PM Kisan Yojana: ಈ ಪ್ರಕ್ರಿಯೆ ಇಲ್ಲದೇ ನಿಮಗೆ 10ನೇ ಕಂತು ಸಿಗಲ್ಲ, ತಕ್ಷಣ ಏನು ಮಾಡಬೇಕು ಗೊತ್ತಾ?

ಪ್ರಧಾನ ಮಂತ್ರಿ ಕಿಸಾನ್ ನಿಧಿ ಯೋಜನೆಯ (PM Kisan Scheme) 10 ನೇ ಕಂತುಗಾಗಿ ಕಾಯುತ್ತಿರುವ 12 ಕೋಟಿಗೂ ಹೆಚ್ಚು ಫಲಾನುಭವಿ ರೈತರಿಗೆ ಸಂಬಂಧಿಸಿದ ಸುದ್ದಿ ಇದಾಗಿದೆ. ಕೇಂದ್ರದ ಮೋದಿ ಸರ್ಕಾರವು ಪ್ರಧಾನ ಮಂತ್ರಿ ಕಿಸಾನ್ ಯೋಜನೆ 2021 ರಲ್ಲಿ ದೊಡ್ಡ ಬದಲಾವಣೆಯನ್ನು ಮಾಡಿದೆ.

ಪಿಎಂ ಕಿಸಾನ್ ಯೋಜನೆ

ಪಿಎಂ ಕಿಸಾನ್ ಯೋಜನೆ

  • Share this:
ಪಿಎಂ ಕಿಸಾನ್ ಯೋಜನೆ: ಪ್ರಧಾನ ಮಂತ್ರಿ ಕಿಸಾನ್ ನಿಧಿ ಯೋಜನೆಯ (PM Kisan Scheme) 10 ನೇ ಕಂತುಗಾಗಿ ಕಾಯುತ್ತಿರುವ 12 ಕೋಟಿಗೂ ಹೆಚ್ಚು ಫಲಾನುಭವಿ ರೈತರಿಗೆ ಸಂಬಂಧಿಸಿದ ಸುದ್ದಿ ಇದಾಗಿದೆ. ಕೇಂದ್ರದ ಮೋದಿ ಸರ್ಕಾರವು ಪ್ರಧಾನ ಮಂತ್ರಿ ಕಿಸಾನ್ ಯೋಜನೆ 2021 ರಲ್ಲಿ ದೊಡ್ಡ ಬದಲಾವಣೆಯನ್ನು ಮಾಡಿದೆ. ನೀವು ಇ-ಕೆವೈಸಿ (E-KYC) ಪೂರ್ಣಗೊಳಿಸಿದಾಗ ಮಾತ್ರ ಪಿಎಂ ಕಿಸಾನ್ (PM KISAN) ಯೋಜನೆಯ ಫಲಾನುಭವಿ ರೈತರಿಗೆ ಮುಂದಿನ ಕಂತು ಅಂದರೆ 10ನೇ ಕಂತಿನ ಹಣ (10th Installment Money)  ಸಿಗುತ್ತದೆ. ಹೌದು, ಸರ್ಕಾರ ಈ ಯೋಜನೆಯಲ್ಲಿ ಈಗ ಇ-ಕೆವೈಸಿ ಕಡ್ಡಾಯ ಮಾಡಲಾಗಿದೆ. ಈ ಪ್ರಕ್ರಿಯೆ ಪೂರ್ಣ ಮಾಡದಿದ್ರೆ ನಿಮ್ಮ 10ನೇ ಕಂತು ಸ್ಥಗಿತಗೊಳ್ಳಬಹುದು.

ಕೇಂದ್ರ ಸರ್ಕಾರವು ನೀಡಿದ ಮಾಹಿತಿಯ ಪ್ರಕಾರ, ಡಿಸೆಂಬರ್ 15, 2021 ರೊಳಗೆ ನೀವು ಪಿಎಂ ಕಿಸಾನ್ ಸಮ್ಮಾನ್ ನಿಧಿ ಯೋಜನೆಯ 10 ನೇ ಕಂತಿಗೆ ಹಣವನ್ನು ಪಡೆಯುತ್ತೀರಿ. ಈ ಬಾರಿ ಕ್ರಿಸ್‌ಮಸ್‌ಗೂ ಮುನ್ನ ರೈತರ ಖಾತೆಗೆ ಹಣ ಜಮಾ ಆಗಲಿದೆ.

ಪ್ರಕ್ರಿಯೆ ಏನು ಗೊತ್ತಾ?

ಆಧಾರ್ ಆಧಾರಿತ OTP ದೃಢೀಕರಣಕ್ಕಾಗಿ ಕಿಸಾನ್ ಕಾರ್ನರ್‌ನಲ್ಲಿರುವ eKYC ಆಯ್ಕೆಯನ್ನು ಕ್ಲಿಕ್ ಮಾಡಿ ಮತ್ತು ಬಯೋಮೆಟ್ರಿಕ್ ದೃಢೀಕರಣಕ್ಕಾಗಿ ಹತ್ತಿರದ CSC ಕೇಂದ್ರಗಳನ್ನು ಸಂಪರ್ಕಿಸಿ ಎಂದು ಪೋರ್ಟಲ್ ಹೇಳುತ್ತದೆ. ನಿಮ್ಮ ಮೊಬೈಲ್, ಲ್ಯಾಪ್‌ಟಾಪ್ ಅಥವಾ ಕಂಪ್ಯೂಟರ್ ಸಹಾಯದಿಂದ ನೀವು ಅದನ್ನು ಮನೆಯಲ್ಲಿಯೇ ಕುಳಿತು ಇ-ಕೆವೈಸಿ ಪ್ರಕ್ರಿಯೆಯನ್ನು ಪೂರ್ಣಗೊಳಿಸಬಹುದಾಗಿದೆ.

* ಇದಕ್ಕಾಗಿ, ನೀವು ಮೊದಲು https://pmkisan.gov.in/ ಪೋರ್ಟಲ್‌ಗೆ ಹೋಗಿ.

* ಬಲಭಾಗದಲ್ಲಿ ನೀವು ಅಂತಹ ಟ್ಯಾಬ್ಗಳನ್ನು ಕಾಣಬಹುದು. ಮೇಲ್ಭಾಗದಲ್ಲಿ ನೀವು ಇಕೆವೈಸಿ ಬರೆದಿರುವುದನ್ನು ಕಾಣಬಹುದು. ಅದರ ಮೇಲೆ ಕ್ಲಿಕ್ ಮಾಡಿ.

ಇದನ್ನೂ ಓದಿ:  ಮಾರುಕಟ್ಟೆಯಲ್ಲಿ 2 ಸಾವಿರ ರೂಪಾಯಿ ನೋಟು ಸಿಗುತ್ತಿಲ್ಲವೇ? ಅದಕ್ಕೆ ಕಾರಣ ಇಲ್ಲಿದೆ

ಈ ರೈತರ ಖಾತೆಗೆ ಜಮೆ ಆಗಲಿದೆ 4000 ರೂ

ಇನ್ನೂ 9ನೇ ಕಂತಿನ ಲಾಭ ಪಡೆಯದ ರೈತರಿಗೆ ಎರಡು ಕಂತಿನ ಹಣ ಆ ಜನರ ಖಾತೆಗೆ ಸೇರುತ್ತದೆ ಅಂದರೆ 4000 ರೂಪಾಯಿ ಅವರ ಖಾತೆಗೆ ವರ್ಗಾವಣೆಯಾಗುತ್ತದೆ. ಆದರೆ ಈ ಸೌಲಭ್ಯವು ಸೆಪ್ಟೆಂಬರ್ 30 ರ ಮೊದಲು ನೋಂದಾಯಿಸಿದ ರೈತರಿಗೆ ಮಾತ್ರ ಲಭ್ಯವಿರುತ್ತದೆ.

ರೈತ ಕುಟುಂಬಗಳ ಕಲ್ಯಾಣಕ್ಕಾಗಿ ಬಂದ ಯೋಜನೆ

ಪ್ರಧಾನ ಮಂತ್ರಿ ಕಿಸಾನ್ ಸಮ್ಮಾನ್ ನಿಧಿ ಅಥವಾ ಪಿಎಂ ಕಿಸಾನ್ ಯೋಜನೆಯು ಸರ್ಕಾರದ ಬೆಂಬಲಿತ ಅನೇಕ ಪಿಂಚಣಿ ಯೋಜನೆಗಳಲ್ಲಿ ಒಂದಾಗಿದ್ದು, ಹಣವನ್ನು ಸ್ವೀಕರಿಸಲು ನಿಮ್ಮ ಆಧಾರ್ ಕಾರ್ಡ್ (Aadhar Card) ಅನ್ನು ಖಾತೆಗೆ ಲಿಂಕ್ ಮಾಡಬೇಕಾಗುತ್ತದೆ. ಆರ್ಥಿಕ ಬೆಂಬಲ ಅಗತ್ಯವಿರುವ ಅಂತಹ ರೈತ ಕುಟುಂಬಗಳಿಗೆ ಪಿಂಚಣಿ ಒದಗಿಸಲು ನರೇಂದ್ರ ಮೋದಿ ಸರ್ಕಾರದ ಅಡಿಯಲ್ಲಿ ಡಿಸೆಂಬರ್ 2018 ರಲ್ಲಿ ಪಿಎಂ ಕಿಸಾನ್ ಯೋಜನೆಯನ್ನು ಪ್ರಾರಂಭಿಸಲಾಯಿತು.

ಈ ಯೋಜನೆಯು ಸಂಪೂರ್ಣವಾಗಿ ಸರ್ಕಾರದ ಬೆಂಬಲಿತವಾಗಿದೆ ಮತ್ತು ವ್ಯವಸಾಯದ ಭೂಮಿ ಹೊಂದಿರುವ ಎಲ್ಲಾ ರೈತರ ಕುಟುಂಬಗಳಿಗೆ ಇದು ಅನ್ವಯಿಸುತ್ತದೆ. ಆರಂಭದಲ್ಲಿ ಇದು ಕೇವಲ ಸಣ್ಣ ಮತ್ತು ಅತಿ ಸಣ್ಣ ರೈತರಿಗೆ ಮಾತ್ರ ಸೀಮಿತವಾಗಿರಬೇಕು ಎಂದು ಉದ್ದೇಶಿಸಲಾಗಿತ್ತು.

ಇದನ್ನೂ ಓದಿ:  ಈ ಸರ್ಕಾರಿ ಯೋಜನೆಯಲ್ಲಿ ಸಿಗಲಿದೆ ಮಾಸಿಕ 10 ಸಾವಿರ ರೂ. ಪಿಂಚಣಿ: ನೀವೂ ಅಪ್ಲೈ ಮಾಡಬಹುದು

ರೈತ ಕುಟುಂಬಕ್ಕೆ ವಾರ್ಷಿಕ 6 ಸಾವಿರ ರೂಪಾಯಿ

ಪಿಎಂ ಕಿಸಾನ್ ವ್ಯಾಪ್ತಿಗೆ ಬರುವ ಪ್ರತಿಯೊಬ್ಬ ರೈತ ಕುಟುಂಬವು ಸರ್ಕಾರದಿಂದ ವರ್ಷಕ್ಕೆ 6,000 ರೂಪಾಯಿಗಳನ್ನು ತಲಾ 2,000 ರೂಪಾಯಿಗಳಂತೆ ಮೂರು ಕಂತುಗಳಲ್ಲಿ ಪಡೆಯಲು ಅರ್ಹರಾಗಿರುತ್ತಾರೆ. ಇದನ್ನು ವರ್ಷವಿಡೀ ಮೂರು ತ್ರೈಮಾಸಿಕ ಕಂತುಗಳ ಅವಧಿಯಲ್ಲಿ ರೈತ ಕುಟುಂಬದವರ ಬ್ಯಾಂಕ್ ಖಾತೆಗೆ ವರ್ಗಾವಣೆ ಮಾಡಲಾಗುವುದು.
Published by:Mahmadrafik K
First published: