PM Kisan Scheme: ಸರ್ಕಾರದಿಂದ ಅನ್ನದಾತರಿಗೆ ಬಿಗ್​ ಗುಡ್​​ ನ್ಯೂಸ್​​​, ನೀವು ಇರೋ ಕಡೆನೇ ಬಂದು ಕೈ ಸೇರುತ್ತೆ ಹಣ!

ಪಿಎಂ ಕಿಸಾನ್ ಯೋಜನೆಗಾಗಿ ಈವರೆಗೆ ಸರ್ಕಾರ 2 ಲಕ್ಷ ಕೋಟಿ ರೂಪಾಯಿಗಳಿಗೂ ಹೆಚ್ಚು ಖರ್ಚು ಮಾಡಿದೆ. ಮೇ 31ರಂದು 11ನೇ ಕಂತಿನ ಹಣವನ್ನು ರೈತರ ಖಾತೆಗೆ ಜಮೆ ಮಾಡಲಾಗಿದೆ. ಇದೀಗ ಅನ್ನದಾತರಿಗೆ ಮತ್ತೊಂದು ಗುಡ್ ನ್ಯೂಸ್​ (Good News) ಕೊಟ್ಟಿದೆ.

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

  • Share this:
ಪ್ರಧಾನ ಮಂತ್ರಿ ಕಿಸಾನ್ ಸಮ್ಮಾನ್ ನಿಧಿ (Prime Minister Kisan Samman Nidhi) ಮುಖಾಂತರ ಕೇಂದ್ರ ಸರ್ಕಾರ ರೈತ (Formers) ರಿಗೆ ವರ್ಷಕ್ಕೆ ಮೂರು ಕಂತುಗಳಲ್ಲಿ ಒಟ್ಟು 6000ರೂ. ಆರ್ಥಿಕ ಸಹಾಯ ನೀಡುತ್ತದೆ. ಪ್ರತಿ ನಾಲ್ಕು ತಿಂಗಳಿಗೊಮ್ಮೆ ರೈತರ (Farmers) ಖಾತೆಗೆ 2000ರೂ. ಅನ್ನು ಸರ್ಕಾರ ಜಮೆ ಮಾಡುತ್ತದೆ. ಪ್ರಧಾನಮಂತ್ರಿ ಕಿಸಾನ್ ಯೋಜನೆಯಡಿಯಲ್ಲಿ ಭಾರತೀಯ ಪ್ರಜೆಗಳಾದ ಎಲ್ಲಾ ಸಣ್ಣ ಮತ್ತು ಅತಿಸಣ್ಣ ರೈತರು ಇದಕ್ಕೆ ಅರ್ಹರಾಗಿರುತ್ತಾರೆ. ಪಿಎಂ ಕಿಸಾನ್ (PM kisan) ಯೋಜನೆಯಡಿ, ಭೂ ಹಿಡುವಳಿದಾರ ರೈತರು ವರ್ಷಕ್ಕೆ 6,000 ರೂಪಾಯಿಗಳ ಭತ್ಯೆಯನ್ನು ಪಡೆಯುತ್ತಾರೆ, ಇದನ್ನು ನಾಲ್ಕು ತಿಂಗಳ ಅಂತರದಲ್ಲಿ ವರ್ಷದಲ್ಲಿ ಮೂರು ಬಾರಿ ವಿತರಿಸಲಾಗುತ್ತದೆ. ಪಿಎಂ ಕಿಸಾನ್ ಯೋಜನೆಗಾಗಿ ಈವರೆಗೆ ಸರ್ಕಾರ 2 ಲಕ್ಷ ಕೋಟಿ ರೂಪಾಯಿಗಳಿಗೂ ಹೆಚ್ಚು ಖರ್ಚು ಮಾಡಿದೆ. ಮೇ 31ರಂದು 11ನೇ ಕಂತಿನ ಹಣವನ್ನು ರೈತರ ಖಾತೆಗೆ ಜಮೆ ಮಾಡಲಾಗಿದೆ. ಇದೀಗ ಅನ್ನದಾತರಿಗೆ ಮತ್ತೊಂದು ಗುಡ್ ನ್ಯೂಸ್​ (Good News) ಕೊಟ್ಟಿದೆ.

ಹಣ ಪಡೆಯೋದಕ್ಕೆ ಬ್ಯಾಂಕ್​ಗೆ ಹೋಗಬೇಕಾಗಿಲ್ಲ!

ಈ ಯೋಜನೆಯಡಿ ಪಡೆದ ಹಣಕ್ಕಾಗಿ ರೈತರು ಹಳ್ಳಿಗಳಿಂದ ನಗರದ ಬ್ಯಾಂಕ್‌ಗಳಿಗೆ ಭೇಟಿ ನೀಡಬೇಕಾಗಿಲ್ಲ. ಇದಕ್ಕಾಗಿ ಅಂಚೆ ಇಲಾಖೆ ಹೊಸ ಯೋಜನೆ ಸಿದ್ಧಪಡಿಸಿದೆ. ಇದರ ಅಡಿಯಲ್ಲಿ ರೈತರ ಮನೆಗಳಿಗೆ ತೆರಳಿ ಕಿಸಾನ್ ಸನ್ಮಾನ ನಿಧಿಯಿಂದ ಹಣ ನೀಡಲಿದ್ದಾರೆ. ಇದಕ್ಕಾಗಿ ಜೂನ್ 13ರವರೆಗೆ ಅಂಚೆ ಇಲಾಖೆ ವಿಶೇಷ ಅಭಿಯಾನ ನಡೆಸುತ್ತಿದೆ. ಅಭಿಯಾನದ ಭಾಗವಾಗಿ, ಪೋಸ್ಟ್‌ಮ್ಯಾನ್‌ಗಳು ಮನೆ ಮನೆಗೆ ತೆರಳಿ ಕೈ ಹಿಡಿಯುವ ಯಂತ್ರದ ಮೇಲೆ ಕೈ ಮುದ್ರೆ ಹಾಕುವ ಮೂಲಕ ರೈತರಿಗೆ ಪಿಎಂ ಕಿಸಾನ್ ಕಂತುಗಳನ್ನು ಹಸ್ತಾಂತರಿಸಲಿದ್ದಾರೆ.

ನಿಮ್ಮ ಮನೆಗೆ ಬರುತ್ತೆ ಕಿಸಾನ್​ ಸನ್ಮಾನ್​ ಹಣ!

ರೈತರ ನಿಧಿಯ ಮೊತ್ತವನ್ನು ರೈತರ ಮನೆಗಳಿಗೆ ತಲುಪಿಸುವ ಜವಾಬ್ದಾರಿಯನ್ನು ಕೇಂದ್ರ ಸರ್ಕಾರ ಅಂಚೆ ಇಲಾಖೆಗೆ ವಹಿಸಿಕೊಂಡಿದೆ. ಇದಕ್ಕಾಗಿ ಭಾರತೀಯ ಅಂಚೆ ಇಲಾಖೆಗೆ ವಿಶೇಷ ಅಧಿಕಾರವನ್ನು ಸರ್ಕಾರ ನೀಡಿದೆ. ವಾಸ್ತವವಾಗಿ, ಇಲ್ಲಿಯವರೆಗೆ, ಬ್ಯಾಂಕ್ ಹೊರತುಪಡಿಸಿ, ರೈತ ಸ್ವತಃ ಅಂಚೆ ಕಚೇರಿಗೆ ಹೋಗಿ ಹಣ ಡ್ರಾ ಮಾಡಬಹುದಾಗಿತ್ತು. ಆದರೆ ಜನರು ಇನ್ನು ಮುಂದೆ ಅಲ್ಲಿಗೆ ಹೋಗಬೇಕಾಗಿಲ್ಲ. ನೀವೂ ಇರುವಲ್ಲಿಯೇ ಈ ಹಣ ನಿಮ್ಮ ಕೈತಲುಪತ್ತೆ.

ಇದನ್ನೂ ಓದಿ: ನೀವು ಇನ್ನೂ PM Kisan ಯೋಜನೆಯಲ್ಲಿ ಇಕೆವೈಸಿ ಅಪ್ಡೇಟ್ ಮಾಡಿಲ್ವಾ? ಲಾಸ್​ ಡೇಟ್​ ಬೇರೆ ಹತ್ರ ಬಂತು!

ವಿಶೇಷ ಅಭಿಯಾನ!

ಈ ಸಂಬಂಧ ಅಂಚೆ ಇಲಾಖೆಯು ಅಂಚೆ ಇಲಾಖೆ ಅಧಿಕಾರಿಗಳಿಗೆ ಆದೇಶ ಹೊರಡಿಸಿದೆ. ಜೂನ್ 13 ರೊಳಗೆ ಅಂಚೆ ಕಚೇರಿ ಪ್ರದೇಶದ ಎಲ್ಲಾ ಪೋಸ್ಟ್‌ಮ್ಯಾನ್‌ಗಳಿಗೆ ಪಾವತಿಗಳನ್ನು ಮಾಡಲಾಗುತ್ತದೆ. ನಂತರ ಪೋಸ್ಟ್‌ಮ್ಯಾನ್ ಹಣವನ್ನು ರೈತರ ಮನೆಗೆ ತಲುಪಿಸುತ್ತಾನೆ. ಈ ಸೌಲಭ್ಯಕ್ಕಾಗಿ ರೈತರಿಂದ ಯಾವುದೇ ಹೆಚ್ಚುವರಿ ಶುಲ್ಕವನ್ನು ವಿಧಿಸಲಾಗುವುದಿಲ್ಲ.  ಪ್ರಧಾನ ಮಂತ್ರಿ ಕಿಸಾನ್ ಸನ್ಮಾನ ನಿಧಿ ಯೋಜನೆಯಡಿ ರೈತರ ಖಾತೆಗೆ 11ನೇ ಕಂತಿನ 2000 ರೂ. ಮೇ 31 ರಂದು ಪ್ರಧಾನಿ ನರೇಂದ್ರ ಮೋದಿ ಅವರು 100 ದಶಲಕ್ಷಕ್ಕೂ ಹೆಚ್ಚು ರೈತರ ಖಾತೆಗಳಿಗೆ ಹಾಕಲಾಗಿದೆ. ಒಟ್ಟು 21 ಸಾವಿರ ಕೋಟಿ ರೂಪಾಯಿ ಜಮೆ ಮಾಡಲಾಗಿದೆ.

ಇದನ್ನೂ ಓದಿ: 11ನೇ ಕಂತಿನ ಹಣ ಖಾತೆಗೆ ಬಂದಿಲ್ವಾ? ಹಾಗಿದ್ರೆ ನೀವು ಹೀಗ್​ ದೂರು ನೀಡ್ಬಹುದು

ಆದರೆ, ಇನ್ನೂ ಕೆಲ ರೈತರ ಖಾತೆಗೆ ಹಣ ಬಂದಿಲ್ಲ. ಹಲವಾರು ಕಾರಣಗಳಿಂದ ಅದರ ಕಂತು ಸ್ಥಗಿತಗೊಂಡಿದೆ ಎಂದು ಸರ್ಕಾರ ಹೇಳಿದೆ. ಜೊತೆಗೆ ಈ ಸಮಸ್ಯೆಯನ್ನು ಬಗೆಹರಿಸಸುವ ಕೆಲಸಗಳು ನಡೆಯುತ್ತಿವೆ ಎಂದು ಹೇಳಿದೆ. ಇನ್ನೂ ಕೆಲ ರೈತರಿಗೆ 10 ಕಂತು ಮರುಪಾವತಿ ಮಾಡುವಂತೆ ನೋಟಿಸ್​ ನೀಡಲಾಗಿದೆ. ಹಲವಾರು ರೈತರು ಯೋಜನೆಗೆ ಅರ್ಹರಲ್ಲ ಎಂದು ತಿಳಿದಿದ್ದರೂ ಯೋಜನೆಯ ಹಣ ಪಡೆದಿದ್ದಾರೆ. ಅಂತಹ ರೈತರಿಗೆ ಯೋಜನೆಯಡಿ ಪಡೆದ ಹಣವನ್ನು ಹಿಂದಿರುಗಿಸುವಂತೆ ಸರ್ಕಾರ ನೋಟಿಸ್ ಜಾರಿ ಮಾಡಿದೆ.
Published by:Vasudeva M
First published: