ನೀವು ಇನ್ನೂ PM Kisan ಯೋಜನೆಯಲ್ಲಿ ಇಕೆವೈಸಿ ಅಪ್ಡೇಟ್ ಮಾಡಿಲ್ವಾ? ಲಾಸ್​ ಡೇಟ್​ ಬೇರೆ ಹತ್ರ ಬಂತು!

ಪಿಎಂ ಕಿಸಾನ್ 11ನೇ ಕಂತು ಬಿಡುಗಡೆಯಾದ ನಂತರ ಈ ಫಲಾನುಭವಿ ರೈತರಿಗೆ ತಲಾ 2,000 ರೂಪಾಯಿಗಳ ನಾಲ್ಕು ತಿಂಗಳ ಅನುದಾನವನ್ನು ನೀಡಲಾಯಿತು. ಪಿಎಂ ಕಿಸಾನ್ 11ನೇ ಕಂತಿನ ಬಿಡುಗಡೆಯ ನಂತರ, ಕೇಂದ್ರವು ಇ-ಕೆವೈಸಿ ಪ್ರಕ್ರಿಯೆಯನ್ನು ಪೂರ್ಣಗೊಳಿಸಲು ಕೊನೆಯ ದಿನಾಂಕವನ್ನು ಮತ್ತೊಮ್ಮೆ ವಿಸ್ತರಿಸಿದೆ ನೋಡಿ.

ಪ್ರಧಾನಮಂತ್ರಿ ಕಿಸಾನ್ ಸಮ್ಮಾನ್ ನಿಧಿ ಅಥವಾ ಪಿಎಂ ಕಿಸಾನ್ ಯೋಜನೆ

ಪ್ರಧಾನಮಂತ್ರಿ ಕಿಸಾನ್ ಸಮ್ಮಾನ್ ನಿಧಿ ಅಥವಾ ಪಿಎಂ ಕಿಸಾನ್ ಯೋಜನೆ

 • Share this:
ನೀವು ಪ್ರಧಾನಮಂತ್ರಿ ಕಿಸಾನ್ ಯೋಜನೆಯ (Prime Minister Kisan Project) ಫಲಾನುಭವಿ ರೈತರಾಗಿದ್ದರೆ, ಈ ತಿಂಗಳ ಆರಂಭದಲ್ಲಿ ಪ್ರಧಾನಮಂತ್ರಿ ಕಿಸಾನ್ ಸಮ್ಮಾನ್ ನಿಧಿ ಅಥವಾ ಪಿಎಂ ಕಿಸಾನ್ ಯೋಜನೆಯ 11ನೇ ಕಂತನ್ನು ಕೇಂದ್ರ ಸರ್ಕಾರ (Central government) ಈಗಾಗಲೇ ಬಿಡುಗಡೆ ಮಾಡಿದ್ದು ನಿಮಗೆ ಗೊತ್ತಿರುತ್ತದೆ. ಏಕೆಂದರೆ ಪಿಎಂ ಕಿಸಾನ್ 11ನೇ ಕಂತಿನ ಬಿಡುಗಡೆಯ ನಂತರ, 10 ಕೋಟಿಗೂ ಹೆಚ್ಚು ರೈತರಿಗೆ ಇದರ ಪ್ರಯೋಜನ ಲಭಿಸಿದೆ ಎಂದು ಹೇಳಬಹುದು. ಪ್ರಧಾನಿ ನರೇಂದ್ರ ಮೋದಿ (Narendra Modi) ಅವರು ಮಂಗಳವಾರ ಶಿಮ್ಲಾದಲ್ಲಿ ನಡೆದ ಮೆಗಾ ರ್‍ಯಾಲಿಯಲ್ಲಿ 10 ಕೋಟಿಗೂ ಹೆಚ್ಚು ಫಲಾನುಭವಿ ರೈತರಿಗೆ (Farmers) 21,000 ಕೋಟಿ ರೂಪಾಯಿಗಳಿಗೂ ಹೆಚ್ಚು ಹಣವನ್ನು ಬಿಡುಗಡೆ ಮಾಡಿದರು.

ಪಿಎಂ ಕಿಸಾನ್ 11ನೇ ಕಂತು ಬಿಡುಗಡೆಯಾದ ನಂತರ ಈ ಫಲಾನುಭವಿ ರೈತರಿಗೆ ತಲಾ 2,000 ರೂಪಾಯಿಗಳ ನಾಲ್ಕು ತಿಂಗಳ ಅನುದಾನವನ್ನು ನೀಡಲಾಯಿತು. ಪಿಎಂ ಕಿಸಾನ್ 11ನೇ ಕಂತಿನ ಬಿಡುಗಡೆಯ ನಂತರ, ಕೇಂದ್ರವು ಇ-ಕೆವೈಸಿ ಪ್ರಕ್ರಿಯೆಯನ್ನು ಪೂರ್ಣಗೊಳಿಸಲು ಕೊನೆಯ ದಿನಾಂಕವನ್ನು ಮತ್ತೊಮ್ಮೆ ವಿಸ್ತರಿಸಿದೆ ನೋಡಿ.

ಪಿಎಂ ಕಿಸಾನ್ ಇ-ಕೆವೈಸಿ ಗಡುವು ವಿಸ್ತರಣೆ
ಮೊದಲು ನೀಡಿದ್ದಂತಹ ಮೇ 31 ರ ಗಡುವು ಈಗಾಗಲೇ ಮುಗಿದಿದ್ದರಿಂದ ಮತ್ತೊಮ್ಮೆ ರೈತರಿಗೆ ಅವಕಾಶ ಕಲ್ಪಿಸಿಕೊಡುವ ದೃಷ್ಟಿಯಿಂದ ಪಿಎಂ ಕಿಸಾನ್ ಫಲಾನುಭವಿ ರೈತರಿಗೆ ಇಕೆವೈಸಿಯನ್ನು ಪೂರ್ಣಗೊಳಿಸುವ ಗಡುವನ್ನು ಸರ್ಕಾರ ಈಗ ಮತ್ತಷ್ಟು ವಿಸ್ತರಿಸಿದೆ. ಪಿಎಂ ಕಿಸಾನ್ ವೆಬ್‌ಸೈಟ್ ಪ್ರಕಾರ "ಎಲ್ಲಾ ಪಿಎಂ ಕಿಸಾನ್ ಫಲಾನುಭವಿಗಳಿಗೆ ಇಕೆವೈಸಿಯ ಗಡುವನ್ನು ಜುಲೈ 31, 2022 ರವರೆಗೆ ವಿಸ್ತರಿಸಲಾಗಿದೆ.

pmkisan.gov.in ವೆಬ್ಸೈಟ್ ನಲ್ಲಿ ಪಿಎಂ ಕಿಸಾನ್ ಇಕೆವೈಸಿ ಪ್ರಕ್ರಿಯೆಯನ್ನು ಪೂರ್ಣಗೊಳಿಸುವುದು ಹೇಗೆ?

 1.  ಮೊದಲು, ಪಿಎಂ ಕಿಸಾನ್ ಅಧಿಕೃತ ವೆಬ್ ಪುಟಕ್ಕೆ ಭೇಟಿ ನೀಡಿ.

 2. https://pmkisan.gov.in/ನಂತರ ಮುಖಪುಟದ ಬಲಭಾಗದಲ್ಲಿ ಲಭ್ಯವಿರುವ ಇಕೆವೈಸಿ ಆಯ್ಕೆಯ ಮೇಲೆ ಕ್ಲಿಕ್ ಮಾಡಿರಿ.

 3. ನೀವು ಇಕೆವೈಸಿ ಪುಟವನ್ನು ತೆರೆದ ನಂತರ ಅಲ್ಲಿ ನಿಮ್ಮ ಆಧಾರ್ ಕಾರ್ಡ್ ಸಂಖ್ಯೆ, ಅಲ್ಲಿ ಕಾಣಿಸುವ ಕೋಡ್ ಅನ್ನು ನಮೂದಿಸಿ ಮತ್ತು ‘ಸರ್ಚ್’ ಮೇಲೆ ಕ್ಲಿಕ್ ಮಾಡಿರಿ.

 4. ನಿಮ್ಮ ಆಧಾರ್ ಕಾರ್ಡ್ ನೊಂದಿಗೆ ಲಿಂಕ್ ಮಾಡಲಾದ ನಿಮ್ಮ ಮೊಬೈಲ್ ಸಂಖ್ಯೆಯನ್ನು ಅಲ್ಲಿ ನಮೂದಿಸಿರಿ.

 5. ಎಲ್ಲಾ ಅಗತ್ಯ ಮಾಹಿತಿಯನ್ನು ನೀಡಿದ ನಂತರ ‘ಒಟಿಪಿ ಪಡೆಯಿರಿ' ಎಂಬ ಆಯ್ಕೆಯ ಮೇಲೆ ಕ್ಲಿಕ್ ಮಾಡಿ. ನೀವು ಈ ಹಿಂದೆ ನಮೂದಿಸಿದ ಮೊಬೈಲ್ ಸಂಖ್ಯೆಗೆ ಒಂದು ಬಾರಿಯ ಪಾಸ್ ವರ್ಡ್ ಅನ್ನು ನೀವು ಪಡೆಯುತ್ತೀರಿ. ಈಗ, ಈ ಒಟಿಪಿಯನ್ನು ನಿರ್ದಿಷ್ಟ ಪೆಟ್ಟಿಗೆಯಲ್ಲಿ ನಮೂದಿಸಿರಿ.

 6.  ಇದರ ನಂತರ ನಿಮ್ಮ ಇಕೆವೈಸಿ ಪ್ರಕ್ರಿಯೆಯು ಪೂರ್ಣಗೊಳ್ಳುತ್ತದೆ. ನೀವು ಜುಲೈ 31 ರೊಳಗೆ ಇಕೆವೈಸಿ ಪ್ರಕ್ರಿಯೆಯನ್ನು ಪೂರ್ಣಗೊಳಿಸದಿದ್ದರೆ, ಪಿಎಂ ಕಿಸಾನ್ ಯೋಜನೆಯಡಿಯಲ್ಲಿ ನಿಮಗೆ ಲಭಿಸಬೇಕಾದ ಮುಂದಿನ ಕಂತನ್ನು ಪಡೆಯಲು ನೀವು ಅರ್ಹರಾಗುವುದಿಲ್ಲ.


ಇದನ್ನೂ ಓದಿ:  PM Kisan Scheme: 11ನೇ ಕಂತಿನ ಹಣ ಖಾತೆಗೆ ಬಂದಿಲ್ವಾ? ಹಾಗಿದ್ರೆ ನೀವು ಹೀಗ್​ ದೂರು ನೀಡ್ಬಹುದು

ಪಿಎಂ ಕಿಸಾನ್ ಫಲಾನುಭವಿ ಸ್ಟೇಟಸ್ ಅನ್ನು ಪರಿಶೀಲಿಸುವುದು ಹೇಗೆ?

 1. ಮೊದಲಿಗೆ pmkisan.gov.in ವೆಬ್‌ಸೈಟ್ ಗೆ ಹೋಗಿರಿ..

 2. ನಂತರ ಮುಖಪುಟದಲ್ಲಿ ನೀವು ‘ಫಾರ್ಮರ್ಸ್ ಕಾರ್ನರ್’ ಎಂಬ ಪ್ರತ್ಯೇಕ ವಿಭಾಗವನ್ನು ನೋಡುತ್ತೀರಿ.

 3.  ರೈತರ ಕಾರ್ನರ್ ವಿಭಾಗದಲ್ಲಿ, 'ಫಲಾನುಭವಿ ಸ್ಥಿತಿ' ಎಂಬ ಟ್ಯಾಬ್ ಇದೆ. ಅದರ ಮೇಲೆ ಕ್ಲಿಕ್ ಮಾಡಿರಿ.

 4. ಪರ್ಯಾಯವಾಗಿ, ನೀವು ನೇರವಾಗಿ ಲಿಂಕ್ https://pmkisan.gov.in/BeneficiaryStatus.aspx ಗೆ ಸಹ ಹೋಗಬಹುದು.

 5.  ನೀವು ಅಗತ್ಯವಿರುವ ಪುಟವನ್ನು ತೆರೆದ ನಂತರ ನಿಮ್ಮ ಆಧಾರ್ ಸಂಖ್ಯೆ, ಪಿಎಂ ಕಿಸಾನ್ ಖಾತೆ ಸಂಖ್ಯೆ ಅಥವಾ ನಿಮ್ಮ ನೋಂದಾಯಿತ ಮೊಬೈಲ್ ಸಂಖ್ಯೆ ಯಾವುದಾದರೂ ಒಂದು ವಿವರವನ್ನು ಅಲ್ಲಿ ನಮೂದಿಸಿರಿ.

 6. ಈ ವಿವರಗಳನ್ನು ಭರ್ತಿ ಮಾಡಿದ ನಂತರ, ಗೆಟ್ ಡೇಟಾ ಆಯ್ಕೆಯನ್ನು ಕ್ಲಿಕ್ ಮಾಡಿ. ಆಗ ನೀವು ಫಲಾನುಭವಿ ಸ್ಟೇಟಸ್ ಅನ್ನು ನೋಡಲು ಸಾಧ್ಯವಾಗುತ್ತದೆ.


ಇದನ್ನೂ ಓದಿ: MS Dhoni: ಅನ್ನದಾತರೇ ಚಿಂತೆ ಬಿಡಿ, ನಿಮ್ಮ ಹಿಂದೆ ನಿಂತಿದ್ದಾರೆ ಧೋನಿ! ಇದಕ್ಕೆ ನೋಡಿ ಕ್ರಿಕೆಟ್ ಆಚೆಗೂ ಇಷ್ಟವಾಗೋದು ಮಾಹಿ

ಪ್ರಧಾನಮಂತ್ರಿ ಕಿಸಾನ್ ಯೋಜನೆಯಡಿಯಲ್ಲಿ ಭಾರತೀಯ ಪ್ರಜೆಗಳಾದ ಎಲ್ಲಾ ಸಣ್ಣ ಮತ್ತು ಅತಿಸಣ್ಣ ರೈತರು ಇದಕ್ಕೆ ಅರ್ಹರಾಗಿರುತ್ತಾರೆ. ಪಿಎಂ ಕಿಸಾನ್ ಯೋಜನೆಯಡಿ, ಭೂ ಹಿಡುವಳಿದಾರ ರೈತರು ವರ್ಷಕ್ಕೆ 6,000 ರೂಪಾಯಿಗಳ ಭತ್ಯೆಯನ್ನು ಪಡೆಯುತ್ತಾರೆ, ಇದನ್ನು ನಾಲ್ಕು ತಿಂಗಳ ಅಂತರದಲ್ಲಿ ವರ್ಷದಲ್ಲಿ ಮೂರು ಬಾರಿ ವಿತರಿಸಲಾಗುತ್ತದೆ. ಪಿಎಂ ಕಿಸಾನ್ ಯೋಜನೆಗಾಗಿ ಈವರೆಗೆ ಸರ್ಕಾರ 2 ಲಕ್ಷ ಕೋಟಿ ರೂಪಾಯಿಗಳಿಗೂ ಹೆಚ್ಚು ಖರ್ಚು ಮಾಡಿದೆ.
Published by:Ashwini Prabhu
First published: