• Home
  • »
  • News
  • »
  • business
  • »
  • PM Kisan Update: ಗಂಡ ಹೆಂಡತಿ ಇಬ್ರಿಗೂ ಸಿಗುತ್ತೆ 6 ಸಾವಿರ! ಯಾವ ಯೋಜನೆ? ಹೇಗೆ ಸಿಗುತ್ತೆ?

PM Kisan Update: ಗಂಡ ಹೆಂಡತಿ ಇಬ್ರಿಗೂ ಸಿಗುತ್ತೆ 6 ಸಾವಿರ! ಯಾವ ಯೋಜನೆ? ಹೇಗೆ ಸಿಗುತ್ತೆ?

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

PM Kisan Update: ಪತಿ ಮತ್ತು ಪತ್ನಿ ಇಬ್ಬರೂ ಪ್ರಧಾನ ಮಂತ್ರಿ ಕಿಸಾನ್ ಸಮ್ಮಾನ್ ನಿಧಿ ಯೋಜನೆಯಲ್ಲಿ ಪ್ರಯೋಜನ ಪಡೆಯಬಹುದೇ?. ಅದರ ಕುರಿತು ಮಾಹಿತಿ ಪಡೆಯೋಣ ಬನ್ನಿ.

  • Share this:

ಪಿಎಂ ಕಿಸಾನ್ ಸಮ್ಮಾನ್ ನಿಧಿ ಯೋಜನೆಯ ಹೊಸ ನಿಯಮ: ಪಿಎಂ ಕಿಸಾನ್ ಸಮ್ಮಾನ್ ನಿಧಿ ಯೋಜನೆ (PM Kisan Yojna Update) ಅಡಿಯಲ್ಲಿ, ಸರ್ಕಾರವು ರೈತರ ಖಾತೆಗೆ ವಾರ್ಷಿಕವಾಗಿ ರೂ.6,000 ಗಳನ್ನೂ ಪ್ರತಿ ನಾಲ್ಕು ತಿಂಗಳಿಗೊಮ್ಮೆ ಒಟ್ಟು 3 ಸಮಾನ ಕಂತುಗಳಲ್ಲಿ ನೀಡುತ್ತದೆ. ಆದರೆ, ಇಲ್ಲಿಯವರೆಗೆ ಈ ಯೋಜನೆ ಹಲವು ಬದಲಾವಣೆಗಳಿಗೆ ಒಳಗಾಗಿದೆ. ಆ ಬದಲಾಗಿರುವ ನಿಯಮಗಳು ಯಾವುವು ಎಂಬುದನ್ನು ಇಲ್ಲಿ ತಿಳಿಯೋಣ ಬನ್ನಿ. ಭಾರತ ಸರ್ಕಾರವು (Central Government) ಸಣ್ಣ ಹಾಗು ಅತಿ ಸಣ್ಣ ರೈತರ ಆದಾಯ ವೃದ್ಧಿಸಲು 2019 ರಲ್ಲಿ ಪ್ರಧಾನ ಮಂತ್ರಿ ಕಿಸಾನ್ ಸಮ್ಮಾನ್ ನಿಧಿ (PM Kisan) ಎಂಬ ಯೋಜನೆಯನ್ನು ಘೋಷಿಸಿತ್ತು. ಈ ಯೋಜನೆಯ ಅಡಿಯಲ್ಲಿ 2 ಹೆಕ್ಟೇರಿಗಿಂತ ಕಡಿಮೆ ಭೂ ಒಡೆತನ ಹೊಂದಿರುವ ಪ್ರತೀ ರೈತ ಕುಟುಂಬಕ್ಕೆ (ಪತಿ, ಪತ್ನಿ, ಮತ್ತು ಅಪ್ರಾಪ್ತ ಮಕ್ಕಳನ್ನು ಹೊಂದಿರುವ ಕುಟುಂಬ) ಒಂದು ವರ್ಷಕ್ಕೆ ರೂ.6,000 ಗಳನ್ನೂ ಪ್ರತಿ ನಾಲ್ಕು ತಿಂಗಳಿಗೊಮ್ಮೆ ಒಟ್ಟು 3 ಸಮಾನ ಕಂತುಗಳಲ್ಲಿ ನೀಡಲಾಗುತ್ತದೆ.


ಇದರಲ್ಲಿ ಯೋಜನೆಯಿಂದ ಯೋಜನೆಗೆ, ಕೆಲವೊಮ್ಮೆ ಅರ್ಜಿಗೆ ಸಂಬಂಧಿಸಿದಂತೆ ಮತ್ತು ಕೆಲವೊಮ್ಮೆ ಅರ್ಹತೆಯ ಬಗ್ಗೆ ಅನೇಕ ಹೊಸ ನಿಯಮಗಳನ್ನು ಮಾಡಲಾಗಿದೆ. ಈಗ ಈ ಯೋಜನೆಯಲ್ಲಿ, ಪತಿ ಮತ್ತು ಪತ್ನಿ ಇಬ್ಬರೂ ಪ್ರಧಾನ ಮಂತ್ರಿ ಕಿಸಾನ್ ಸಮ್ಮಾನ್ ನಿಧಿ ಯೋಜನೆಯಲ್ಲಿ ಪ್ರಯೋಜನ ಪಡೆಯಬಹುದೇ?. ಅದರ ಕುರಿತು ಮಾಹಿತಿ ಪಡೆಯೋಣ ಬನ್ನಿ.


ಪ್ರಧಾನ ಮಂತ್ರಿ ಕಿಸಾನ ಸಮ್ಮಾನ ನಿಧಿಗೆ ಗಂಡ-ಹೆಂಡತಿ ಇಬ್ಬರೂ ಅರ್ಜಿ ಸಲ್ಲಿಸಬಹುದೇ?
ಪಿಎಂ ಕಿಸಾನ್ ಯೋಜನೆಯ ನಿಯಮಗಳ ಪ್ರಕಾರ, ಪತಿ ಮತ್ತು ಪತ್ನಿ ಇಬ್ಬರೂ ಪಿಎಂ ಕಿಸಾನ್ ಸಮ್ಮಾನ್ ನಿಧಿ ಯೋಜನೆ (ಪಿಎಂ ಕಿಸಾನ್ ಪ್ರಯೋಜನಗಳು) ಪ್ರಯೋಜನವನ್ನು ಪಡೆಯಲು ಸಾಧ್ಯವಿಲ್ಲ.


ಇದನ್ನೂ ಓದಿ: ನೀವು ಎಲೆಕ್ಟ್ರಿಕ್ ವಾಹನಗಳನ್ನು ಖರೀದಿಸ್ತಿದ್ದೀರಾ? ಈ ಯೋಜನೆ ಬಗ್ಗೆ ತಿಳಿದುಕೊಳ್ಳಿ!


ಯಾರಾದರೂ ಈ ರೀತಿ ಮಾಡಿದರೆ, ಸರ್ಕಾರವು ಅವರನ್ನು ನಕಲಿ ರೈತರು ಎಂದು ಪರಿಗಣಿಸುತ್ತದೆ. ಇದಲ್ಲದೇ ರೈತರನ್ನು ಅನರ್ಹರನ್ನಾಗಿಸುವ ಹಲವು ನಿಬಂಧನೆಗಳು ಕೂಡ ಇವೆ. ಅನರ್ಹ ರೈತರು ಈ ಯೋಜನೆಯ ಲಾಭ ಪಡೆದರೆ, ಅವರು ಎಲ್ಲಿಯವರೆಗೆ ಕಂತುಗಳ ಹಣವನ್ನು ತೆಗೆದುಕೊಂಡಿದ್ದಾರೋ ಅಲ್ಲಿಯವರೆಗೆ ಪೂರ್ತಿ ಹಣವನ್ನು ಸರ್ಕಾರಕ್ಕೆ ಪುನಃ ಹಿಂತಿರುಗಿಸಬೇಕು.


ಆದಾಯ ತೆರಿಗೆ ಪಾವತಿಸಿದರೆ?
ಈ ಯೋಜನೆಯ ನಿಯಮಗಳ ಅಡಿಯಲ್ಲಿ, ರೈತರ ಕುಟುಂಬದಲ್ಲಿ ಯಾರಾದರೂ ತೆರಿಗೆ ಪಾವತಿಸಿದರೆ, ಈ ಯೋಜನೆಯ ಪ್ರಯೋಜನವನ್ನು ಪಡೆಯುವುದಿಲ್ಲ. ಅಂದರೆ, ಪತಿ ಅಥವಾ ಪತ್ನಿ ಕಳೆದ ವರ್ಷ ಆದಾಯ ತೆರಿಗೆ ಪಾವತಿಸಿದ್ದರೆ, ಅವರು ಈ ಯೋಜನೆಯ ಪ್ರಯೋಜನವನ್ನು ಪಡೆಯುವುದಿಲ್ಲ.


ಇದನ್ನೂ ಓದಿ: ಕೇವಲ 2 ಲಕ್ಷದಿಂದ ಈ ಬ್ಯುಸಿನೆಸ್​ ಆರಂಭಿಸಿ, ತಿಂಗಳಿಗೆ 1 ಲಕ್ಷ ಆದಾಯ ಗಳಿಸಿ!


ಪ್ರಧಾನ ಮಂತ್ರಿ ಕಿಸಾನ ಸಮ್ಮಾನ ನಿಧಿ ಯಾರಿಗೆ ಅನ್ವಯಿಸುವುದಿಲ್ಲ?
ಈ ಯೋಜನೆಯ ನಿಯಮದ ಪ್ರಕಾರ, ಒಬ್ಬ ರೈತ ತನ್ನ ಕೃಷಿ ಭೂಮಿಯನ್ನು ಕೃಷಿ ಕೆಲಸಕ್ಕೆ ಬಳಸದೆ ಬೇರೆ ಕೆಲಸಗಳಿಗೆ ಅಥವಾ ಇತರರ ಹೊಲಗಳಲ್ಲಿ ಕೃಷಿ ಕೆಲಸ ಮಾಡುತ್ತಿದ್ದರೆ ಮತ್ತು ಹೊಲವು ಅವನಿಗೆ ಸೇರಿರುವುದಿಲ್ಲ. ಅಂತಹ ರೈತರು ಈ ಯೋಜನೆಯ ಲಾಭ ಪಡೆಯಲು ಅರ್ಹರಲ್ಲ. ಒಬ್ಬ ರೈತ ವ್ಯವಸಾಯ ಮಾಡುತ್ತಿದ್ದು, ಹೊಲವು ಅವನ ಹೆಸರಿನಲ್ಲಿಲ್ಲ. ಅವನ ತಂದೆ ಅಥವಾ ತಾತನ ಹೆಸರಿನಲ್ಲಿದ್ದರೆ, ಅವನಿಗೂ ಈ ಯೋಜನೆಯ ಲಾಭ ಸಿಗುವುದಿಲ್ಲ.


ಇವರಿಗೂ ಈ ಯೋಜನೆಯ ಪ್ರಯೋಜನ ಸಿಗುವುದಿಲ್ಲ!
ಕೃಷಿ ಭೂಮಿಯ ಮಾಲೀಕರಾಗಿದ್ದರೆ, ಅವರು ಸರ್ಕಾರಿ ನೌಕರನಾಗಿದ್ದರೆ ಅಥವಾ ನಿವೃತ್ತ, ಹಾಲಿ ಅಥವಾ ಮಾಜಿ ಸಂಸದ, ಶಾಸಕ, ಸಚಿವರಾಗಿದ್ದರೆ ಅಂತಹವರೂ ಈ ರೈತ ಯೋಜನೆಯ ಪ್ರಯೋಜನಕ್ಕೆ ಅನರ್ಹರು ಆಗಿರುತ್ತಾರೆ. ವೃತ್ತಿಪರ ನೋಂದಾಯಿತ ವೈದ್ಯರು, ಎಂಜಿನಿಯರ್‌ಗಳು, ವಕೀಲರು, ಚಾರ್ಟರ್ಡ್ ಅಕೌಂಟೆಂಟ್‌ಗಳು ಅಥವಾ ಅವರ ಕುಟುಂಬ ಸದಸ್ಯರು ಸಹ ಅನರ್ಹರ ಪಟ್ಟಿಯಲ್ಲಿ ಬರುತ್ತಾರೆ. ಆದಾಯ ತೆರಿಗೆ ಪಾವತಿಸುವ ಕುಟುಂಬಗಳು ಈ ಯೋಜನೆಯ ಪ್ರಯೋಜನವನ್ನು ಪಡೆಯುವುದಿಲ್ಲ.

First published: