PM Kisan: ಕೋಟ್ಯಂತರ ರೈತರಿಗೆ ಗುಡ್​ನ್ಯೂಸ್! ಈ ದಿನ ಬರಲಿದೆ ಪಿಎಂ ಕಿಸಾನ್​ 12ನೇ ಕಂತು

ಪ್ರಧಾನಮಂತ್ರಿ ಕಿಸಾನ್ ಯೋಜನೆಯಡಿಯಲ್ಲಿ ಭಾರತೀಯ ಪ್ರಜೆಗಳಾದ ಎಲ್ಲಾ ಸಣ್ಣ ಮತ್ತು ಅತಿಸಣ್ಣ ರೈತರು ಇದಕ್ಕೆ ಅರ್ಹರಾಗಿರುತ್ತಾರೆ. ಈಗ ಜನರು 12 ನೇ ಕಂತುಗಾಗಿ ಕಾಯಲು ಪ್ರಾರಂಭಿಸಿದ್ದಾರೆ. ಸರ್ಕಾರ ಅನ್ನದಾತರಿಗೆ ಗುಡ್​ನ್ಯೂಸ್​.

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

  • Share this:
ಪಿಎಂ ಕಿಸಾನ್ (PM Kisan)​ ಯೋಜನೆಯಿಂದ ಅದೆಷ್ಟೋ ಮಂದಿ ರೈತ (Farmers) ರಿಗೆ ಉಪಯೋಗವಾಗುತ್ತಿದೆ.  31 ಮೇ 2022 ರಂದು ಪ್ರಧಾನಮಂತ್ರಿ ಕಿಸಾನ್ ಸಮ್ಮಾನ್ ನಿಧಿ ಯೋಜನೆಯಡಿ ಪ್ರಧಾನಿ ನರೇಂದ್ರ ಮೋದಿ ಅವರು 10 ಕೋಟಿ ರೈತರ ಖಾತೆಗಳಿಗೆ 2000 ಕೋಟಿ ರೂಪಾಯಿ ಆರ್ಥಿಕ ನೆರವನ್ನು ವರ್ಗಾಯಿಸಿದ್ದಾರೆ. ಈ ಯೋಜನೆಯಡಿ ಇದು 11 ನೇ ಕಂತು. ಪ್ರಧಾನ ಮಂತ್ರಿ ಕಿಸಾನ್ ಸಮ್ಮಾನ್ ನಿಧಿ (Prime Minister Kisan Samman Nidhi) ಮುಖಾಂತರ ಕೇಂದ್ರ ಸರ್ಕಾರ ರೈತ (Formers) ರಿಗೆ ವರ್ಷಕ್ಕೆ ಮೂರು ಕಂತುಗಳಲ್ಲಿ ಒಟ್ಟು 6000ರೂ. ಆರ್ಥಿಕ ಸಹಾಯ ನೀಡುತ್ತದೆ. ಪ್ರತಿ ನಾಲ್ಕು ತಿಂಗಳಿಗೊಮ್ಮೆ ರೈತರ (Farmers) ಖಾತೆಗೆ 2000ರೂ. ಅನ್ನು ಸರ್ಕಾರ ಜಮೆ ಮಾಡುತ್ತದೆ. ಪ್ರಧಾನಮಂತ್ರಿ ಕಿಸಾನ್ ಯೋಜನೆಯಡಿಯಲ್ಲಿ ಭಾರತೀಯ ಪ್ರಜೆಗಳಾದ ಎಲ್ಲಾ ಸಣ್ಣ ಮತ್ತು ಅತಿಸಣ್ಣ ರೈತರು ಇದಕ್ಕೆ ಅರ್ಹರಾಗಿರುತ್ತಾರೆ. ಈಗ ಜನರು 12 ನೇ ಕಂತುಗಾಗಿ ಕಾಯಲು ಪ್ರಾರಂಭಿಸಿದ್ದಾರೆ. ಸರ್ಕಾರ ಅನ್ನದಾತರಿಗೆ ಗುಡ್​ನ್ಯೂಸ್​ ಕೊಟ್ಟಿದ್ದಾರೆ. 

ಈ ದಿನದಂದು ಬರಲಿದೆ ಪಿಎಂ ಕಿಸಾನ್​ 12ನೇ ಕಂತು!

ಪಿಎಂ ಕಿಸಾನ್12ನೇ ಕಂತು ಶೀಘ್ರದಲ್ಲೇ ಬಿಡುಗಡೆ ಮಾಡಲಿದ್ದಾರೆ ಪ್ರಧಾನಮಂತ್ರಿ ನರೇಂದ್ರ ಮೋದಿ. ನೀವು ಕೂಡ ಪಿಎಂ ಕಿಸಾನ್ ಯೋಜನೆಯ ಫಲಾನುಭವಿಯಾಗಿದ್ದರೆ, ಈ ಸುದ್ದಿ ನಿಮಗೆ ಹೆಚ್ಚು ಸಂತೋಷ ನೀಡುತ್ತೆ. ಪಿಎಂ ಕಿಸಾನ್ ಯೋಜನೆಯ 12 ನೇ ಕಂತು  ಅನ್ನು ಪಿಎಂ ಮೋದಿ ಶೀಘ್ರದಲ್ಲೇ ಬಿಡುಗಡೆ ಮಾಡಲಿದ್ದಾರೆ. ಪಿಎಂ ಕಿಸಾನ್​​ನ ಮುಂದಿನ ಕಂತು ಆಗಸ್ಟ್​​​ನಲ್ಲಿ ಬರಲಿದೆ. ವಾಸ್ತವವಾಗಿ, ಈ ಯೋಜನೆಯಡಿಯಲ್ಲಿ, ರೈತರಿಗೆ ವರ್ಷದ ಮೊದಲ ಕಂತನ್ನು ಏಪ್ರಿಲ್ 1 ರಿಂದ ಜುಲೈ 31 ರ ನಡುವೆ ನೀಡಲಾಗುತ್ತದೆ, ಆದರೆ ಎರಡನೇ ಕಂತನ್ನು ಆಗಸ್ಟ್ 1 ರಿಂದ ನವೆಂಬರ್ 30 ರ ನಡುವೆ ನೀಡಲಾಗುತ್ತದೆ.

ಮೂರನೇ ಕಂತಿನ ಹಣವನ್ನು ಡಿಸೆಂಬರ್ 1 ಮತ್ತು ಮಾರ್ಚ್ 31 ರ ನಡುವೆ ವರ್ಗಾಯಿಸಲಾಗುತ್ತದೆ. ಅದರಂತೆ ಈ ತಿಂಗಳ ಅಂತ್ಯದೊಳಗೆ 12ನೇ ಕಂತು ಪಿಎಂ ಕಿಸಾನ್ ರೈತರ ಖಾತೆಗೆ ಬರಬಹುದು. ಅದರಂತೆ, ಎರಡನೇ ಕಂತು ಆಗಸ್ಟ್ 1 ರಿಂದ ನವೆಂಬರ್ 30 ರ ನಡುವೆ ಬರಲಿದೆ.

ಇದನ್ನೂ ಓದಿ: ಸರ್ಕಾರದ ವೆಬ್‌ಸೈಟ್‌ನಿಂದ ಕೋಟಿಗಟ್ಟಲೆ ರೈತರ ಆಧಾರ್ ಮಾಹಿತಿ ಸೋರಿಕೆ

ಹಣ ಪಡೆಯೋದಕ್ಕೆ ಬ್ಯಾಂಕ್​ಗೆ ಹೋಗಬೇಕಾಗಿಲ್ಲ!

ಈ ಯೋಜನೆಯಡಿ ಪಡೆದ ಹಣಕ್ಕಾಗಿ ರೈತರು ಹಳ್ಳಿಗಳಿಂದ ನಗರದ ಬ್ಯಾಂಕ್‌ಗಳಿಗೆ ಭೇಟಿ ನೀಡಬೇಕಾಗಿಲ್ಲ. ಇದಕ್ಕಾಗಿ ಅಂಚೆ ಇಲಾಖೆ ಹೊಸ ಯೋಜನೆ ಸಿದ್ಧಪಡಿಸಿದೆ. ಇದರ ಅಡಿಯಲ್ಲಿ ರೈತರ ಮನೆಗಳಿಗೆ ತೆರಳಿ ಕಿಸಾನ್ ಸನ್ಮಾನ ನಿಧಿಯಿಂದ ಹಣ ನೀಡಲಿದ್ದಾರೆ. ಇದಕ್ಕಾಗಿ ಜೂನ್ 13ರವರೆಗೆ ಅಂಚೆ ಇಲಾಖೆ ವಿಶೇಷ ಅಭಿಯಾನ ನಡೆಸುತ್ತಿದೆ. ಅಭಿಯಾನದ ಭಾಗವಾಗಿ, ಪೋಸ್ಟ್‌ಮ್ಯಾನ್‌ಗಳು ಮನೆ ಮನೆಗೆ ತೆರಳಿ ಕೈ ಹಿಡಿಯುವ ಯಂತ್ರದ ಮೇಲೆ ಕೈ ಮುದ್ರೆ ಹಾಕುವ ಮೂಲಕ ರೈತರಿಗೆ ಪಿಎಂ ಕಿಸಾನ್ ಕಂತುಗಳನ್ನು ಹಸ್ತಾಂತರಿಸಲಿದ್ದಾರೆ.

ಇದನ್ನೂ ಓದಿ: ರೈತರಿಗೆ ಹಣ ಕೊಟ್ಟು ಜೊತೆಗೆ ಶಾಕ್​ ಕೊಟ್ಟ ಸರ್ಕಾರ! ಸಾವಿರಾರು ಅನ್ನದಾತರಿಗೆ ನೋಟಿಸ್​​​

ನಿಮ್ಮ ಮನೆಗೆ ಬರುತ್ತೆ ಕಿಸಾನ್​ ಸನ್ಮಾನ್​ ಹಣ!

ರೈತರ ನಿಧಿಯ ಮೊತ್ತವನ್ನು ರೈತರ ಮನೆಗಳಿಗೆ ತಲುಪಿಸುವ ಜವಾಬ್ದಾರಿಯನ್ನು ಕೇಂದ್ರ ಸರ್ಕಾರ ಅಂಚೆ ಇಲಾಖೆಗೆ ವಹಿಸಿಕೊಂಡಿದೆ. ಇದಕ್ಕಾಗಿ ಭಾರತೀಯ ಅಂಚೆ ಇಲಾಖೆಗೆ ವಿಶೇಷ ಅಧಿಕಾರವನ್ನು ಸರ್ಕಾರ ನೀಡಿದೆ. ವಾಸ್ತವವಾಗಿ, ಇಲ್ಲಿಯವರೆಗೆ, ಬ್ಯಾಂಕ್ ಹೊರತುಪಡಿಸಿ, ರೈತ ಸ್ವತಃ ಅಂಚೆ ಕಚೇರಿಗೆ ಹೋಗಿ ಹಣ ಡ್ರಾ ಮಾಡಬಹುದಾಗಿತ್ತು. ಆದರೆ ಜನರು ಇನ್ನು ಮುಂದೆ ಅಲ್ಲಿಗೆ ಹೋಗಬೇಕಾಗಿಲ್ಲ. ನೀವೂ ಇರುವಲ್ಲಿಯೇ ಈ ಹಣ ನಿಮ್ಮ ಕೈತಲುಪತ್ತೆ.
Published by:Vasudeva M
First published: