವಾಗಿ ಡಿಬಿಟಿ ಅಡಿಯಲ್ಲಿ ರೈತರ ಖಾತೆಗೆ ವರ್ಗಾಯಿಸುತ್ತದೆ.
ಫಲಾನುಭವಿಗಳ ಪಟ್ಟಿಯಲ್ಲಿ ನಿಮ್ಮ ಹೆಸರು ಇಲ್ಲವೇ?
PM ಕಿಸಾನ್ ಯೋಜನೆಗೆ ಸಂಬಂಧಿಸಿದ ಯಾವುದೇ ಸಮಸ್ಯೆಗೆ ನೀವು 155261 ಅಥವಾ 011-24300606 ಗೆ ಕರೆ ಮಾಡಬಹುದು. ಕರೆ ಮಾಡಿದ ನಂತರ, ನಿಮ್ಮ ಸಮಸ್ಯೆಯನ್ನು ಕೇವಲ ಕೇಳದೇ ಕಡಿಮೆ ಸಮಯದಲ್ಲಿ ನಿಮಗೆ ಪರಿಹಾರವನ್ನು ಸಹ ನೀಡಲಾಗುವುದು.
ಇದನ್ನೂ ಓದಿ: PM Kisan Yojana: ಈ ಪ್ರಕ್ರಿಯೆ ಇಲ್ಲದೇ ನಿಮಗೆ 10ನೇ ಕಂತು ಸಿಗಲ್ಲ, ತಕ್ಷಣ ಏನು ಮಾಡಬೇಕು ಗೊತ್ತಾ?
ಕಚೇರಿಗೆ ತೆರಳಿ ದೂರು ನೀಡಬಹುದು
ಪಟ್ಟಿಯಲ್ಲಿ ಹೆಸರು ಇಲ್ಲದಿದ್ದರೆ, ರೈತರಿಗೆ ಕರೆ ಹೊರತುಪಡಿಸಿ ಬೇರೆ ಆಯ್ಕೆಗಳಿವೆ. ನೀವು ಜಿಲ್ಲಾ ಅಥವಾ ರಾಜ್ಯ ಕೃಷಿ ಕಛೇರಿಗೆ ಭೇಟಿ ನೀಡಿ ಸಂಬಂಧಪಟ್ಟ ಅಧಿಕಾರಿಯನ್ನು ಭೇಟಿ ಮಾಡಿ ನಿಮ್ಮ ದೂರನ್ನು ದಾಖಲಿಸಬಹುದು. ಇವುಗಳಲ್ಲದೆ ಪಿಎಂ ಕಿಸಾನ್ ವೆಬ್‌ಸೈಟ್‌ನಲ್ಲೂ ದೂರು ನೀಡುವ ಸೌಲಭ್ಯವನ್ನು ನೀಡಲಾಗಿದೆ.
ಇಲ್ಲಿ ನಿಮ್ಮ ಆಧಾರ್ ಸಂಖ್ಯೆ, ಬ್ಯಾಂಕ್ ಖಾತೆ ಸಂಖ್ಯೆ ಅಥವಾ ಮೊಬೈಲ್ ಸಂಖ್ಯೆಯನ್ನು ನಮೂದಿಸುವ ಮೂಲಕ ನೀವು ದೂರು ನೀಡಬಹುದು. ದೂರಿನ ಮೇಲೆ ಕೈಗೊಂಡ ಕ್ರಮಗಳ ಬಗ್ಗೆ ನಿಗಾ ಇಡುವ ಸೌಲಭ್ಯವನ್ನೂ ವೆಬ್‌ಸೈಟ್‌ನಲ್ಲಿ ನೀಡಲಾಗಿದೆ
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ