• Home
 • »
 • News
 • »
 • business
 • »
 • PM Kisan Yojana: ಪಿಎಂ ಕಿಸಾನ್ ನಿಧಿ ಯೋಜನೆಯ ಹಣ ಇನ್ನೂ ನಿಮಗೆ ಸಿಕ್ಕಿಲ್ವಾ? ಹೀಗೆ ಮಾಡಿ

PM Kisan Yojana: ಪಿಎಂ ಕಿಸಾನ್ ನಿಧಿ ಯೋಜನೆಯ ಹಣ ಇನ್ನೂ ನಿಮಗೆ ಸಿಕ್ಕಿಲ್ವಾ? ಹೀಗೆ ಮಾಡಿ

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

PM Kisan Samman Nidhi Helpline: ಪ್ರಧಾನಮಂತ್ರಿ ಕಿಸಾನ್ ಸಮ್ಮಾನ್ ಯೋಜನೆಯ ₹2000 ಹಣ ನಿಮ್ಮ ಖಾತೆಗೆ ಜಮಾ ಆಗದೆ ಇದ್ದರೆ ಮೊದಲು ನಿಮ್ಮ ಪ್ರದೇಶದ ಲೆಕ್ಕಾಧಿಕಾರಿ ಹಾಗೂ ಕೃಷಿ ಅಧಿಕಾರಿಯನ್ನು ನೀವು ಸಂಪರ್ಕಿಸಬೇಕು.. ಒಂದು ವೇಳೆ ಇವರಿಂದ ಸೂಕ್ತ ಸ್ಪಂದನೆ ಬರೆದಿದ್ದರೆ, ಇದಕ್ಕೆ ಸಂಬಂಧಿಸಿದಂತೆ ಇರುವ ಸಹಾಯವಾಣಿಗೆ ನೀವು ಕರೆ ಮಾಡಬಹುದು

ಮುಂದೆ ಓದಿ ...
 • Share this:

  ಪಿಎಂ ಕಿಸಾನ್ ಸಮ್ಮಾನ್(PM Kisan Samna Yojana) ನಿಧಿ ಯೋಜನೆಯ 10ನೇ ಕಂತಿನ ಹಣವನ್ನು(Money) ಪ್ರಧಾನಿ ನರೇಂದ್ರ ಮೋದಿ (Narendra Modi)ಬಿಡುಗಡೆ ಮಾಡಿದ್ದಾರೆ. ನರೇಂದ್ರ ಮೋದಿ 2022ರ ಹೊಸ ವರ್ಷದ(New Year) ಮೊದಲ ದಿನವೇ ರೈತರಿಗೆ ಸಿಹಿ ಸುದ್ದಿ ನೀಡಿದ್ದಾರೆ. ಪ್ರಧಾನಮಂತ್ರಿ ಕಿಸಾನ್​ ನಿಧಿ ಯೋಜನೆಯಡಿ ಕೇಂದ್ರ ಸರ್ಕಾರ ವರ್ಷಕ್ಕೆ 6000 ರೂ. ಹಣವನ್ನು ಅರ್ಹ ಫಲಾನುಭವಿ ರೈತರ ಖಾತೆಗೆ ಜಮಾ ಮಾಡುತ್ತದೆ. ಅದರ 9 ಕಂತುಗಳ ಹಣವನ್ನು ರೈತರು ಇದುವರೆಗೆ ಸ್ವೀಕರಿಸಿದ್ದರು.ಈಗ 10 ನೇ ಕಂತಿನ ಹಣವನ್ನು ಪ್ರಧಾನಿ ನರೇಂದ್ರ ಮೋದಿ ರೈತರ ಖಾತೆಗಳಿಗೆ ಜಮಾ ಮಾಡಿದ್ದಾರೆ..


  ಇನ್ನು ಪ್ರಧಾನಿ ಮೋದಿ ಸುಮಾರು 351 ರೈತ ಉತ್ಪಾದಕ ಸಂಸ್ಥೆಗಳಿಗೆ (ಎಫ್‌ಪಿಒ) 14 ಕೋಟಿ ರೂ.ಗೂ ಹೆಚ್ಚು ಇಕ್ವಿಟಿ ಅನುದಾನವನ್ನು ಪ್ರಧಾನಿ ಬಿಡುಗಡೆ ಮಾಡಿದ್ದಾರೆ. ಇದರಿಂದ ಸುಮಾರು 1.24 ಲಕ್ಷಕ್ಕೂ ಹೆಚ್ಚು ರೈತರಿಗೆ ಪ್ರಯೋಜನವಾಗಲಿದೆ.ಯೋಜನೆಯಡಿ ದೇಶದ 10 ಕೋಟಿ ರೈತರ ಬ್ಯಾಂಕ್​ ಖಾತೆಗೆ ತಲಾ 2 ಸಾವಿರ ರೂ.ಜಮೆಯಾಗಿದೆ. ವಿಡಿಯೋ ಕಾನ್ಫರೆನ್ಸ್‌ ಮೂಲಕ ಇಂದು ಕಿಸಾನ್ ಸಮ್ಮಾನ್​ ಯೋಜನೆಯ 10ನೇ ಕಂತನ್ನು ಬಿಡುಗಡೆ ಮಾಡಿರುವುದು ಮಾತ್ರವಲ್ಲದೆ, ಪ್ರಧಾನಿ ಮೋದಿ 351 ರೈತ ಉತ್ಪಾದನಾ ಸಂಸ್ಥೆಗಳಿಗೆ 14 ಕೋಟಿ ರೂಪಾಯಿ ಇಕ್ವಿಟಿ ಅನುದಾನ ಬಿಡುಗಡೆ ಮಾಡಿದ್ದಾರೆ. ಇದರಿಂದ ಸುಮಾರು 1.24 ಲಕ್ಷ ರೈತರಿಗೆ ಅನುಕೂಲವಾಗಿದೆ. ಒಂದು ವೇಳೆ ಪ್ರಧಾನಮಂತ್ರಿ ಕಿಸಾನ್​ ನಿಧಿಯ ಹಣ ನಿಮ್ಮ ಖಾತೆಗೆ ಜಮಾ ಆಗಿಲ್ಲ ಅಂದರೆ ಕೂಡಲೇ ಈ ಕೆಲಸ ಮಾಡಿ.


  ಇದನ್ನೂ ಓದಿ: ಇನ್ನೂ ಯಾಕೆ ಜಮೆ ಆಗಿಲ್ಲ ರೈತರ ಖಾತೆಗೆ 10ನೇ ಕಂತು? ಅಕೌಂಟಿಗೆ ಹಣ ಯಾವಾಗ ಬರುತ್ತೆ?


  ಪಿಎಂ ಕಿಸಾನ್​ ನಿಧಿಯ ಹಣ ನಿಮ್ಮ ಖಾತೆಗೆ ಬಂದಿದ್ದೀಯಾ ಎಂದು ಕೂಡಲೇ ಪರಿಶೀಲಿಸಿ


  ಪಿಎಂ ಕಿಸಾನ್​ ನಿಧಿಯ ಯೋಜನೆಯಡಿಯಲ್ಲಿ ಪ್ರತಿ ರೈತರ ಖಾತೆಗೆ 2000 ರೂ. ಇದರ ಅಡಿಯಲ್ಲಿ, 20 ಸಾವಿರ ಕೋಟಿ ರೂಪಾಯಿಗಳ ಮೊತ್ತವನ್ನು ವರ್ಗಾವಣೆ ಮಾಡುವ ಮೂಲಕ 10 ಕೋಟಿಗೂ ಹೆಚ್ಚು ರೈತ ಕುಟುಂಬಗಳಿಗೆ ಲಾಭವಾಗಲಿದೆ. ಈ ಯೋಜನೆಯಡಿ ಹಣ ಸಿಗದೇ ಇದ್ದಲ್ಲಿ ತಕ್ಷಣವೇ ಕೇಂದ್ರ ಕೃಷಿ ಸಚಿವಾಲಯಕ್ಕೆ ದೂರು ನೀಡಬಹುದು.


  ಕೃಷಿ ಸಚಿವಾಲಯಕ್ಕೆ ದೂರು ನೀಡುವುದು ಹೇಗೆ..?


  ಪ್ರಧಾನಮಂತ್ರಿ ಕಿಸಾನ್ ಸಮ್ಮಾನ್ ಯೋಜನೆಯ ₹2000 ಹಣ ನಿಮ್ಮ ಖಾತೆಗೆ ಜಮಾ ಆಗದೆ ಇದ್ದರೆ ಮೊದಲು ನಿಮ್ಮ ಪ್ರದೇಶದ ಲೆಕ್ಕಾಧಿಕಾರಿ ಹಾಗೂ ಕೃಷಿ ಅಧಿಕಾರಿಯನ್ನು ನೀವು ಸಂಪರ್ಕಿಸಬೇಕು.. ಒಂದು ವೇಳೆ ಇವರಿಂದ ಸೂಕ್ತ ಸ್ಪಂದನೆ ಬರೆದಿದ್ದರೆ, ಇದಕ್ಕೆ ಸಂಬಂಧಿಸಿದಂತೆ ಇರುವ ಸಹಾಯವಾಣಿಗೆ ನೀವು ಕರೆ ಮಾಡಬಹುದು. ಸೋಮವಾರದಿಂದ ಶುಕ್ರವಾರದವರೆಗೆ
  PM-KISAN Help Desk ಗೆ ಕರೆ ಮಾಡಿ ನಿಮ್ಮ ಖಾತೆಗೆ ಹಣ ಜಮಾವಣೆ ಆಗಿಲ್ಲ ಎಂಬ ಮಾಹಿತಿಯನ್ನು ನೀಡಬಹುದು.. ಅಲ್ಲದೆ ನಿಮ್ಮ ಸ್ಥಳೀಯ ಕೃಷಿ ಅಧಿಕಾರಿ ನಿಮಗೆ ಸ್ಪಂದನೆ ಮಾಡಿಲ್ಲ ಎಂಬ ದೂರನ್ನು ಸಹ ನೀಡಬಹುದು.. ಇದನ್ನು ಹೊರತುಪಡಿಸಿದರೆ ನೀವು pmkisan-ict@gov.in ಇ-ಮೇಲ್ ಮೂಲಕವೂ ಸಂಪರ್ಕಿಸಬಹುದು. ಇನ್ನೂ ಕೆಲಸ ಮಾಡದಿದ್ದರೆ 011-23381092 (ನೇರ ಸಹಾಯವಾಣಿ) ಸಂಖ್ಯೆಗೆ ಕರೆ ಮಾಡಿ ನಿಮ್ಮ ಖಾತೆಗೆ ಹಣ ಜಮಾವಣೆ ಆಗದೇ ಇರುವ ವಿಷಯವನ್ನು ತಿಳಿಸಬಹುದು.


  ಕೃಷಿ ಸಚಿವಾಲಯಕ್ಕೆ ದೂರು ನೀಡಿ..


  ಕೃಷಿ ಸಚಿವಾಲಯದ ಪ್ರಕಾರ ಪ್ರಧಾನಮಂತ್ರಿ ಕಿಸಾನ್ ಸಮ್ಮಾನ್ ನಿಧಿ ಯೋಜನೆ ರೈತರ ಬ್ಯಾಂಕ್ ಖಾತೆಗೆ ನೇರವಾಗಿ ತಲುಪಲಿದೆ.. ಒಂದು ವೇಳೆ ಹಣ ರೈತರ ಬ್ಯಾಂಕ್ ಖಾತೆಗೆ ನೇರವಾಗಿ ತಲುಪದಿದ್ದರೆ ಅದನ್ನು ತಕ್ಷಣವೇ ಪರಿಹಾರ ಮಾಡಲಾಗುವುದು. ನವ ರೈತರ ಖಾತೆಗೆ ಹಣ ಬಂದಿಲ್ಲ ಅದಕ್ಕೆ ಯಾವ ಸಮಸ್ಯೆ ಉಂಟಾಗಿದೆ ಎಂಬುದನ್ನು ತಿಳಿದು ಕೊಳ್ಳಲಾಗುವುದು.. ಒಂದು ವೇಳೆ ತಾಂತ್ರಿಕ ಸಮಸ್ಯೆ ಕಂಡುಬಂದರೆ ತಾಂತ್ರಿಕ ಸಮಸ್ಯೆಯನ್ನು ಸರಿಪಡಿಸಿರಿ ಫಲಾನುಭವಿ ರೈತರಿಗೆ ಹಣ ಜಮಾವಣೆ ಮಾಡಲಾಗುವುದು.


  ನೀವು ಕೂಡ ಇಲ್ಲಿ ಸಂಪರ್ಕಿಸಬಹುದು


  ಈ ಯೋಜನೆಯ ಸ್ಥಿತಿಯನ್ನು ನೀವೇ ಪರಿಶೀಲಿಸಿ ಮತ್ತು ಅರ್ಜಿ ಸಲ್ಲಿಸಬಹುದು. ನೀವು ಯೋಜನೆಯ ರೈತ ಕಲ್ಯಾಣ ವಿಭಾಗದಲ್ಲಿ ಸಂಪರ್ಕಿಸಬಹುದು. ದೆಹಲಿ(Delhi)ಯಲ್ಲಿರುವ ಅದರ ಫೋನ್ ಸಂಖ್ಯೆ 011-23382401 ಆಗಿದ್ದರೆ, ಅದರ ಇ-ಮೇಲ್ ಐಡಿ (pmkisan-hqrs@gov.in).


  ಇದನ್ನೂ ಓದಿ: ಫಲಾನುಭವಿಗಳ ಪಟ್ಟಿಯಲ್ಲಿ ನಿಮ್ಮ ಹೆಸ್ರು ಇಲ್ಲವೇ? ಹಾಗಿದ್ರೆ ಈ ಸಂಖ್ಯೆಗೆ ಕರೆ ಮಾಡಿ


  ಸಚಿವಾಲಯವನ್ನು ಸಂಪರ್ಕಿಸುವ ಸೌಲಭ್ಯ


  PM ಕಿಸಾನ್ ಟೋಲ್ ಫ್ರೀ ಸಂಖ್ಯೆ: 18001155266
  PM ಕಿಸಾನ್ ಸಹಾಯವಾಣಿ ಸಂಖ್ಯೆ:155261
  PM ಕಿಸಾನ್ ಸ್ಥಿರ ದೂರವಾಣಿ ಸಂಖ್ಯೆಗಳು: 011-23381092, 23382401
  PM ಕಿಸಾನ್‌ನ ಹೊಸ ಸಹಾಯವಾಣಿ: 011-24300606
  PM ಕಿಸಾನ್ ಮತ್ತೊಂದು ಸಹಾಯವಾಣಿಯನ್ನು ಹೊಂದಿದೆ: 0120-6025109

  Published by:ranjumbkgowda1 ranjumbkgowda1
  First published: