PM Kisan ಯೋಜನೆಯ 11 ನೇ ಕಂತು ಬಿಡುಗಡೆ, ನಿಮ್ಮ ಖಾತೆಗೆ ಹಣ ಬಂದಿದ್ಯಾ? ಹೀಗ್​ ಚೆಕ್​ ಮಾಡಿ

ಪ್ರಧಾನ ಮಂತ್ರಿ ಕಿಸಾನ್ ಸಮ್ಮಾನ್ ನಿಧಿ (Pradhan Mantri Kisan Samman Nidhi) ಅಥವಾ ಪಿಎಂ ಕಿಸಾನ್ ಯೋಜನೆಯ 11ನೇ ಕಂತಿನ ಹಣವನ್ನು ಕೇಂದ್ರ ಸರ್ಕಾರ (Central Government) ನಿನ್ನೆ ಮೇ 31 ರಂದು ರೈತರ ಖಾತೆಗಳಿಗೆ ಜಮಾ ಮಾಡಿದೆ.

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

  • Share this:
ಪಿಎಂ ಕಿಸಾನ್ (PM Kisan) ಫಲಾನುಭವಿಗಳಿಗೆ ಸಿಹಿ ಸುದ್ದಿ ನೀಡಿದೆ. ಈ ಸುದ್ದಿಯಿಂದ ಅನ್ನದಾತರು ಫುಲ್​ ಖುಷ್​ ಆಗಿದ್ದಾರೆ. ಪ್ರಧಾನ ಮಂತ್ರಿ ಕಿಸಾನ್ ಸಮ್ಮಾನ್ ನಿಧಿ ಯೋಜನೆಯ 11 ನೇ ಕಂತನ್ನು ಪ್ರಧಾನಮಂತ್ರಿ ನರೇಂದ್ರ  ಮೋದಿ (Narendra Modi) ಬಿಡುಗಡೆ ಮಾಡಿದ್ದಾರೆ.  ಪ್ರಧಾನ ಮಂತ್ರಿ ಕಿಸಾನ್ ಸಮ್ಮಾನ್ ನಿಧಿ (Pradhan Mantri Kisan Samman Nidhi) ಅಥವಾ ಪಿಎಂ ಕಿಸಾನ್ ಯೋಜನೆಯ 11ನೇ ಕಂತಿನ ಹಣವನ್ನು ಕೇಂದ್ರ ಸರ್ಕಾರ (Central Government) ನಿನ್ನೆ ಮೇ 31 ರಂದು ರೈತರ ಖಾತೆಗಳಿಗೆ ಜಮಾ ಮಾಡಿದೆ. ಪ್ರಧಾನ ಮಂತ್ರಿ ಕಿಸಾನ್ ಸಮ್ಮಾನ್ ನಿಧಿ ಮುಖಾಂತರ ಕೇಂದ್ರ ಸರ್ಕಾರ ರೈತರಿಗೆ ವರ್ಷಕ್ಕೆ ಮೂರು ಕಂತುಗಳಲ್ಲಿ ಒಟ್ಟು 6000ರೂ. ಆರ್ಥಿಕ ಸಹಾಯ ನೀಡುತ್ತದೆ. ಪ್ರತಿ ನಾಲ್ಕು ತಿಂಗಳಿಗೊಮ್ಮೆ ರೈತರ (Farmers) ಖಾತೆಗೆ 2000ರೂ. ಅನ್ನು ಸರ್ಕಾರ ಜಮೆ ಮಾಡುತ್ತದೆ.

11ನೇ ಕಂತಿನ ಹಣ ರೈತರ ಖಾತೆಗೆ ಜಮೆ

ಈ ರೀತಿ ಇಲ್ಲಿಯ ತನಕ ಸರ್ಕಾರ 10 ಕಂತುಗಳಲ್ಲಿ ರೈತರ ಖಾತೆಗಳಿಗೆ ಹಣ ಜಮೆ ಮಾಡಿದೆ. ಈ ರೀತಿ ರೈತರ ಖಾತೆಗಳಿಗೆ ಹಣ ಜಮೆ ಮಾಡುವ ಮುನ್ನ ಕೇಂದ್ರ ಸರ್ಕಾರ ಫಲಾನುಭವಿಗಳ ಪಟ್ಟಿ ಬಿಡುಗಡೆ ಮಾಡುತ್ತದೆ. ಪ್ರತಿ ಬಾರಿಯೂ ಪಲಾನುಭವಿಗಳ ಪಟ್ಟಿಯನ್ನು  ಗ್ರಾಮ ಪಂಚಾಯತ್ ಗಳ ನೋಟಿಸ್ ಬೋರ್ಡ್ ಗಳಲ್ಲಿ ಪ್ರಕಟಿಸಲಾಗುತ್ತದೆ. ಪಿಎಂ ಕಿಸಾನ್​ ಹಣ ಖಾತೆಗೆ ಬರುವ ಮುನ್ನ ಪಟ್ಟಿಯಲ್ಲಿ ನಿಮ್ಮ ಹೆಸರು ಬಂದಿದೆಯಾ ಎಂದು  ಮೊದಲು ಕನ್ಫರ್ಮ್ ಮಾಡಿಕೊಳ್ಳಿ. ಇಲ್ಲವೇ ಆನ್ ಲೈನ್ ನಲ್ಲಿ ಕೂಡ ಫಲಾನುಭವಿಗಳ ಪಟ್ಟಿಯನ್ನು ಚೆಕ್ ಮಾಡಬಹುದು.

ನೀವು ಪಿಎಂ ಕಿಸಾನ್‌ನ ಫಲಾನುಭವಿಯಾಗಿದ್ದೀರಾ ಎಂದು ತಿಳಿದುಕೊಳ್ಳಬೇಕೆ? ತಕ್ಷಣ ನಿಮ್ಮ ಹೆಸರು ಮತ್ತು ಖಾತೆಯನ್ನು ನಾವು ಈ ಕೆಳಗೆ ಕೊಟ್ಟಿರುವಂತೆ ಪರಿಶೀಲನೆ ಮಾಡಿಕೊಳ್ಳಿ.

ಇದನ್ನೂ ಓದಿ: ಪಿಎಂ ಕಿಸಾನ್ ಇ-ಕೆವೈಸಿಯ ಪ್ರಮುಖ ಅಪ್​​ಡೇಟ್​​ ಇಲ್ಲಿದೆ ನೋಡಿ

ಈ ರೀತಿ ನೀವು ಫಲಾನುಭವಿಯಾಗಿದ್ದೀರಾ ಎಂದು ತಿಳಿದುಕೊಳ್ಳಿ!

1. ಮೊದಲು ನಿಮ್ಮ ಮೊಬೈಲ್​ ಅಥವಾ ಕಂಪ್ಯೂಟರ್​​ನಲ್ಲಿ PM ಕಿಸಾನ್​ ಯೋಜನೆಯ ಅಧಿಕೃತ ವೆಬ್​ಸೈಟ್​ https://pmkisan.gov.in ತೆರೆಯಿರಿ

2. ನಂತರ ಮುಖ ಪುಟದಲ್ಲಿ ಕಾಣುವ Farmers Corner ಆಯ್ಕೆ ಮಾಡಿ

3. Farmers Corner ವಿಭಾಗದಲ್ಲಿ, Beneficiaries List ಆಯ್ಕೆ ಮಾಡಿ

4. ಡ್ರಾಪ್ ಡೌನ್ ಪಟ್ಟಿಯಿಂದ ರಾಜ್ಯ, ಜಿಲ್ಲೆ, ಉಪ ಜಿಲ್ಲೆ, ಬ್ಲಾಕ್ ಮತ್ತು ಗ್ರಾಮವನ್ನು ಆಯ್ಕೆ ಮಾಡಿ.

5. ನಂತರ ಇಲ್ಲಿ ತೋರಿಸುವ 'Get Report' ಮೇಲೆ ಕ್ಲಿಕ್ ಮಾಡಿ

6. ಕ್ಲಿಕ್ ಮಾಡಿದ ನಂತರ ಇಲ್ಲಿ ಫಲಾನುಭವಿಗಳ ಸಂಪೂರ್ಣ ಪಟ್ಟಿ ಕಾಣಿಸಿಕೊಳ್ಳುತ್ತದೆ, ಅದರಲ್ಲಿ ನೀವು ನಿಮ್ಮ ಹೆಸರು ಇದೆಯಾ ಎಂದು ಪರಿಶೀಲಿಸಿ

ಇದನ್ನೂ ಓದಿ: ಗುಡ್ ನ್ಯೂಸ್, ಪ್ರಧಾನಿ ಕಚೇರಿಯಿಂದ ಪ್ರಮುಖ ಘೋಷಣೆ

ನಿಮ್ಮ ಕಂತಿನ ಬಗ್ಗೆ ತಿಳಿದುಕೊಳ್ಳಲು ಹೀಗೇ ಮಾಡಿ

1 . ಮೊದಲು ನಿಮ್ಮ ಮೊಬೈಲ್​ ಅಥವಾ ಕಂಪ್ಯೂಟರ್​​ನಲ್ಲಿ PM ಕಿಸಾನ್​ ಯೋಜನೆಯ ಅಧಿಕೃತ ವೆಬ್​ಸೈಟ್​ https://pmkisan.gov.in ತೆರೆಯಿರಿ

2. ಬಲಭಾಗದಲ್ಲಿ ಕಾಣಿಸುವ Farmers Corner ಆಯ್ಕೆ ಮಾಡಿಕೊಳ್ಳಿ.

3. ನಂತರ ನೀವು ಬೆನಿಫಿಶಿಯರಿ ಸ್ಟೇಟಸ್ ಆಯ್ಕೆಯ ಮೇಲೆ ಕ್ಲಿಕ್ ಮಾಡಿ.

4. ಇದಾದ ಬಳಿಕ ನಿಮ್ಮ ಸ್ಕ್ರೀನ್​ ಮೇಲೆ ಹೊಸ ಪುಟ ತೆರೆದುಕೊಳ್ಳುತ್ತೆ

5. ಇಲ್ಲಿ ನಿಮ್ಮ ಆಧಾರ್ ಸಂಖ್ಯೆ, ಮೊಬೈಲ್ ಸಂಖ್ಯೆಯನ್ನು ಹಾಕಬೇಕು

6. ಇಷ್ಟು ಮಾಡಿ ಸಬ್​ಮಿಟ್​ ಮಾಡಿದರೆ ನಿಮ್ಮ ಸ್ಟೇಟಸ್ ಬಗ್ಗೆ ಸಂಪೂರ್ಣ ಮಾಹಿತಿ ಪಡೆಯಬಹುದು
Published by:Vasudeva M
First published: